AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Day for the Eradication of Poverty: ಬಡತನ ನಿರ್ಮೂಲನಾ ದಿನದ ಪ್ರಾಮುಖ್ಯತೆಯ ಬಗ್ಗೆ ತಿಳಿಯಿರಿ

ಬಡತನ ಎನ್ನುವುದು ಆರ್ಥಿಕ ಸಮಸ್ಯೆಗಿಂತ ಹೆಚ್ಚಿನದಾಗಿದ್ದು, ಬಡತನದಲ್ಲಿ ವಾಸಿಸುವ ಜನರು ಸುರಕ್ಷಿತ ವಸತಿ, ಸಮಾನ ನ್ಯಾಯ, ಪೌಷ್ಟಿಕ ಆಹಾರ, ಆರೋಗ್ಯ ಇವೆಲ್ಲದರಿಂದ ವಂಚಿತರಾದವರು. ಈ ಬಡತನ ಎನ್ನುವಂತಹದ್ದು ವಿಶ್ವವವನ್ನು ಕಾಡುತ್ತಿರುವ ಬಹುದೊಡ್ಡ ಪಿಡುಗಾಗಿದ್ದು, ಇದನ್ನು ತೊಲಗಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್‌ 17 ರಂದು ವಿಶ್ವ ಬಡತನ ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತದೆ.

International Day for the Eradication of Poverty: ಬಡತನ ನಿರ್ಮೂಲನಾ ದಿನದ ಪ್ರಾಮುಖ್ಯತೆಯ ಬಗ್ಗೆ ತಿಳಿಯಿರಿ
ಬಡತನ ನಿರ್ಮೂಲನಾ ದಿನImage Credit source: freepik
ಮಾಲಾಶ್ರೀ ಅಂಚನ್​
|

Updated on: Oct 17, 2025 | 8:31 AM

Share

ವಿಶ್ವವನ್ನು ಕಾಡುತ್ತಿರುವ ಬಹುದೊಡ್ಡ ಪಿಡುಗುಗಳಲ್ಲಿ ಬಡತನವೂ (Poverty) ಒಂದು. ವಿಶ್ವಬ್ಯಾಂಕ್ ಪ್ರಕಾರ, ಬಡತನ ಎಂದರೆ ಒಪ್ಪೊತ್ತಿನ ಊಟವಿಲ್ಲದೆ ಹಸಿವಿನಿಂದ ನರಳುವವರು. ಮಾತ್ರವಲ್ಲ ಊಟವಿದ್ದರೂ ಮೈತುಂಬಾ ಬಟ್ಟೆ ಇಲ್ಲದೆ ಹರಿದ ಬಟ್ಟೆಗಳನ್ನು ತೊಡುವವರೂ ಬಡವರು, ಊಟ ಬಟ್ಟೆ ಇದ್ದರೂ ವಾಸಿಸಲು ಸರಿಯಾದ ಜಾಗ ಅಥವಾ ಮನೆ ಸೂರು ಇಲ್ಲದ, ಶಿಕ್ಷಣ ಪಡೆಯಲು ಸಾಧ್ಯವಾಗದ, ಆರೋಗ್ಯವನ್ನು ಕಾಪಾಡಿಕೊಳ್ಳದ ಮತ್ತು ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗದ ಜನರು ಬಡವರೇ. ಹೀಗೆ ಬಡತನಕ್ಕೆ ಹಲವು ಆಯಾಮಗಳಿವೆ. ಆದಾಯ ಅಥವಾ ದುಡ್ಡಿನಿಂದಲೇ ವ್ಯಕ್ತಿಯ ಬಡತನ ಅಳೆಯಲು ಆಗದು. ಅನಾರೋಗ್ಯ, ಸ್ಥಿರವಿಲ್ಲದ ಕೆಲಸ, ಕಳಪೆ ಜೀವನ ಗುಣಮಟ್ಟ ಮತ್ತಿತರ ಅಂಶಗಳೂ ಮುಖ್ಯವಾಗುತ್ತವೆ. ಇಡೀ ವಿಶ್ವದಾದ್ಯಂತ ಬಹುಪಾಲು ಬಡವರಿದ್ದು, ಅವರಿಗೆ  ಶ್ರೀಮಂತರಷ್ಟೇ  ಸಮಾನ ಅವಕಾಶಗಳು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಬಡತನ, ಹಿಂಸೆ, ಹಸಿವು ಇವೆಲ್ಲವನ್ನು ಗುರುತಿಸಿ ಅದಕ್ಕೆ ಪರಿಹಾರ ನೀಡಲು, ಬಡವರ ಧ್ವನಿಯಾಗಲು ಹಾಗೂ ಬಡತನ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಅಕ್ಟೋಬರ್‌ 17 ರಂದು ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತದೆ.

ಬಡತನ ನಿರ್ಮೂಲನಾ ದಿನದ ಇತಿಹಾಸವೇನು?

