Kannada News Lifestyle International Yoga Day 2024 : Avoid these mistakes while doing yoga asanas Lifestyle News in Kannada
International Yoga Day 2024 : ಯೋಗ ಮಾಡುವ ವೇಳೆ ಪಾಲಿಸಲೇಬೇಕಾದ ನಿಯಮಗಳಿವು
ಯೋಗ ಬಲ್ಲವನಿಗೆ ರೋಗವಿಲ್ಲ ಎನ್ನುವಂತೆ ಅರ್ಧ ಗಂಟೆ ಆಸನಗಳನ್ನು ಮಾಡುವುದರಿಂದ ದೈಹಿಕ ವ್ಯಾಯಾಮದೊಂದಿಗೆ , ಸರ್ವರೋಗವನ್ನು ನಿವಾರಿಸುವ ಶಕ್ತಿ ಯೋಗಕ್ಕಿದೆ. ಆದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಮಾಡುವ ಯೋಗದ ವೇಳೆ ಈ ಕೆಲವು ನಿಯಮಗಳನ್ನು ಪಾಲಿಸುವುದು ಒಳಿತು. ಇಲ್ಲದಿದ್ದರೆ ಆರೋಗ್ಯಕ್ಕೆ ಹಾನಿಯಾಗುವ ಸಂಭವವೇ ಹೆಚ್ಚು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ
Follow us on
ಆರೋಗ್ಯವನ್ನು ಕಾಪಾಡುವಲ್ಲಿ ಯೋಗದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. 2015ರಿಂದ ಯೋಗ ದಿನವನ್ನು ಆಚರಿಸುತ್ತಿದ್ದು, ಯೋಗಕ್ಕೆ ಆದ್ಯತೆಯೂ ನೀಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೇ ಮೊದಲ ಬಾರಿಗೆ ಯೋಗಾಭ್ಯಾಸ ಮಾಡಬೇಕೆಂದು ಕೊಂಡವರು ಈ ಕೆಲವು ತಪ್ಪುಗಳನ್ನು ಮಾಡುವುದನ್ನು ಆದಷ್ಟು ತಪ್ಪಿಸಿ.
ಯೋಗದ ಸಮಯದಲ್ಲಿ ನೀರು ಕುಡಿಯುವ ಅಭ್ಯಾಸ ಬೇಡ. ಹೀಗೆ ಮಾಡಿದ್ದಲ್ಲಿ ಆರೋಗ್ಯಕ್ಕೆ ಹಾನಿಯಾಗುತ್ತದೆ. ಯೋಗ ಮಾಡಿದ ಹತ್ತು ಹದಿನೈದು ನಿಮಿಷಗಳ ಕಾಲ ಬಿಟ್ಟು ನೀರು ಕುಡಿಯುವುದು ಉತ್ತಮ.
ಆಸನಗಳನ್ನು ಮಾಡುವ ಎರಡರಿಂದ ಮೂರು ಗಂಟೆಗೂ ಮೊದಲೇ ಆಹಾರವನ್ನು ಸೇವಿಸಿರಬೇಕು. ಹೊಟ್ಟೆಗಟ್ಟಿ ಮಾಡಿಕೊಂಡು ಯೋಗ ಮಾಡುವುದರಿಂದ ದೇಹದಲ್ಲಿ ಸೆಳೆತವು ಉಂಟಾಗುತ್ತದೆ.
ಯೋಗಾಭ್ಯಾಸದ ಸಮಯದಲ್ಲಿ ಸರಿಯಾದ ಬಟ್ಟೆಗಳನ್ನು ಆಯ್ದುಕೊಳ್ಳುವುದು ಬಹುಮುಖ್ಯ. ನಿಮ್ಮ ಬಟ್ಟೆಯೂ ಬಿಗಿಯಾಗಿದ್ದರೆ ಆಸನಗಳನ್ನು ಮಾಡಲು ಕಷ್ಟವಾಗುತ್ತದೆ. ಹೀಗಾಗಿ ನಿಮ್ಮ ಗಮನ ಬಟ್ಟೆಯ ಮೇಲೆ ಹೋಗಬಹುದು. ಆದಷ್ಟು ಸಡಿಲವಾದ ಬಟ್ಟೆಗಳನ್ನು ಧರಿಸಿ.
ಆರಂಭದಲ್ಲೇ ಕಠಿಣ ಭಂಗಿಗಳನ್ನು ಮಾಡಬೇಡಿ. ಪ್ರಾರಂಭದಲ್ಲಿ ಸುಲಭವಾದ ಭಂಗಿಗಳನ್ನು ಮಾಡುವ ಮೂಲಕ ಯೋಗವನ್ನು ಆರಂಭಿಸಿ.
ಯೋಗದಲ್ಲಿ ನಿರತರಾಗಿರುವ ಸಂದರ್ಭದಲ್ಲಿ ಮೊಬೈಲ್ ಬಳಸಬೇಡಿ. ಈ ಸಮಯದಲ್ಲಿ ನಿಮ್ಮ ಗಮನ ಬೇರೆಡೆಗೆ ಹೋಗದಿರಲಿ. ಸಂಪೂರ್ಣ ಗಮನವನ್ನು ಯೋಗದ ಮೇಲೆ ಕೇಂದ್ರಿಕರಿಸುವುದು ಒಳಿತು.
ಯೋಗ ಮಾಡುವ ಸಂದರ್ಭದಲ್ಲಿ ಅತಿಯಾಗಿ ಮಾತು ಬೇಡ. ಮಾತನಾಡುತ್ತಿದ್ದರೆ ಮಾಡುವ ಭಂಗಿಗಳ ಮೇಲೆ ಗಮನ ಹರಿಸಲು ಆಗುವುದಿಲ್ಲ. ಇದರಿಂದ ನಿಮ್ಮನ್ನು ನೀವು ಒಂದೆಡೆ ಕೇಂದ್ರೀಕರಿಸಲು ಕಷ್ಟವಾಗಬಹುದು.
ಯೋಗಾಸನ ಮಾಡುವಾಗ ಆತುರವು ಬೇಡ. ಯಾವುದೇ ಆಸನವನ್ನು ಅವಸರದಿಂದ ಮಾಡಬೇಡಿ. ಇದರಿಂದ ಗಾಯ ಹಾಗೂ ಸೆಳೆತವು ಉಂಟಾಗುತ್ತದೆ. ಯೋಗ ಮಾಡುವಾಗ ದೈಹಿಕ ಹಾಗೂ ಮಾನಸಿಕ ಒತ್ತಡ ಅನುಭವಿಸುತ್ತಿದ್ದರೆ ಈ ಬಗ್ಗೆ ಯೋಗ ತರಬೇತಿದಾರರ ಬಳಿ ತಿಳಿಸಿ.
ನಿಮಗೆ ಸಂಪೂರ್ಣವಾಗಿ ತಿಳಿದಿರುವ ಆಸನಗಳನ್ನು ಮಾಡಿ. ಯಾವುದೇ ಹೊಸ ಭಂಗಿಗಳನ್ನು ಪ್ರಯತ್ನಿಸುವ ಮೂಲಕ ದೇಹಕ್ಕೆ ಹಾನಿ ಮಾಡಿಕೊಳ್ಳಬೇಡಿ. ಹೊಸ ಭಂಗಿಗಳನ್ನು ಮಾಡುವಿರಿಯಾದರೆ ಯೋಗ ತರಬೇತಿದಾರರ ಸಲಹೆ ಹಾಗೂ ಸೂಚನೆಗಳನ್ನು ತೆಗೆದುಕೊಳ್ಳಿ.