AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ವೈಯಕ್ತಿಕ ಬೆಳವಣಿಗೆಯತ್ತ ಗಮನ ಹರಿಸಿ, ಸಕಾರಾತ್ಮಕವಾಗಿರಿ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಶುಕ್ಲ ಪಕ್ಷದ ದ್ವಾದಶೀ ತಿಥಿ ಶನಿವಾರ ಸಕಾರಾತ್ಮಕ ಚಿಂತನೆ, ಅಪರಿಚಿತರ ಆಗಮನ, ಉದ್ಯೋಗದ ವಿಸ್ತರಣೆ, ಯಶಸ್ಸಿಗೆ ಹಪಹಪಿಕೆ ಇರಲಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope: ವೈಯಕ್ತಿಕ ಬೆಳವಣಿಗೆಯತ್ತ ಗಮನ ಹರಿಸಿ, ಸಕಾರಾತ್ಮಕವಾಗಿರಿ
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jun 07, 2025 | 1:55 AM

Share

ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ವೃಷಭ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಸ್ವಾತೀ, ಯೋಗ: ವ್ಯಾಘಾತ, ಕರಣ: ವಣಿಜ, ಸೂರ್ಯೋದಯ – 06 : 03 am, ಸೂರ್ಯಾಸ್ತ – 06 : 58 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 09:18 – 10:55, ಯಮಘಂಡ ಕಾಲ 14:09 – 15:45, ಗುಳಿಕ ಕಾಲ 06:04 – 07:41

ಮೇಷ ರಾಶಿ: ಹಿತವಾದ ಮಾತು ನಿಮಗೆ ಕಹಿಯಾಗಬಹುದು. ನೀವು ಈಗಲೇ ಮನೆಯ ಜವಾಬ್ದಾರಿಯನ್ನು ನಿರ್ವಹಿಸಲು ಸಮರ್ಥರಿಲ್ಲ. ಎಲ್ಲದಕ್ಕೂ ಕುಟುಂಬದ ಸಹಕಾರವನ್ನು ಪಡೆಯುವಿರಿ. ಸಂಗಾತಿಯ ಸಂಪತ್ತಿನಿಂದ ಖುಷಿಪಡುವಿರಿ. ಅಂಧಕಾರದಿಂದ ಇಂದು ಅತಿಯಾಗಿ ಭಯಗೊಳ್ಳುವಿರಿ. ಮನಸ್ಸು ಶಾಂತವಾಗಿರುವುದು. ವೈಯಕ್ತಿಕ ಬೆಳವಣಿಗೆಯತ್ತ ಗಮನ ಹರಿಸಿ. ಸಕಾರಾತ್ಮಕವಾಗಿರಿ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ಸಂಪತ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ನೀವು ಪಡೆಯುತ್ತೀರಿ. ಕುಟುಂಬದಿಂದ ಬೆಂಬಲ ಸಿಗಲಿದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಸಾಕಷ್ಟು ಪ್ರಗತಿ ಹೊಂದುವಿರಿ ಆದರೆ ಇಂದು ಹಣಕಾಸಿನ ವಿಷಯಗಳಲ್ಲಿ ಯಾರನ್ನೂ ಕುರುಡಾಗಿ ನಂಬಬೇಡ. ನಿಮ್ಮ ಪ್ರೇಮಿಗೆ ಅಚ್ಚರಿಯ ಉಡುಗೊರೆ ನೀಡಲು ಇಂದು ಸೂಕ್ತ ದಿನ. ಇದು ಸಂಬಂಧಗಳಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಗಟ್ಟಿಯಾಗುತ್ತದೆ.

ವೃಷಭ ರಾಶಿ: ಅತಿಯಾದ ಆಲೋಚನೆಯಿಂದ ಕೆಲಸ ಆಗದು. ಆರಂಭಿಸಿ ತೊಂದರೆಗೆ ಉಪಾಯ ಹುಡುಕಿ. ಎಲ್ಲ ಶರತ್ತುಗಳಿಗೂ ಸರಿಯಾದ ನಿಬಂಧನೆ ಇರಲಿ. ಪಿತ್ರಾರ್ಜಿತ ಸಂಪತ್ತಿನಿಂದ ಸುಖವು ಇರುವುದು. ಸಹೋದರ ಜೊತೆ ಕಲಹವು ಆಗಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಯತ್ನಗಳನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ಉತ್ಸಾಹವನ್ನು ನಿಯಂತ್ರಿಸಿ, ಆರ್ಥಿಕವಾಗಿ ಪರಿಸ್ಥಿತಿ ಉತ್ತಮವಾಗಿರುತ್ತದೆ. ಇಂದು, ವ್ಯವಹಾರ ಸಂಬಂಧಿತ ನಿರ್ಧಾರಗಳನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಿ. ಹೊಸ ಆಸ್ತಿ ಅಥವಾ ವಾಹನ ಖರೀದಿ ಸಾಧ್ಯ. ಒಂಟಿ ಜನರು ಇಂದು ವಿಶೇಷ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ಆದಾಯವನ್ನು ಹೆಚ್ಚಿಸಲು ಹೊಸ ಆಯ್ಕೆಗಳನ್ನು ನೋಡಿ. ವೃತ್ತಿ ಪ್ರಗತಿಗಾಗಿ ಕಿರಿಯ ಸಹೋದರ ಸಹೋದರಿಯರಿಗೆ ಯಾವಾಗಲೂ ಸಲಹೆ ನೀಡುತ್ತಿರಿ. ಪರಿಚಯವಿಲ್ಲದ ಜನರಿಂದ ನೀವು ಅಂತರವನ್ನು ಕಾಯ್ದುಕೊಳ್ಳುವಿರಿ. ವೃತ್ತಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳ ನಿರೀಕ್ಷೆಯಲ್ಲಿ ಇರುವಿರಿ.

ಮಿಥುನ ರಾಶಿ: ಸೋಲು ಅನಿರೀಕ್ಷಿತವಾದರೂ ಗೆದ್ದುಬರುವ ಛಲವಂತೂ ಇರಲಿದೆ. ಇಂದು ನಿಮ್ಮ ಪ್ರಭಾವವು ಜನರಿಗೆ ತಾನಾಗಿಯೇ ಗೊತ್ತಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಸಿಗದೆಂದು ಮತ್ತೇನನ್ನೋ ಮಾಡಲು ಹೋಗುವುದು ಬೇಡ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಹಿರಿಯ ವ್ಯಕ್ತಿತ್ವಕ್ಕೆ ಶರಣಾಗುವಿರಿ. ನಿಮ್ಮ ಕಾರ್ಯಗಳ ಮೇಲೆ ಕೇಂದ್ರೀಕರಿಸಿ. ವ್ಯಾಪಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ಕೆಲವು ಜನರು ಹಳೆಯ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಅಥವಾ ಬಾಡಿಗೆಗೆ ನೀಡುವ ಮೂಲಕ ಹಣ ಗಳಿಸುತ್ತಾರೆ. ನಿಮ್ಮ ಸಂಗಾತಿಯನ್ನು ಹೇಗಾದರೂ ಮಾಡಿ ಅಚ್ಚರಿಗೊಳಿಸಬಹುದು. ಇದು ಪ್ರೀತಿಯ ಸಂಬಂಧಗಳಲ್ಲಿ ಮಾಧುರ್ಯವನ್ನು ತರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಬಲವಾದ ಮತ್ತು ಆಳವಾಗಿರುತ್ತದೆ. ನಿಮ್ಮ ಆಪ್ತರ ಜೊತೆ ಕೆಲವು ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಸ್ನೇಹಿತರ ಜೊತೆ ಸಂಬಂಧದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯವು ಪರಿಹರಿಸಲ್ಪಡುತ್ತದೆ. ಭೂಮಿಯ ವ್ಯವಹಾರದಲ್ಲಿ ಬೇಸರ ಬರಬಹುದು.

