Monsoon Home Clean Tips : ಮಳೆಗಾಲದಲ್ಲಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಮನೆಯನ್ನು ಎಲ್ಲಾ ಋತುವಿನಲ್ಲಿಯೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಆದರೆ ಈ ಮಳೆಗಾಲದಲ್ಲಿ ಮನೆಯ ನಿರ್ವಹಣೆಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಶುಚಿಯಾಗಿ ಇಟ್ಟುಕೊಳ್ಳದೇ ಹೋದರೆ ಆರೊಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. ಈ ವೇಳೆಯಲ್ಲಿ ಮನೆ ಸ್ವಚ್ಛತೆಯ ಕಡೆಗೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ. ಹಾಗಾದ್ರೆ ಈ ಮನೆಯನ್ನು ಶುಚಿಯಾಗಿಟ್ಟುಕೊಳ್ಳುವುದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಳೆಗಾಲದಲ್ಲಿ ಹಚ್ಚ ಹಸಿರಿನ ತಂಪಾದ ವಾತಾವರಣಗಳಿಂದ ಮನಸ್ಸಿಗೇನು ಹಿತವೆನಿಸುತ್ತದೆ. ಆದರೆ ಬಿಡದೇ ಸುರಿಯುವ ಮಳೆಯಿಂದ ಬೋರ್ ಅನಿಸುವುದು ಇದೆ. ಅಷ್ಟೇ ಅಲ್ಲದೇ, ಈ ಋತುವಿನಲ್ಲಿ ಮನೆ ಹಾಗೂ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗುತ್ತದೆ. ಮಳೆಗಾಲದಲ್ಲಿ ಗೋಡೆ ಹಸಿಯಾಗುವುದು, ಅಂಗಳ ಜಾರುವುದು ಹೀಗೆ ಒಂದಲ್ಲ ಒಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಶುಚಿತ್ವದ ಕಡೆಗೆ ಗಮನ ಕೊಡದೇ ಹೋದಲ್ಲಿ ಆರೋಗ್ಯ ಸಮಸ್ಯೆಗಳು ಒಕ್ಕರಿಸಿಕೊಂಡು ಬಿಡುತ್ತದೆ.
- ಮನೆಯ ಛಾವಣಿ ಸೋರುತ್ತಿದೆಯೇ ಎಂದು ಒಮ್ಮೆ ನೋಡಿ. ಇಲ್ಲದಿದ್ದರೆ ಸೋರುತ್ತಿರುವ ಛಾವಣಿಯಿಂದಾಗಿ ಮಳೆ ನೀರು ಮನೆಯ ಒಳಗೆ ತುಂಬುತ್ತದೆ.
- ಮಳೆಗಾಲದಲ್ಲಿ ನೆಲ ತಣ್ಣನೆಗಿರುತ್ತದೆ. ಮನೆಯನ್ನು ಸ್ವಚ್ಛಗೊಳಿಸಲು ಬಿಸಿ ನೀರನ್ನು ಬಳಸಿ. ಈ ನೀರಿಗೆ ಉಪ್ಪು ನೀರು ಬೆರೆಸುವುದರಿಂದ ವಿಷಜಂತುಗಳಿಗೆ ಸಾಯುತ್ತವೆ.
- ಬೆಡ್ ಕವರ್, ಪರದೆಗಳು, ಟವೆಲನ್ನು ದಿನನಿತ್ಯ ಬದಲಾಯಿಸುವುದು ಕಷ್ಟವಾದರೆ ವಾರಕ್ಕೊಮ್ಮೆಯಾದರೂ ಬದಲಾಯಿಸುತ್ತ ಇರುವುದು ಒಳ್ಳೆಯದು. ಇಲ್ಲದಿದ್ದರೆ ಇದು ಕೆಟ್ಟ ವಾಸನೆಯನ್ನು ಬೀರುತ್ತದೆ.
- ಮನೆಯ ನೆಲ ಟೈಲ್ಸ್ ಆಗಿದ್ದರೆ ನೀರು ಬಿದ್ದ ತಕ್ಷಣವೇ ಒರೆಸಿಬಿಡಿ. ಚೆಲ್ಲಿದ ನೀರಿನ ಮೇಲೆ ಕಾಲಿಟ್ಟರೆ ಜಾರಿ ಬಿದ್ದು ಗಾಯಗಳಾಗುವ ಸಾಧ್ಯತೆಯೇ ಹೆಚ್ಚು.
- ಮಳೆಗಾಲದಲ್ಲಿ ಜೇಡವು ಬಲೆಕಟ್ಟದಂತೆ ನೋಡಿಕೊಳ್ಳಿ. ಒಂದು ವೇಳೆ ಬಲೆಯಿದ್ದರೆ ಆಗಾಗ ತೆಗೆಯುತ್ತ ಇರಿ.
- ಈ ಋತುವಿನಲ್ಲಿ ಕಾಲೊರಸಲು ಹತ್ತಿಯ ಮ್ಯಾಟ್ ಬಳಸುವುದು ಒಳ್ಳೆಯದು. ಹೊರಗೆ ಹೋಗಿ ಬಂದ ಕೂಡಲೇ ಕಾಲು ಒದ್ದೆಯಾಗಿರುವುದರಿಂದ ಹತ್ತಿಯ ಬಟ್ಟೆಯ ಮ್ಯಾಟ್ ನೀರನ್ನು ಬೇಗನೇ ಹೀರಿಕೊಳ್ಳುತ್ತದೆ.
- ಮಳೆ ಕಡಿಮೆಯಿದ್ದರೆ ಸಾಧ್ಯವಾದಷ್ಟು ಬಾಗಿಲು ಕಿಟಕಿಗಳನ್ನು ತೆರೆದಿಟ್ಟು, ಗಾಳಿಯಾಡುವಂತೆ ನೋಡಿಕೊಳ್ಳಿ. ಈ ಗಾಳಿಯಲ್ಲಿ ತೇವಾಂಶ ಹೆಚ್ಚಿದ್ದು ಮನೆಯ ವಸ್ತುಗಳೆಲ್ಲವೂ ತೇವ ಒಳಗಾಗಿ ದುರ್ವಾಸನೆ ಬೀರುತ್ತದೆ.
- ಈ ಸಮಯದಲ್ಲಿ ಬಟ್ಟೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ ಇಲ್ಲದಿದ್ದರೆ ಅವು ವಾಸನೆ ಬರಲು ಪ್ರಾರಂಭಿಸುತ್ತವೆ. ಮಳೆಯ ತೇವಾಂಶದಿಂದ ಕಬೋರ್ಡ್‌ನಲ್ಲಿ ಬೇವು, ಕರ್ಪೂರ, ಏಲಕ್ಕಿಯನ್ನು ಇಡುವ ಮೂಲಕ ಬಟ್ಟೆಗಳನ್ನು ದುರ್ನಾತದಿಂದ ರಕ್ಷಿಸಿಕೊಳ್ಳಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:03 pm, Wed, 19 June 24