Relationship Tips : ನಿಮ್ಮ ಸಂಗಾತಿ ಮುಂದೆ ಹೀಗೆ ಮಾಡಿದ್ರೆ ಬ್ರೇಕಪ್ ಗ್ಯಾರಂಟಿ
ಸಂಬಂಧವನ್ನು ನಿಭಾಯಿಸಿಕೊಂಡು ಹೋಗುವುದು ಸುಲಭದ ವಿಷಯವಲ್ಲ. ಇಲ್ಲಿ ಒಬ್ಬರನ್ನೊಬ್ಬರು ಅರಿತುಕೊಂಡು ಹೋಗುವ ನಡುವೆ ಸಣ್ಣ ಪುಟ್ಟ ತಪ್ಪುಗಳು ಆಗುವುದು ಸಹಜ. ಆದರೆ ಅಪ್ಪಿ ತಪ್ಪಿಯೂ ಸಂಗಾತಿಯ ಮುಂದೆ ಈ ತಪ್ಪುಗಳನ್ನು ಮಾಡಬಾರದಂತೆ.
ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಮಾತಿದೆ. ಆದರೆ ಎಷ್ಟೋ ಗಂಡ ಹೆಂಡತಿಯ ನಡುವೆ ಸಣ್ಣ ಪುಟ್ಟ ಜಗಳವು ಡೈವೋರ್ಸ್ ಹಂತಕ್ಕೆ ತಲುಪಿದೆ. ಹೀಗಾಗಿ ಸಂಸಾರದಲ್ಲಿ ಎಷ್ಟು ಹೊಂದಿಕೆ ಮಾಡಿದರೂ ಸಾಲುವುದಿಲ್ಲ. ಸಂಬಂಧವನ್ನು ಚೆನ್ನಾಗಿರಲು ದಂಪತಿಗಳಿಬ್ಬರೂ ಶ್ರಮಿಸಲೇ ಬೇಕು. ಆದರೆ ಕೆಲವು ಸಲ ಸಂಗಾತಿಯ ಮುಂದೆ ಈ ರೀತಿಯಾಗಿ ನಡೆದುಕೊಂಡರೆ ಸಂಬಂಧವು ಬೇಗನೇ ಮುರಿದು ಹೋಗುತ್ತದೆ.
* ಸಂಗಾತಿಯೊಂದಿಗೆ ಅಗೌರವದೊಂದಿಗೆ ನಡೆದುಕೊಳ್ಳಬೇಡಿ : ಯಾವುದೇ ಸಂಬಂಧದಲ್ಲಿ ವಾದ, ಮನಸ್ತಾಪಗಳು ಸಹಜ. ಆದರೆ ಸಂಗಾತಿಗೆ ಗೌರವ ನೀಡದೇ ಮಾತನಾಡಬೇಡಿ. ಹೃದಯವನ್ನು ನೋವಿಸುವ ಹಾಗೆ ನಡೆದುಕೊಳ್ಳಲೇ ಬೇಡಿ. ನಿಮ್ಮ ಮಾತು ನಡವಳಿಕೆ ಸಂಗಾತಿಗೆ ನಿಮ್ಮ ಮೇಲೆ ಬೇಡದ ಭಾವನೆ ಮೂಡಲು ಕಾರಣವಾಗುತ್ತದೆ. ಇದರಿಂದ ಪತಿ ಅಥವಾ ಪತಿಯು ಕ್ರಮೇಣವಾಗಿ ದೂರವಾಗಬಹುದು.
* ಸಂಗಾತಿಯನ್ನು ಬದಲಾಯಿಸಲು ಪ್ರಯತ್ನಿಸಬೇಡಿ : ದಾಂಪತ್ಯ ಜೀವನವು ದೀರ್ಘಕಾಲ ಉಳಿಯಬೇಕಾದರೆ ಇಬ್ಬರೂ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಬೇಕು. ಸಂಗಾತಿಯೂ ಹೊಂದಿಕೊಂಡು ನಿಮ್ಮದೊಂದಿಗೆ ಇದ್ದರೂ ಆಕೆ ಅಥವಾ ಆತ ನಾನು ಹೇಳಿದ್ದಂತೆ ಇರಬೇಕು ಎನ್ನುವ ಮನಸ್ಥಿತಿ ಬೇಡ. ಸಂಗಾತಿಯ ದಿನಚರಿ ಹಾಗೂ ಅಭ್ಯಾಸಗಳನ್ನು ಬದಲಾಯಿಸಲು ಪ್ರಯತ್ನಿಸುವುದು ಸರಿಯಲ್ಲ, ಇದರಿಂದ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು.
