AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Food Day 2025: ಹಸಿದವನಿಗೆ ಮಾತ್ರ ಗೊತ್ತು ತುತ್ತು ಅನ್ನದ ಬೆಲೆ, ಆಹಾರ ವ್ಯರ್ಥ ಮಾಡದಿರಿ

ತಿನ್ನೋ ಆಹಾರವನ್ನು ಬೇಕಾಬಿಟ್ಟಿ ವ್ಯರ್ಥ ಮಾಡುವವರು ಒಂದು ಕಡೆಯಾದ್ರೆ, ಒಪ್ಪೊತ್ತಿನ ಆಹಾರ ಸಿಗದೆ ಹಸಿವಿನಿಂದ ದಿನದೂಡುವವರು ಇನ್ನೂ ಅದೆಷ್ಟೋ ಜನರಿದ್ದಾರೆ. ಹೀಗಾಗಿ ಆಹಾರದ ಮಹತ್ವ ಮತ್ತು ಜಾಗತಿಕ ಹಸಿವಿನ ಸಮಸ್ಯೆಯನ್ನು ಎತ್ತಿ ತೋರಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್‌ 16 ರಂದು ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

World Food Day 2025: ಹಸಿದವನಿಗೆ ಮಾತ್ರ ಗೊತ್ತು ತುತ್ತು ಅನ್ನದ ಬೆಲೆ, ಆಹಾರ ವ್ಯರ್ಥ ಮಾಡದಿರಿ
ವಿಶ್ವ ಆಹಾರ ದಿನImage Credit source: Google
ಮಾಲಾಶ್ರೀ ಅಂಚನ್​
|

Updated on: Oct 16, 2025 | 10:00 AM

Share

ಆಹಾರ (Food)ಮಾನವನ ಮೂಲಭೂ ಹಕ್ಕುಗಳಲ್ಲಿ ಒಂದು. ಇದಿಲ್ಲದೆ ಮನುಷ್ಯ ಮಾತ್ರವಲ್ಲ ಭೂಮಿಯ ಮೇಲಿನ ಯಾವ ಜೀವಿಯೂ ಬದುಕುವುದು ಕಷ್ಟ. ಅದಕ್ಕಾಗಿ ಆಹಾರವನ್ನು ವ್ಯರ್ಥ ಮಾಡಬಾರದು ಅನ್ನೋದು.  ಹೀಗಿದ್ರೂ ಅದೆಷ್ಟೋ ಜನರು ಊಟವನ್ನು ವ್ಯರ್ಥ ಮಾಡುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಜಗತ್ತಿನಾದ್ಯಂತ ಪ್ರತಿನಿತ್ಯ 1 ಬಿಲಿಯನ್‌ಗೂ ಹೆಚ್ಚು ಊಟ ವ್ಯರ್ಥವಾಗುತ್ತಿದೆಯಂತೆ. ಅದೇ ರೀತಿ ಜಗತ್ತಿನ ಮೂರನೇ ಒಂದು ಭಾಗದಷ್ಟು ಜನರು ಆಹಾರ ಅಭದ್ರತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಒಪ್ಪೊತ್ತಿನ ಊಟ ಸಿಗದೆ ಹಸಿವಿನಿಂದ ದಿನ ದೂಡುತ್ತಿದ್ದಾರೆ, ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಹಾರ ಸಮಸ್ಯೆಯ ಕುರಿತು ಜಾಗೃತಿ ಮೂಡಿಸಲು ಆಹಾರದ ಮಹತ್ವದ ಬಗ್ಗೆ ಜನರಿಗೆ ತಿಳಿಸಲು ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಅಕ್ಟೋಬರ್‌ 16 ರಂದು ವಿಶ್ವ  ಆಹಾರ ದಿನವನ್ನು (World Food Day) ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ವಿಶ್ವ ಆಹಾರ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು?

