Skin Care: ಮುಖಕ್ಕೆ ಸಾಬೂನು ಹಚ್ಚಲೇಬೇಡಿ, ಬದಲಾಗಿ ಇವುಗಳನ್ನು ಬಳಸಿ

ಸಾಮಾನ್ಯವಾಗಿ ಮೈಗೆ ಹಚ್ಚುವ ಸೋಪನ್ನೇ ಮುಖಕ್ಕೂ ಹಚ್ಚುತ್ತೇವೆ, ಆದರೆ ಅದರಿಂದ ತ್ವಚೆಗೆ ಹಾನಿಯುಂಟಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

Skin Care: ಮುಖಕ್ಕೆ ಸಾಬೂನು ಹಚ್ಚಲೇಬೇಡಿ, ಬದಲಾಗಿ ಇವುಗಳನ್ನು ಬಳಸಿ
Face Wash
Updated By: ನಯನಾ ರಾಜೀವ್

Updated on: Jul 20, 2022 | 12:54 PM

ಸಾಮಾನ್ಯವಾಗಿ ಮೈಗೆ ಹಚ್ಚುವ ಸೋಪನ್ನೇ ಮುಖಕ್ಕೂ ಹಚ್ಚುತ್ತೇವೆ, ಆದರೆ ಅದರಿಂದ ತ್ವಚೆಗೆ ಹಾನಿಯುಂಟಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಆದರೆ ದೇಹ ಮತ್ತು ಮುಖದ ಚರ್ಮವು ವಿಭಿನ್ನವಾಗಿದ್ದು, ವಿಭಿನ್ನ ಆರೈಕೆಯನ್ನೇ ಮಾಡಬೇಕಾಗುತ್ತದೆ.  ಹೈಪೋಲಾರ್ಜನಿಕ್, ವಾಸನೆಯಿಲ್ಲದ ಮತ್ತು ಚರ್ಮವನ್ನು ತೇವಗೊಳಿಸುವಂತಹವುಗಳನ್ನು ಮಾತ್ರ ಬಳಸಿ. ಮುಖದ ಸಾಬೂನುಗಳು ಪ್ರತ್ಯೇಕವಾಗಿ ಸೆರಾಮಿಡ್‌ಗಳು, ನಿಯಾಸಿನಾಮೈಡ್, ಗ್ಲಿಸರಿನ್ ಮತ್ತು ಹೈಲುರಾನಿಕ್ ಆಮ್ಲವನ್ನು ಹೊಂದಿರಬೇಕು, ಇವೆಲ್ಲವೂ ನಮ್ಮ ಮುಖದ ಚರ್ಮಕ್ಕೆ ಸಹಾಯವನ್ನು ಮಾಡುತ್ತದೆ.

ಮುಖವನ್ನು ಶುಚಿಗೊಳಿಸಲು ಸೋಪ್ ಬಳಸುವುದರಿಂದಾಗುವ ಅಡ್ಡ ಪರಿಣಾಮಗಳು
ಸಾಬೂನುಗಳು ಒರಟಾಗಿರುತ್ತದೆ: ಇತರೆ ಜೆಲ್​ಗಳಿಗೆ ಹೋಲಿಸಿದರೆ ಸಾಬೂನುಗಳು ಸ್ವಲ್ಪ ಒರಟಾಗಿರುತ್ತದೆ. ನೇರವಾಗಿ ಮುಖಕ್ಕೆ ಉಜ್ಜುವುದರಿಂದ ಮುಖವು ಒರಟಾಗಿ ಕೆಂಪು ಗೆರೆಗಳು ಕಾಣಿಸಿಕೊಳ್ಳಬಹುದು.

ಸಾಬೂನುಗಳು ತ್ವಚೆಯನ್ನು ಒಣಗಿಸಬಹುದು: ಅವು ರಾಸಾಯನಿಕಗಳಿಂದ ತುಂಬಿರುವುದರಿಂದ, ಸೋಪ್ ಬಾರ್‌ಗಳು ಚರ್ಮದಿಂದ ಎಲ್ಲಾ ತೇವಾಂಶವನ್ನು ತೆಗೆದುಹಾಕಬಹುದು ಮತ್ತು ಅದನ್ನು ಒಣಗಿಸಿಬಿಡಬಹುದು.

ಸಾಬೂನುಗಳು ರಾಸಾಯನಿಕವನ್ನು ಹೊಂದಿರುತ್ತವೆ: ಸೋಪ್ ಬಾರ್‌ಗಳಲ್ಲಿ ಸುಗಂಧ ದ್ರವ್ಯಗಳು ಮತ್ತು ಕೃತಕ ಬಣ್ಣಗಳನ್ನು ಬಳಸಲಾಗುತ್ತದೆ. ಅದು ನಿಮ್ಮ ಮುಖದ ಸೂಕ್ಷ್ಮ ಚರ್ಮಗಳಿಗೆ ಹಾನಿಯುಂಟು ಮಾಡಿ ಮೊಡವೆಗಳು ಹಾಗೂ ಮುಖದ ಸುಕ್ಕಿಗೆ ಕಾರಣವಾಗಬಹುದು.

