AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನೀವು ಎಂತಹ ವ್ಯಕ್ತಿಯೆಂದು ಬಹಿರಂಗಪಡಿಸುತ್ತದೆ ನಿಮ್ಮ ಕಂಗಳ ಬಣ್ಣ

ಪರ್ಸನಾಲಿಟಿ ಟೆಸ್ಟ್‌ ಮೂಲಕ ನಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವೇ ತಿಳಿದುಕೊಳ್ಳಬಹುದು. ಈ ವ್ಯಕ್ತಿತ್ವ ಪರೀಕ್ಷೆಯ ಸಾಕಷ್ಟು ವಿಧಗಳಿದ್ದು, ಇವುಗಳ ಮುಖಾಂತರ ನೀವು ಕೂಡ ನಿಮ್ಮ ಗುಣ ಸ್ವಭಾವ, ನೀವೆಂಥಾ ವ್ಯಕ್ತಿ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಕಂಗಳ ಬಣ್ಣದ ಆಧಾರದ ಮೇಲೆ ನೀವೆಂಥಾ ವ್ಯಕ್ತಿ ಎಂಬುದನ್ನು ಟೆಸ್ಟ್‌ ಮಾಡಿ.

Personality Test: ನೀವು ಎಂತಹ ವ್ಯಕ್ತಿಯೆಂದು ಬಹಿರಂಗಪಡಿಸುತ್ತದೆ ನಿಮ್ಮ ಕಂಗಳ ಬಣ್ಣ
ವ್ಯಕ್ತಿತ್ವ ಪರೀಕ್ಷೆ
ಮಾಲಾಶ್ರೀ ಅಂಚನ್​
|

Updated on: Oct 14, 2025 | 4:00 PM

Share

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಆತನ ನಿಗೂಢ ಗುಣ ಸ್ವಭಾವ ಹೇಗಿದೆ, ಭವಿಷ್ಯ ಯಾರ ರೀತಿ ಇದೆ, ಆತ ಯಾವ ರೀತಿಯ ವ್ಯಕ್ತಿ ಎಂಬುದನ್ನು ತಿಳಿಯಲು ಸಂಖ್ಯಾಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಹಸ್ತಶಾಸ್ತ್ರ, ಗಿಣಿ ಶಾಸ್ತ್ರ ಇವೆಲ್ಲವನ್ನು ಅವಲಂಬಿಸುತ್ತಾನೆ. ಇದರ ಹೊರತಾಗಿ ಮನುಷ್ಯನ ದೇಹದ ಅಂಗಾಗಗಳ ಆಕಾರದ ಮೂಲಕವೂ ವ್ಯಕ್ತಿತ್ವ (Personality)  ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಬಹುದು. ಹೌದು ಹುಬ್ಬಿನ ಆಕಾರ, ಮೂಗಿನ ಆಕಾರ, ಪಾದದ ಆಕಾರ, ಕೂದಲಿನ ಆಕಾರ ಸೇರಿದಂತೆ ದೇಹಕಾರ ಹೇಗಿದೆ ಎಂಬುದರ ಆಧಾರದ ಮೇಲೆ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದು. ಅದೇ ರೀತಿಯ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಕಣ್ಣಿನ ಬಣ್ಣ ಹೇಗಿದೆ ಎಂಬುದರ ಮೇಲೆ ನೀವು ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಿರಿ.

