ಕೆಮ್ಮು ನೆಗಡಿ ಸಮಸ್ಯೆಗೆ ಈ ಮನೆ ಮದ್ದು ಪರಿಹಾರ, ಇಲ್ಲಿದೆ ಸುಲಭ ವಿಧಾನ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 13, 2024 | 10:14 AM

ಹವಾಮಾನದಲ್ಲಾಗುವ ಬದಲಾವಣೆಯಿಂದಾಗಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ವಾತಾವರಣದಲ್ಲಾಗುವ ಸ್ವಲ್ಪ ವ್ಯತ್ಯಾಸವಾದರೂ ಹೆಚ್ಚಿನವರಲ್ಲಿ ಕೆಮ್ಮು, ನೆಗಡಿ, ಗಂಟಲು ನೋವು ಸಮಸ್ಯೆಯು ಉಂಟಾಗಿ ಹೈರಾಣಾಗಿಸಿ ಬಿಡುತ್ತದೆ. ಎಷ್ಟೇ ಮದ್ದು ಮಾಡಿದರೂ ಕೂಡ ಗುಣಮುಖವಾಗುವುದೇ ಇಲ್ಲ. ಈ ಸಮಯದಲ್ಲಿ ಹೆಚ್ಚಿನವರು ಹಳ್ಳಿ ಮದ್ದಿನತ್ತ ಒಲವು ತೋರಿಸಿ ಆರೋಗ್ಯವನ್ನು ಸರಿಪಡಿಸಿಕೊಳ್ಳುತ್ತಾರೆ.

ಕೆಮ್ಮು ನೆಗಡಿ ಸಮಸ್ಯೆಗೆ ಈ ಮನೆ ಮದ್ದು ಪರಿಹಾರ, ಇಲ್ಲಿದೆ ಸುಲಭ ವಿಧಾನ
ಸಾಂದರ್ಭಿಕ ಚಿತ್ರ
Follow us on

ಈಗಿನ ಕಾಲದಲ್ಲಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕೂಡ ಕಡಿಮೆಯೇ. ವಾತಾವರಣದಲ್ಲಿ ಸಣ್ಣ ಪುಟ್ಟ ಬದಲಾವಣೆಗಳಾದರೂ ಹೆಚ್ಚಿನವರಲ್ಲಿ ಈ ಕೆಮ್ಮು, ನೆಗಡಿ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ. ಇದು ಗಂಭೀರವಾದ ಆರೋಗ್ಯ ಸಮಸ್ಯೆಯಲ್ಲದೇ ಇದ್ದರೂ ಕೆಲವೊಮ್ಮೆ ತಿಂಗಳುಗಳ ಕಾಲ ಇರುತ್ತದೆ. ಪ್ರಾರಂಭದಲ್ಲಿ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳದೆ ಹೋದರೆ ಪರಿಣಾಮ ಜ್ವರ ಹಾಗೂ ತಲೆನೋವು ಕೂಡ ಶುರುವಾಗುತ್ತದೆ. ಹೀಗಾಗಿ ಈ ನೆಗಡಿ ಹಾಗೂ ಕೆಮ್ಮಿನಂತಹ ಸಮಸ್ಯೆಗೆ ಮನೆಯಲ್ಲೇ ಸುಲಭವಾದ ಔಷಧಿಯನ್ನು ತಯಾರಿಸಿ ಸೇವಿಸುವುದು ಉತ್ತಮ.

ಕೆಮ್ಮು ಹಾಗೂ ನೆಗಡಿಗೆ ಮನೆ ಮದ್ದುಗಳು

* ತುಳಸಿ ಎಲೆಗಳ ರಸ, ಬೆಳ್ಳುಳ್ಳಿ ರಸ, ಜೇನುತುಪ್ಪವನ್ನು ಬೆರೆಸಿ ಮೂರು ನಾಲ್ಕು ಗಂಟೆಗೊಮ್ಮೆ ಒಂದೊಂದು ಚಮಚ ಸೇವಿಸುತ್ತಿದ್ದರೆ ಕಫ, ಕೆಮ್ಮಿಗೆ ಪರಿಣಾಮಕಾರಿಯಾದ ಮನೆ ಮದ್ದಾಗಿದೆ.

* ವೀಳೆದೆಲೆಗೆ ಕಪ್ಪು ತುಳಸಿ, ಲವಂಗವನ್ನು ಅರೆದು, ಒಂದೆರಡು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.

* ಅಳಲೆಕಾಯಿಯನ್ನು ಜೇನುತುಪ್ಪದಲ್ಲಿ ತೇದು, ಈ ಮಿಶ್ರಣವನ್ನು ಗಂಟಲಿಗೆ ಹಚ್ಚುತ್ತಿದ್ದರೆ ಒಣಕೆಮ್ಮು ಸಮಸ್ಯೆಯು ನಿವಾರಣೆಯಾಗುತ್ತದೆ.

