Causes Of Fever: ಯಾವ್ಯಾವ ಕಾರಣಗಳಿಂದಾಗಿ ಜ್ವರ ಬರಬಹುದು, ಆಯುರ್ವೇದ ಏನು ಹೇಳುತ್ತೆ?
ಜ್ವರವನ್ನು ಕಾಯಿಲೆಗಳ ರಾಜ ಎಂದು ಕರೆಯಲಾಗುತ್ತದೆ, ಯಾಕೆಂದರೆ ಜ್ವರವು ಸ್ವತಃ ಒಂದು ಕಾಯಿಲೆಯಾಗಬಹುದು ಅಥವಾ ಯಾವುದೋ ಒಂದು ಕಾಯಿಲೆಯ ಲಕ್ಷಣಗಳು ಕೂಡ ಆಗಬಹುದು. ಜ್ವರ ಬರಲು ಕಾರಣಗಳೇನು ಎಂಬುದರ ಕುರಿತು ಆಯುರ್ವೇದ ವೈದ್ಯೆ ರೇಷ್ಮಾ ಅವರು ನೀಡಿರುವ ಮಾಹಿತಿ ಇಲ್ಲಿದೆ.
ಜ್ವರವನ್ನು ಕಾಯಿಲೆಗಳ ರಾಜ ಎಂದು ಕರೆಯಲಾಗುತ್ತದೆ, ಯಾಕೆಂದರೆ ಜ್ವರವು ಸ್ವತಃ ಒಂದು ಕಾಯಿಲೆಯಾಗಬಹುದು ಅಥವಾ ಯಾವುದೋ ಒಂದು ಕಾಯಿಲೆಯ ಲಕ್ಷಣಗಳು ಕೂಡ ಆಗಬಹುದು. ಜ್ವರ ಬರಲು ಕಾರಣಗಳೇನು ಎಂಬುದರ ಕುರಿತು ಆಯುರ್ವೇದ ವೈದ್ಯೆ ರೇಷ್ಮಾ ಅವರು ನೀಡಿರುವ ಮಾಹಿತಿ ಇಲ್ಲಿದೆ.
ಚಕ್ರಪಾಣಿ ಹೇಳುವ ಹಾಗೆ ಜ್ವರ ಶಬ್ದೇನಚ ದೇಹ ಮನವ ಸಂತಾಪಕರತ್ವಂ ಅಂದರೆ ಯಾವ ಪ್ರಕ್ರಿಯೆಯು ಶರೀರದಲ್ಲಿ ತಾಪಮಾನವನ್ನು ಹೆಚ್ಚಿಸುತ್ತದೆಯೋ ಅಂತಹ ಪ್ರಕ್ರಿಯೆಯನ್ನು ನಾವು ಜ್ವರ ಎಂದು ಕರೆಯುತ್ತೇವೆ.
ಜ್ವರ ಬರಲು ಯಾವ್ಯಾವ ಕಾರಣಗಳಿವೆ ಎಂದು ತಿಳಿದುಕೊಳ್ಳೋಣ ಅಬಿಘಾತ: ಅಬಿಘಾತವೆಂದರೆ ಯಾವುದೋ ಒಂದು ಅಪಘಾತವಾಗುವಂಥದ್ದು, ಈ ಅಪಘಾತದ ಪರಿಣಾಮದಿಂದ ನಮ್ಮ ದೇಹದಲ್ಲಿ ವೃಣ ಅಥವಾ ಯಾವುದಾದರೊಂದು ಗಾಯವಾದಾಗ ಅದರ ಪರಿಣಾಮದಿಂದ ಜ್ವರ ಬರುತ್ತದೆ.
