Kannada News Lifestyle Kannada Rajyotsava 2025: Wishes, quotes, messages to share on Kannada Rajyotsava
Kannada Rajyotsava 2025: ಕನ್ನಡ ರಾಜ್ಯೋತ್ಸವಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ಕೋರಿ
ಕನ್ನಡ ರಾಜ್ಯೋತ್ಸವದ ಅಥವಾ ಕರ್ನಾಟಕ ರಾಜ್ಯೋತ್ಸವವನ್ನು ನಮ್ಮ ರಾಜ್ಯ ಒಗ್ಗೂಡಿದ ನೆನಪಿಗಾಗಿ ನವೆಂಬರ್ 1 ರಂದು ಆಚರಿಸಲಾಗುತ್ತದೆ. ಹೀಗಾಗಿ ಕನ್ನಡ ಎಂಬುದು ಬರೀ ಭಾಷೆಯಲ್ಲ, ಅದು ನಮ್ಮೆಲ್ಲರ ಉಸಿರಾಗಿದೆ. ಒಂದು ತಿಂಗಳುಗಳ ಕಾಲ ಕನ್ನಡ ರಾಜ್ಯೋತ್ಸವದ ಆಚರಣೆಗಳಿದ್ದು, ಕನ್ನಡಿಗರ ಪಾಲಿನ ವಿಶೇಷ ದಿನದಂದು ಆತ್ಮೀಯರಿಗೆ ಹಾಗೂ ಪ್ರೀತಿ ಪಾತ್ರರಿಗೆ ಈ ರೀತಿ ಸಂದೇಶ ಕಳುಹಿಸಿ ಶುಭಾಶಯ ಕೋರಬಹುದು.
ಕನ್ನಡ ರಾಜ್ಯೋತ್ಸವ (Kannada Rajyotsava) ಕನ್ನಡಿಗರ ಪಾಲಿಗೆ ಸಂಭ್ರಮದ ದಿನ. ಈ ವಿಶೇಷ ದಿನಕ್ಕಾಗಿ ಕರ್ನಾಟಕದ ಜನರು ಕಾದು ಕುಳಿತಿದ್ದಾರೆ. ಹೌದು, ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳು ಒಗ್ಗೂಡಿ ಒಂದೇ ರಾಜ್ಯವನ್ನು ರಚಿಸಲಾಯಿತು. ನಮ್ಮ ರಾಜ್ಯ ಒಗ್ಗೂಡಿದ ನೆನಪಿಗಾಗಿ ಈ ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಅಧಿಕೃತ ಆಚರಣೆಯು 1956 ರಲ್ಲಿ ಪ್ರಾರಂಭಿಸಲಾಗಿದ್ದು, ಅಂದಿನಿಂದ ಈ ದಿನವನ್ನು ಅದ್ದೂರಿಯಯಾಗಿ ಆಚರಿಸಲಾಗುತ್ತದೆ. ಹೀಗಾಗಿ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಈ ಅರ್ಥಪೂರ್ಣ ಸಂದೇಶ ಕಳುಹಿಸಿ ಕನ್ನಡ ಹಬ್ಬವನ್ನು ಆಚರಿಸಿ.
ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯಗಳು ಕೋರಲು ಇಲ್ಲಿವೆ ಸಂದೇಶಗಳು
ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮ ಅಂತರಂಗದ ಮಾತು, ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು.
ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಭಾಷೆಯನ್ನು ಹೆಮ್ಮೆಯಿಂದ ಆಚರಿಸೋಣ ಮತ್ತು ನಮ್ಮ ರಾಜ್ಯ ಮತ್ತು ದೇಶವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಭರವಸೆ ಇರಲಿ. ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಎಲ್ಲರಿಗೂ ಕೂಡ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ, ತಾಯಿ ಕನ್ನಡಾಂಬೆಗೆ ಜಯವಾಗಲಿ. ಸಮಸ್ತ ಕನ್ನಡಿಗ ಕುಟುಂಬಕ್ಕೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.