AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಸರಿ ದೇಹದ ಕಣಕಣದಲ್ಲೂ ಆರೋಗ್ಯವನ್ನು ವೃದ್ಧಿಸುತ್ತದೆ ಎಂದ ಖ್ಯಾತ ನಟಿ ಭಾಗ್ಯಶ್ರೀ

ಸೌಂದರ್ಯದ ವೃದ್ದಿಗೆ ಅನೇಕ ಸೌಂದರ್ಯವಧಕನ್ನು ಹಚ್ಚಿಕೊಳ್ಳುತ್ತೇವೆ. ಆದರೆ ಅದೂ ಯಾವುದು ಕೂಡ ಪ್ರಯೋಜನವಿಲ್ಲ. ಆದರೆ ಈ ಖ್ಯಾತ ನಟಿ ಇಂದಿಗೂ ಈ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದರೆ ಎಂದರೆ ಅದಕ್ಕೆ ಕಾರಣ ಕೇಸರಿ ಎಂದು ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಧೂಳು ಮತ್ತು ಮಾಲಿನ್ಯದಿಂದಾಗಿ ನಿಮ್ಮ ಚರ್ಮವು ಮಂದವಾಗಿ ಕಾಣುತ್ತಿದ್ದರೆ, ನಿಮಗೆ ಆಂತರಿಕ ಕಾಂತಿ ಬೇಕು ಎಂದು ಹೇಳಿದ್ದಾರೆ. ಅದಕ್ಕಾಗಿ ನೀವು ಏನು ಮಾಡಬೇಕು ಎಂಬುದನ್ನು ಕೂಡ ಇಲ್ಲಿ ತಿಳಿಸಿದ್ದಾರೆ.

ಕೇಸರಿ ದೇಹದ ಕಣಕಣದಲ್ಲೂ ಆರೋಗ್ಯವನ್ನು ವೃದ್ಧಿಸುತ್ತದೆ ಎಂದ ಖ್ಯಾತ ನಟಿ ಭಾಗ್ಯಶ್ರೀ
ನಟಿ ಭಾಗ್ಯಶ್ರೀ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:May 27, 2025 | 4:27 PM

Share

ಈ ನಟ-ನಟಿಯ ಅಭಿಮಾನಿಗಳು ಅಥವಾ ಫಾಲೋವರ್ಸ್ ಅವರ ನಟನೆಯ ಬಗ್ಗೆ ಮಾತ್ರವಲ್ಲ ಅವರ ಸೌಂದರ್ಯದ ಬಗ್ಗೆಯೂ ಹುಡುಕುತ್ತಾರೆ, ಹಾಗೂ ಅದನ್ನು ಪಾಲಿಸುತ್ತಾರೆ. ಅದರಲ್ಲೂ ನಟಿಯರ ಬ್ಯೂಟಿ ಸ್ರೀಕೆಟ್​​ಗಳನ್ನು ಹೆಚ್ಚು ಫಾಲೋ ಮಾಡುತ್ತಾರೆ. ನಟಿಯರು ಕೂಡ ಅಷ್ಟೇ ತಮ್ಮ ಸೌಂದರ್ಯದ ಗುಟ್ಟನ್ನು ಸಾಮಾಜಿಕ ಜಾಲತಾಣದಲ್ಲಿ ಅಥವಾ ಸಂದರ್ಶನದಲ್ಲಿ ಹೆಚ್ಚಾಗಿ ಹೇಳಿಕೊಳ್ಳುತ್ತಾರೆ. ಇದೀಗ ಖ್ಯಾತ ನಟಿ ಭಾಗ್ಯಶ್ರೀ (Bhagyashree) ಅವರು ತಮ್ಮ ಮುಖ ಕಾಂತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಇವರು ಆಗ್ಗಾಗೆ ತಮ್ಮ ಅತ್ಯುತ್ತಮ ಫಿಟ್‌ನೆಸ್, ಆಹಾರ ಪದ್ಧತಿ ಮತ್ತು ಸೌಂದರ್ಯದ ರಹಸ್ಯದ ಬಗ್ಗೆ ಸಾಮಾಜಿಕ ಜಾಲದಲ್ಲಿ ಹಂಚಿಕೊಳ್ಳುತ್ತಾರೆ. ಭ್ಯಾಗಶ್ರೀ ಇತ್ತೀಚೆಗೆ ತಮ್ಮ ಇನ್ಸ್ಟಾದಲ್ಲಿ ಮುಖ ಕಾಂತಿ ಬಗ್ಗೆ ಮತ್ತು ಅವರ ಬ್ಯೂಟಿ ಬಗ್ಗೆ ಹಂಚಿಕೊಂಡಿದ್ದಾರೆ. ಧೂಳು ಮತ್ತು ಮಾಲಿನ್ಯದಿಂದಾಗಿ ನಿಮ್ಮ ಚರ್ಮವು ಮಂದವಾಗಿ ಕಾಣುತ್ತಿದ್ದರೆ, ನಿಮಗೆ ಆಂತರಿಕ ಕಾಂತಿ ಬೇಕು ಎಂದು ಹೇಳಿದ್ದಾರೆ. ಅದಕ್ಕಾಗಿ ನೀವು ಏನು ಮಾಡಬೇಕು ಎಂಬುದನ್ನು ಕೂಡ ಇಲ್ಲಿ ತಿಳಿಸಿದ್ದಾರೆ.

ಅವರು ಹೇಳಿರುವ ಪ್ರಕಾರ, ಮುಂದಿನ 15 ದಿನಗಳವರೆಗೆ, ಖಾಲಿ ಹೊಟ್ಟೆಯಲ್ಲಿ ಕೇಸರಿ ನೀರನ್ನು ಕುಡಿಯುವ ಅಭ್ಯಾಸಗಳನ್ನು ಮಾಡಿಕೊಳ್ಳಿ, ಕೇಸರಿ ಚರ್ಮವನ್ನು ಹೊಳಪುಗೊಳಿಸುವುದಲ್ಲದೆ, ವರ್ಣದ್ರವ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಕಾಲಜನ್ ಅನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಮುಖಕ್ಕೆ ವಧುವಿನ ಹೊಳಪನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ 10-15 ಕೇಸರಿ ಎಸಳುಗಳನ್ನು ಹಾಕಿ ಕುಡಿಯಬೇಕು. ಇದರಿಂದ ಮಾಲಿನ್ಯ ಮತ್ತು ಧೂಳಿನಿಂದ ಉಂಟಾಗುವ ಚರ್ಮವು ಮಂದವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಇಲ್ಲಿದೆ ವಿಡಿಯೋ ನೋಡಿ:

ಹಾಗಾದರೆ ನಟಿ ಭಾಗ್ಯಶ್ರೀ ಹೇಳಿರುವ ಪ್ರಕಾರ, ಕೇಸರಿ ಸೇವನೆಯು ಚರ್ಮದ ಆರೋಗ್ಯವನ್ನು ನಿಜವಾಗಿಯೂ ಸುಧಾರಿಸುತ್ತದೆಯೇ, ರಿಸರ ಹಾನಿಯಿಂದ ರಕ್ಷಿಸುತ್ತದೆಯೇ ಅಥವಾ ಅದರ ಪ್ರಭಾವವನ್ನು ಅತಿಯಾಗಿ ಹೇಳಲಾಗಿದೆಯೇ?, ಕೇಸರಿಯು ಸಫ್ರಾನಲ್ ನಂತಹ ಪ್ರಬಲವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದು ದೇಹದಲ್ಲಿರುವ ಚರ್ಮದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೂ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಧೂಳು ಹಾಗೂ ಮಾಲಿನ್ಯದಿಂದ ಚರ್ಮವನ್ನು ರಕ್ಷಣೆ ಮಾಡುತ್ತದೆ. ಇನ್ನು ಈ ಬಗ್ಗೆ ಆಹಾರ ತಜ್ಞೆ ಮತ್ತು ಮಧುಮೇಹ ಶಿಕ್ಷಣತಜ್ಞೆ ಕನಿಕಾ ಮಲ್ಹೋತ್ರಾ ಅವರು ಇಂಡಿಯಾ ಎಕ್ಸ್ಪ್ರಸ್​​​ಗೆ ನೀಡಿರುವ ಮಾಹಿತಿ ಪ್ರಕಾರ, ಉತ್ತಮ ಗುಣಮಟ್ಟದ ಕೇಸರಿ ದುಬಾರಿ, ಇದು ಅತಿಯಾದ ಸೇವನೆಯು ಪ್ರತಿಕೂಲ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು. ಕೇಸರಿ ಚರ್ಮದ ಹೊಳಪು ಮತ್ತು ಜಲಸಂಚಯನವನ್ನು ಹೆಚ್ಚಿಸಬಹುದಾದರೂ, ಆದರೆ ಚರ್ಮದ ಆರೋಗ್ಯಕ್ಕೆ ಮತ್ತು ಕಾಂತಿಗಾಗಿ ಸನ್‌ಸ್ಕ್ರೀನ್ ಬಳಕೆ ಮತ್ತು ಸಮತೋಲಿತ ಆಹಾರ ಸೇವನೆ ಮಾಡಲೇಬೇಕು, ಕೇಸರಿಯಿಂದ ಎಲ್ಲವೂ ಸಾಧ್ಯವಿದೆ ಎನ್ನುವುದು ತಪ್ಪು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ಆಹಾರದಲ್ಲಿ ಒಣ ತೆಂಗಿನಕಾಯಿ ಬಳಸಿ, ಇದು ಮೆದುಳು, ಕರುಳಿಗೆ ಬೂಸ್ಟ್​ ನೀಡುತ್ತೆ

ಭಾಗ್ಯಶ್ರೀ ಅವರು ನೀಡಿರುವ ಈ ಸಲಹೆ ಬಗ್ಗೆ ಮತ್ತೊಬ್ಬ ತಜ್ಞೆ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಪೌಷ್ಟಿಕತಜ್ಞೆ, ಮಧುಮೇಹ ಶಿಕ್ಷಣತಜ್ಞೆ ಮತ್ತು ದಿ ಹೆಲ್ತ್ ಪ್ಯಾಂಟ್ರಿಯ ಸಂಸ್ಥಾಪಕಿ ಖುಷ್ಬೂ ಜೈನ್ ತಿಬ್ರೆವಾಲಾ ಅವರು ಹೇಳಿರುವ ಪ್ರಕಾರ, ಕೇಸರಿ ಆಂತರಿಕ ಆರೋಗ್ಯಕ್ಕೆ ಉತ್ತಮ. ಇದು ದೇಹದಲ್ಲಿ ಕೊಬ್ಬಿನ ನಷ್ಟವನ್ನು ಹೆಚ್ಚಿಸುತ್ತದೆ. ಕೇಸರಿ ಉರಿಯೂತ ನಿವಾರಕ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. PMS ಲಕ್ಷಣಗಳನ್ನು ಸುಧಾರಿಸುತ್ತದೆ ಮತ್ತು PCOS ಇರುವ ಮಹಿಳೆಯರಲ್ಲಿ ಮುಟ್ಟನ್ನು ನಿಯಮಿತಗೊಳಿಸಲು ಸಹಾಯ ಮಾಡುತ್ತದೆ. ಇದರ ಜತೆಗೆ ಕಣ್ಣಿನ ಆರೋಗ್ಯವನ್ನು ಸುಧಾರಿಸುವ ಅಂಶಗಳು ಕೂಡ ಇದೆ. ಊಟದಲ್ಲೂ ಈ ಕೇಸರಿಯನ್ನು ಬಳಸಿದ್ರೆ ನಿದ್ರೆ ಕೂಡ ಚೆನ್ನಾಗಿ ಬರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Tue, 27 May 25