ಪ್ರವಾಸೋದ್ಯಮ, ಸೇಬು ಆಯ್ತು ಇದೀಗ ಟರ್ಕಿಶ್‌ ಆಭರಣಗಳಿಗೂ ತಟ್ಟಿದ ಬಹಿಷ್ಕಾರ ಬಿಸಿ

ಭಾರತದ ಮೇಲೆ ದಾಳಿ ನಡೆಸಿದ ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಟರ್ಕಿ ಮತ್ತು ಅಜರ್‌ಬೈಜಾನ್‌ ದೇಶಗಳ ಸಾಕಷ್ಟು ಉತ್ಪನ್ನಗಳಿಗೆ ಹಾಗೂ ಪ್ರವಾಸೋದ್ಯಮಕ್ಕೆ ಭಾರತದಲ್ಲಿ ಬಹಿಷ್ಕಾರ ಹಾಕಲಾಗಿತ್ತು. ಅದೇ ರೀತಿ ಇದೀಗ ಆಭರಣ ವರ್ತಕರು ಟರ್ಕಿ ಆಭರಣಗಳಿಗೆ ಬಹಿಷ್ಕಾರ ಹಾಕಿದ್ದಲ್ಲದೆ, ದೊಡ್ಡ ದೊಡ್ಡ ಆಭರಣಗಳಿಗೆ ನೀಡಲಾಗುತ್ತಿದ್ದ ಟರ್ಕಿಶ್‌ ಟ್ಯಾಗ್‌ ತೆಗೆದು ಅದಕ್ಕೆ ಸಿಂಧೂರ್‌ ಎಂದು ಹೆಸರಿಡಲು ಯೋಜಿಸಿದ್ದಾರೆ.

ಪ್ರವಾಸೋದ್ಯಮ, ಸೇಬು ಆಯ್ತು ಇದೀಗ ಟರ್ಕಿಶ್‌ ಆಭರಣಗಳಿಗೂ ತಟ್ಟಿದ ಬಹಿಷ್ಕಾರ ಬಿಸಿ
ಸಾಂದರ್ಭಿಕ ಚಿತ್ರ
Image Credit source: Google

Updated on: May 27, 2025 | 5:17 PM

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಿತ್ತು, ಇದಕ್ಕೆ ಟರ್ಕಿ (turkey)  ಮತ್ತು ಅಜರ್‌ಬೈಜಾನ್‌ ದೇಶಗಳು ಬೆಂಬಲ ಸೂಚಿಸಿತ್ತು. ಹೀಗೆ ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನದ ಪರವಾಗಿ ನಿಂತ ಟರ್ಕಿ ವಿರುದ್ಧ  ದೇಶದಲ್ಲಿ ಬಹಿಷ್ಕಾರ (Boycott Turkey)  ಅಭಿಯಾನವೇ ಶುರುವಾಗಿದೆ. ಭಾರತೀಯರು ಟರ್ಕಿ ಪ್ರವಾಸಗಳನ್ನು ರದ್ದು ಮಾಡುತ್ತಿದ್ದಾರೆ, ಅಲ್ಲದೆ ಸೇಬು, ಅಮೃತಶಿಲೆ ಸೇರಿದಂತೆ ಟರ್ಕಿ ಉತ್ಪನ್ನಗಳ ಪೂರೈಕೆಗೂ ಬಹಿಷ್ಕಾರದ ಬಿಸಿ ತಟ್ಟಿತ್ತು. ಇದೀಗ ಆಭರಣ ವರ್ತಕರು ಟರ್ಕಿ  ಆಭರಣಗಳಿಗೂ ಬಹಿಷ್ಕಾರ ಹಾಕಿದ್ದಾರೆ. ಅಲ್ಲದೆ ಕಿವಿಯೋಲೆಗಳು ಮತ್ತು ನೆಕ್ಲೇಸ್‌ನಂತಹ ದೊಡ್ಡ ಗಾತ್ರದ ಆಭರಣಗಳಿಗೆ ನೀಡಲಾಗುತ್ತಿದ್ದ ಟರ್ಕಿಶ್‌ ಟ್ಯಾಗ್‌ ಅನ್ನು ತೆಗೆದು ಸಿಂಧೂರ್‌ (Sindoor) ಎಂದು ಹೆಸರಿಡಲು ಯೋಜನೆ ರೂಪಿಸಿದ್ದಾರೆ.

ಟರ್ಕಿ ಆಭರಣಕ್ಕೂ ಬಹಿಷ್ಕಾರ ಬಿಸಿ:

