International Picnic Day 2024: ನಿಮ್ಮ ಪ್ರೀತಿ ಪಾತ್ರರೊಂದಿಗೆ ಪಿಕ್ನಿಕ್ ಹೋಗಲು ಪ್ಲಾನ್ ಮಾಡಿಕೊಂಡಿದ್ದೀರಾ? ಈ ರೀತಿ ಪ್ಲಾನ್ ಮಾಡಿ
ಪಿಕ್ನಿಕ್ ಎನ್ನುವುದು ಹೊರಾಂಗಣದಲ್ಲಿ ಆನಂದಿಸಲು ಹಾಗೂ ಕುಟುಂಬದ ಜೊತೆಗೆ ಸಮಯ ಕಳೆಯಲು ಒಂದೊಳ್ಳೆ ಆಯ್ಕೆಯಾಗಿದೆ. ಪ್ರತಿ ವರ್ಷ ಜೂನ್ 18 ರಂದು ಅಂತಾರಾಷ್ಟ್ರೀಯ ಪಿಕ್ನಿಕ್ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಇಂತಹದೊಂದು ದಿನ ಶುರುವಾದದ್ದು ಹೇಗೆ? ಇದರ ವಿಶೇಷತೆಯೇನು? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಇತ್ತೀಚೆಗಿನ ದಿನಗಳಲ್ಲಿ ಒತ್ತಡ ತುಂಬಿದ ಜೀವನದಲ್ಲಿ ತಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯಲು ಸಮಯವಿಲ್ಲ. ಹೀಗಾಗಿ ಅಪರೂಪಕ್ಕೊಮ್ಮೆ ಬಿಡುವು ಮಾಡಿಕೊಂಡು ಹೆಚ್ಚಿನವರು ಪಿಕ್ನಿಕ್ ಗೆ ತೆರಳುತ್ತಾರೆ. ಈ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕ ವಿಶ್ರಾಂತಿಯ ಜೊತೆಗೆ ಕುಟುಂಬದವರ ಜೊತೆಗೆ ಸಮಯ ಕಳೆಯಲು ಒಂದೊಳ್ಳೆ ಅವಕಾಶವಾಗಿದೆ. ದೈನಂದಿನ ಬದುಕಿನ ಚಟುವಟಿಕೆಯಿಂದ ವಿರಾಮ ಪಡೆದುಕೊಳ್ಳಬಹುದಾದ ಹೊರಾಂಗಣ ಚಟುವಟಿಕೆಯಾಗಿರುವ ಕಾರಣ ಎಲ್ಲರೂ ಪಿಕ್ನಿಕನ್ನು ಇಷ್ಟ ಪಡುತ್ತಾರೆ. ಅದಲ್ಲದೇ ಪ್ರತಿ ವರ್ಷ ಜೂನ್ 18 ರಂದು ಅಂತಾರಾಷ್ಟ್ರೀಯ ಪಿಕ್ನಿಕ್ ದಿನವನ್ನು ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಪಿಕ್ನಿಕ್ ದಿನದ ಇತಿಹಾಸ ಹಾಗೂ ಮಹತ್ವ
ಅಂತಾರಾಷ್ಟ್ರೀಯ ಪಿಕ್ನಿಕ್ ದಿನವು ಫ್ರೆಂಚ್ ಕ್ರಾಂತಿ ಮತ್ತು ವಿಕ್ಟೋರಿಯನ್ ಯುಗದ ಅಂಚಿಗೆ ಆರಂಭವಾಯಿತು. ಈ ಪಿಕ್ನಿಕ್ ಎಂಬ ಶಬ್ದ ಫ್ರಾನ್ಸ್ ಮೂಲದ್ದು ಎನ್ನಲಾಗಿದೆ. ಫ್ರಾನ್ಸ್ ಕ್ರಾಂತಿಯ ನಂತರ ಅಲ್ಲಿನ ಜನರು ಎಲ್ಲಾ ನಿರ್ಬಂಧಗಳನ್ನು ಮೀರಿ ಹೊರಗಡೆ ಹೋಗಿ ಸಂತೋಷವಾಗಿ ಸುತ್ತಾಡಿಕೊಂಡು ಬರುವುದು ಶುರುವಾಯಿತು. ಅಂದಿನಿಂದ ಪ್ರತಿ ವರ್ಷ ಜೂನ್ 18 ರಂದು ಅಂತಾರಾಷ್ಟ್ರೀಯ ಪಿಕ್ನಿಕ್ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದಲ್ಲದೇ ತಮ್ಮ ಪ್ರೀತಿ ಪಾತ್ರರಿಗೆ ಸಮಯಕೊಡುವ ಮೂಲಕ ಈ ದಿನವು ಮಹತ್ವವನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಬರಡಾಗುತ್ತಿದೆ ಭೂಮಿಯ ಒಡಲು, ಜಾಗೃತಿ ಅತ್ಯಗತ್ಯ
ಪಿಕ್ನಿಕ್ ತೆರೆಳುವ ಮುನ್ನ ಈ ಸಲಹೆಯನ್ನು ತಪ್ಪದೇ ಪಾಲಿಸಿ
- ನಿಮ್ಮ ಪ್ರೀತಿಪಾತ್ರರೊಂದಿಗೆ ಪಿಕ್ನಿಕ್ ಗೆಂದು ತೆರಳುವ ಮುನ್ನ ಇಬ್ಬರಿಗೂ ಇಷ್ಟವಾಗುವ ಸ್ಥಳವನ್ನೇ ಆಯ್ದುಕೊಳ್ಳಿ.
- ಪಿಕ್ನಿಕ್ ವೇಳೆಯಲ್ಲಿ ನಿಮ್ಮರೊಂದಿಗಿನ ಸಮಯವನ್ನು ವಿನೋದಗೊಳಿಸಲು ಸಿಹಿ ತಿಂಡಿಗಳು, ಸ್ಯಾಂಡ್‌ವಿಚ್‌ಗಳು, ಹಣ್ಣುಗಳು ಹಾಗೂ ರಿಫ್ರೆಶ್ ಪಾನೀಯಗಳು ನಿಮ್ಮ ಬ್ಯಾಗ್ ನಲ್ಲಿರಲಿ.
- ನೀವು ಹೋಗುವ ಸ್ಥಳಗಳು ಪ್ರಶಾಂತವಾಗಿದ್ದು, ಮನಸ್ಸಿಗೆ ಖುಷಿ ನೀಡುವಂತಿರಲಿ.
- ಪ್ರಶಾಂತವಾದ ಸ್ಥಳಗಳಲ್ಲಿ ನಿಮ್ಮವರ ಜೊತೆಗೆ ಸಮಯ ಕಳೆಯುವ ವೇಳೆ ಫೋಟೋಗಳನ್ನು ತೆಗೆಯುವುದನ್ನು ಮರೆಯಬೇಡಿ. ಈ ಫೋಟೋಗಳು ನಿಮ್ಮವರೊಂದಿಗೆ ಸಮಯ ಕಳೆದ ಕ್ಷಣಗಳನ್ನು ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ.
- ಪಿಕ್ನಿಕ್ ಗೆ ಹೋದಾಗ ಮೊಬೈಲ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ಹೆಚ್ಚಿನ ಸಮಯ ನಿಮ್ಮ ಕುಟುಂಬದವರಿಗೆ ಮಿಸಲಿಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: