Relationship Tips : ಪ್ರೀತಿಯಲ್ಲಿ ಬಿದ್ದ ಖುಷಿಯಲ್ಲಿ ಈ ವಿಚಾರಗಳನ್ನು ನಿಮ್ಮ ಪ್ರೇಯಸಿಗೆ ಹೇಳ್ಬೇಡಿ

ಈಗಿನ ಕಾಲದಲ್ಲಿ ಪ್ರೀತಿಗೆ ವ್ಯಾಲಿಡಿಟಿ ಖಂಡಿತವಿಲ್ಲ. ಬೆಳಗ್ಗೆ ಲವ್ ಪ್ರಪೋಸ್ ಮಾಡಿದರೆ, ಸಂಜೆ ವೇಳೆಗೆ ಬ್ರೇಕ್ ಕೂಡ ಆಗಬಹುದು. ಹೀಗಾಗಿ ಪ್ರೀತಿಯ ಬಂಧ ಯಾವಾಗ ಮುರಿದು ಹೋಗುತ್ತದೆ ಎಂದು ಹೇಳುವುದೇ ಕಷ್ಟ. ಇಬ್ಬರೂ ತಿಳುವಳಿಕೆ ಹೊಂದಿದ್ದು ಸಂಬಂಧವು ಗಟ್ಟಿಯಾಗಿದ್ದರೆ ಮಾತ್ರ ಕೆಲವೊಂದು ವಿಚಾರಗಳನ್ನು ಪ್ರೇಯಸಿಯೊಂದಿಗೆ ಹಂಚಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಬದುಕಿನ ಈ ವಿಷಯಗಳನ್ನು ಪ್ರೀತಿಸುವವಳೊಂದಿಗೆ ಹಂಚಿಕೊಳ್ಳುವುದು ಒಳಿತಲ್ಲ.

Relationship Tips : ಪ್ರೀತಿಯಲ್ಲಿ ಬಿದ್ದ ಖುಷಿಯಲ್ಲಿ ಈ ವಿಚಾರಗಳನ್ನು ನಿಮ್ಮ ಪ್ರೇಯಸಿಗೆ ಹೇಳ್ಬೇಡಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 19, 2024 | 12:36 PM

ಪ್ರೀತಿ ಎಂಬುದು ಸುಂದರ ಅನುಭವ. ಆದರೆ ಈ ಪ್ರೀತಿಯನ್ನು ಪ್ರೀತಿಸುವ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದು ಸುಲಭದ ಮಾತಲ್ಲ. ಎಷ್ಟೇ ಧೈರ್ಯವಾಗಿರುವ ವ್ಯಕ್ತಿಯಾಗಿದ್ದರೂ ಪ್ರೀತಿಯನ್ನು ವ್ಯಕ್ತಪಡಿಸುವ ವಿಷಯಕ್ಕೆ ಬಂದಾಗ ಸ್ವಲ್ಪ ಭಯ ಇದ್ದೆ ಇರುತ್ತದೆ. ನನ್ನ ಪ್ರೀತಿಯನ್ನು ತಿರಸ್ಕರಿಸಿದರೆ ಏನು ಮಾಡೋದು ಎನ್ನುವ ಸಣ್ಣ ಭಯವೊಂದು ಕಾಡುತ್ತಿರುತ್ತದೆ. ಪ್ರೇಮ ನಿವೇದನೆಗೆ ಪ್ರೇಯಸಿ ಗ್ರೀನ್ ಸಿಗ್ನಲ್ ಕೊಟ್ಟ ಕೂಡಲೇ ಈ ವಿಚಾರಗಳನ್ನು ಹೇಳಿ ಸಂಬಂಧವನ್ನು ಹಾಳು ಮಾಡಿಕೊಳ್ಳಬೇಡಿ. ಈ ವಿಚಾರಗಳಿಂದ ಪ್ರೇಯಸಿಯೂ ನಿಮ್ಮನ್ನು ಬಿಟ್ಟು ಹೋಗುವ ಸಾಧ್ಯತೆಯೇ ಹೆಚ್ಚು.