* ಪರಿಪೂರ್ಣತೆಯ ನಿರೀಕ್ಷೆ ಬೇಡ : ಯಾವುದೇ ಮನುಷ್ಯನು ಪರಿಪೂರ್ಣರಲ್ಲ. ಆದರೆ ಸಂಗಾತಿಯೂ ಪರಿಪೂರ್ಣರಾಗಿರುವಂತೆ ನಿರೀಕ್ಷೆ ಮಾಡಬೇಡಿ. ಯಾವುದೇ ತಪ್ಪುಗಳು ಆಗಬಾರದು ಎಂದುಕೊಳ್ಳಕೊಳ್ಳಬೇಡಿ. ನಿಮ್ಮ ಪರಿಪೂರ್ಣತೆಯ ನಿರೀಕ್ಷೆಯೂ ಸಂಗಾತಿಯನ್ನು ಉಸಿರುಗಟ್ಟುವಂತೆ ಮಾಡುತ್ತದೆ. ಇದು ಸಂಗಾತಿಯ ಮಾನಸಿಕ ಆರೋಗ್ಯ ಮತ್ತು ಉತ್ತಮ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
* ಸಂಗಾತಿಯನ್ನು ನಿರ್ಲಕ್ಷ್ಯ ಮಾಡದಿರಿ : ಸಂಬಂಧದ ಆರಂಭದಲ್ಲಿ, ಪ್ರತಿಯೊಬ್ಬರೂ ತಮ್ಮ ಸಂಗಾತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಆದರೆ ವರ್ಷಗಳು ಉರುಳಿದಂತೆ ಕಾಳಜಿಯೂ ಕಡಿಮೆಯಾಗುತ್ತದೆ. ಸಂಗಾತಿಯನ್ನು ಲಘುವಾಗಿ ಪರಿಗಣಿಸುವುದರಿಂದ ಸಂಬಂಧವು ದುರ್ಬಲಗೊಳ್ಳುತ್ತದೆ. ಇದರಿಂದ ದಾಂಪತ್ಯ ಜೀವನವು ಹಾಳಾಗುತ್ತದೆ.
ಇದನ್ನೂ ಓದಿ: ನಿಮ್ಮ ಪ್ರೀತಿ ಪಾತ್ರರೊಂದಿಗೆ ಪಿಕ್ನಿಕ್ ಹೋಗಲು ಪ್ಲಾನ್ ಮಾಡಿಕೊಂಡಿದ್ದೀರಾ? ಈ ರೀತಿ ಪ್ಲಾನ್ ಮಾಡಿ
* ತಪ್ಪುಗಳನ್ನು ಒಪ್ಪಿಕೊಳ್ಳದಿರುವುದು : ಸಂಬಂಧವನ್ನು ಗಟ್ಟಿಯಾಗಿಡಲು ಇಬ್ಬರಲ್ಲಿಯೂ ಸಮಾನ ಮನಸ್ಥಿತಿಯೂ ಮುಖ್ಯ. ಒಂದು ವೇಳೆ ನೀವೇನಾದರೂ ತಪ್ಪು ಮಾಡಿದ್ದರೆ, ಆ ತಪ್ಪನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ಪತಿ ಅಥವಾ ಪತ್ನಿಯೂ ಇದೇ ವಿಚಾರಕ್ಕೆ ದೂರವಾಗಿಗಿ ಬಿಡುತ್ತಾರೆ.
* ಸುಳ್ಳು ಹೇಳುತ್ತಿರುವುದು : ನಿಮ್ಮ ಪತಿ ಅಥವಾ ಪತ್ನಿಗೆ ಪದೇ ಪದೇ ಸುಳ್ಳು ಹೇಳುವುದು ಕೂಡ ಸಾಂಸಾರಿಕ ಜೀವನ ಹಾಳಾಗಲು ಪ್ರಮುಖ ಕಾರಣವಾಗಿದೆ. ಹೀಗಾಗಿ ಆದಷ್ಟು ಸಂಬಂಧದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಸಂದರ್ಭಕ್ಕೆ ತಕ್ಕಂತೆ ಸುಳ್ಳು ಹೇಳಿದ್ದರೂ ವೈವಾಹಿಕ ಜೀವನದ ಮೇಲೆ ಬೀರುವ ಪರಿಣಾಮವು ಭೀಕರವಾಗಿರಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:02 am, Tue, 18 June 24