ದೀಪಾವಳಿಯಂದು ಮಕ್ಕಳು ಪಟಾಕಿ ಮುಟ್ಟದಂತೆ ಮಾಡಬೇಕೇ? ಈ ಸಿಂಪಲ್ ಟ್ರಿಕ್ಸ್ ಅನುಸರಿಸಿ
ದೀಪಾವಳಿ ಹಬ್ಬದಂದು ದೀಪಗಳನ್ನು ಹಚ್ಚುವ ಜೊತೆಗೆ ಪಟಾಕಿ ಸಿಡಿಸುವ ಸಂಪ್ರದಾಯವೂ ಇದೆ. ಆದರೆ ಪಟಾಕಿಯ ಸದ್ದು ಮತ್ತು ಅವುಗಳಿಂದ ಹೊರಸೂಸುವ ಹೊಗೆ ಮಕ್ಕಳಿಗೆ ಹೆಚ್ಚು ಹಾನಿಕಾರಕವಾಗಿದೆ. ಇದೇ ಕಾರಣಕ್ಕೆ ಮಕ್ಕಳಿರುವ ಮನೆಗಳಲ್ಲಿ ಪಟಾಕಿ ಸಿಡಿಸಲು ಹಿಂದೇಟು ಹಾಕುತ್ತಾರೆ. ಆದ್ರೆ ಮಕ್ಕಳು ಮಾತ್ರ ನಮ್ಗೆ ಪಟಾಕಿ ಬೇಕೇ ಬೇಕು ಎಂದು ಹಠ ಮಾಡ್ತಾರೆ. ನಿಮ್ಮ ಮನೆ ಮಕ್ಕಳು ಇದೇ ರೀತಿ ಹಠ ಮಾಡ್ತಾರಾ? ಹಾಗಿದ್ರೆ ಅವರನ್ನು ಪಟಾಕಿಯಿಂದ ಆದಷ್ಟು ದೂರವಿಡಲು ಹಬ್ಬದ ದಿನ ಈ ಮಕ್ಕಳ ಕೈಯಿಂದ ಈ ಚಟುವಟಿಕೆಗಳನ್ನು ಮಾಡಿಸಿ.

ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ದೀಪಾವಳಿಯೂ (Deepavali) ಒಂದು. ಬೆಳಕಿನ ಹಬ್ಬ ದೀಪಾವಳಿ ಎಂದಾಕ್ಷಣ ನೆನಪಾಗುವುದೇ ಪಟಾಕಿಗಳು (firecrackers), ದೀಪಗಳು ಹಾಗೂ ರಂಗು ರಂಗಿನ ರಂಗೋಲಿಗಳು. ಅದರಲ್ಲೂ ಮಕ್ಕಳಂತೂ ದೀಪಾವಳಿ ಹಬ್ಬದ ದಿನ ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸಲು ಬಹಳ ಉತ್ಸುಕರಾಗಿರುತ್ತಾರೆ. ಪಟಾಕಿ ಸದ್ದು ಹಾಗೂ ಪಟಾಕಿಗಳಿಂದ ಹೊರ ಸೂಸುವ ಹೊಗೆ ಮಕ್ಕಳಿಗೆ ಹೆಚ್ಚು ಹಾನಿಕಾರಕವಾಗಿದೆ. ಹಾಗಾಗಿ ಸುರಕ್ಷತೆಯ ದೃಷ್ಟಿಯಿಂದ, ದೀಪಾವಳಿಯ ವೈಭವ ಹಾಳಾಗದಂತೆ ತಡೆಯಲು, ಪೋಷಕರು ಪಟಾಕಿ ಸಿಡಿಸಲು ಹಿಂದೇಟು ಹಾಕುತ್ತಾರೆ. ಆದ್ರೆ ಮಕ್ಕಳು ಮಾತ್ರ ಪಟಾಕಿ ಸಿಡಿಸಲೇಬೇಕು ಎಂದು ಸಿಕ್ಕಾಪಟ್ಟೆ ಹಠ ಮಾಡುತ್ತಾರೆ. ನಿಮ್ಮ ಮನೆ ಮಕ್ಕಳು ಇದೇ ರೀತಿ ಪಟಾಕಿಗಾಗಿ ಹಠ ಮಾಡ್ತಾರಾ? ಹಾಗಿದ್ರೆ ಹಬ್ಬದ ದಿನ ಅವರ ಕೈಯಿಂದ ಈ ಒಂದಷ್ಟು ಚಟುವಟಿಕೆಗಳನ್ನು ಮಾಡಿಸಿ, ಖಂಡಿತವಾಗಿಯೂ ಮಕ್ಕಳು ಪಟಾಕಿ ಗುಂಗಿನಿಂದ ಆಚೆ ಬರುತ್ತಾರೆ.
