Name Plate Designs : ಹೊಸ ಮನೆ ಕಟ್ಟಿದ್ದೀರಾ? ಹಾಗಾದರೆ ಮನೆಯ ಪ್ರವೇಶದ್ವಾರದಲ್ಲಿ ಈ ವಿನ್ಯಾಸದ ನಾಮಫಲಕ ಇರಲಿ
ನೀವು ಯಾವುದೇ ಮನೆಗೆ ಹೋದಾಗ ಮೊದಲು ನೋಡುವುದೇ ನಾಮಫಲಕಗಳು. ಎಲ್ಲರ ಮನೆಗಳಲ್ಲಿಯೂ ನಾಮಫಲಕಗಳು ಇದ್ದೇ ಇರುತ್ತದೆ. ಇದು ಮನೆಯ ಸೌಂದರ್ಯವನ್ನೂ ಹೆಚ್ಚು ಮಾಡುತ್ತದೆ. ವಿಭಿನ್ನ ವಿನ್ಯಾಸದ ನಾಮಫಲಕವು ಸಹಜವಾಗಿ ಎಲ್ಲರನ್ನು ತಿರುಗಿ ನೋಡುವಂತೆ ಮಾಡುತ್ತದೆ. ಹಾಗಾದ್ರೆ ಯಾವೆಲ್ಲಾ ನಾಮಫಲಕ ವಿನ್ಯಾಸಗಳು ಇವೆ ಎನ್ನುವುದರ ಮಾಹಿತಿಯು ಇಲ್ಲಿದೆ.
ನಾಮಫಲಕಗಳು ಮನೆಯ ಮುಖ್ಯದ್ವಾರದ ನೋಟವನ್ನು ಬದಲಾಯಿಸುತ್ತದೆ. ಅದಲ್ಲದೆ ಮನೆಯು ಯಾರೆಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವಿವಿಧ ವಿನ್ಯಾಸದ ನಾಮಫಲಕಗಳನ್ನು ಆಯ್ಕೆ ಮಾಡಿಕೊಂಡು ಭವ್ಯವಾಗಿ ಮತ್ತು ಅತ್ಯಾಧುನಿಕವಾಗಿ ಕಾಣುವಂತೆ ಮಾಡಲು ಇದೊಂದು ಅತ್ಯುತ್ತಮ ಮಾರ್ಗವಾಗಿದೆ.
ಮರದಿಂದ ಕೆತ್ತಿದ ನಾಮಫಲಕ ವಿನ್ಯಾಸ
ಮರದಿಂದ ಕೆತ್ತಿದ ನಾಮ ಫಲಕವು ಮನೆಯ ಮುಂಭಾಗದ ಸೌಂದರ್ಯವನ್ನು ಹೆಚ್ಚಿಸಬಹುದು. ಈ ನಾಮಫಲಕಗಳು ಕ್ಲಾಸಿ ಲುಕ್ ನೀಡುತ್ತದೆ. ಇದರಲ್ಲಿ ಸಿಎನ್‌ಸಿ ರೂಟರ್‌ಗಳು ಮತ್ತು ಲೇಸರ್‌ಗಳನ್ನು ಬಳಸಿ ಮರವನ್ನು ಕತ್ತರಿಸಿ ಆಕಾರವನ್ನು ನೀಡಲಾಗುತ್ತದೆ. ಅದಲ್ಲದೇ ಹೆಸರಿನ ಎರಡೂ ಬದಿಗಳಲ್ಲಿ ಸುಂದರವಾದ ಹೂವಿನ ಮಾದರಿಗಳನ್ನು ಹೊಂದಿದ್ದು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ಅಕ್ರಿಲಿಕ್ ನಾಮಫಲಕ ವಿನ್ಯಾಸ
ಸ್ಟೈಲಿಶ್ ಮತ್ತು ಆಕರ್ಷಕವಾದ, ಅಕ್ರಿಲಿಕ್ ನೇಮ್ ಪ್ಲೇಟ್‌ಗಳು ಗಾಜಿನಂತೆ ಕಾಣುತ್ತವೆ. ಹೂವಿನ ವಿನ್ಯಾಸದೊಂದಿಗೆ ಸೊಗಸಾದ ಅಕ್ರಿಲಿಕ್ ನೇಮ್ ಪ್ಲೇಟ್‌ಗೆ ಆಕರ್ಷಕ ನೋಟವನ್ನು ಬೀರುತ್ತದೆ. ಅಕ್ರಿಲಿಕ್ ನಾಮಫಲಕಗಳನ್ನು ನಿರ್ವಹಿಸುವುದು ಬಲು ಸುಲಭ.