ಶ್ರಮ: ದೈಹಿಕ ಒತ್ತಡ ಹೆಚ್ಚಾದಾಗ ಹೆಚ್ಚು ಶ್ರಮವಹಿಸಿ ಬೆಳಗ್ಗೆಯಿಂದ ರಾತ್ರಿವರೆಗೂ ದುಡಿದಾಗ ಜ್ವರ ಬರಬಹುದು. ಇದರಲ್ಲಿ ಮಾನಸಿಕ ಅಥವಾ ಶಾರೀರಿಕ ಶ್ರಮ ಇರಬಹುದು.
ವಿಷ ಸೇವನೆ: ನೇರವಾಗಿ ವಿಷ ಸೇವನೆ ಮಾಡಿರಬಹುದು ಅಥವಾ ನೀವು ತಿನ್ನುವ ಆಹಾರವೇ ವಿಷ ಆಗಿರಬಹುದು. ದೇಹಕ್ಕೆ ವಿರುದ್ಧವಾದ ಆಹಾರ ಸೇವೆಯು ಆಹಾರವು ದೇಹದಲ್ಲಿ ವಿಷದ ರೀತಿ ಕೆಲಸವನ್ನು ಮಾಡುತ್ತದೆ. ಉದಾಹರಣೆಗೆ ನೀವು ಯಾವುದಾದರೊಂದು ಕಾರ್ಯಕ್ರಮಕ್ಕೆ ಹೋದಾಗ ಮೊದಲು ಪಾಯಸವನ್ನುಂಟು ಬಳಿಕ ಖಾರದ ಮಾಂಸಾಹಾರವನ್ನು ಸೇವನೆ ಮಾಡಿದರೆ ಆಗ ಮಧುರ ರಸ ಹಾಗೂ ಖಾರವು ವಿಷದ ರೂಪಕ್ಕೆ ತಿರುಗುತ್ತದೆ. ಬಗೆಬಗೆಯ ರೀತಿಯ ಆಹಾರಗಳನ್ನು ತಿನ್ನುವುದು ಬಿಟ್ಟು , ಇತಿ ಮಿತಿಯಲ್ಲಿ ತಿಂದರೆ ಕಾಯಿಲೆಗಳಿಂದ ದೂರವಿಡಬಹುದು. ಜೀರ್ಣಕ್ರಿಯೆಗೆ ಅನಗತ್ಯವಾಗಿ ಎಲ್ಲವನ್ನೂ ರುಚಿ ಇದೆ ಎಂದು ತಿನ್ನಬಾರದು.
ಭಯ: ಚಿಂತೆ, ಕ್ರೋಧ ಈ ರೀತಿ ಮಾನಸಿಕ ಭಾವನೆಗಳು ಹೆಚ್ಚಾದಾಗ ಕೂಡ ಜ್ವರ ಬರಬಹುದು. ಅಸಾತ್ಮೇಂದ್ರಿಯ ಸಂಯೋಗ: ಇಂದ್ರಿಯ ಹಾಗೂ ಮನಸ್ಸು ಸರಿಯಾಗಿ ಕೊಆರ್ಡಿನೇಷನ್ ಮಾಡದೆ ಇದ್ದಾಗ ಕೂಡ ಜ್ವರ ಬರಬಹುದು. ಉದಾಹರಣೆಗೆ ನಿಮ್ಮ ಎದುರು ಕೆಂಡ ಇದೆ ಎಂದು ಇಟ್ಟುಕೊಳ್ಳಿ ಮನಸ್ಸು ಹೇಳುತ್ತಿರುತ್ತೆ ಕೆಂಡವಿದೆ ಅದನ್ನು ಮುಟ್ಟಿದರೆ ಸುಡುತ್ತದೆ ಎಂದು ಆದರೂ ನೀವು ಹೋಗಿ ಕೆಂಡದಲ್ಲಿ ಕೈ ಹಾಕಿ ಕೈಯನ್ನು ಸುಟ್ಟುಕೊಳ್ಳುತ್ತೀರಿ.
ಪರಿಣಾಮ: ಇದು ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ಕಾಣಿಸಿಕೊಳ್ಳುವ ಜ್ವರ.