International Yoga Day 2024 : ಈ ಯೋಗಾಸನ ಮಾಡಿದ್ರೆ ದೇಹದ ಬೊಜ್ಜು ಮಂಜಿನಂತೆ ಕರಗುತ್ತೆ
ಯೋಗವು ದೇಹವನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಆರೋಗ್ಯಕರವಾಗಿಸುತ್ತದೆ. ಹೀಗಾಗಿ ದಿನನಿತ್ಯ ಯೋಗ ಮಾಡುವುದರಿಂದ ಫಿಟ್ ಆಗಿರಲು ಸಾಧ್ಯ. ಒಂದು ವೇಳೆ ನೀವೇನಾದರೂ ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ ಯಾವ ಯೋಗ ಆಸನಗಳನ್ನು ಮಾಡಬಹುದು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದಿನ ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದ ಅಧಿಕ ತೂಕ ಹಾಗೂ ಬೊಜ್ಜಿನ ಸಮಸ್ಯೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ತೂಕ ಇಳಿಸಿಕೊಳ್ಳಲು ಏನೆಲ್ಲಾ ಪ್ರಯತ್ನ ಮಾಡಿದರೂ ಕೂಡ ಕೆಲವೊಮ್ಮೆ ವರ್ಕ್ ಔಟ್ ಆಗುವುದೇ ಇಲ್ಲ. ಕೆಲವರು ಊಟ ತಿಂಡಿ ಬಿಟ್ಟು ಸ್ಲಿಮ್ ಆಗಲು ಪ್ರಯತ್ನಿಸುತ್ತಾರೆ. ಆದರೆ ಮನೆಯಲ್ಲೇ ಕೆಲವು ಕೆಲವು ನಿಮಿಷಗಳ ಈ ಆಸನಗಳನ್ನು ಮಾಡಿದರೆ ತೂಕವು ಇಳಿಕೆಯಾಗಿ ಸ್ಲಿಮ್ ಆಗಬಹುದು.
* ಭುಜಂಗಾಸನ : ಈ ಯೋಗಾಸನವು ದೇಹದ ಮೇಲಿನ ಭಾಗಕ್ಕೆ ಸಂಬಂಧಿಸಿದ್ದಾಗಿದೆ. ಈ ಆಸನ ಮಾಡುವಾಗ ಹೊಟ್ಟೆಯ ಸ್ನಾಯಗಳ ಮೇಲೆ ಒತ್ತಡ ಬೀಳುತ್ತದೆ. ಈ ಮೂಲಕ ಹೊಟ್ಟೆಯಲ್ಲಿರುವ ಬೊಜ್ಜು ಸುಲಭವಾಗಿ ಕರಗುವಂತೆ ಮಾಡುತ್ತದೆ.
* ಅರ್ಧ ಪಿಂಚ ಮಯೂರಾಸನ : ಈ ಯೋಗಾಸನದಿಂದ ಕೈಗಳು ನಿಮ್ಮ ದೇಹದ ಸಂಪೂರ್ಣ ಭಾರವನ್ನು ಸಮತೋಲನದಲ್ಲಿಡುತ್ತದೆ. ಇದರಿಂದ ಕೈಗಳು, ಭುಜಗಳು ಬಲಗೊಳ್ಳುವುದಲ್ಲದೆ, ಬಹುಬೇಗನೆ ಈ ಭಾಗದ ಬೊಜ್ಜು ಕರಗುತ್ತದೆ.
* ನೌಕಾಸನ : ದೋಣಿಯ ಭಂಗಿಯ ಆಸನವು ಇದಾಗಿದ್ದು, ದೇಹವನ್ನು ನೆಲದಿಂದ ಸಮತೋಲದಲ್ಲಿ ಇಡುವಂತಾಗಿದೆ. ಇದರಿಂದ ಹೊಟ್ಟೆಯ ಬೊಜ್ಜು ನಷ್ಟಕ್ಕೆ ಕಾರಣವಾಗುತ್ತದೆ. ಅದಲ್ಲದೇ, ಒತ್ತಡ ನಿವಾರಣೆ, ಕರುಳು, ಕಿಡ್ನಿ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ.
* ಮತ್ಸ್ಯಾಸನ : ಈ ಯೋಗಾಸನವು ದೇಹದ ಕೆಳಗಿನ ಭಾಗವಾಗಿರುವ ತೊಡೆಗಳು, ಹೊಟ್ಟೆಯ ಸ್ನಾಯುಗಳು ಮತ್ತು ಸೊಂಟಕ್ಕೆ ಒತ್ತಡ ಹಾಕುವುದರಿಂದ ಹೊಟ್ಟೆ ಮತ್ತು ತೊಡೆಯಲ್ಲಿನ ಕೊಬ್ಬು ಕರಗಿ ತೂಕ ಇಳಿಕೆಗೆ ಸಹಾಯಕವಾಗಿದೆ.
ಇದನ್ನೂ ಓದಿ: ಪ್ರೀತಿಯಲ್ಲಿ ಬಿದ್ದ ಖುಷಿಯಲ್ಲಿ ಈ ವಿಚಾರಗಳನ್ನು ನಿಮ್ಮ ಪ್ರೇಯಸಿಗೆ ಹೇಳ್ಬೇಡಿ
* ಸಿಂಹಾಸನ : ದಿನನಿತ್ಯ ಸಿಂಹಾಸನವನ್ನು ಮಾಡುವುದರಿಂದ ಮುಖದ ಮೇಲಿನ ಸ್ನಾಯುಗಳು ಬಲಗೊಳ್ಳುವುದು. ಮುಖ ಹಾಗೂ ಕುತ್ತಿಗೆ ಭಾಗದಲ್ಲಿರುವ ಬೇಡದ ಕೊಬ್ಬು ಕರಗಿ ಹೋಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:56 pm, Wed, 19 June 24