ಹಿತ್ತಾಳೆಯ ನಾಮಫಲಕ ವಿನ್ಯಾಸ
ನಿಮ್ಮ ಮನೆಯ ಪ್ರವೇಶದ್ವಾರವನ್ನು ಅಲಂಕಾರದ ದೃಷ್ಟಿಯಿಂದ ಆಕರ್ಷಕವಾಗಿ ಕಾಣುವಂತೆ ಬಯಸಿದರೆ ಹಿತ್ತಾಳೆಯ ನೇಮ್ ಪ್ಲೇಟ್ ವಿನ್ಯಾಸವನ್ನು ಆಯ್ಕೆ ಮಾಡುವುದು ಉತ್ತಮ. ಇದು ಪ್ರಕಾಶಮಾನವಾಗಿದ್ದು, ಹೊಳೆಯುತ್ತಿರುವ ಕಾರಣ ಮನೆಗೆ ಬರುವ ಅತಿಥಿಗಳ ಗಮನ ಸೆಳೆಯುತ್ತವೆ.
ಗ್ರಾನೈಟ್ ನಾಮಫಲಕ ವಿನ್ಯಾಸ
ಬಹುತೇಕರ ಮನೆಯ ಮುಂಭಾಗದಲ್ಲಿ ಗ್ರಾನೈಟ್ ನಿಂದ ಮಾಡಿದ ನೇಮ್ ಪ್ಲೇಟ್ ಗಳನ್ನು ನೋಡಿರಬಹುದು. ಇದು ಕಠಿಣ ಹವಾಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು ಹೆಚ್ಚು ವರ್ಷಗಳವರೆಗೆ ಬಾಳಿಕೆ ಬರುತ್ತದೆ. ಕಪ್ಪು ಅಥವಾ ಕಂದು ಬಣ್ಣದಲ್ಲಿ ಗ್ರಾನೈಟ್ ನೇಮ್ ಪ್ಲೇಟ್ ವಿನ್ಯಾಸವನ್ನು ಆಯ್ಕೆ ಮಾಡಿಕೊಂಡರೆ ಕ್ಲಾಸಿ ಲುಕ್ ನೀದುವುದರೊಂದಿಗೆ ಎಲ್ಲರ ಗಮನ ಸೆಳೆಯಲು ಸಾಧ್ಯ.
ಮಂಗಳಕರ ಚಿಹ್ನೆಗಳೊಂದಿಗೆ ಮರದ ನಾಮಫಲಕ ವಿನ್ಯಾಸ
ಕೆಲವರು ಮನೆಯಲ್ಲಿ ಧನಾತ್ಮಕತೆಯನ್ನು ಹೆಚ್ಚಿಸಲು ಹೆಸರಿನೊಂದಿಗೆ ಮಂಗಳಕರ ಚಿಹ್ನೆಗಳ ವಿನ್ಯಾಸವಿರುವ ನೇಮ್ ಪ್ಲೇಟನ್ನು ಇಷ್ಟ ಪಡುತ್ತಾರೆ. ಗಣೇಶ, ಓಂ, ಸ್ವಸ್ತಿಕ, ಶ್ರೀಕೃಷ್ಣ, ಕಮಲ, ಶಿಲುಬೆ, ಬುದ್ಧ ಹೀಗೆ ನಾನಾ ರೀತಿಯಲ್ಲಿ ಚಿಹ್ನೆಗಳೊಂದಿಗೆ ನಾಮ ಫಲಕಗಳನ್ನು ವಿನ್ಯಾಸಗೊಳಿಸಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