1945 ರಲ್ಲಿ, ರೋಮ್‌ನಲ್ಲಿ, ಆಹಾರ ಮತ್ತು ಕೃಷಿ ಸಂಸ್ಥೆ (FAO) ಸ್ಥಾಪನೆಯಾಯಿತು. ಇದು ಪ್ರಪಂಚದಾದ್ಯಂತ ಹಸಿವು ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಮೂಸಲಾಗಿರುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಈ ಸಂಸ್ಥೆಯ ಸ್ಥಾಪನೆಯ ನೆನಪಿಗಾಗಿ 1981 ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (FAO) 20 ನೇ ಸಾಮಾನ್ಯ ಸಮ್ಮೇಳನದಲ್ಲಿ ವಿಶ್ವ ಆಹಾರ ದಿನವನ್ನು ಆಚರಿಸುವುದಾಗಿ ಘೋಷಿಸಲಾಯಿತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್‌ 16 ರಂದು ವಿಶ್ವ ಆಹಾರ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಈ ದಿನವು, ಆಹಾರವು ನಮ್ಮ ಹೊಟ್ಟೆಯನ್ನು ತುಂಬುವ ಸಾಧನವಲ್ಲ, ಬದಲಾಗಿ ಆರೋಗ್ಯಕರ ಜೀವನ ಮತ್ತು ಉತ್ತಮ ಭವಿಷ್ಯದ ಅಡಿಪಾಯವಾಗಿದೆ ಎಂಬುದನ್ನು ನೆನಪಿಸುತ್ತದೆ.

ವಿಶ್ವ ಆಹಾರ ದಿನವನ್ನು ಏಕೆ ಆಚರಿಸಲಾಗುತ್ತದೆ?

  • ಈ ದಿನವನ್ನು ಆಚರಿಸುವ ಉದ್ದೇಶ ಎಲ್ಲರಿಗೂ ಆಹಾರ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಹಸಿವನ್ನು ಸಂಪೂರ್ಣವಾಗಿ ತೊಡೆದುಹಾಕುವುದು.
  • ಈ ದಿನವನ್ನು ಆಚರಿಸಲು ಮತ್ತೊಂದು ದೊಡ್ಡ ಕಾರಣವೆಂದರೆ ಪೌಷ್ಟಿಕ ಆಹಾರ ಎಷ್ಟು ಮುಖ್ಯ ಮತ್ತು ಆಹಾರ ವ್ಯರ್ಥ ಎಷ್ಟು ಹಾನಿಕಾರಕ ಎಂಬುದನ್ನು ಜನರಿಗೆ ಅರ್ಥ ಮಾಡಿಸುವುದಾಗಿದೆ.

ಇದನ್ನೂ ಓದಿ: ಸರಿಯಾರ ರೀತಿಯಲ್ಲಿ ಕೈ ತೊಳೆಯಿರಿ, ರೋಗ ರುಜಿನಗಳಿಂದ ದೂರವಿರಿ

ಇದನ್ನೂ ಓದಿ
Image
ಸರಿಯಾರ ರೀತಿಯಲ್ಲಿ ಕೈ ತೊಳೆಯಿರಿ, ರೋಗ ರುಜಿನಗಳಿಂದ ದೂರವಿರಿ
Image
ಮನೆ, ಮನ ಬೆಳಗುವ ಹೆಣ್ಣು ಸಮಾಜದ ಕಣ್ಣು
Image
ಡಿಜಿಟಲ್‌ ಯುಗದಲ್ಲೂ ವಿಶ್ವಾಸಾರ್ಹ ಸೇವೆಯನ್ನು ನೀಡುತ್ತಿರುವ ಅಂಚೆ
Image
ರೈತರ ಬದುಕಿನ ಬಿಳಿ ಬಂಗಾರ ಈ ಹತ್ತಿ

ವಿಶ್ವ ಆಹಾರ ದಿನದ ಮಹತ್ವವೇನು?

  • ಈ ದಿನವು ಹಸಿವು ಮತ್ತು ಅಪೌಷ್ಟಿಕತೆಯ ಗಂಭೀರ ಜಾಗತಿಕ ಸಮಸ್ಯೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುತ್ತದೆ.
  • ಆಹಾರವನ್ನು ವ್ಯರ್ಥ ಮಾಡಬಾರದು ಎಂಬುದರ ಬಗ್ಗೆ ಜನರಿಗೆ ಅರಿವನ್ನು ಮೂಡಿಸಲಾಗುತ್ತದೆ.
  • ಈ ದಿನದಂದು ಅಪೌಷ್ಠಿಕತೆ ಮತ್ತು ಸ್ಥೂಲಕಾಯತೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಅನೇಕ ಜಾಗೃತಿ ಉಪಕ್ರಮಗಳನ್ನು ಸಹ ನಡೆಸಲಾಗುತ್ತದೆ.
  • ಮುಖ್ಯವಾಗಿ ಜಾಗತಿಕ ಹಸಿವಿನ ಬಿಕ್ಕಟ್ಟಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆಹಾರವು ಮಾನವನ ಮೂಲಭೂತ ಹಕ್ಕು ಎಂಬ ಸಂದೇಶವನ್ನು ಸಾರಲು ಈ ದಿನವನ್ನು ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!