Monsoon Fever: ಕೋವಿಡ್ ಹೊರತುಪಡಿಸಿ ಮುಂಗಾರಿನಲ್ಲಿ ಕಾಣಿಸಿಕೊಳ್ಳುವ 6 ಬಗೆಯ ಜ್ವರ
ಮುಂಗಾರಿನಲ್ಲಿ ಆಹ್ಲಾದಕರ ಹವಾಮಾನ, ಬಿಸಿ ಬಿಸಿ ತಿನಿಸುಗಳು, ಆರಾಮದಾಯಕ ಜೀವನ ಅನ್ನಿಸಿದರೂ ಕೂಡ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಮುಂಗಾರಿನಲ್ಲಿ ಆಹ್ಲಾದಕರ ಹವಾಮಾನ, ಬಿಸಿ ಬಿಸಿ ತಿನಿಸುಗಳು, ಆರಾಮದಾಯಕ ಜೀವನ ಅನ್ನಿಸಿದರೂ ಕೂಡ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಮುಂಗಾರಿನಲ್ಲಿ ಜ್ವರವು ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದ್ದು, ವೈರಲ್ ಫೀವರ್ ಜತೆಗೆ ಇನ್ನೂ ಅನೇಕ ಜ್ವರಗಳು ನಿಮ್ಮನ್ನು ಕಾಡಬಹುದು.
ಮಳೆಗಾಲದಲ್ಲಿ ವೈರಲ್ ಜ್ವರ, ಕೋವಿಡ್, ಡೆಂಗ್ಯೂ, ಮಲೇರಿಯಾ, ಟೈಫಾಯಿಡ್ ಸಮಸ್ಯೆಗಳು ಹೆಚ್ಚಾಗಿರುತ್ತವೆ. ನೀವು ಸರಿಯಾಗಿ ಎಚ್ಚೆತ್ತುಕೊಳ್ಳದಿದ್ದರೆ, ಜ್ವರವು ದೀರ್ಘಕಾಲದವರೆಗೆ ಇದ್ದು ಇನ್ನು ಅನೇಕ ಸಮಸ್ಯೆಗಳನ್ನು ಸೃಷ್ಟಿಸಬಹುದು, ದೇಹವನ್ನು ದುರ್ಬಲಗೊಳಿಸಬಹುದು. ಪ್ರತಿಯೊಂದು ಕಾಯಿಲೆಗೆ ಸರಿಯಾಗಿ ಚಿಕಿತ್ಸೆ ಪಡೆಯಬೇಕಿದ್ದರೆ, ಮೊದಲು ಕಾಯಿಲೆಯನ್ನು ಪತ್ತೆಹಚ್ಚಬೇಕು.
ಮಳೆಗಾಲದಲ್ಲಿ ಕಂಡುಬರುವ ಜ್ವರಗಳ ಬಗ್ಗೆ ಮಾಹಿತಿ ಡೆಂಗ್ಯೂ: ಸೊಳ್ಳೆ ಕಚ್ಚುವುದರಿಂದ ಹರಡುವ ಈ ಜ್ವರದಿಂದ ತೀವ್ರವಾದ ಕೀಲು ನೋವು, ಬೆನ್ನುನೋವು, ತಲೆತಿರುಗುವಿಕೆ, ಮೂರ್ಛೆ ರೋಗವು ಕಾಣಿಸಿಕೊಳ್ಳಬಹುದು. ಇದಕ್ಕೆ ಯಾವುದೇ ನಿರ್ದಿಷ್ಟ ಔಷಧವಿಲ್ಲ. ರೋಗಿಯು ಹೈಡ್ರೇಟ್ ಆಗಿರುವುದು ಮುಖ್ಯವಾಗುತ್ತದೆ. ಡೆಂಗ್ಯೂ ಜ್ವರದಲ್ಲಿ ವಿವಿಧ ವಿಧಗಳಿವೆ ಮತ್ತು ಕೆಲವು ಸಂದರ್ಭಗಳಲ್ಲಿ ಇದು ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ.
