AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಈ ಚಿತ್ರದಲ್ಲಿ ನಿಮಗೆ ದೊಡ್ಡದಾಗಿ ಕಾಣಿಸುವ ಚೆಂಡು ನಿಮ್ಮ ನಾಯಕತ್ವದ ಸಾಮರ್ಥ್ಯವನ್ನು ಬಹಿರಂಗಪಡಿಸುತ್ತದೆ

ಆಪ್ಟಿಕಲ್‌ ಇಲ್ಯೂಷನ್‌ ಪರೀಕ್ಷೆಗಳ ಮೂಲಕ ನಮ್ಮ ಬುದ್ಧಿವಂತಿಕೆ ಎಷ್ಟಿದೆ ಎಂಬುದನ್ನು ತಿಳಿಯಬಹುದಲ್ವಾ. ಅದೇ ರೀತಿ ಈ ಪರೀಕ್ಷೆಗಳ ಮೂಲಕ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದು. ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ಇಂತಹ ಸಾಕಷ್ಟು ಚಿತ್ರಗಳು ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇಲ್ಲೊಂದು ಅದೇ ರೀತಿಯ ಚಿತ್ರ ಹರಿದಾಡುತ್ತಿದ್ದು, ಆ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನಿಮಗೆ ಯಾವ ಚೆಂಡು ದೊಡ್ಡದಾಗಿ ಕಾಣಿಸುತ್ತಿದೆ ಎಂಬ ಆಧಾರದ ಮೇಲೆ ನಿಮ್ಮ ನಾಯಕತ್ವದ ಗುಣ ಹೇಗಿದೆ ಎಂಬುದನ್ನು ಪರೀಕ್ಷಿಸಿ.

Personality Test: ಈ ಚಿತ್ರದಲ್ಲಿ ನಿಮಗೆ ದೊಡ್ಡದಾಗಿ ಕಾಣಿಸುವ ಚೆಂಡು ನಿಮ್ಮ ನಾಯಕತ್ವದ ಸಾಮರ್ಥ್ಯವನ್ನು ಬಹಿರಂಗಪಡಿಸುತ್ತದೆ
ವ್ಯಕ್ತಿತ್ವ ಪರೀಕ್ಷೆ,Image Credit source: Times Now
ಮಾಲಾಶ್ರೀ ಅಂಚನ್​
|

Updated on: Oct 05, 2025 | 3:33 PM

Share

ವ್ಯಕ್ತಿತ್ವ ಪರೀಕ್ಷೆಯ ಸಾಕಷ್ಟು ವಿಧಗಳಿಗೆ. ಅವುಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ (optical illusion) ಕೂಡ ಒಂದು. ಈ ಆಪ್ಟಿಕಲ್‌ ಇಲ್ಯೂಷನ್‌ ವ್ಯಕ್ತಿತ್ವ ಪರೀಕ್ಷೆಯು ನೀವು ನಿಮ್ಮ ಜೀವನದ ನಿರ್ಧಾರಗಳನ್ನು ಹೇಗೆ ಅನುಸರಿಸುತ್ತೀರಿ, ನೀವು ಅಂತರ್ಮುಖಿಯೇ, ಬಹಿರ್ಮುಖಿಯೇ, ಹೃದಯವಂತರೇ, ಸ್ವಾರ್ಥಿಗಳೇ, ಆಶವಾದಿಗಳೇ ಎಂಬಿತ್ಯಾದಿ ನಿಮ್ಮ ನಿಗೂಢ ಗುಣ ಸ್ವಭಾವವನ್ನು ಬಹಿರಂಗಪಡಿಸುತ್ತದೆ. ಇಲ್ಲೊಂದು ಅಂತಹದ್ದೇ ಚಿತ್ರವೊಂದು ಹರಿದಾಡುತ್ತಿದ್ದು, ಆ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಎರಡು ಚೆಂಡುಗಳಿದ್ದು, ಅದರಲ್ಲಿ ಯಾವ ಚೆಂಡು ನಿಮ್ಮ ಕಣ್ಣಿಗೆ ದೊಡ್ಡದಾಗಿ ಕಾಣಿಸುತ್ತಿದೆ ಎಂಬುದರ ಆಧಾರದ ಮೇಲೆ ನೀವು ನಿಮ್ಮ ನಾಯಕತ್ವದ ಗುಣ ಹೇಗಿದೆ ಎಂಬುದನ್ನು ಪರೀಕ್ಷಿಸಿ.

ಈ ಚಿತ್ರದಲ್ಲಿ ಯಾವ ಚೆಂಡು ದೊಡ್ಡದಾಗಿ ಕಾಣಿಸುತ್ತಿದೆ?

Personality Test1

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನಿಮ್ಮ ನಾಯಕತ್ವದ ಗುಣ ಹೇಗಿದೆ ಎಂಬುದರ ಮೇಲೆ ಬೆಳಕನ್ನು ಚೆಲ್ಲುತ್ತದೆ. ಇದರಲ್ಲಿ ಎರಡು ಚೆಂಡುಗಳಿದ್ದು, ಅದರಲ್ಲಿ ಯಾವ ಚೆಂಡು ನಿಮಗೆ ಗಾತ್ರದಲ್ಲಿ ದೊಡ್ಡದಾಗಿ ಕಾಣಿಸುತ್ತದೆ ಎಂಬುದರ ಆಧಾರದ ಮೇಲೆ ನಿಮಗೆ ನಾಯಕತ್ವದ ಗುಣ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಿ.