ಸಾಬೂನುಗಳು ಹೆಚ್ಚಿನ pH ಮೌಲ್ಯವನ್ನು ಹೊಂದಿವೆ: ಹೆಚ್ಚಿನ ಸಾಬೂನುಗಳಲ್ಲಿ pH ಮೌಲ್ಯವು ತುಂಬಾ ಹೆಚ್ಚಾಗಿರುತ್ತದೆ ಏಕೆಂದರೆ ಅವುಗಳನ್ನು ನಿಮ್ಮ ದೇಹದಿಂದ ಕೊಳೆತವನ್ನು ತೊಳೆಯಲು sಹಕಾರಿಯಾಗುತ್ತವೆ, ಆದ್ದರಿಂದ, ಅವುಗಳನ್ನು ಮುಖಕ್ಕೆ ಅನ್ವಯಿಸುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ.

ಸಾಬೂನಿನ ಬದಲು ಇದನ್ನು ಬಳಸಿ
ಜೆಲ್ ಕ್ಲೆನ್ಸರ್​: ಎಣ್ಣೆಯುಕ್ತ ಚರ್ಮ ಹೊಂದಿರುವವರು ತಾವು ಖರೀದಿಸುವ ಕ್ಲೀನರ್‌ಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಚರ್ಮದ ಮೇಲೆ ಎಣ್ಣೆಯ ಪಸೆ ಇರದ ರೀತಿ ಶುಚಿಗೊಳಿಸುವ ಜೆಲ್ ಕ್ಲೀನರ್‌ಗಳನ್ನು ಖರೀದಿ ಮಾಡಿ, ಜೆಲ್ ಕ್ಲೆನ್ಸರ್ಗಳು ರಂಧ್ರಗಳನ್ನು ಆಳವಾಗಿ ಸ್ವಚ್ಛಗೊಳಿಸುತ್ತವೆ ಮತ್ತು ಹೆಚ್ಚುವರಿ ಎಣ್ಣೆಯನ್ನು ತೆರವುಗೊಳಿಸುತ್ತವೆ.

ಕ್ಲೇ ಕ್ಲೀನರ್ಗಳು: ಕ್ಲೇ ಕ್ಲೆನ್ಸರ್ಗಳು ಮೊಡವೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಅವರು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತವೆ ಮತ್ತು ಮೊಡವೆಗಳನ್ನು ಒಣಗಿಸಿ ಚರ್ಮದ ಆರೋಗ್ಯ ಕಾಪಾಡುತ್ತದೆ.

ಕ್ರೀಮ್ ಕ್ಲೆನ್ಸರ್‌ಗಳು: ಕ್ರೀಮ್ ಕ್ಲೆನ್ಸರ್‌ಗಳು ಮುಖದ ಚರ್ಮದ ಮೇಲೆ ಅಗತ್ಯವಾದ ಮಾಯಿಶ್ಚರೈಸರ್ ಅನ್ನು ಒದಗಿಸುತ್ತದೆ. ಒಣ ಚರ್ಮ ಹೊಂದಿರುವವರಿಗೆ ಅವು ಉತ್ತಮವಾಗಿದೆ.

ಫೋಮ್ ಕ್ಲೀನರ್ಗಳು: ಫೋಮ್ ಕ್ಲೀನರ್ಗಳು ಎಣ್ಣೆ ಮತ್ತು ಕೊಳೆಯನ್ನು ತೊಳೆಯಲು ಉತ್ತಮ ಪ್ರಮಾಣದ ನೊರೆಯನ್ನು ಉತ್ಪಾದಿಸುತ್ತವೆ. ಎಣ್ಣೆಯುಕ್ತ ಚರ್ಮ ಹೊಂದಿರುವವರು ಇದನ್ನು ಬಳಕೆ ಂಆಡಬಹುದು.

ಆಯಿಲ್ ಕ್ಲೆನ್ಸರ್‌ಗಳು: ಆಯಿಲ್ ಕ್ಲೆನ್ಸರ್‌ಗಳು ಬ್ಲ್ಯಾಕ್‌ಹೆಡ್‌ಗಳು ಮತ್ತು ವೈಟ್‌ಹೆಡ್‌ಗಳಿಗೆ ಕಾರಣವಾಗುವ ರಂಧ್ರಗಳನ್ನು ಅನ್‌ಕ್ಲೋಗ್ ಮಾಡುತ್ತದೆ ಮತ್ತು ತ್ವಚೆಯನ್ನು ಆರೋಗ್ಯಕರ, ಹೊಳೆಯುವಂತೆ ಮಾಡಿ ಹೈಡ್ರೀಕರಿಸುತ್ತದೆ.

ಈ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.