AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆನ್ನು ನೋವು ಶಮನಕ್ಕೆ ಪರಿಣಾಮಕಾರಿ ಈ ಯೋಗಾಸನಗಳು: ಬಾಬಾ ರಾಮದೇವ್ ಸಲಹೆ

Best yogasanas to relieve back pain: ಯೋಗ ಗುರು ಬಾಬಾ ರಾಮ್‌ದೇವ್ ತಮ್ಮ ವೀಡಿಯೊಗಳ ಮೂಲಕ ಯೋಗದ ಮಹತ್ವವನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸವು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ನೀವು ಬೆನ್ನು ನೋವಿನಿಂದ ಬಳಲುತ್ತಿದ್ದರೆ, ಅವರು ಶಿಫಾರಸು ಮಾಡುವ ಕೆಲವು ಯೋಗ ಆಸನಗಳನ್ನು ಅಭ್ಯಾಸ ಮಾಡುವ ಮೂಲಕ ನೀವು ಪರಿಹಾರವನ್ನು ಕಂಡುಕೊಳ್ಳಬಹುದು.

ಬೆನ್ನು ನೋವು ಶಮನಕ್ಕೆ ಪರಿಣಾಮಕಾರಿ ಈ ಯೋಗಾಸನಗಳು: ಬಾಬಾ ರಾಮದೇವ್ ಸಲಹೆ
ಬಾಬಾ ರಾಮದೇವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 14, 2025 | 6:00 PM

Share

ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ಮತ್ತು ಭಾರವಾದ ವಸ್ತುಗಳನ್ನು ಎತ್ತುವುದರಿಂದ ಬೆನ್ನು ನೋವು (Back Pain) ಕಾಣಿಸುತ್ತದೆ. ಇದು ಬಹಳ ಸಾಮಾನ್ಯ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ಪುರುಷರು ಮತ್ತು ಮಹಿಳೆಯರು ಸೇರಿದಂತೆ ಎಲ್ಲರಲ್ಲೂ ಸಾಮಾನ್ಯವಾಗಿದೆ. ಕೆಲವೊಮ್ಮೆ ಜನರು ಇದನ್ನು ನಿರ್ಲಕ್ಷಿಸುತ್ತಾರೆ. ಆದರೆ ಹಾಗೇ ಬಿಟ್ಟರೆ ಸಮಸ್ಯೆ ಗಂಭೀರವಾಗಬಹುದು. ಜನರು ಸಾಮಾನ್ಯವಾಗಿ ಬೆನ್ನು ನೋವಿಗೆ ಔಷಧಿಗಳನ್ನು ಅಥವಾ ನೋವು ನಿವಾರಕ ಸ್ಪ್ರೇಗಳನ್ನು ಬಳಸುತ್ತಾರೆ. ಆದಾಗ್ಯೂ, ನೀವು ನೈಸರ್ಗಿಕವಾದ ಮತ್ತು ಶಾಶ್ವತವಾದ ಪರಿಹಾರವನ್ನು ಹುಡುಕುತ್ತಿದ್ದರೆ, ಯೋಗವು ಉತ್ತಮ ಆಯ್ಕೆಯಾಗಿರಬಹುದು. ಯೋಗ ಗುರು ಬಾಬಾ ರಾಮದೇವ್ ಯಾವಾಗಲೂ ಯೋಗಾಭ್ಯಾಸದ ಹಿಂದಿನ ಪ್ರೇರಕ ಶಕ್ತಿಯಾಗಿದ್ದಾರೆ.

