International Yoga Day 2024 : ಯೋಗ ಮಾಡುವ ವೇಳೆ ಪಾಲಿಸಲೇಬೇಕಾದ ನಿಯಮಗಳಿವು

ಯೋಗ ಬಲ್ಲವನಿಗೆ ರೋಗವಿಲ್ಲ ಎನ್ನುವಂತೆ ಅರ್ಧ ಗಂಟೆ ಆಸನಗಳನ್ನು ಮಾಡುವುದರಿಂದ ದೈಹಿಕ ವ್ಯಾಯಾಮದೊಂದಿಗೆ , ಸರ್ವರೋಗವನ್ನು ನಿವಾರಿಸುವ ಶಕ್ತಿ ಯೋಗಕ್ಕಿದೆ. ಆದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಮಾಡುವ ಯೋಗದ ವೇಳೆ ಈ ಕೆಲವು ನಿಯಮಗಳನ್ನು ಪಾಲಿಸುವುದು ಒಳಿತು. ಇಲ್ಲದಿದ್ದರೆ ಆರೋಗ್ಯಕ್ಕೆ ಹಾನಿಯಾಗುವ ಸಂಭವವೇ ಹೆಚ್ಚು.

International Yoga Day 2024 : ಯೋಗ ಮಾಡುವ ವೇಳೆ ಪಾಲಿಸಲೇಬೇಕಾದ ನಿಯಮಗಳಿವು
ಅಂತಾರಾಷ್ಟ್ರೀಯ ಯೋಗ ದಿನಾಚರಣೆ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 20, 2024 | 10:55 AM

ಆರೋಗ್ಯವನ್ನು ಕಾಪಾಡುವಲ್ಲಿ ಯೋಗದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. 2015ರಿಂದ ಯೋಗ ದಿನವನ್ನು ಆಚರಿಸುತ್ತಿದ್ದು, ಯೋಗಕ್ಕೆ ಆದ್ಯತೆಯೂ ನೀಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೇ ಮೊದಲ ಬಾರಿಗೆ ಯೋಗಾಭ್ಯಾಸ ಮಾಡಬೇಕೆಂದು ಕೊಂಡವರು ಈ ಕೆಲವು ತಪ್ಪುಗಳನ್ನು ಮಾಡುವುದನ್ನು ಆದಷ್ಟು ತಪ್ಪಿಸಿ.