ನಿಮ್ಮ ವ್ಯಕ್ತಿತ್ವ ಹೇಗಿಯೆಂದು ತಿಳಿಸುತ್ತೆ ನಿಮ್ಮ ಕಂಗಳ ಬಣ್ಣ:

ಕಂದು ಬಣ್ಣದ ಕಣ್ಣು:  ನಿಮ್ಮ ಕಣ್ಣು ಕಂದು ಬಣ್ಣದ್ದಾಗಿದ್ದರೆ  ವ್ಯಕ್ತಿತ್ವದ ಲಕ್ಷಣಗಳು ನೀವು ಜೀವನವನ್ನು ವಸ್ತುನಿಷ್ಠತೆ ಮತ್ತು ಲೆಕ್ಕಾಚಾರದ ಮನಸ್ಥಿತಿಯೊಂದಿಗೆ ಸಮೀಪಿಸುವ ಪ್ರವೃತ್ತಿಯನ್ನು ತೋರಿಸುತ್ತವೆ. ನಿಮ್ಮ ಪ್ರಾಮಾಣಿಕತೆಯ ಹೊರತಾಗಿಯೂ, ನೀವು ತಮಾಷೆಯಿಂದ ಇರುವ ವ್ಯಕ್ತಿಯೂ ಹೌದು. ತೀಕ್ಷ್ಣವಾದ ವೀಕ್ಷಣಾ ಕೌಶಲ್ಯವನ್ನು ಹೊಂದಿರುವ ನೀವು ಸುತ್ತಮುತ್ತಲಿನವರಿಗೆ ಸಹಾಯ ಮಾಡುವ ಉದಾತ್ತ ಗುಣವನ್ನು ಸಹ ಹೊಂದಿದ್ದೀರಿ. ನಿಮ್ಮ ಬಗ್ಗೆ ಸಾಕಷ್ಟು ವಿಶ್ವಾಸವನ್ನು ಹೊಂದಿರುವ ನೀವು ಇತರರಿಗೆ ಅಷ್ಟು ಸುಲಭವಾಗಿ ಮಣಿಯುವುದಿಲ್ಲ. ಬಲವಾದ ಸಂವಹನ ಕೌಶಲ್ಯದೊಂದಿಗೆ, ಎಲ್ಲರೊಂದಿಗೂ ದೃಢನಿಶ್ಚಯದಿಂದ ವರ್ತಿಸುತ್ತೀರಿ. ಜೊತೆಗೆ ನೀವು ಶಾಂತ ನಡವಳಿಕೆಯೊಂದಿಗೆ ಸಂಘರ್ಷಗಳನ್ನು ಆದಷ್ಟು ತಪ್ಪಿಸುತ್ತೀರಿ.  ಇನ್ನೊಂದು ಏನೆಂದರೆ ನೀವು ಸುಲಭವಾಗಿ ಅಳುವುದಿಲ್ಲ, ಎಲ್ಲರೊಂದಿಗೂ ಸುಲಭವಾಗಿ ಓಪನ್‌ ಅಪ್‌ ಆಗುವುದಿಲ್ಲ.

