AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮ ನಿಗೂಢ ಮನಸ್ಥಿತಿ ಹೇಗಿದೆ ಎಂಬುದನ್ನು ಈ ಚಿತ್ರವೇ ತಿಳಿಸುತ್ತದೆ

ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್‌ಗಳು ಸರಳ, ವಿಚಿತ್ರ ಪರೀಕ್ಷೆಗಳಾಗಿದ್ದು, ಇವುಗಳು ನಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವುದು ಮಾತ್ರವಲ್ಲದೆ, ಕೆಲವೇ ಸೆಕೆಂಡುಗಳಲ್ಲಿ ಒಬ್ಬ ವ್ಯಕ್ತಿಯ ನಿಜವಾದ ಸ್ವಭಾವವನ್ನು ಬಹಿರಂಗಪಡಿಸುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರವೊಂದು ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ನಿಮಗೆ ಯಾವ ಅಂಶ ಕಾಣಿಸಿತು ಎಂಬುದರ ಆಧಾರದ ಮೇಲೆ ನೀವು ಮುಂಗೋಪಿಗಳೇ ಅಥವಾ ಶಾಂತ ಸ್ವಭಾವದವರೇ ಎಂಬುದನ್ನು ಪರೀಕ್ಷಿಸಿ.

Personality Test: ನಿಮ್ಮ ನಿಗೂಢ ಮನಸ್ಥಿತಿ ಹೇಗಿದೆ ಎಂಬುದನ್ನು ಈ ಚಿತ್ರವೇ ತಿಳಿಸುತ್ತದೆ
ವ್ಯಕ್ತಿತ್ವ ಪರೀಕ್ಷೆImage Credit source: Times Of India
ಮಾಲಾಶ್ರೀ ಅಂಚನ್​
|

Updated on: Oct 06, 2025 | 3:46 PM

Share

ಮನುಷ್ಯ ತನ್ನ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಕುತೂಹಲವನ್ನು ಹೊಂದಿರುತ್ತಾನೆ. ಅದಕ್ಕಾಗಿ ಗಿಣಿಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಹಸ್ತಶಾಸ್ತ್ರದ ಮೊರೆ ಹೋಗ್ತಾರೆ. ಇದರ ಹೊರತಾಗಿ ವ್ಯಕ್ತಿತ್ವ  (Personality Test) ಮೂಲಕವೂ  ನಾವು ನಮ್ಮ ಗುಣ ಸ್ವಭಾವ, ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದು. ಈ ವ್ಯಕ್ತಿತ್ವ ಪರೀಕ್ಷೆಯಲ್ಲಿ ಹಲವು ವಿಧಾನಗಳಿದ್ದು, ಅವುಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೂ ಒಂದು. ಇದೀಗ ಇಲ್ಲೊಂದು ಅದೇ ರೀತಿಯ ಚಿತ್ರವೊಂದು ಹರಿದಾಡುತ್ತಿದ್ದು, ಆ ಚಿತ್ರದಲ್ಲಿ ನಿಮಗೆ ಯಾವ ಅಂಶ ಕಾಣಿಸಿತು ಎಂಬುದರ ಆಧಾರದ ಮೇಲೆ ನೀವು ನೀವು ಮುಂಗೋಪಿಗಳೇ ಅಥವಾ  ಶಾಂತ ಸ್ವಭಾವದವರೇ ಎಂಬುದನ್ನು ಪರೀಕ್ಷಿಸಿ.

ನಿಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸುವ ಚಿತ್ರವಿದು:

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು Marina__Neuralean ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ವೃದ್ಧ ಮಹಿಳೆ ಹಾಗೂ ಯುವತಿಯ ಮುಖವಿದ್ದು, ಇವೆರಡರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಆಧಾರದ ಮೇಲೆ ನೀವು ಸಣ್ಣಪುಟ್ಟ ವಿಷಯಕ್ಕೂ ಕೋಪ ಮಾಡಿಕೊಳ್ಳುವ ವ್ಯಕ್ತಿಯೇ ಅಥವಾ ಶಾಂತ ಸ್ವಭಾವದವರೇ ಎಂಬುದನ್ನು ಪರೀಕ್ಷಿಸಿ.

