ಮಕ್ಕಳನ್ನು ಕಾಡಲಾರಂಭಿಸಿದೆ ಮಾನ್ಸೂನ್ ಜ್ವರ -ಪೋಷಕರು ತಲೆ ಕೆಡಸಿಕೊಳ್ಳಬೇಕೆ? ಟಿವಿ9 ಡಿಜಿಟಲ್ ಲೈವ್ ಚರ್ಚೆ
Monsoon 2022: ಮಕ್ಕಳನ್ನು ಕಾಡಲಾರಂಭಿಸಿದೆ ಮಾನ್ಸೂನ್ ಜ್ವರ -ಪೋಷಕರು ಇದರ ಬಗ್ಗೆ ತಲೆ ಕೆಡಸಿಕೊಳ್ಳಬೇಕೆ? ಈ ಕುರಿತಾದ ಚರ್ಚೆ ಇಂದಿನ ಟಿವಿ9 ಡಿಜಿಟಲ್ ಲೈವ್ನಲ್ಲಿ ಮಧ್ಯಾಹ್ನ 3.30 ಕ್ಕೆ
ಮುಂಗಾರು ನಿಧಾನಕ್ಕೆ ಬೆಂಗಳೂರಿಗೆ ಕಾಲಿರಿಸಿದೆ. ಈ ಬಾರಿಯ ಮಾನ್ಸೂನ್ ಬೆಂಗಳೂರಿನಲ್ಲಿ ಅಷ್ಟು ತೀವ್ರವಾಗಿಲ್ಲದಿದ್ದರೂ ಮಳೆ ತರುವ ರೋಗ ರುಜಿನಕ್ಕೇನೂ ಕಡಿಮೆ ಆಗಿಲ್ಲ. ಜ್ವರದಿಂದ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಜಾಸ್ತಿ ಆಗುತ್ತಿದೆ. ಈಗಷ್ಟೇ 2 ವರ್ಷಗಳ ಕೊರೊನಾ ಕಾಟದಿಂದ ಮುಕ್ತಿ ಹೊಂದುತ್ತಿದ್ದೇವೆ. ಹಾಗಂತ ಕೊರೊನಾ ಸಂಪೂರ್ಣವಾಗಿ ತೊಲಗಿಲ್ಲ. ಹಾಗಾಗಿ ಕೊರೊನಾ ಜೊತೆ ಜೊತೆಗೆ ಮಾನ್ಸೂನ್ ಜ್ವರ ಕಾಣಿಸಿಕೊಳ್ಳುತ್ತಿರುವುದರಿಂದ ಒಂದಷ್ಟು ಆತಂಕ ಮನೆ ಮಾಡಿದೆ.
ಮಳೆಗಾಲ ಶುರುವಾಗೋ ಹಾಗೇನೆ ಸಾಲು ಸಾಲು ಕಾಯಿಲೆಗಳು ಕಾಟ ಕೊಡ್ತವೆ. ಡೆಂಗ್ಯೂ, ಮಲೇರಿಯಾ ಅಂತ ಸೊಳ್ಳೆಗಳ ಜ್ವರ ಬೇರೆಯೇ ಇರುತ್ತವೆ. ಇಂಥಾ ಜ್ವರಗಳು ಮಕ್ಕಳನ್ನು ಕಾಡೋದು ಹೆಚ್ಚು. ಜ್ವರ ಬಂದರೂ ಕೆಮ್ಮು, ಸುಸ್ತು ಕಡಿಮೆಯಾಗದ ಕಾರಣ ನಾಲ್ಕೈದು ದಿನಗಳಿಂದ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ. ಕೋವಿಡ್ ಕೂಡಾ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಇದು ಎಂಥಾ ಜ್ವರವೆಂದು ಸ್ಪಷ್ಟವಾಗಿ ಹೇಳುವುದು ಸಹ ಕಷ್ಟ. ಹೀಗಾಗಿ ಕೋವಿಡ್ ಜೊತೆಗೆ ಮಕ್ಕಳ ಇತರ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಬೇಕು.
ಹಾಗಾಗಿ ಮಕ್ಕಳನ್ನು ಕಾಡಲಾರಂಭಿಸಿದೆ ಮಾನ್ಸೂನ್ ಜ್ವರ -ಪೋಷಕರು ತಲೆ ಕೆಡಸಿಕೊಳ್ಳಬೇಕೆ? ಈ ಕುರಿತಾದ ಚರ್ಚೆಯನ್ನು ಆ್ಯಂಕರ್ ಆನಂದ್ ಬುರಲಿ ಇಂದಿನ ಟಿವಿ9 ಡಿಜಿಟಲ್ ಲೈವ್ನಲ್ಲಿ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. TV 9 Kannada Digital Live