AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kala Azar: ಬ್ಲ್ಯಾಕ್ ಫೀವರ್ ಎಂದರೇನು? ಲಕ್ಷಣಗಳು, ಚಿಕಿತ್ಸೆಗಳೇನು?

ಪಶ್ಚಿಮ ಬಂಗಾಳದಲ್ಲಿ ಬ್ಲ್ಯಾಕ್ ಫೀವರ್(Black Fever)  ಅಥವಾ ಕಾಲಾ ಅಜರ್ ಎನ್ನುವ ಜ್ವರ ಜನರನ್ನು ಕಾಡುತ್ತಿದ್ದು, ಕಳೆದ ಎರಡು ವಾರಗಳಲ್ಲಿ 65 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Kala Azar: ಬ್ಲ್ಯಾಕ್ ಫೀವರ್ ಎಂದರೇನು? ಲಕ್ಷಣಗಳು, ಚಿಕಿತ್ಸೆಗಳೇನು?
Kala Azar
Follow us
TV9 Web
| Updated By: ನಯನಾ ರಾಜೀವ್

Updated on: Jul 20, 2022 | 10:57 AM

ಪಶ್ಚಿಮ ಬಂಗಾಳದಲ್ಲಿ ಬ್ಲ್ಯಾಕ್ ಫೀವರ್(Black Fever)  ಅಥವಾ ಕಾಲಾ ಅಜರ್( Kala Azar) ಎನ್ನುವ ಜ್ವರ ಜನರನ್ನು ಕಾಡುತ್ತಿದ್ದು, ಕಳೆದ ಎರಡು ವಾರಗಳಲ್ಲಿ 65 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಾರ್ಜಿಲಿಂಗ್, ಮಾಲ್ಡಾ, ಉತ್ತರ ದಿನಾಜ್‌ಪುರ, ದಕ್ಷಿಣ ದಿನಜ್‌ಪುರ ಮತ್ತು ಕಾಲಿಂಪಾಂಗ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ಹಾಗೆಯೇ ಬಂಗಾಳದಲ್ಲಿ ಬ್ಲ್ಯಾಕ್ ಫೀವರ್ ನಿರ್ಮೂಲನೆ ಮಾಡಲಾಗಿದೆ ಮತ್ತು ಇತ್ತೀಚೆಗೆ 11 ಜಿಲ್ಲೆಗಳಲ್ಲಿ 65 ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿ ಹೇಳಿದರು.

ಅಧಿಕೃತ ಮಾಹಿತಿಯ ಪ್ರಕಾರ, ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆದರೆ, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಿಂದ ಬಂದವರಲ್ಲಿ ಹೆಚ್ಚಿನ ರೋಗಲಕ್ಷಣಗಳು ಬರುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಿರ್ಭುಮ್, ಬಂಕುರಾ, ಪುರುಲಿಯಾ ಮತ್ತು ಮುರ್ಷಿದಾಬಾದ್ ಜಿಲ್ಲೆಗಳಲ್ಲಿ ಅನೇಕ ಕಪ್ಪು ಜ್ವರ ಪ್ರಕರಣಗಳು ದಾಖಲಾಗಿವೆ.

ಬ್ಲ್ಯಾಕ್ ಫೀವರ್ ಮುಖ್ಯವಾಗಿ ‘ಲೇಷ್ಮೇನಿಯಾ ಡೊನೊವಾನಿ’ ಎಂಬ ಪರಾವಲಂಬಿಯಿಂದ ಸೋಂಕಿತ ಮರಳು ನೊಣಗಳ ಕಡಿತದಿಂದ ಹರಡುತ್ತದೆ. ಬಾಂಗ್ಲಾದೇಶದ ಕೆಲವು ಜನರು ರೋಗಲಕ್ಷಣಗಳನ್ನು ತೋರಿಸುತ್ತಿದ್ದಾರೆಂದು ಹೇಳಿಕೊಳ್ಳುತ್ತಾರೆ. ಕಪ್ಪು ಜ್ವರದ ಹಿನ್ನೆಲೆಯಲ್ಲಿ ಬಂಗಾಳ ಸರ್ಕಾರವನ್ನು ಎಚ್ಚರಿಸಲಾಗಿದೆ.

ಬ್ಲ್ಯಾಕ್ ಫೀವರ್ ಪೀಡಿತ ಎಲ್ಲರಿಗೂ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ರೋಗಿಗಳಿಗೆ ಪೌಷ್ಟಿಕ ಆಹಾರ ನೀಡುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.

ಖಾಸಗಿ ಪ್ರಯೋಗಾಲಯ, ಆಸ್ಪತ್ರೆಯಲ್ಲಿ ಎಲ್ಲಿಯೇ ಪತ್ತೆಯಾದರೂ ಸಂಬಂಧಪಟ್ಟ ವೈದ್ಯರು ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸರಕಾರ ಆದೇಶಿಸಿದೆ.

ರಾಜ್ಯ ಆರೋಗ್ಯ ಇಲಾಖೆಯು ಊಟದ ಜೊತೆಗೆ ಚಿಕಿತ್ಸೆಯ ಎಲ್ಲಾ ವೆಚ್ಚವನ್ನು ಭರಿಸಲಿದೆ ಮತ್ತು ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿಗಳು ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಅದು ಹೇಳಿದೆ.

