Chandrashekhar Guruji:‘ಗುರೂಜಿಯನ್ನ ನನ್ನ ಗಂಡನೇ ಕೊಲೆ ಮಾಡಿದ್ದಾನೆ’ ಎಂದ ಮಹಾಂತೇಶ ಪತ್ನಿ ವನಜಾಕ್ಷಿ
ನಮಗೂ ಸ್ವಾಮೀಜಿಗೂ ಯಾವ ಹಣಕಾಸಿನ ಗಲಾಟೆ ಇಲ್ಲ. ಕೊಲೆಗೆ ಕಾರಣ ಏನೂ ಅನ್ನೋದು ನನಗೂ ಗೊತ್ತಿಲ್ಲ. ಅಪಾರ್ಟ್ ಮೆಂಟ್ ನನ್ನ ಹೆಸರಲ್ಲಿದೆ ಎನ್ನುವುದು ಸುಳ್ಳು. ಬ್ಯಾಂಕ್ ನಲ್ಲಿ ಸಾಲ ಮಾಡಿ ಫ್ಲ್ಯಾಟ್ ಖರೀದಿ ಮಾಡಿದ್ದೇವೆ.
‘ಗುರೂಜಿಯನ್ನ ನನ್ನ ಗಂಡನೇ ಕೊಲೆ ಮಾಡಿದ್ದಾನೆ’ ‘ಆತ ಮಾಡಿದ್ದು ತಪ್ಪು, ಗುರೂಜಿ ಬಹಳ ಒಳ್ಳೆಯವ್ರು’ ಎಂದು ಟಿವಿ9ಗೆ ಹಂತಕ ಮಹಾಂತೇಶ ಪತ್ನಿ ವನಜಾಕ್ಷಿ ತಿಳಿಸಿದ್ದಾರೆ. ನಮಗೂ ಸ್ವಾಮೀಜಿಗೂ ಯಾವ ಹಣಕಾಸಿನ ಗಲಾಟೆ ಇಲ್ಲ. ಕೊಲೆಗೆ ಕಾರಣ ಏನೂ ಅನ್ನೋದು ನನಗೂ ಗೊತ್ತಿಲ್ಲ. ಅಪಾರ್ಟ್ ಮೆಂಟ್ ನನ್ನ ಹೆಸರಲ್ಲಿದೆ ಎನ್ನುವುದು ಸುಳ್ಳು. ಬ್ಯಾಂಕ್ ನಲ್ಲಿ ಸಾಲ ಮಾಡಿ ಫ್ಲ್ಯಾಟ್ ಖರೀದಿ ಮಾಡಿದ್ದೇವೆ. ನಾಲ್ಕೈದು ದಿನಗಳಿಂದ ನನ್ನ ಪತಿ ಮನೆಗೆ ಬಂದಿರಲಿಲ್ಲ. ನನ್ನ ಪತಿ ಫೋನ್ ಮಾಡಿ ಕೆಲದಲ್ಲಿದ್ದೇನೆ ಎನ್ನುತ್ತಿದ್ದರು ಎಂದು ವನಜಾಕ್ಷಿ ಹೇಳಿದ್ದಾರೆ.
ಕೊಲೆ ಆರೋಪಿ ಮಹಾಂತೇಶ್ ಐದು ದಿನಗಳ ಹಿಂದೆ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ. ಆ ಪೋಸ್ಟ್ನಲ್ಲಿ ಗುರೂಜಿಯನ್ನು ಕೊಲ್ಲುವ ಸುಳಿವು ಕೊಟ್ಟಿದ್ದ ಎಂದು ತಿಳಿದುಬಂದಿದೆ. ಐದು ದಿನಗಳ ಹಿಂದೆ ಆರೋಪಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದ. ಭಗವದ್ಗೀತೆಯ ಶ್ಲೋಕವನ್ನು ಪೋಸ್ಟ್ ಮಾಡಿದ್ದ ಆರೋಪಿ, ಕೊಲೆಗೆ ಮೊದಲೇ ನಿರ್ಧರಿಸಿದ್ದ. ‘ಅಧರ್ಮ ತಾಂಡವಾಡುತ್ತಿರುವಾಗ ದುಷ್ಟರನ್ನು ನಾಶ ಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನು ಬರುವುದಾಗಿ ವಚನ ನೀಡಿರುವೆ ಪ್ರಭು. ಇನ್ನು ವಿಳಂಬವೇಕೆ ಪ್ರಭುವೇ? ಆದಷ್ಟು ಬೇಗ ಅವತರಿಸು ಪ್ರಭು. ಸಂಭವಾಮಿ ಯುಗೇ ಯುಗೇ…’ ಎಂದು ಬರೆದುಕೊಂಡಿದ್ದ.