ಇದನ್ನೂ ಓದಿ
Image
ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಈ ಚಿತ್ರವೇ ಬಹಿರಂಗಪಡಿಸುತ್ತದೆ
Image
ನೀವು ಸಕಾರಾತ್ಮಕ ವ್ಯಕ್ತಿಯೇ ಎಂಬುದನ್ನು ಈ ಚಿತ್ರ ತಿಳಿಸುತ್ತದೆ
Image
ನಿಮ್ಮ ಶಕ್ತಿ-ದೌರ್ಬಲ್ಯ ಬಗ್ಗೆ ತಿಳಿಸುವ ಚಿತ್ರವಿದು
Image
ನೀವು ಸೋಮಾರಿಯೇ, ಶ್ರಮಜೀವಿಯೇ ಎಂಬುದನ್ನು ಈ ಚಿತ್ರವೇ ತಿಳಿಸುತ್ತದೆ

ಮುಂಭಾಗದ ಚೆಂಡು: ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮುಂಭಾಗದಲ್ಲಿರುವ ಚೆಂಡು ನಿಮ್ಮ ಕಣ್ಣಿಗೆ  ದೊಡ್ಡದಾಗಿ ಕಾಣಿಸಿದರೆ, ಬಹುಶಃ ನೀವು ಹೆಚ್ಚಿನ ನಾಯಕತ್ವ ಗುಣವನ್ನು ಹೊಂದಿಲ್ಲ ಎಂದರ್ಥ. ಆದರೆ ನೀವು ಹೆಚ್ಚಿನ ಆದರ್ಶವಾದಿಗಳು  ಮತ್ತು ದಯಾ ಗುಣವನ್ನು, ಸಹಾನುಭೂತಿಯನ್ನು ಹೊಂದಿರುವವರು. ಇದೇ ಕಾರಣಕ್ಕೆ ಜನರು ನಿಮ್ಮ ಬಳಿ ಸಹಾಯ, ಸಲಹೆ ಪಡೆಯಲು ಧಾವಿಸುತ್ತಾರೆ. ನೀವು ಯಾವಾಗಲೂ ಇತರರನ್ನು ಮುಂದೆ ಹೋಗಲು ಬಿಟ್ಟು ನೀವು ಹಿಂದಿನಿಂದ ಸಾಗುವ ವ್ಯಕ್ತಿ. ಅಂದ್ರೆ ಇದರರ್ಥ ನೀವು ಪರದೆಯ ಹಿಂದಿನಿಂದ ಎಲ್ಲರಿಗೂ ಬೆಂಬಲ ನೀಡುವ ವ್ಯಕ್ತಿ.  ಆದರೆ ಸ್ವತಃ ತಾನೇ ಮುನ್ನುಗ್ಗುವ ಕೆಚ್ಚೆದೆಯ ನಾಯಕತ್ವ ಗುಣ ನಿಮ್ಮಲ್ಲಿ ಇಲ್ಲ.

ಇದನ್ನೂ ಓದಿ: ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಚಿತ್ರವೇ ಬಹಿರಂಗಪಡಿಸುತ್ತದೆ

ಹಿಂಭಾಗದಲ್ಲಿರುವ ಚೆಂಡು: ಈ ನಿರ್ದಿಷ್ಟ ಚಿತ್ರದಲ್ಲಿ ಹಿಂಭಾಗದಲ್ಲಿರುವ ಚೆಂಡು ನಿಮಗೆ ದೊಡ್ಡದಾಗಿ ಕಾಣಿಸಿದರೆ ನೀವು ನೈಸರ್ಗಿಕ ನಾಯಕತ್ವ ಗುಣವನ್ನು ಹೊಂದಿರುವ ವ್ಯಕ್ತಿಯೆಂದು ಅರ್ಥ. ನೀವು ಅಪಾಯಗಳನ್ನು ತೆಗೆದುಕೊಳ್ಳಲಿ, ದೊಡ್ಡ ಹೆಜ್ಜೆಗಳನ್ನು ಇಡಲು ಹೆದರದ ನೈಸರ್ಗಿಕ ನಾಯಕ ಎಂದರ್ಥ. ವಿವರಗಳಿಗೆ  ಗಮನ ಕೊಡುವ ನಿಮ್ಮ ವ್ಯಕ್ತಿತ್ವವು ನೀವು ಮಾಡುವ ಕೆಲಸದಲ್ಲಿ ಅತ್ಯುತ್ತಮರಾಗಲು ಮತ್ತು ನೀವು ಯಶಸ್ಸಿನತ್ತ ಸಾಗಲು ಸಹಾಯ ಮಾಡುತ್ತದೆ.  ಮತ್ತು ನೀವು ನಿಮ್ಮ ಬುದ್ಧಿವಂತಿಕೆಯಿಂದಲೇ ಇತರರಿಗೆ ಮಾರ್ಗದರ್ಶನವನ್ನು ನೀಡುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