ಮಕ್ಕಳನ್ನು ಪಟಾಕಿಯಿಂದ ದೂರವಿಡಲು ಏನು ಮಾಡಬೇಕು?
- ದೀಪಾವಳಿ ಹಬ್ಬದಂದು ಮನೆಗಳಲ್ಲಿ ರಂಗೋಲಿ ಹಾಕುವಂತಹ ಸಂಪ್ರದಾಯವಿದೆ. ಹೀಗಿರುವಾಗ ಹಬ್ಬದ ದಿನ ಮಕ್ಕಳ ಕೈಯಿಂದಲೇ ರಂಗೋಲಿ ಹಾಕಿಸಿ. ಈ ಚಟುವಟಿಕೆ ಅವರಿಗೆ ಸಂತೋಷವನ್ನು ನೀಡುವುದು ಮಾತ್ರವಲ್ಲದೆ ಸೃಜನಾತ್ಮಕ ವಿಷಯಗಳನ್ನು ಕಲಿಯಲು ಸಹಾಯ ಮಾಡುತ್ತದೆ. ಜೊತೆಗೆ ದೀಪ ಹಚ್ಚಲು ಸಹ ಮಕ್ಕಳ ಸಹಾಯವನ್ನು ಪಡೆದುಕೊಳ್ಳಿ.
- ಇತ್ತೀಚಿನ ದಿನಗಳಲ್ಲಿ ಅಜ್ಜಿ ಕಥೆಗಳು ಮರೆಯಾಗುತ್ತಿವೆ. ಹೀಗಿರುವಾಗ ಮಕ್ಕಳು ಪಟಾಕಿ ಸಿಡಿಸಬೇಕು ಎಂದು ಹಠ ಮಾಡಿದರೆ, ಅವರಿಗೆ ದೀಪಾವಳಿಗೆ ಸಂಬಂಧಿಸಿ ಕಥೆಗಳನ್ನು ಹೇಳಿ ಹಾಗೂ ಪಾಟಾಕಿ ಸಿಡಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆಯೂ ವಿವರಿಸಿ.
- ಅಲ್ಲದೆ, ನೀವು ದೀಪಾವಳಿಯಂದು ಯಾರಿಗಾದರೂ ಸಿಹಿತಿಂಡಿಗಳು ಅಥವಾ ಉಡುಗೊರೆಗಳನ್ನು ನೀಡಲು ಬಯಸಿದರೆ, ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಳ್ಳಿ. ಗಿಫ್ಟ್ ಪ್ಯಾಕ್ ಮಾಡಲು ಮಕ್ಕಳ ಸಹಾಯವನ್ನು ಪಡೆದುಕೊಳ್ಳಿ. ಹಬ್ಬಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಗಳಲ್ಲೂ ತೊಡಗುವಂತೆ ಮಾಡಿ, ಇದರಿಂದ ಮಕ್ಕಳು ಸಹ ಹಬ್ಬದ ಬಗ್ಗೆ ಹೆಚ್ಚಿನ ವಿಷಯಗಳನ್ನು ಕಲಿಯುತ್ತಾರೆ.
- ಮಕ್ಕಳು ಪಟಾಕಿ ಬೇಕೇಬೇಕು ಎಂದು ಹಠ ಮಾಡಿದರೆ ನೆರೆಹೊರೆಯವರಿಗೆ, ಸಂಬಂಧಿಕರಿಗೆ ಮತ್ತು ಅವರ ಸಹೋದರ-ಸಹೋದರಿಯರಿಗೆ ವರ್ಣರಂಜಿತ ದೀಪಾವಳಿ ಶುಭಾಶಯ ಪತ್ರ, ಕಾರ್ಡ್ಸ್‌ಗಳನ್ನು ತಯಾರಿಸಲು ಹೇಳಿ. ಈ ಚಟುವಟಿಕೆ ಮಕ್ಕಳ ಸೃಜನಶೀಲತೆಯನ್ನು ಅಭಿವೃದ್ಧಿಪಡಿಸುವುದಲ್ಲದೆ, ಅವರ ಸಾಮಾಜಿಕ ನಡವಳಿಕೆಯ ಪ್ರಜ್ಞೆಯನ್ನು ಹೆಚ್ಚಿಸುತ್ತದೆ.
- ನಿಮ್ಮ ಮಕ್ಕಳನ್ನು ಈ ಎಲ್ಲಾ ವಿಷಯಗಳಲ್ಲಿ ತೊಡಗಿಸಿಕೊಂಡರೆ, ಅವರು ಖಂಡಿತವಾಗಿಯೂ ಪಟಾಕಿ ಬೇಕೆಂದು ಹಠ ಮಾಡೋದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