ಮಲೇರಿಯಾ: ಮಲೇರಿಯಾವು ಕೂಡ ಸೊಳ್ಳೆ ಕಚ್ಚುವುದರಿಂದಲೇ ಉಂಟಾಗುವ ರೋಗವಾಗಿದ್ದು, ಮಲೇರಿಯಾ ಜ್ವರ ಉಂಟಾದರೆ ತೀವ್ರ ಚಳಿ, ನಡುಕ, ತಲೆನೋವು ಮತ್ತು ದೇಹದ ನೋವು ಇದರ ಕೆಲವು ಲಕ್ಷಣಗಳಾಗಿವೆ. ಕೋವಿಡ್‌ನಂತೆ, ಮಲೇರಿಯಾ ಕೂಡ ಮಾರಣಾಂತಿಕವಾಗಬಹುದು ಮತ್ತು ಮೆದುಳಿನ ಹಾನಿ, ಉಸಿರಾಟದ ತೊಂದರೆಗಳು, ಅಂಗ ವೈಫಲ್ಯ ಉಂಟಾಗಬಹುದು.
ಚಿಕನ್ಗುನ್ಯಾ: ಇದು ಕೂಡ ಸೊಳ್ಳೆ ಕಚ್ಚುವುದರಿಂದ ಬರುವ ಜ್ವರವಾಗಿದ್ದು, ಇದರಿಂದ ಅಸಹನೀಯ ಬಹು ಕೀಲು ನೋವು ಉಂಟಾಗುತ್ತದೆ. ಚಿಕೂನ್‌ಗುನ್ಯಾ ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ಪ್ರಸ್ತುತ ಯಾವುದೇ ಲಸಿಕೆ ಇಲ್ಲ.
ಟೈಫಾಯಿಡ್ ಜ್ವರ: ಕಲುಷಿತ ಆಹಾರ ಅಥವಾ ವಿಷಪೂರಿತ ಆಹಾರದಿಂದ ಟೈಫಾಯಿಡ್ ಬರಬಹುದು. ಜ್ವರ, ವಾಕರಿಕೆ, ವಾಂತಿ ಮತ್ತು ಅತಿಸಾರವನ್ನು ಒಳಗೊಂಡಿರುತ್ತದೆ. ಬ್ಯಾಕ್ಟೀರಿಯಾದ ಸೋಂಕು ದೇಹದ ವಿವಿಧ ಅಂಗಗಳಿಗೆ ಹರಡಬಹುದು.
ವೈರಲ್ ಜ್ವರ: ಈ ಋತುವಿನಲ್ಲಿ ಕೋವಿಡ್ ಅಲ್ಲದ ಜ್ವರಗಳು ಸಹ ಹೆಚ್ಚಾಗುತ್ತಿವೆ. ವೈರಲ್ ಜ್ವರ ಕಾಣಿಸಿಕೊಂಡಾಗ ಕೆಮ್ಮು, ಮೈಕೈ ನೋವು, ಜ್ವರವಿರಲಿದೆ.
ಲೆಪ್ಟೊಸ್ಪೈರೋಸಿಸ್: ಈ ಜ್ವರವು ಮನುಷ್ಯ ಮತ್ತು ಪ್ರಾಣಿಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಇದರಿಂದ ಬಳಲುತ್ತಿರುವ ವ್ಯಕ್ತಿಯು ತೀವ್ರ ಜ್ವರ, ತಲೆನೋವು, ಶೀತ, ವಾಂತಿ, ಕಾಮಾಲೆ, ಹೊಟ್ಟೆ ನೋವು ಮತ್ತು ದದ್ದುಗಳನ್ನು ಹೊಂದಿರಬಹುದು. ಕಲುಷಿತ ಮಳೆ ನೀರಿನಿಂದ ಜ್ವರ ಬರಬಹುದು ಎಂದು ಹೇಳಲಾಗಿದೆ.
Published On - 10:35 am, Wed, 13 July 22