ಅಕ್ಟೋಬರ್ 17, 1987 ರಂದು, ಪ್ಯಾರಿಸ್‌ನ ಟ್ರೋಕಾಡೆರೊದಲ್ಲಿ ತೀವ್ರ ಹಸಿವು, ಹಿಂಸೆ ಮತ್ತು ಬಡತನದ ಬಲಿಪಶುಗಳನ್ನು ಗೌರವಿಸಲು ಒಂದು ಸಭೆಯನ್ನು ಕರೆಯಲಾಯಿತು. ಸಭೆಯಲ್ಲಿ ನೆರೆದಿದ್ದ ನಾಯಕರು ಬಡತನವು  ಮಾನವ ಹಕ್ಕುಗಳ ಉಲ್ಲಂಘನೆಯ ಸಮ, ಎಲ್ಲರಿಗೂ ಉತ್ತಮ ಗುಣಮಟ್ಟದ ಜೀವನ  ನಡೆಸುವ ಹಕ್ಕಿದೆ ಎಂದು ಪ್ರತಿಪಾದಿಸಿದರು. ಜೊತೆಗೆ ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ತಮ್ಮ ಹಕ್ಕುಗಳನ್ನು ರಕ್ಷಿಸುವ ಅಗತ್ಯವನ್ನು ಒಪ್ಪಿಕೊಂಡರು. ನಂತರ 1948 ರಲ್ಲಿ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಗೆ ಸಹಿ ಹಾಕಲಾಯಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) ಅಕ್ಟೋಬರ್ 17 ರಂದು ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನವೆಂದು ಘೋಷಿಸಿತು ಮತ್ತು ಡಿಸೆಂಬರ್ 22, 1992 ರಂದು ನಿರ್ಣಯವನ್ನು ಅಂಗೀಕರಿಸಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಹಸಿದವನಿಗೆ ಮಾತ್ರ ಗೊತ್ತು ತುತ್ತು ಅನ್ನದ ಬೆಲೆ, ಆಹಾರ ವ್ಯರ್ಥ ಮಾಡದಿರಿ

ಇದನ್ನೂ ಓದಿ
Image
ಆಹಾರ ವ್ಯರ್ಥ ಮಾಡದಿರಿ
Image
ಸರಿಯಾರ ರೀತಿಯಲ್ಲಿ ಕೈ ತೊಳೆಯಿರಿ, ರೋಗ ರುಜಿನಗಳಿಂದ ದೂರವಿರಿ
Image
ಮನೆ, ಮನ ಬೆಳಗುವ ಹೆಣ್ಣು ಸಮಾಜದ ಕಣ್ಣು
Image
ಡಿಜಿಟಲ್‌ ಯುಗದಲ್ಲೂ ವಿಶ್ವಾಸಾರ್ಹ ಸೇವೆಯನ್ನು ನೀಡುತ್ತಿರುವ ಅಂಚೆ

ಬಡತನ ನಿರ್ಮೂಲನಾ ದಿನದ ಮಹತ್ವವೇನು?

  • ವಿಶ್ವದ ಜನಸಂಖ್ಯೆಯ ಹೆಚ್ಚಿನ ಭಾಗವು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದೆ. ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತದೆ.
  • ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನವು ಬಡವರ ಸಮಸ್ಯೆ, ಕಳವಳಗಳನ್ನು ವ್ಯಕ್ತಪಡಿಸಲು ಮತ್ತು ಬಡತನದಿಂದ ಪಾರಾಗಲು ಸಹಾಯ ಮಾಡಲು ಸಹ ಒಂದು ಅವಕಾಶವಾಗಿದೆ.
  • ಬಡತನದ ವಿರುದ್ಧದ ಸುಸ್ಥಿರ ಹೋರಾಟಕ್ಕೆ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವುದು, ಅವರಿಗೆ ಅಗತ್ಯವಾದ ಉದ್ಯೋಗಾವಕಾಶಗಳನ್ನು ಒದಗಿಸುವುದು, ಶಿಕ್ಷಣ ನೀಡುವುದು, ಉತ್ತಮ ಆರೋಗ್ಯವನ್ನು ಒದಗಿಸುವ ಗುರಿಯನ್ನು ಬಡತನಾ ನಿರ್ಮೂಲನಾ ದಿನವು ಹೊಂದಿದೆ.
  • ಮುಖ್ಯವಾಗಿ ಈ ದಿನವು ಬಡತನ, ಹಿಂಸೆ ಮತ್ತು ಹಸಿವನ್ನು ಗುರುತಿಸಿ ಅದಕ್ಕೆ ಪರಿಹಾರ ನೀಡುವುದು ಮತ್ತು ಬಡವರ ಧ್ವನಿಯಾಗುವ ಉದ್ದೇಶವನ್ನು ಹೊಂದಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