ಲಕ್ಷಣಗಳೇನು? ಲೀಶ್ಮೇನಿಯಾಸಿಸ್(VL) ಇದನ್ನು ಕಾಲಾ-ಅಜರ್ ಎಂದೂ ಕರೆಯುತ್ತಾರೆ. ಇದಕ್ಕೆ ಚಿಕಿತ್ಸೆ ನೀಡದೆ ಬಿಟ್ಟರೆ ಮಾರಣಾಂತಿಕ ಕಾಯಿಲೆಯಾಗುವ ಸಾಧ್ಯತೆ ಇದೆ. ವಿಶ್ವ ಆರೋಗ್ಯ ಸಂಸ್ಥೆ(WHO) ಪ್ರಕಾರ, ಇದು ಅನಿಯಮಿತ ಜ್ವರ, ತೂಕ ನಷ್ಟ, ಗುಲ್ಮ ಮತ್ತು ಯಕೃತ್ತಿನ ಹಿಗ್ಗುವಿಕೆ ಮತ್ತು ರಕ್ತಹೀನತೆ ಕಾಣಿಸಿಕೊಳ್ಳುತ್ತೆ ಎಂದು ಹೇಳಲಾಗಿದೆ. ಬ್ರೆಜಿಲ್, ಪೂರ್ವ ಆಫ್ರಿಕಾ ಮತ್ತು ಭಾರತದಲ್ಲಿ ಹೆಚ್ಚಿನ ಕಾಲಾ-ಅಜರ್ ಪ್ರಕರಣಗಳು ಕಾಣಿಸಿಕೊಂಡಿದೆ.

ಬ್ಲ್ಯಾಕ್ ಫೀವರ್​ಗೆ ಕಾರಣ ಕಾಲಾ-ಅಜರ್ ಮರಣದ ಸಂಭಾವ್ಯತೆ ಕಡಿಮೆ ಇದ್ದು ಪರಾವಲಂಬಿ ಸೋಂಕಿನಲ್ಲಿ ಒಂದಾಗಿದೆ. ಇದು ಸೋಂಕಿತ ಹೆಣ್ಣು ಫ್ಲೆಬೋಟೊಮೈನ್ ಸ್ಯಾಂಡ್‍ಫ್ಲೈಗಳ ಕಡಿತದಿಂದ ಹರಡುವ ಪ್ರೊಟೊಜೋವನ್ ಪರಾವಲಂಬಿಗಳಿಂದ ಉಂಟಾಗುತ್ತದೆ.

ಈ ರೋಗವು ಬಡ ಜನರ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಅಪೌಷ್ಟಿಕತೆ, ಸ್ಥಳಾಂತರ, ಕಳಪೆ ವಸತಿ, ದುರ್ಬಲ ರೋಗನಿರೋಧಕ ಶಕ್ತಿ ಮತ್ತು ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಹೆಚ್ಚಿರುವ ಜನರಿಗೆ ಈ ರೋಗ ಕಾಣಿಸಿಕೊಳ್ಳುತ್ತೆ.

ಚಿಕಿತ್ಸೆ ಏನು? ಕಾಲಾ ಅಜರ್‌ನ ಚಿಕಿತ್ಸೆಯನ್ನು ಲಿಪೊಸೋಮಲ್ ಎಎಮ್‌ಬಿ ಮೂಲಕ ಮಾಡಲಾಗುತ್ತದೆ – ಇದು ರೋಗನಿರೋಧಕ ಶಕ್ತಿ ಹೊಂದಿರುವ ರೋಗಿಗಳಿಗೆ ಆಯ್ಕೆಯ ಔಷಧವಾಗಿದೆ. ಪ್ಯಾರೊಮೊಮೈಸಿನ್, ಮಿಲ್ಟೆಫೋಸಿನ್ ಮತ್ತು ಮಲ್ಟಿಡ್ರಗ್ ಥೆರಪಿ ಚಿಕಿತ್ಸೆಯಂತಹ ಇತರ ಚಿಕಿತ್ಸಾ ಆಯ್ಕೆಗಳು ಲಭ್ಯವಿದೆ.

ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’
‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ
ಪಾಕ್ ಮೇಲೆ ಆಕ್ರಮಣಕ್ಕೆ ಪ್ರಧಾನಿ ಮೋದಿ 10 ವರ್ಷಗಳಿಂದ ತಯಾರಿ: ಸೂಲಿಬೆಲೆ
ಪಾಕ್ ಮೇಲೆ ಆಕ್ರಮಣಕ್ಕೆ ಪ್ರಧಾನಿ ಮೋದಿ 10 ವರ್ಷಗಳಿಂದ ತಯಾರಿ: ಸೂಲಿಬೆಲೆ
ತಮ್ಮ ದೇಶದ ಪ್ರಧಾನಿಯನ್ನು ರಣಹೇಡಿ ಎಂದು ಪಾಕಿಸ್ತಾನದ ಸಂಸದ
ತಮ್ಮ ದೇಶದ ಪ್ರಧಾನಿಯನ್ನು ರಣಹೇಡಿ ಎಂದು ಪಾಕಿಸ್ತಾನದ ಸಂಸದ