ನೀಲಿ ಬಣ್ಣದ ಕಂಗಳು: ನಿಮ್ಮ ಕಂಗಳ ಬಣ್ಣ ನೀಲಿಯಾಗಿದ್ದರೆ ನಿಮ್ಮ ವ್ಯಕ್ತಿತ್ವದ ಲಕ್ಷಣಗಳು ನೀವು ಸಮತೋಲನ ಮತ್ತು ಗಮನಾರ್ಹ ಆಂತರಿಕ ಶಕ್ತಿಯನ್ನು ಸಾಕಾರಗೊಳಿಸುತ್ತೀರಿ ಎಂದು ಬಹಿರಂಗಪಡಿಸುತ್ತವೆ. ನೀವು ಶಾಂತಿಯುತ, ಬುದ್ಧಿವಂತ, ದಯೆ, ಯೌವನ ಮತ್ತು ಚೈತನ್ಯದಿಂದ ತುಂಬಿರುತ್ತೀರಿ ಮತ್ತು ಯಾವಾಗಲೂ ಹೊಸ ಅನುಭವಗಳನ್ನು ಅನ್ವೇಷಿಸಲು ಉತ್ಸುಕರಾಗಿದ್ದೀರಿ. ಕೆಲವೊಮ್ಮೆ ನೀವು ಸ್ವಾರ್ಥಿಯಾಗಿಯೂ ವರ್ತಿಸುತ್ತೀರಿ. ಉದಾಹರಣೆಗೆ, ಸಂಬಂಧಗಳಲ್ಲಿ, ನೀವು ನಿಮ್ಮನ್ನು ತುಂಬಾ ಉನ್ನತವಾಗಿ ಪರಿಗಣಿಸಬಹುದು, ಇದು ನಿಮ್ಮ ಸಂಗಾತಿಗೆ ನೋವುಂಟು ಮಾಡುವ ಸಾಧ್ಯತೆ ಇರುತ್ತದೆ. ನೀವು ಸಂಬಂಧ ಮತ್ತು ವೃತ್ತಿ ಇವೆರಡನ್ನೂ ಎಚ್ಚರಿಕೆಯಿಂದ ನಿಭಾಯಿಸುತ್ತೀರಿ. ಇನ್ನೊಂದು ಏನೆಂದರೆ ನೀವು ನಿಮ್ಮ ಭಾವನೆಗಳನ್ನು, ನಿಮಗನಿಸಿದ ವಿಷಯಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಮುಕ್ತವಾಗಿ ಹೇಳುತ್ತೀರಿ. ಇದನ್ನು ಕೆಲವರು ದುರಹಂಕಾರವೆಂದು ತಪ್ಪಾಗಿ ಅರ್ಥೈಸುವ ಸಾಧ್ಯತೆ ಇರುತ್ತದೆ. ನೀವು ಸಾಮಾನ್ಯವಾಗಿ ಸಂತೋಷ ಮತ್ತು ಹರ್ಷಚಿತ್ತದಿಂದ ಕೂಡಿದ ಮನೋಭಾವದಿಂದ ಇರುತ್ತೀರಿ.  ಆದರೂ  ಕೆಲವೊಮ್ಮೆ ಮುಂಗೋಪ ಅಥವಾ ಕಿರಿಕಿರಿಯ ಭಾವನೆಗಳನ್ನು ಅನುಭವಿಸುತ್ತೀರಿ.

ಇದನ್ನೂ ಓದಿ
Image
ಬೆಕ್ಕು ಪ್ರಿಯರ ನಿಗೂಢ ಗುಣ ಸ್ವಭಾವ ಹೇಗಿದೆ ಗೊತ್ತಾ?
Image
ಪ್ರೀತಿ-ಪ್ರೇಮದ ವಿಚಾರದಲ್ಲಿ ನಿಮ್ಮ ಸ್ವಭಾವ ಹೇಗಿದೆ ತಿಳಿಯಿರಿ
Image
ನಿಮ್ಮ ನಿಗೂಢ ಮನಸ್ಥಿತಿ ಹೇಗಿದೆ ಎಂಬುದನ್ನು ಈ ಚಿತ್ರವೇ ತಿಳಿಸುತ್ತದೆ
Image
ಈ ಚಿತ್ರದಲ್ಲಿ ಯಾವ ಚೆಂಡು ದೊಡ್ಡದಾಗಿ ಕಾಣಿಸುತ್ತಿದೆ?

ಇದನ್ನೂ ಓದಿ: ಸಿಕ್ಕಾಪಟ್ಟೆ ಬುದ್ಧಿವಂತರು; ಬೆಕ್ಕು ಪ್ರಿಯರ ನಿಗೂಢ ಗುಣ ಸ್ವಭಾವ ಹೇಗಿದೆ ಗೊತ್ತಾ?

