World Refugee Day 2024: ನಿರಾಶ್ರಿತರಿಗೆ ಸೂರು ಕಲ್ಪಿಸಿ, ಮೊಗದಲ್ಲಿ ನಗು ಮೂಡಿಸಿ

ವಿಶ್ವದಾದ್ಯಂತ ನಿರಾಶ್ರಿತರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವವ ಉದ್ದೇಶವನ್ನು ವಿಶ್ವ ನಿರಾಶ್ರಿತರ ದಿನವು ಹೊಂದಿದೆ. ಹಾಗಾದ್ರೆ ಈ ದಿನದ ಕುರಿತಾದ ಇತಿಹಾಸ, ಮಹತ್ವ ಕುರಿತಂತೆ ಇನ್ನಷ್ಟು ಮಾಹಿತಿಯೂ ಇಲ್ಲಿದೆ.

World Refugee Day 2024: ನಿರಾಶ್ರಿತರಿಗೆ ಸೂರು ಕಲ್ಪಿಸಿ, ಮೊಗದಲ್ಲಿ ನಗು ಮೂಡಿಸಿ
ವಿಶ್ವ ನಿರಾಶ್ರಿತರ ದಿನ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 19, 2024 | 5:15 PM

ಬದುಕು ಎಲ್ಲರದ್ದು ಕೂಡ ಒಂದೇ, ಆದರೆ ಜೀವಿಸುವ ರೀತಿ ಮಾತ್ರ ಭಿನ್ನ. ಕೆಲವರಿಗೆ ಐಷಾರಾಮಿ ಜೀವನದ ಸವಿನೋಟ, ಕೆಲವರದ್ದು ಒಂದೊತ್ತಿನ ಊಟಕ್ಕಾಗಿ ಅಲೆದಾಟ. ಹೌದು, ರಸ್ತೆ ಬದಿಯಲ್ಲಿ ನೆಲೆಯಿಲ್ಲದ ಬದುಕುತ್ತಿರುವ ಅದೆಷ್ಟೋ ಜನರನ್ನು ಕಂಡಾಗ ಅಯ್ಯೋ ಎನಿಸುವುದು ಸಹಜ. ಈ ಜಗತ್ತಿನಲ್ಲಿ ಮೂಲಸೌಕರ್ಯಗಳಿಂದ ವಂಚಿತರಾಗಿ ನಿರಾಶ್ರಿತರಾದವರು ಲೆಕ್ಕವಿಲ್ಲದಷ್ಟು ಜನರು. ಯುದ್ಧ, ರಾಜಕೀಯ ಕ್ಷೋಭೆ, ಆರ್ಥಿಕ ಬಿಕ್ಕಟ್ಟು, ಹಿಂಸಾಚಾರ ಹೀಗೆ ನಾನಾ ಸಂದರ್ಭಗಳಲ್ಲಿ ಇರಲು ನೆಲೆಯಿಲ್ಲದೇ, ತನ್ನ ಕುಟುಂಬದವರನ್ನು ಕಳೆದುಕೊಂಡು ಬೀದಿ ಪಾಲಾಗುತ್ತಿರುವವರ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ. ಅಂತಹ ಜನರ ಬಗ್ಗೆ ಅರಿವು ಮೂಡಿಸಲು ‘ವಿಶ್ವ ನಿರಾಶ್ರಿತರ ದಿನ’ವನ್ನು ಆಚರಿಸಲಾಗುತ್ತಿದೆ.

ವಿಶ್ವ ನಿರಾಶ್ರಿತರ ದಿನದ ಇತಿಹಾಸ

ಜೂನ್ 20, 2001 ರಂದು ಮೊದಲ ಬಾರಿಗೆ ಬಾರಿಗೆ ವಿಶ್ವ ನಿರಾಶ್ರಿತರ ದಿನವನ್ನು ಆಚರಿಸಲಾಯಿತು. ನಿರಾಶ್ರಿತರ ಸ್ಥಿತಿಗತಿ ಕುರಿತು ಮೊದಲ ಬಾರಿಗೆ 1951 ರಲ್ಲಿ ನಡೆದ ಸಮಾವೇಶದ 50ನೇ ವರ್ಷಾಚರಣೆಯ ದಿನದಿಂದ ವಿಶ್ವ ನಿರಾಶ್ರಿತರ ದಿನ ಆಚರಿಸಲು ಆರಂಭಿಸಲಾಯಿತು. ಅಂದಿನಿಂದ ಪ್ರತಿ ವರ್ಷವು ಜೂನ್ 20 ರಂದು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಸಿಕಲ್ ಸೆಲ್ ಕಾಯಿಲೆಯ ರೋಗಲಕ್ಷಣಗಳೇನು? ಚಿಕಿತ್ಸೆ ಹೇಗೆ?

ವಿಶ್ವ ನಿರಾಶ್ರಿತರ ದಿನದ ಮಹತ್ವ ಹಾಗೂ ಆಚರಣೆ ಹೇಗೆ?

ನಿರಾಶ್ರಿತರಾಗಿ ಬೀದಿಗೆ ಬಿದ್ದವರು ಹಾಗೂ ಬಲವಂತವಾಗಿ ಮನೆಯನ್ನು ತೊರೆದ ವ್ಯಕ್ತಿಗಳ ಜೀವನ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಅವರಿಗೆ ನಿರಾಶ್ರಿತರಿಗೆ ಆಸರೆ ನೀಡುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ನೆಲೆಯಿಲ್ಲದೇ ಸಂಕಷ್ಟದಲ್ಲಿರುವವರಿಗಾಗಿ ಅನೇಕ ಚಟುವಟಿಕೆಗಳನ್ನು ನಡೆಸುವ ಮೂಲಕ ವಿಶ್ವ ನಿರಾಶ್ರಿತರ ದಿನವನ್ನು ಆಚರಿಸಬಹುದು. ಈ ಕುಟುಂಬಗಳಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್