ಕರ್ಕಾಟಕ ರಾಶಿ: ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಉತ್ತಮ‌ ಯಶಸ್ಸು ಸಿಗುವುದು. ಭವಿಷ್ಯಕ್ಕೆ ನಿರ್ಮಾಣಕ್ಕೆ ಇದೇ ಅಡಿಪಾಯ. ನಿಮ್ಮ ಮಾತಿನಿಂದ ಇಂದು ಆಗಬೇಕಾದ ಕೆಲಸವು ಆಗುವುದು. ನವೀನ ಆಲೋಚನೆಗಳು ಮತ್ತು ಸೃಜನಶೀಲತೆಯೊಂದಿಗೆ ಮಾಡಿದ ಕೆಲಸವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ವ್ಯಾಪಾರ ಬೆಳವಣಿಗೆಗೆ ಹೊಸ ಅವಕಾಶಗಳ ಮೇಲೆ ಕಣ್ಣಿಡಿ. ರಾಜಕಾರಣಿಗಳಿಗೆ ಇಂದು ಶುಭ ದಿನವಾಗಿರುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಬೆಳವಣಿಗೆಗೆ ಅವಕಾಶವಿರುತ್ತದೆ. ಮಹತ್ತ್ವ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿವೆ. ನಿಮ್ಮ ಕೆಲಸವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ. ವೃತ್ತಿ ಬೆಳವಣಿಗೆಗೆ ಹೊಸ ಆಯ್ಕೆಗಳನ್ನು ಅನ್ವೇಷಿಸಿ. ನಿಮ್ಮ ಇಂದಿನ ದಿನಚರಿಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ನೀವು ದೊಡ್ಡ ಅಪಾಯವನ್ನು ತೆಗೆದುಕೊಳ್ಳುವ ಶಕ್ತಿಯನ್ನು ಇಟ್ಟುಕೊಂಡಿಲ್ಲ. ನಿಮ್ಮ ವೃತ್ತಿಜೀವನಕ್ಕೆ ಮುಖ್ಯವಾದ ಜನರು ಇಂದು ನಿಮಗೆ ಸ್ವಲ್ಪ ತೊಂದರೆ ನೀಡಬಹುದು. ಕೆಲವು ವಿಶೇಷ ಕೆಲಸಗಳನ್ನು ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಸಿಂಹ ರಾಶಿ: ಅಮೂಲ್ಯ ವಸ್ತು ಅಥವಾ ಧನಲಾಭವಾಗಲಿದೆ. ನೀವು ಪಿತ್ರಾರ್ಜಿತ ಆಸ್ತಿಯ ಬಗ್ಗೆ ಆಸಕ್ತಿ ಹೊಂದುವಿರಿ.‌ ನಿಮ್ಮ ಪ್ರಭಾವ ಇಂದು ಯಾವ ಕಾರ್ಯಕ್ಕೂ ಸಹಾಯಮಾಡದು. ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ವೃತ್ತಿ ಜೀವನದಲ್ಲಿ ಹೊಸ ಬದಲಾವಣೆಗಳಾಗಲಿವೆ. ಬಿರುಕನ್ನು ಜೋಡಿಸುವ ಕೆಲಸ ಮಾಡಲಾಗದು. ಎಲ್ಲಾ ಕಾರ್ಯಗಳಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಇಂದು, ಕುಟುಂಬ ಮತ್ತು ಸ್ನೇಹಿತರ ಬೆಂಬಲದೊಂದಿಗೆ, ನಿಮ್ಮ ಕೆಲಸದಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯ ಜೊತೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಾಧ್ಯ. ಸಂಬಂಧಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ ನೀವು ಹಿರಿಯರ ಮಾತನ್ನು ಕೇಳಬೇಕು ಮತ್ತು ಅನುಸರಿಸುವದೂ ಮುಖ್ಯ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗೊಂದಲ ಸೃಷ್ಟಿಯಾಗಬಹುದು. ನೀವು ಇಂದು ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು.

ಕನ್ಯಾ ರಾಶಿ: ಹಿರಿಯದಾದುದನ್ನು ಗಳಿಸಿ ಸಂತೋಷಪಡುವಿರಿ. ಎಷ್ಟೇ ಎಚ್ಚರವಿದ್ದರೂ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ.‌ ನೀವು ಏಕಾಗ್ರತೆಯ ಕೊರತೆಯನ್ನು ಅನುಭವಿಸುವಿರಿ. ಕೆಲಸವು ಮಧ್ಯಂತರವಾಗಿ ಮುಂದುವರಿಯುತ್ತದೆ. ಒಳ್ಳೆಯ ವಿಚಾರವನ್ನೇ ನಿರಂತರ ಸ್ಮರಿಸುವಂತೆ ಬುದ್ಧಿಯನ್ನು ಮಾಡುವಿರಿ. ನೀವು ಕೆಲಸದ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಕೆಲವು ಕಾರ್ಯಗಳಲ್ಲಿ ನೀವು ಅಡೆತಡೆಗಳನ್ನು ಎದುರಿಸಬಹುದು. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ವೃತ್ತಿಪರ ಜೀವನದ ಸವಾಲುಗಳನ್ನು ಎದುರಿಸಲು ನೀವು ಆತ್ಮವಿಶ್ವಾಸವನ್ನು ತೋರುತ್ತೀರಿ. ಇಂದು ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ನ್ಯಾಯಾಲಯದ ವಿಷಯಗಳಿಂದ ದೂರವಿರಿ. ಅತಿಯಾದ ಕೋಪವನ್ನು ತಪ್ಪಿಸಿ. ಆದಾಯದ ಸ್ವಲ್ಪ ಭಾಗವನ್ನು ಉಳಿಸಲು ಬೇಕಾದ ಚಿಂತನೆ ಇರಲಿದೆ. ಯಾವುದಾರೂ ಅಪ್ರಬುದ್ಧ ವಿವಾದಕ್ಕೆ ಸಿಲುಕಿಕೊಂಡು ಮನಸ್ತಾಪವಾಗುವುದು. ಕಠಿಣ ಪರಿಶ್ರಮಕ್ಕೆ ಸರಿಯಾಗಿ ಯಶಸ್ಸು ಸಿಗುತ್ತದೆ. ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ನೀವು ಅಗತ್ಯ ಸಹಾಯವನ್ನು ಪಡೆಯುತ್ತೀರಿ.