ಕಪ್ಪು ಬಣ್ಣದ ಕಂಗಳು: ನಿಮ್ಮ ಕಣ್ಣಿನ ಬಣ್ಣ ಕಪ್ಪಾಗಿದ್ದರೆ, ನಿಮ್ಮ ವ್ಯಕ್ತಿತ್ವದ ಲಕ್ಷಣಗಳು ನೀವು ವಿಶ್ವಾಸಾರ್ಹತೆ, ಅಂತಃಪ್ರಜ್ಞೆ, ಹೆಚ್ಚಿನ ಜವಾಬ್ದಾರಿ, ನಿಷ್ಠೆ, ಶ್ರದ್ಧೆ ಮತ್ತು ಆಶಾವಾದವನ್ನು ಸಾಕಾರಗೊಳಿಸುತ್ತೀರಿ ಎಂದು ಬಹಿರಂಗಪಡಿಸುತ್ತವೆ. ನೀವು ಕಠಿಣ ಪರಿಶ್ರಮಿ ಮತ್ತು ಪ್ರಾಯೋಗಿಕರು ಮಾತ್ರವಲ್ಲದೆ ಉತ್ಸಾಹಭರಿತ ಮತ್ತು ಆಶಾವಾದಿ ವ್ಯಕ್ತಿಯೂ ಹೌದು. ನೀವು ಯಾವಾಗಲೂ ನಿಮ್ಮ ನಿಜವಾದ ಮೌಲ್ಯವನ್ನು ಜಗತ್ತಿಗೆ ಸಾಬೀತುಪಡಿಸಲು ಉತ್ಸುಕರಾಗಿರುತ್ತೀರಿ. ನೀವು ಸ್ವಾಭಾವಿಕವಾಗಿ ನಾಯಕತ್ವದ ಗುಣವನ್ನು ಹೊಂದಿದ್ದು, ವಿವಿಧ ಸಂದರ್ಭಗಳಲ್ಲಿ ಆತ್ಮವಿಶ್ವಾಸದಿಂದ ನಾಯಕತ್ವ ಅಥವಾ ಅಧಿಕಾರದ ಚುಕ್ಕಾಣಿ ಹಿಡಿಯುತ್ತೀರಿ, ವಿಶ್ವಾಸಾರ್ಹತೆ ಮತ್ತು ಪ್ರಾಯೋಗಿಕತೆಯನ್ನು ಪ್ರದರ್ಶಿಸುತ್ತೀರಿ. ಅಲ್ಲದೆ ನಿಮಗೆ  ಕ್ರೀಡೆ ಮತ್ತು ಸಾಹಸಮಯ ಚಟುವಟಿಕೆಗಳೆಂದರೆ ಬಲು ಇಷ್ಟ. ನೀವು ಏಕಾಂಗಿಯಾಗಿ ನಿಲ್ಲಲು ಹೆದರುವುದಿಲ್ಲ. ಯಾವುದೇ ಹಿಂಜರಿಕೆಯಿಲ್ಲದೆ ಧೈರ್ಯದಿಂದಲೇ ಒಂಟಿಯಾಗಿ ಇದ್ದು, ಎಲ್ಲವನ್ನು ಎದುರಿಸುವ ಶಕ್ತಿ ನಿಮ್ಮಲ್ಲಿದೆ.  ಇನ್ನು ಭಾವನೆಗಳ ವಿಷಯಕ್ಕೆ ಬಂದರೆ ನೀವು ನಿಮ್ಮ ಭಾವನೆಗಳನ್ನು ವಿಶಿಷ್ಟವಾಗಿ, ಬಹುತೇಕ ಮಗುವಿನಂತೆ ವ್ಯಕ್ತಪಡಿಸುತ್ತೀರಿ. ತಮಾಷೆಯಾಗಿ ಸಂವಹನ ನಡೆಸಲು  ಇಷ್ಟಪಡುತ್ತೀರಿ. ಹೆಚ್ಚಿನ ಸಂದರ್ಭದಲ್ಲಿ ನೀವು ಶಾಂತ ರೀತಿಯಲ್ಲಿಯೇ ವರ್ತಿಸುತ್ತೀರಿ ಆದರೆ ಕೆಲವೊಮ್ಮೆ ನಿಮ್ಮ ಕೋಪ ನಿಮ್ಮನ್ನು ಕಷ್ಟಕರ ಸಂದರ್ಭಗಳಲ್ಲಿ ಸಿಲುಕಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