Heart Health: 50ನೇ ವರ್ಷದಲ್ಲಿ ನಿಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುವ ಆಹಾರಗಳಿವು
ನಿಮ್ಮ 50ನೇ ವಯಸ್ಸಿನಲ್ಲೂ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಆಹಾರಗಳು ಸಹಾಯ ಮಾಡುತ್ತವೆ. ಕೆಲವು ಆಹಾರಗಳು ಸೂಪರ್ಫುಡ್ಗಳಾಗಿ ಕಾರ್ಯನಿರ್ವಹಿಸುತ್ತವೆ.
ನಿಮ್ಮ 50ನೇ ವಯಸ್ಸಿನಲ್ಲೂ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಆಹಾರಗಳು ಸಹಾಯ ಮಾಡುತ್ತವೆ. ಕೆಲವು ಆಹಾರಗಳು ಸೂಪರ್ಫುಡ್ಗಳಾಗಿ ಕಾರ್ಯನಿರ್ವಹಿಸುತ್ತವೆ. ಯಾವ ಆಹಾರಗಳು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಬಲ್ಲವು ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಸೋಡಿಯಂ, ಕೊಬ್ಬು ಮತ್ತು ಕ್ಯಾಲೋರಿ ಫಾಸ್ಟ್ ಫುಡ್ ಗಳಲ್ಲಿ ಅಧಿಕವಾಗಿರುತ್ತದೆ. ಈ ಫಾಸ್ಟ್ ಫುಡ್ ಪದಾರ್ಥ ಸೇವನೆ ನಿಮ್ಮ ಹೃದಯವನ್ನು ದುರ್ಬಲಗೊಳಿಸುತ್ತದೆ.
ಹೋಟೆಲ್ಗಳಲ್ಲಿ ಹೆಚ್ಚು ತಿನ್ನುವುದು, ಕರಿದ, ಎಣ್ಣೆ ಪದಾರ್ಥ ಸೇವನೆ ಮತ್ತು ಫಾಸ್ಟ್ ಫುಡ್ ಸೇವನೆ ಹೃದಯದ ಆರೋಗ್ಯಕ್ಕೆ ಹಾನಿಕರ.
ಧಾನ್ಯಗಳು: ಸಂಸ್ಕರಿಸಿದ ಆಹಾರಗಳಿಗಿಂತ ಧಾನ್ಯಗಳು ನಿಮ್ಮ ಹೃದಯಕ್ಕೆ ವಿಶೇಷ ಪ್ರಯೋಜನವನ್ನು ನೀಡುತ್ತದೆ. ಸಂಸ್ಕರಿಸಿದ ಆಹಾರಗಳು ಹೃದಯ ಅಪಾಯವನ್ನು ಹೆಚ್ಚಿಸಿದರೆ ಧಾನ್ಯಗಳು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ.
ಡಾರ್ಕ್ ಚಾಕೊಲೇಟ್: ಡಾರ್ಕ್ ಚಾಕೊಲೇಟ್ನಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದೆ ಮತ್ತು ಹೃದಯದ ಕಾರ್ಯನಿರ್ವಹಣೆಯನ್ನು ಸುಧಾರಿಸುವ ಅಗತ್ಯವಾದ ಖನಿಜಗಳು ಹೆಚ್ಚಿವೆ.
ತರಕಾರಿಗಳು: ಎಲೆಕೋಸು, ಪಾಲಕ್ ಸೊಪ್ಪು, ಕೋಸುಗಡ್ಡೆ, ಹೂಕೋಸು, ಇತ್ಯಾದಿ. ಈ ತರಕಾರಿಗಳಲ್ಲಿ ಫೈಬರ್ ಮತ್ತು ಇತರ ಹಲವಾರು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ ಮತ್ತು ಸ್ನಾಯುಗಳ ಉತ್ತಮ ಕಾರ್ಯನಿರ್ವಹಣೆಯನ್ನು ಉತ್ತೇಜಿಸುತ್ತವೆ.
ಮೀನುಗಳ ಸೇವನೆ: ಸಾಲ್ಮನ್ ಮೀನುಗಳನ್ನು ತಿನ್ನುವುದರಿಂದ ನೀವು ಹೃದಯ ಸಂಬಂಧಿ ರೋಗಗಳಿಂದ ದೂರವಿರಬಹುದು. ಈ ವಯಸ್ಸಿನಲ್ಲಿ ದೇಹದ ಬಹುತೇಕ ಎಲ್ಲಾ ಕಾರ್ಯಗಳಿಗೆ ಪ್ರೋಟೀನ್ ಅಗತ್ಯವಿರುತ್ತದೆ. ಇದರಿಂದ ದೇಹದಲ್ಲಿರುವ ಆರೋಗ್ಯಕರ ಕೊಬ್ಬುಗಳು ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಇತರೆ ಜೀವಸತ್ವಗಳನ್ನು ಹೀರಿಕೊಳ್ಳಲು ಸಹಾಯವಾಗುತ್ತದೆ. ಟೊಮೆಟೊ: ಟೊಮೆಟೋವಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಶಕ್ತಿ ಇರುತ್ತದೆ. ಪರಿಧಮನಿಗೆ ಸಂಬಂಧಿಸಿದ ಕಾಯಿಲೆಗಳನ್ನು ದೂರ ಮಾಡುತ್ತದೆ.
ಆರೋಗ್ಯದ ಸೂತ್ರಗಳು ನಿತ್ಯ 40 ನಿಮಿಷ ವ್ಯಾಯಾಮ : ನಿತ್ಯ 40 ನಿಮಿಷಗಳ ಕಾಲ ವ್ಯಾಯಾಮ ಮಾಡಿ, ವಾರದಲ್ಲಿ 5 ದಿನ ಹೀಗೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಶೇಕಡಾ 30 ರಷ್ಟು ಕಡಿಮೆ ಮಾಡಬಹುದು. ಇದು ತೂಕ ನಷ್ಟ, ರಕ್ತದ ಸಕ್ಕರೆ ಮಟ್ಟ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.
ಸದಾ ಸಂತೋಷದಿಂದಿರಿ: ನೀವು ಸದಾ ಸಂತೋಷದಿಂದಿದ್ದಾಗ ದೇಹದಲ್ಲಿ ಎಂಡಾರ್ಫಿನ್ ಹಾರ್ಮೋನ್ಗಳು ಬಿಡುಗಡೆಯಾಗುತ್ತವೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದಕ್ಕಾಗಿ ಯೋಗ ಮತ್ತು ಧ್ಯಾನವನ್ನು ಮಾಡಬೇಕು.
ಉತ್ತಮ ನಿದ್ರೆಯೂ ಮುಖ್ಯ: ಉತ್ತಮ ನಿದ್ರೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ರಾತ್ರಿ ವೇಳೆ 7-8 ಗಂಟೆಗಳ ಕಾಲ ನಿದ್ದೆ ಮಾಡಲೇಬೇಕು.