ಇದನ್ನೂ ಓದಿ
Image
ಈ ಚಿತ್ರದಲ್ಲಿ ಯಾವ ಚೆಂಡು ದೊಡ್ಡದಾಗಿ ಕಾಣಿಸುತ್ತಿದೆ?
Image
ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಈ ಚಿತ್ರವೇ ಬಹಿರಂಗಪಡಿಸುತ್ತದೆ
Image
ನೀವು ಸಕಾರಾತ್ಮಕ ವ್ಯಕ್ತಿಯೇ ಎಂಬುದನ್ನು ಈ ಚಿತ್ರ ತಿಳಿಸುತ್ತದೆ
Image
ನಿಮ್ಮ ಶಕ್ತಿ-ದೌರ್ಬಲ್ಯ ಬಗ್ಗೆ ತಿಳಿಸುವ ಚಿತ್ರವಿದು

ವೃದ್ಧ ಮಹಿಳೆ: ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನೀವು ಮೊದಲು ವೃದ್ಧ ಮಹಿಳೆಯನ್ನು ನೋಡಿದರೆ ಶಾಂತ ಸ್ವಭಾವದ ಹಾಗೂ ತಾರ್ಕಿಕ ಮನೋಭಾವವನ್ನು ಹೊಂದಿರುವ ವ್ಯಕ್ತಿ ಎಂದರ್ಥ. ಅಲ್ಲದೆ ನೀವು ವಾಸ್ತವಿಕ, ಆಧಾರಭರಿತ ದೃಷ್ಟಿಕೋನವನ್ನು ಹೊಂದಿದ್ದು, ನಿಮ್ಮನ್ನು ಅಷ್ಟು ಸುಲಭವಾಗಿ ಮೋಸಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ನೀವು ನಿಮ್ಮ ಸುತ್ತಮುತ್ತಲಿನ ಜನರೊಂದಿಗೆ ವಾದ ಮಾಡಿ ಸಮಯ ವ್ಯರ್ಥ ಮಾಡುವ ಬದಲು ಅವರನ್ನು ಅವರಿಷ್ಟದಂತೆ ಇರಲು ಬಿಟ್ಟು ಬಿಡುತ್ತೀರಿ. ಒಟ್ಟಾರೆಯಾ ನೀವು ಶಾಂತ ಸ್ವಭಾವವನ್ನು ಹೊಂದಿರುವ ತಾರ್ಕಿಕ ವ್ಯಕ್ತಿಗಳು.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಚಿತ್ರದಲ್ಲಿ ನಿಮಗೆ ದೊಡ್ಡದಾಗಿ ಕಾಣಿಸುವ ಚೆಂಡು ನಿಮ್ಮ ನಾಯಕತ್ವದ ಸಾಮರ್ಥ್ಯವನ್ನು ಬಹಿರಂಗಪಡಿಸುತ್ತದೆ

ಯುವತಿ: ಈ ನಿರ್ದಿಷ್ಟ ಚಿತ್ರದಲ್ಲಿ ನಿಮಗೆ ನಿಮಗೆ ಯುವತಿ ಗೋಚರಿಸಿದರೆ ನೀವು ತುಂಬಾ ನಿರಾಳವಾಗಿರುವ ವ್ಯಕ್ತಿ ಎಂದರ್ಥ. ಅಷ್ಟು ಮಾತ್ರವಲ್ಲದೆ ನೀವು ಬಹಳ ಬೇಗನೇ ಕೋಪಗೊಳ್ಳುತ್ತೀರಿ. ಕಿರಿಕಿರಿಯನ್ನು ಸಹ ಅನುಭವಿಸುತ್ತೀರಿ.  ಅಲ್ಲದೆ ನೀವು ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸುವ ಮನಸ್ಥಿತಿಯನ್ನು ಹೊಂದಿರುವವರಾಗಿದ್ದೀರಿ. ಒಟ್ಟಾರೆಯಾಗಿ ನೀವು ಸಣ್ಣಪುಟ್ಟ ಕೋಪಗೊಳ್ಳುವ ವ್ಯಕ್ತಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