* ತುಳಸಿ ಹೂವುಗಳನ್ನು ಈರುಳ್ಳಿ ರಸ, ಶುಂಠಿ ರಸ, ಜೇನುತುಪ್ಪದೊಂದಿಗೆ ಸೇರಿಸಿ ಕುಡಿಯುವುದರಿಂದ ಕಫ ನಿವಾರಣೆ ಆಗುವುದು.

* ಅಳಲೆಕಾಯಿಯನ್ನು ಜೇನುತುಪ್ಪದಲ್ಲಿ ತೇದು, ತಯಾರಿಸಿದ ಗಂಧವನ್ನು ಗಂಟಲಿಗೆ ಹಚ್ಚುತ್ತಿದ್ದರೆ ಒಣಕೆಮ್ಮು ಕಡಿಮೆ ಆಗುವುದು.

ಇದನ್ನೂ ಓದಿ: ಇನ್ಮುಂದೆ ಸ್ಟೌವ್ ಮೇಲೆ ರೊಟ್ಟಿ ಸುಡಬೇಡಿ; ಅದರಿಂದಾಗುವ ಅಪಾಯವಿದು

* ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಶೀತದ ಕೆಮ್ಮು ಗುಣ ಮುಖವಾಗುತ್ತದೆ.

* ದಿನವೂ ಬೆಳ್ಳುಳ್ಳಿ ಅಡುಗೆಯಲ್ಲಿ ಬಳಸುತ್ತಿದ್ದರೆ ಕೆಮ್ಮು ರೋಗ ಸಾಮಾನ್ಯವಾಗಿ ಬರುವ ಸಂಭವವೇ ಕಡಿಮೆ.

* ಕಾಳುಮೆಣಸು ಪುಡಿಯನ್ನು ತುಪ್ಪಕ್ಕೆ ಬೆರೆಸಿ ಸೇವಿಸುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

* ಮೆಣಸಿನಕಾಳುಗಳನ್ನು ಮೆಲ್ಲನೆ ಜಗಿದು ರಸ ನುಂಗುತ್ತಿರುವುದರಿಂದ ಕಫವು ಕರಗಿ ಹೊರ ಬಂದು ಕೆಮ್ಮಿನಿಂದ ಮುಕ್ತಿ ಕಾಣಬಹುದು.

* ಕರಿಮೆಣಸಿನ ಕಾಳುಗಳನ್ನು ತುಳಸಿಯ ರಸದಲ್ಲಿ ಅರೆದು ಸೇವಿಸುವುದರಿಂದ ಕೆಮ್ಮಿಗೆ ಪರಿಣಾಮಕಾರಿಯಾದ ಔಷಧಿ.

* ಕಾಳು ಮೆಣಸಿನಕಾಳುಗಳನ್ನು ತುಪ್ಪದಲ್ಲಿ ಹುರಿದು, ಸ್ವಲ್ಪ ಸಕ್ಕರೆ ಸೇರಿಸಿ ಮಿಶ್ರಣವನ್ನು ಚೂರ್ಣ ಮಾಡಿಕೊಂಡು ದಿನಕ್ಕೆರಡು ಸಲ ಜೇನಿನಲ್ಲಿ ಅಥವಾ ಬಿಸಿನೀರಿನಲ್ಲಿ ಸೇವಿಸುವುದರಿಂದ ನೆಗಡಿ ಮತ್ತು ಕೆಮ್ಮು ಗುಣಮುಖವಾಗುತ್ತದೆ.

* ಮಲಗುವ ಸಮಯದಲ್ಲಿ ವಿಪರೀತವಾಗಿ ಕೆಮ್ಮು ಕಾಣಿಸಿಕೊಂಡರೆ ಒಂದೆರಡು ಕಲ್ಲು ಉಪ್ಪು ಬಾಯಿಗೆ ಹಾಕಿ ನೀರನ್ನು ನುಂಗಿದರೆ ಕಕೆಮ್ಮು ಬರುವುದಿಲ್ಲ.

* ಒಣಕೆಮ್ಮು ಕಾಣಿಸಿಕೊಂಡಾಗ ಏಲಕ್ಕಿ ಪುಡಿಗೆ ಸ್ವಲ್ಪ ಶುಂಠಿ ಪುಡಿಯನ್ನ ಸೇವಿಸಿದರೆ ಉತ್ತಮ.

* ಮಜ್ಜಿಗೆ ಅನ್ನಕ್ಕೆ ಹಸಿ ಈರುಳ್ಳಿಯನ್ನು ಸೇರಿಸಿ ಸೇವಿಸುವುದರಿಂದ ಉಷ್ಣದಿಂದ ಉಂಟಾದ ಕೆಮ್ಮು ಶಮನವಾಗುತ್ತದೆ.

* ಕೆಮ್ಮು, ನೆಗಡಿಯು ಇದ್ದಾಗ ಒಂದು ಚಮಚದಷ್ಟು ಅರಿಶಿನ ಪುಡಿ ಹಾಗೂ ಕರಿಮೆಣಸಿನ ಪುಡಿ ಸೇರಿಸಿ ಕುದಿಸಿ, ದಿನಕ್ಕೆ ಒಂದೆರಡು ಬಾrರಿ ಸೇವನೆ ಮಾಡುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