Personality Test: ಈ ಚಿತ್ರದಲ್ಲಿ ನೀವು ಆಯ್ಕೆ ಮಾಡುವ ಸಸ್ಯ ನಿಮ್ಮ ವ್ಯಕ್ತಿತ್ವದ ರಹಸ್ಯ ಹೇಳಬಲ್ಲದು
ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯುವ ಸುಲಭ ಮಾರ್ಗವೆಂದರೆ ಅದು ಪರ್ಸನಾಲಿಟಿ ಟೆಸ್ಟ್. ಈ ವ್ಯಕ್ತಿತ್ವ ಪರೀಕ್ಷೆಯ ಮೂಲಕ ನಾವು ಅಂತರ್ಮುಖಿಯೇ, ಬಹಿರ್ಮುಖಿಯೇ, ಕೋಪಿಷ್ಠರೇ, ತಾಳ್ಮೆಯ ಸ್ವಭಾವವನ್ನು ಹೊಂದಿದವರೇ, ಶಾಂತಿಯುತ ವ್ಯಕ್ತಿಯೇ, ಜಿಪುಣರೇ ಎಂಬಿತ್ಯಾದಿ ಅಂಶವನ್ನು ತಿಳಿಯಬಹುದು. ಇಲ್ಲೊಂದು ಅಂತಹದ್ದೇ ವ್ಯಕ್ತಿತ್ವ ಪರೀಕ್ಷೆಯ ಚಿತ್ರವೊಂದು ವೈರಲ್ ಆಗಿದ್ದು, ಆ ಚಿತ್ರದಲ್ಲಿ ಒಂದು ಗಿಡವನ್ನು ಆಯ್ಕೆ ಮಾಡುವ ಮೂಲಕ ನೀವು ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ.

ಸಾಮಾನ್ಯವಾಗಿ ವ್ಯಕ್ತಿಯ ನಿಗೂಢ ವ್ಯಕ್ತಿತ್ವ, ಗುಣಸ್ವಭಾವವನ್ನು ಗುರುತಿಸಲು ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಗಿಣಿ ಶಾಸ್ತ್ರ, ಹಸ್ತಶಾಸ್ತ್ರವನ್ನು ಅವಲಂಬಿಸುತ್ತೇವೆ. ಇವುಗಳ ಹೊರತಾಗಿ ವ್ಯಕ್ತಿತ್ವ ಪರೀಕ್ಷೆಯ (Personality Test) ಹಲವು ವಿಧಾನಗಳ ಮೂಲಕವೂ ಸ್ವತಃ ನಾವೇ ನಮ್ಮ ಸ್ವಭಾವ ಹೇಗಿದೆ ಎಂಬುದನ್ನು ತಕ್ಕ ಮಟ್ಟಿಗೆ ತಿಳಿದುಕೊಳ್ಳಬಹುದು. ಕೈ ಬೆರಳಿನ ಆಕಾರ, ಪಾದದ ಆಕಾರ, ಮೂಗಿನ ಆಕಾರ, ಕೂದಲಿನ ಆಕಾರ, ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್ ಹೀಗೆ ವ್ಯಕ್ತಿತ್ವ ಪರೀಕ್ಷೆಯ ಹತ್ತು ಹಲವು ವಿಧಗಳಿವೆ. ಇವುಗಳ ಮೂಲಕ ನೀವು ಕೂಡ ಸೀಕ್ರೆಟ್ ಪರ್ಸನಾಲಿಟಿ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಇದೀಗ ಇಲ್ಲೊಂದು ಚಿತ್ರ ವೈರಲ್ ಆಗಿದ್ದು, ಅದರಲ್ಲಿ ನೀವು ಒಂದು ಗಿಡವನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ.
ಈ ಚಿತ್ರದಲ್ಲಿ ಆಯ್ಕೆ ಮಾಡುವ ಗಿಡ ನಿಮ್ಮ ವ್ಯಕ್ತಿತ್ವದ ರಹಸ್ಯ ತಿಳಿಸುತ್ತದೆ:

ಸಸ್ಯ 1: ನೀವು ಈ ಮೇಲಿನ ಚಿತ್ರದಲ್ಲಿ ಮೊದಲನೇ ಗಿಡವನ್ನು ಆಯ್ಕೆ ಮಾಡಿಕೊಂಡರೆ ನೀವು ಶಾಂತಿಯುತ ಮತ್ತು ಸಮತೋಲಿತ ಜೀವನಕ್ಕೆ ಆದ್ಯತೆಯನ್ನು ನೀಡುವವರು ಎಂಬುದನ್ನು ಸೂಚಿಸುತ್ತದೆ. ಈ ಆಯ್ಕೆಯನ್ನು ಇಷ್ಟಪಡುವವರು ಸಾಮಾನ್ಯವಾಗಿ ಸಂಯಮದ ಸ್ವಭಾವ ಮತ್ತು ಶಾಂತತೆಗೆ ಆಳವಾದ ಮೆಚ್ಚುಗೆಯನ್ನು ಪ್ರದರ್ಶಿಸುತ್ತಾರೆ. ನೀವು ಶಾಂತ ಜೀವನವನ್ನು ಆನಂದಿಸಲು ಒಲವು ತೋರುತ್ತೀರಿ ಮತ್ತು ಮನೆ ಮತ್ತು ಕೆಲಸ ಎರಡರಲ್ಲೂ ಒತ್ತಡ-ಮುಕ್ತ ವಾತಾವರಣವನ್ನು ನೀವು ಬಯಸುತ್ತೀರಿ.