ಅವರ ಪ್ರಕಾರ, ಯೋಗವು ಅನೇಕ ರೋಗಗಳನ್ನು ಗುಣಪಡಿಸಲು ಸಹಾಯವಾಗುತ್ತದೆ. ಬಾಬಾ ರಾಮದೇವ್ ಅವರು ಯೋಗದ ಕುರಿತು “Yog Its Philosophy & Practice” ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲೂ ಅವರು ಯೋಗದ ಕುರಿತು ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಕೆಲ ವಿಡಿಯೋಗಳಲ್ಲಿ ಅವರು ಬೆನ್ನು ನೋವಿನ ಶಮನಕ್ಕೆ ಮಾಡಬಹುದಾದ ಯೋಗದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಬೆನ್ನು ನೋವಿನ ಶಮನಕ್ಕೆ ಸೂಕ್ತವಾದ ಯೋಗಾಸನಗಳು ಯಾವುವು ಎನ್ನುವ ವಿವರ ಇಲ್ಲಿದೆ.

ಇದನ್ನೂ ಓದಿ: ಊಟ ವಿಚಾರದಲ್ಲಿ ಎಚ್ಚರ… ಸರಿಯಾದ ಆಹಾರ, ಸರಿಯಾದ ಸಮಯ, ಸರಿಯಾದ ಕ್ರಮ ಮುಖ್ಯ: ಬಾಬಾ ರಾಮದೇವ್ ಸಲಹೆಗಳಿವು

1. ಉಷ್ಟ್ರಾಸನ (ಒಂಟೆ ಭಂಗಿ)

ಈ ಯೋಗಾಸನವು ಬೆನ್ನು ನೋವನ್ನು ನಿವಾರಿಸಲು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ಮಾಡುವಾಗ ದೇಹವನ್ನು ಹಿಂದಕ್ಕೆ ಬಗ್ಗಿಸಬೇಕು. ಉಷ್ಟ್ರಾಸನವು ಬೆನ್ನನ್ನು ಹಿಗ್ಗಿಸುತ್ತದೆ. ಇದರಿಂದ ಆ ಭಾಗವು ಹೆಚ್ಚು ಬಲಗೊಳ್ಳುತ್ತದೆ, ಹೆಚ್ಚು ಫ್ಲೆಕ್ಸಿಬಲ್ ಆಗುತ್ತದೆ. ಈ ಆಸನ ಮಾಡುವಾಗ ಮೊಣಕಾಲು ನೋವುಂಟಾಗುವುದನ್ನು ತಪ್ಪಿಸಲು, ಹಾಸಿಗೆ ಬಳಸಿ.

2. ಭುಜಂಗಾಸನ (ಸರ್ಪದ ಭಂಗಿ)

ಈ ಆಸನವು ಸೊಂಟವನ್ನು ಬಲಪಡಿಸುವುದಲ್ಲದೆ ಹೊಟ್ಟೆಯನ್ನು ಸಣ್ಣ ಮಾಡಲು ಸಹಾಯ ಮಾಡುತ್ತದೆ. ಭುಜಂಗಾಸನ ಮಾಡುವ ವಿಧಾನ ಹೀಗೆ: ಮೊದಲು ನಿಮ್ಮ ಹೊಟ್ಟೆಯ ಮೇಲೆ ಮಲಗಿ ನಿಮ್ಮ ಕುತ್ತಿಗೆಯನ್ನು ಮೇಲಕ್ಕೆತ್ತಿ. ಈ ಯೋಗ ಭಂಗಿಯು ಬೆನ್ನುಮೂಳೆಯನ್ನು ಹಿಗ್ಗಿಸುತ್ತದೆ ಮತ್ತು ಬೆನ್ನು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

3. ಶಲಭಾಸನ (ಮಿಡತೆಯ ಭಂಗಿ)

ಈ ಯೋಗಾಸನವು ಬೆನ್ನುಮೂಳೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಶಲಭಾಸನ ಮಾಡುವ ವಿಧಾನ ಹೀಗಿದೆ: ಮೊದಲು ಹೊಟ್ಟೆಯ ಮೇಲೆ ಮಲಗಿ. ನಂತರ, ಎರಡೂ ಕಾಲುಗಳನ್ನು ಹಿಮ್ಮುಖವಾಗಿಯೇ ಮೇಲೆತ್ತಬೇಕು. ಪ್ರತಿದಿನ ಈ ಭಂಗಿಯನ್ನು ಮಾಡುವುದರಿಂದ ನಿಮ್ಮ ಹೊಟ್ಟೆ ಮತ್ತು ಸೊಂಟ ಎರಡನ್ನೂ ಬಲಪಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮಲಬದ್ಧತೆ ನಿವಾರಿಸಲು ಬಾಬಾ ರಾಮದೇವ್ ಯೋಗ ಮತ್ತು ಆಯುರ್ವೇದ ಮಾರ್ಗೋಪಾಯಗಳು

4. ಧನುರಾಸನ (ಬಿಲ್ಲು ಭಂಗಿ)

ಪ್ರತೀ ದಿನ ಧನುರಾಸನ ಅಭ್ಯಾಸ ಮಾಡಿದರೆ ದೇಹದ ಫ್ಲೆಕ್ಸಿಬಿಲಿಟಿ ಹೆಚ್ಚುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ, ಜೊತೆಗೆ ಬೆನ್ನು ನೋವೂ ಕೂಡ ನಿವಾರಣೆ ಆಗುತ್ತದೆ. ಧನುರಾಸನ ಹಾಕುವಾಗ, ಮೊದಲು ನಿಮ್ಮ ಹೊಟ್ಟೆಯ ಮಲಗಬೇಕು. ಎರಡೂ ಕಾಲುಗಳನ್ನು ಮತ್ತು ಕೈಗಳನ್ನು ಮೇಲೆತ್ತಬೇಕು. ಕೈಯನ್ನು ಜೋಡಿಸಬೇಕು. ಇದರಿಂದ ನಿಮ್ಮ ದೇಹವು ಬಿಲ್ಲಿನ ಆಕಾರ ಪಡೆಯುತ್ತದೆ. ಮೊದಮೊದಲು ಇದು ಸ್ವಲ್ಪ ಕಷ್ಟಕರ ಎನಿಸಿದರೂ ನಿಯಮಿತ ಅಭ್ಯಾಸದಿಂದ ಸುಲಭ ಎನಿಸುತ್ತದೆ.

5. ಮರ್ಕಟಾಸನ (ಮಂಕಿ ಪೋಸ್)

ಬೆನ್ನು ನೋವನ್ನು ನಿವಾರಿಸಲು ಮರ್ಕಟಾಸನವು ಅತ್ಯಂತ ಪರಿಣಾಮಕಾರಿ ಆಸನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಭಂಗಿಯಲ್ಲಿ, ಮೊಣಕಾಲುಗಳು ಮತ್ತು ಕಾಲ್ಬೆರಳುಗಳನ್ನು ಒಟ್ಟಿಗೆ ಬಗ್ಗಿಸಿ, ಕಾಲುಗಳನ್ನು ಬಲಕ್ಕೆ ಮತ್ತು ಕುತ್ತಿಗೆಯನ್ನು ಎಡಕ್ಕೆ ತಿರುಗಿಸಲಾಗುತ್ತದೆ. ಇದು ಬೆನ್ನುಮೂಳೆಯನ್ನು ಹಿಗ್ಗಿಸುತ್ತದೆ ಮತ್ತು ಬೆನ್ನು ನೋವಿನಿಂದ ತಕ್ಷಣದ ಪರಿಹಾರವನ್ನು ನೀಡುತ್ತದೆ. ಮೆರ್ಕಟಾಸನವನ್ನು ಹಲವಾರು ವಿಧಗಳಲ್ಲಿ ಮಾಡಬಹುದು ಎಂಬುದನ್ನು ಗಮನಿಸಬೇಕು.

ರಾಮದೇವ್ ಅವರ ವಿಡಿಯೋ

ಇನ್ನಷ್ಟು ಲೈಫ್​ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:54 pm, Tue, 14 October 25