* ದೌರ್ಬಲ್ಯಗಳ ಬಗ್ಗೆ ಹೇಳಿಕೊಳ್ಳಬೇಡಿ : ಯಾವುದೇ ವ್ಯಕ್ತಿಯೂ ಪರಿಪೂರ್ಣನಲ್ಲ. ಹೀಗಾಗಿ ಹುಡುಗನಾಗಿರಲಿ ಅಥವಾ ಹುಡುಗಿಯಾಗಿರಲಿ ಅವರಿಗೆ ತನ್ನದೇ ಆದ ದೌರ್ಬಲ್ಯಗಳಿರುತ್ತದೆ. ಸಂಬಂಧವನ್ನು ಬೆಳೆಸಿದ ಪ್ರಾರಂಭದಲ್ಲಿಯೇ ಹುಡುಗಿಯೊಂದಿಗೆ ತನ್ನ ದೌರ್ಬಲ್ಯಗಳನ್ನು ಹೇಳಬೇಡಿ. ಕೆಲವೊಮ್ಮೆ ನಿಮ್ಮ ಸಂಗಾತಿ ಇದರ ಲಾಭ ಪಡೆದುಕೊಳ್ಳುವ ಸಂದರ್ಭಗಳೇ ಹೆಚ್ಚು. ಹೀಗಾಗಿ ಮೊದಲು ನಿಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ, ಆಕೆ ಗುಣ ನಡವಳಿಕೆಯನ್ನು ನೋಡಿ ಆ ಬಳಿಕ ಈ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿ.

* ಕುಟುಂಬದ ರಹಸ್ಯಗಳನ್ನು ಹಂಚಿಕೊಳ್ಳಬೇಡಿ : ಹೊಸ ಸಂಬಂಧವನ್ನು ಬೆಳೆಸಿದ ವೇಳೆಯಲ್ಲಿ ನಿಮ್ಮ ಗೆಳೆಯ ಅಥವಾ ಗೆಳತಿಯೊಂದಿಗೆ ಕುಟುಂಬದ ರಹಸ್ಯಗಳನ್ನು ಹಂಚಿಕೊಳ್ಳುವುದು ಉತ್ತಮವಲ್ಲ. ನೀವು ಬಹಿರಂಗಪಡಿಸುವ ರಹಸ್ಯಗಳಿಂದಾಗಿ ನಿಮ್ಮವರು ಬ್ಲ್ಯಾಕ್ ಮೇಲ್ ಮಾಡಬಹುದು. ಈ ರಹಸ್ಯಗಳು ನಿಮ್ಮ ಪ್ರೇಯಸಿಯ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿ ಪ್ರಾರಂಭದಲ್ಲೇ ಇಬ್ಬರ ನಡುವೆ ಅಂತರ ಮೂಡಬಹುದು.

ಇದನ್ನೂ ಓದಿ: ನಿಮ್ಮ ಸಂಗಾತಿ ಮುಂದೆ ಹೀಗೆ ಮಾಡಿದ್ರೆ ಬ್ರೇಕಪ್ ಗ್ಯಾರಂಟಿ

* ಅವಮಾನವಾದ ಘಟನೆಗಳು ನಿಮ್ಮಲ್ಲಿಯೇ ಇರಲಿ: ಕೆಲವರು ಹುಡುಗರು ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಹೀಗಾಗಿ ಪ್ರೀತಿಯಲ್ಲಿ ಬಿದ್ದ ಪ್ರಾರಂಭದಲ್ಲಿ ತನ್ನ ಪ್ರೇಯಸಿಯೊಂದಿಗೆ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ತಮ್ಮ ಜೀವನದ ಅವಮಾನವಾಗಿರುವ ಸಂಗತಿಗಳನ್ನು ಹಂಚಿಕೊಳ್ಳುವುದು ಒಳ್ಳೆಯದಲ್ಲ. ಪ್ರಾರಂಭದಲ್ಲಿಯೇ ನಿಮ್ಮ ಸಂಗಾತಿಯೂ ನಿಮ್ಮದೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿದ್ದರೆ ಅದೇ ವಿಚಾರವನ್ನು ಪದೇ ಪದೇ ಹೇಳುವ ಮೂಲಕ ನಿಮಗೆ ನೋವನ್ನು ಉಂಟು ಮಾಡಬಹುದು. ಹೀಗಾಗಿ ನಿಮ್ಮ ಜೀವನದಲ್ಲಿ ನೀವು ಎದುರಿಸಿದ ಅವಮಾನದಂತಹ ಕಹಿ ವಿಚಾರಗಳನ್ನು ಹೇಳುವುದನ್ನು ಆದಷ್ಟು ತಪ್ಪಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?