ಇಡೀ ದೇಶವು ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ವೇಳೆಯಲ್ಲಿ ಅಂದು ಕಹಿ ಘಟನೆಯೊಂದು ನಡೆದೇ ಹೋಯಿತು. ನೂರು ವರ್ಷಗಳ ಹಿಂದೆ ಪಂಜಾಬ್‌ನ ಅಮೃತಸರದಲ್ಲಿ 1919ರ ಏಪ್ರಿಲ್ 13ರಂದು ನಡೆದ ಜಲಿಯನ್ ವಾಲಾ ಬಾಗ್ ಭೀಕರ ಹತ್ಯಾಕಾಂಡ ಈ ಗಾಯದ ಗುರುತು ಮಾತ್ರ ಇಂದಿಗೂ ಹಾಗೆಯೇ ಉಳಿದಿದೆ.
1919ರ ಏಪ್ರಿಲ್ 13ರಂದು ಪಂಜಾಬ್ ನಲ್ಲಿ ಸಿಖ್ಖರು ಬೈಸಾಕಿ ಹಬ್ಬದ ಸಂಭ್ರಮದಲ್ಲಿದ್ದರು. ಹಬ್ಬವನ್ನು ಆಚರಿಸಲು ಅಮೃತಸರದಲ್ಲಿನ ಜಲಿಯನ್ ವಾಲಾ ಬಾಗ್ ನಲ್ಲಿರುವ ಉದ್ಯಾನದಲ್ಲಿ ಜನರು ಸೇರಿದ್ದರು. ಆದರೆ ಅಂದು ಶಾಸನಬದ್ಧವಾಗಿ ಅಂದು ಅಮೃತಸರದಲ್ಲಿ ಐದಕ್ಕಿಂತ ಹೆಚ್ಚು ಜನ ಗುಂಪು ಗೂಡುವಂತಿಲ್ಲ ಎಂದು ಬ್ರಿಟಿಷ್ ಸರ್ಕಾರ ಆಜ್ಞೆ ಹೊರಡಿಸಿತ್ತು.
ಈ ಬಗ್ಗೆ ಈ ಜನರಿಗೆ ಮಾಹಿತಿ ತಿಳಿದಿರಲಿಲ್ಲ. ಈ ವೇಳೆಯಲ್ಲಿ ಬ್ರಿಟಿಷ್ ಸೈನಿಕರ ತುಕಡಿ ಉದ್ಯಾನವನಕ್ಕೆ ಬಂದಿತ್ತು. ತುಕಡಿಯ ನಿಯಂತ್ರಕನಾಗಿದ್ದ ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಡೈಯರ್ ಅಲ್ಲಿದ್ದ ಜನರಿಗೆ ಯಾವುದೇ ಎಚ್ಚರಿಕೆ ನೀಡಲಿಲ್ಲ. ಬದಲಾಗಿ ಏಕಾಏಕಿ ಗುಂಡಿನ ದಾಳಿ ನಡೆಸುವಂತೆ ಆದೇಶ ನೀಡಿಯೇ ಬಿಟ್ಟನು. ಹತ್ತರಿಂದ ಹದಿನೈದು ನಿಮಿಷಗಳ ನಡೆದ ಗುಂಡಿನ ದಾಳಿಯ ಪರಿಣಾಮವಾಗಿ ಅದೆಷ್ಟೋ ಜನರು ಪ್ರಾಣಬಿಟ್ಟರು.
ಗುಂಡಿನ ದಾಳಿಗೆ ಹೆದರಿದ ಜನರು ಉದ್ಯಾನದೊಳಗಿದ್ದ ಬಾವಿಯೊಳಕ್ಕೆ ಹಾರಿದ್ದರು. ಈ ಹತ್ಯಾಕಾಂಡ ಸ್ಮಾರಕದಲ್ಲಿರುವ ಉಲ್ಲೇಖದಲ್ಲಿ ಅಂದು ಬಾವಿಯಿಂದ ಸುಮಾರು 120 ಶವಗಳನ್ನು ಹೊರತೆಗೆಯಲಾಗಿತ್ತು ಎನ್ನುವುದಿದೆ. ಆದರೆ ಸರ್ಕಾರಿ ಮೂಲಗಳ ಪ್ರಕಾರ 379 ಮಂದಿ ಅಂದು ಸಾವನ್ನಪ್ಪಿದ್ದರು. ಆದರೆ ಸಾವಿರಾರು ಜನರು ಈ ಹತ್ಯಾಕಾಂಡಕ್ಕೆ ಬಲಿಯಾದರು.
ಇದನ್ನೂ ಓದಿ: ಹೊಸ ಮನೆ ಕಟ್ಟಿದ್ದೀರಾ? ಹಾಗಾದರೆ ಮನೆಯ ಪ್ರವೇಶದ್ವಾರದಲ್ಲಿ ಈ ವಿನ್ಯಾಸದ ನಾಮಫಲಕ ಇರಲಿ
ಈ ಡೈಯರ್ನ ಅಮಾನವೀಯ ಕೃತ್ಯಕ್ಕೆ ವಿಶ್ವದಾದಂತ್ಯ ಆಕ್ರೋಶ ವ್ಯಕ್ತವಾಗಿತ್ತು. ಇದರ ಪರಿಣಾಮವಾಗಿ 1920ರಲ್ಲಿ ಆತ ರಾಜೀನಾಮೆ ನೀಡಿದ್ದನು. ಸ್ವಾತಂತ್ರ ಹೋರಾಟಗಾರ ಉದಮ್ ಸಿಂಗ್ ಎನ್ನುವವರು, ಸಾವಿರಾರು ಭಾರತೀಯರನ್ನು ಬಲಿ ಪಡೆದುಕೊಂಡಿದ್ದ ಈ ಮೈಕೇಲ್ ಡೈಯರ್ ನನ್ನು ಲಂಡನ್ನಲ್ಲಿ ಹತ್ಯೆ ಮಾಡಿ ಬಿಟ್ಟರು. 1940ರ ಜುಲೈ 31ರಂದು ಪ್ರತೀಕಾರ ತೀರಿಸಿಕೊಂಡಿದ್ದ ಉದಮ್ ಸಿಂಗ್ ಅವರನ್ನು ಗಲ್ಲಿಗೇರಿಸಲಾಯಿತು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