ಟರ್ಕಿಯಿಂದ ಭಾರತಕ್ಕೆ ಪೂರೈಕೆಯಾಗುವ ಸೇಬು ಮತ್ತು ಅಮೃತಶಿಲೆಗೆ ತಟ್ಟಿರುವ ಬಹಿಷ್ಕಾರದ ಬಿಸಿ ಈಗ ಆ ದೇಶದ ಆಭರಣಗಳಿಗೂ ತಟ್ಟಿದೆ. ವರ್ತಕರು ಟರ್ಕಿ ಆಭರಣಗಳ ಖರೀದಿ ಮತ್ತು ಮಾರಾಟ, ಪ್ರದರ್ಶನಕ್ಕೆ ಬಹಿಷ್ಕಾರ ಹಾಕಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಟರ್ಕಿಶ್ ಆಭರಣಗಳಿಗೆ ಬಹು ಬೇಡಿಕೆಯಿದೆ. ಆದರೆ ಇದೀಗ ಆಭರಣ ವರ್ತಕರು ಟರ್ಕಿ ಆಭರಣಗಳ ಖರೀದಿ ಮತ್ತು ಮಾರಾಟ, ಪ್ರದರ್ಶನಕ್ಕೆ ಬಹಿಷ್ಕಾರ ಹಾಕಿದ್ದಾರೆ.  ಅಲ್ಲದೆ ಭಾರತದಲ್ಲಿ ಆ ದೇಶದ ಆಭರಣಗಳ ಹೆಸರನ್ನು ಬದಲಾಯಿಸಲಾಗಿದೆ. ಆಭರಣಗಳಿಗೆ ನೀಡುತ್ತಿದ್ದ ಟರ್ಕಿಶ್‌ ಎಂಬ ಟ್ಯಾಗ್‌ ತೆಗೆದು ಸಿಂಧೂರ್‌ ಎಂಬ ಹೆಸರನ್ನು ಮರುನಾಮಕರಣ ಮಾಡಲಾಗಿದೆ.  “ಟರ್ಕಿಶ್ ಆಭರಣಗಳನ್ನು ಇನ್ನು ಮುಂದೆ ಭಾರತದಲ್ಲಿ ‘ಸಿಂದೂರ್ ಆಭರಣ’ ಎಂದು ಕರೆಯಲಾಗುತ್ತದೆ. ಈ ನಿಟ್ಟಿನಲ್ಲಿ ನಿರ್ಣಯವನ್ನೂ ಅಂಗೀಕರಿಸಲಾಗಿದೆ” ಎಂದು ರತ್ನ ಮತ್ತು ಆಭರಣ ಮಂಡಳಿಯ Gems and Jewellery  Council (GJC) ಅಧ್ಯಕ್ಷ ರಾಜೇಶ್ ರೋಕ್ಡೆ ಹೇಳಿದ್ದಾರೆ.

ಇದನ್ನೂ ಓದಿ
ಕೇಸರಿ ದೇಹದ ಕಣಕಣದಲ್ಲೂ ಆರೋಗ್ಯವನ್ನು ವೃದ್ಧಿಸುತ್ತದೆ ಎಂದ ಖ್ಯಾತ ನಟಿ
ನಿಮ್ಮ ಆಹಾರದಲ್ಲಿ ಒಣ ತೆಂಗಿನಕಾಯಿ ಬಳಸಿ
ಮೈಸೂರು ಪಾಕ್​​​ ಹೆಸರು ಬದಲಿಸುವ ಹಕ್ಕು ಯಾರಿಗೂ ಇಲ್ಲ
ಇವುಗಳನ್ನು ತಿಂದ್ರೆ ಉತ್ತಮ ನಿದ್ರೆ ಬರೋದಂತು ಖಂಡಿತ

ಇದನ್ನೂ ಓದಿ: ಮೈಸೂರು ಪಾಕ್​​​ ಹೆಸರು ಬದಲಿಸುವ ಹಕ್ಕು ಯಾರಿಗೂ ಇಲ್ಲ, ಇದು ಕನ್ನಡಿಗರ ಹೆಮ್ಮೆ

ಟರ್ಕಿಶ್‌ ಟ್ಯಾಗ್‌:

ಟರ್ಕಿಶ್‌ ಎಂಬ ಹೆಸರನ್ನು ವ್ಯಾಪಕ ಶ್ರೇಣಿಯ ಪ್ರೀಮಿಯಂ ಆಭರಣಗಳಿಗೆ ಬಳಸಲಾಗುತ್ತಿತ್ತು. ಏಕೆಂದರೆ ಇಂತಹ ಆಭರಣಗಳು ಮೂಲತಃ ಟರ್ಕಿಯಿಂದ ಬಂದವು ಅದಕ್ಕಾಗಿ ಈ ಹೆಸರನ್ನೇ ಬಳಸಲಾಗುತ್ತಿತ್ತು.  ಭಾರತೀಯ ಆಭರಣಕಾರರು ಇಂತಹ ಆಭರಣಗಳನ್ನು ತಯಾರಿಸುವ ಪರಿಣಿತಿಯನ್ನು ಪಡೆದಿರುವ ಕಾರಣ ವರ್ಷಗಳಿಂದ ಇಂತಹ ಆಭರಣಗಳನ್ನು ಟರ್ಕಿಯಿಂದ ಆಮದು ಮಾಡುವುದನ್ನು ಕಡಿಮೆ ಮಾಡಲಾಗಿದೆ. ಹೀಗಿದ್ದರೂ, ಭಾರತದಲ್ಲೇ ತಯಾರಾಗುವ ಇಂತಹ ಪ್ರೀಮಿಯಂ ಆಭರಣಗಳನ್ನು ಟರ್ಕಿಶ್‌ ಬ್ರಾಂಡ್‌ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ಟರ್ಕಿಶ್‌ ಟ್ಯಾಗ್‌ ತೆಗೆದು ಹಾಕಿ, ಸಿಂಧೂರ್‌ ಹೆಸರಿಡಲು ಆಭರಣ ವರ್ತಕರು ನಿರ್ಧರಿಸಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