ಸಸ್ಯ 2: ಈ ಮೇಲಿನ ಚಿತ್ರದಲ್ಲಿ ನೀವು ಎರಡನೇ ಗಿಡವನ್ನು ಆಯ್ಕೆ ಮಾಡಿದರೆ ನೀವು ಮುಕ್ತ ಮನೋಭಾವದ ವ್ಯಕ್ತಿಯೆಂದು ಅರ್ಥ. ನೀವು ಬಹುಶಃ ಸೌಮ್ಯ, ತಾಳ್ಮೆಯ ಸ್ವಭಾವವನ್ನು ಹೊಂದಿರುತ್ತೀರಿ, ನಿಮ್ಮ ಸ್ವಾತಂತ್ರ್ಯವನ್ನು ಪಾಲಿಸುತ್ತೀರಿ ಮತ್ತು ಜೀವನದ ಭಾವನೆಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುತ್ತೀರಿ. ನೀವು ಯಾವುದೇ ಕೆಲಸವನ್ನು ಮಾಡಿದರೂ ಅದನ್ನು ಪೂರ್ಣ ಹೃದಯದಿಂದ ಅದನ್ನು ಮಾಡುತ್ತೀರಿ, ಉತ್ಸಾಹ ಮತ್ತು ಸ್ವಾಭಾವಿಕತೆಯೊಂದಿಗೆ ಯಾವಾಗಲೂ ನೀವು ಎಚ್ಚರಿಕೆಯಿಂದ ಇರುವವರಾಗಿರುತ್ತೀರಿ.
ಸಸ್ಯ 3: ಈ ನಿರ್ದಿಷ್ಟ ಚಿತ್ರದಲ್ಲಿ ಮೂರನೇ ಗಿಡವನ್ನು ಆಯ್ಕೆ ಮಾಡಿದರೆ ನೀವು ಶಕ್ತಿಯುತ ನಾಯಕ ಎಂದರ್ಥ. ಅಲ್ಲದೆ ಈ ಸಸ್ಯವು ಶಕ್ತಿ ಮತ್ತು ಜವಾಬ್ದಾರಿಯ ಕ್ರಿಯಾತ್ಮಕ ಮಿಶ್ರಣವನ್ನು ಪ್ರತಿನಿಧಿಸುತ್ತದೆ, ಆದ್ದರಿಂದ ಇದನ್ನು ಆಯ್ಕೆ ಮಾಡುವವರು ನೈಸರ್ಗಿಕ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ಸಸ್ಯದತ್ತ ಆಕರ್ಷಿತರಾಗುವವರು ಶಿಸ್ತುಬದ್ಧ ಜೀವನವನ್ನು ನಡೆಸುವವರಾಗಿರುತ್ತಾರೆ. ಜೊತೆಗೆ ಇವರು ಉತ್ಸಾಹ ಮತ್ತು ಶಾಂತತೆಯ ಮಿಶ್ರಣ ಅಂತಾನೇ ಹೇಳಬಹುದು.
ಇದನ್ನೂ ಓದಿ: ನೀವು ಎಂತಹ ವ್ಯಕ್ತಿಯೆಂದು ಬಹಿರಂಗಪಡಿಸುತ್ತದೆ ನಿಮ್ಮ ಕಂಗಳ ಬಣ್ಣ
ಸಸ್ಯ 4: ನಾಲ್ಕನೇ ಗಿಡವನ್ನು ಆಯ್ಕೆ ಮಾಡುವವರು ಚಿಂತನಶೀಲ ವ್ಯಕ್ತಿಗಳೆಂದು ಅರ್ಥ. ಇವರು ಯಾವಾಗಲೂ ಸ್ಪಷ್ಟ ನಿರ್ಧಾರಗಳೊಂದಿಗೆ ಚಿಂತನಶೀಲ ಜೀವನವನ್ನು ನಡೆಸುತ್ತಾರೆ. ಮತ್ತು ತಮ್ಮ ಸುತ್ತಮುತ್ತಲಿನವರನ್ನು ಅರ್ಥಮಾಡಿಕೊಳ್ಳಲು, ಪ್ರಶಂಸಿಸಲು ಸಾಕಷ್ಟು ಸಮಯಾವಕಾಶವನ್ನು ತೆಗೆದುಕೊಳ್ಳುತ್ತಾರೆ. ಜೊತೆಗೆ ಇವರು ಯಾರ ಸ್ನೇಹ ಮಾಡಿದರೆ ಸೂಕ್ತ ಎಂಬ ಎಚ್ಚರಿಕೆಯನ್ನು ವಹಿಸುತ್ತಾರೆ, ಎಚ್ಚರಿಕೆಯಿಂದ ಸ್ನೇಹಿತರನ್ನು ಆಯ್ಕೆ ಮಾಡುತ್ತಾರೆ. ಈ ಚಿಂತನಶೀಲ ಸ್ವಭಾವವು ಇವರಿಗೆ ಸ್ಪಷ್ಟ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