  • ಯೋಗದ ಸಮಯದಲ್ಲಿ ನೀರು ಕುಡಿಯುವ ಅಭ್ಯಾಸ ಬೇಡ. ಹೀಗೆ ಮಾಡಿದ್ದಲ್ಲಿ ಆರೋಗ್ಯಕ್ಕೆ ಹಾನಿಯಾಗುತ್ತದೆ. ಯೋಗ ಮಾಡಿದ ಹತ್ತು ಹದಿನೈದು ನಿಮಿಷಗಳ ಕಾಲ ಬಿಟ್ಟು ನೀರು ಕುಡಿಯುವುದು ಉತ್ತಮ.
  • ಆಸನಗಳನ್ನು ಮಾಡುವ ಎರಡರಿಂದ ಮೂರು ಗಂಟೆಗೂ ಮೊದಲೇ ಆಹಾರವನ್ನು ಸೇವಿಸಿರಬೇಕು. ಹೊಟ್ಟೆಗಟ್ಟಿ ಮಾಡಿಕೊಂಡು ಯೋಗ ಮಾಡುವುದರಿಂದ ದೇಹದಲ್ಲಿ ಸೆಳೆತವು ಉಂಟಾಗುತ್ತದೆ.
  • ಯೋಗಾಭ್ಯಾಸದ ಸಮಯದಲ್ಲಿ ಸರಿಯಾದ ಬಟ್ಟೆಗಳನ್ನು ಆಯ್ದುಕೊಳ್ಳುವುದು ಬಹುಮುಖ್ಯ. ನಿಮ್ಮ ಬಟ್ಟೆಯೂ ಬಿಗಿಯಾಗಿದ್ದರೆ ಆಸನಗಳನ್ನು ಮಾಡಲು ಕಷ್ಟವಾಗುತ್ತದೆ. ಹೀಗಾಗಿ ನಿಮ್ಮ ಗಮನ ಬಟ್ಟೆಯ ಮೇಲೆ ಹೋಗಬಹುದು. ಆದಷ್ಟು ಸಡಿಲವಾದ ಬಟ್ಟೆಗಳನ್ನು ಧರಿಸಿ.
  • ಆರಂಭದಲ್ಲೇ ಕಠಿಣ ಭಂಗಿಗಳನ್ನು ಮಾಡಬೇಡಿ. ಪ್ರಾರಂಭದಲ್ಲಿ ಸುಲಭವಾದ ಭಂಗಿಗಳನ್ನು ಮಾಡುವ ಮೂಲಕ ಯೋಗವನ್ನು ಆರಂಭಿಸಿ.
  • ಯೋಗದಲ್ಲಿ ನಿರತರಾಗಿರುವ ಸಂದರ್ಭದಲ್ಲಿ ಮೊಬೈಲ್ ಬಳಸಬೇಡಿ. ಈ ಸಮಯದಲ್ಲಿ ನಿಮ್ಮ ಗಮನ ಬೇರೆಡೆಗೆ ಹೋಗದಿರಲಿ. ಸಂಪೂರ್ಣ ಗಮನವನ್ನು ಯೋಗದ ಮೇಲೆ ಕೇಂದ್ರಿಕರಿಸುವುದು ಒಳಿತು.
  • ಯೋಗ ಮಾಡುವ ಸಂದರ್ಭದಲ್ಲಿ ಅತಿಯಾಗಿ ಮಾತು ಬೇಡ. ಮಾತನಾಡುತ್ತಿದ್ದರೆ ಮಾಡುವ ಭಂಗಿಗಳ ಮೇಲೆ ಗಮನ ಹರಿಸಲು ಆಗುವುದಿಲ್ಲ. ಇದರಿಂದ ನಿಮ್ಮನ್ನು ನೀವು ಒಂದೆಡೆ ಕೇಂದ್ರೀಕರಿಸಲು ಕಷ್ಟವಾಗಬಹುದು.
  • ಯೋಗಾಸನ ಮಾಡುವಾಗ ಆತುರವು ಬೇಡ. ಯಾವುದೇ ಆಸನವನ್ನು ಅವಸರದಿಂದ ಮಾಡಬೇಡಿ. ಇದರಿಂದ ಗಾಯ ಹಾಗೂ ಸೆಳೆತವು ಉಂಟಾಗುತ್ತದೆ. ಯೋಗ ಮಾಡುವಾಗ ದೈಹಿಕ ಹಾಗೂ ಮಾನಸಿಕ ಒತ್ತಡ ಅನುಭವಿಸುತ್ತಿದ್ದರೆ ಈ ಬಗ್ಗೆ ಯೋಗ ತರಬೇತಿದಾರರ ಬಳಿ ತಿಳಿಸಿ.
  • ನಿಮಗೆ ಸಂಪೂರ್ಣವಾಗಿ ತಿಳಿದಿರುವ ಆಸನಗಳನ್ನು ಮಾಡಿ. ಯಾವುದೇ ಹೊಸ ಭಂಗಿಗಳನ್ನು ಪ್ರಯತ್ನಿಸುವ ಮೂಲಕ ದೇಹಕ್ಕೆ ಹಾನಿ ಮಾಡಿಕೊಳ್ಳಬೇಡಿ. ಹೊಸ ಭಂಗಿಗಳನ್ನು ಮಾಡುವಿರಿಯಾದರೆ ಯೋಗ ತರಬೇತಿದಾರರ ಸಲಹೆ ಹಾಗೂ ಸೂಚನೆಗಳನ್ನು ತೆಗೆದುಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:21 am, Thu, 20 June 24

ತಾಜಾ ಸುದ್ದಿ
ಸಭೆಗೆ ಬಂದ ಕುಮಾರಸ್ವಾಮಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ: ವಿಡಿಯೋ ನೋಡಿ
ಸಭೆಗೆ ಬಂದ ಕುಮಾರಸ್ವಾಮಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ: ವಿಡಿಯೋ ನೋಡಿ
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು