AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಗೊತ್ತಾ ಕುತ್ತಿಗೆಯ ಉದ್ದವನ್ನು ನೋಡಿ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದು

ವ್ಯಕ್ತಿತ್ವ ಪರೀಕ್ಷೆಗಳ ಮೂಲಕ ಒಬ್ಬ ವ್ಯಕ್ತಿತ್ವ ಸಾಕಷ್ಟು ನಿಗೂಢ ಗುಣ ಸ್ವಭಾವಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಈ ವ್ಯಕ್ತಿತ್ವ ಪರೀಕ್ಷೆಯಲ್ಲಿ ಸಾಕಷ್ಟು ವಿಧಗಳಿವೆ. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಕುತ್ತಿಗೆಯ ಉದ್ದದ ಆಧಾರದ ಮೇಲೆ ವ್ಯಕ್ತಿಯ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನು ನೋಡೋಣ. ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನೀವು ಸಹ ನಿಮ್ಮ ಕುತ್ತಿಗೆ ಉದ್ದವನ್ನು ನೋಡಿ ವ್ಯಕ್ತಿತ್ವ ಹೇಗಿದೆ ತಿಳಿದುಕೊಳ್ಳಿ.

Personality Test: ನಿಮ್ಗೊತ್ತಾ ಕುತ್ತಿಗೆಯ ಉದ್ದವನ್ನು ನೋಡಿ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದು
ವ್ಯಕ್ತಿತ್ವ ಪರೀಕ್ಷೆImage Credit source: Jagran Josh
ಮಾಲಾಶ್ರೀ ಅಂಚನ್​
|

Updated on: Oct 16, 2025 | 5:02 PM

Share

ಸಾಮಾನ್ಯವಾಗಿ ಮನುಷ್ಯನ ಗುಣ ಸ್ವಭಾವ ಹೇಗಿದೆ ಎಂಬುದನ್ನು ಕಂಡುಹಿಡಿಯಲು ರಾಶಿ ನಕ್ಷತ್ರದ ಆಧಾರದ ಮೇಲೆ ಜ್ಯೋತಿಷ್ಯದ ಮೊರೆ ಹೋಗುತ್ತಾರೆ. ಇಲ್ಲವೆ ಹುಟ್ಟಿದ ಸಮಯ ದಿನಾಂಕದ ಆಧಾರದ ಮೇಲೆ ಸಂಖ್ಯಾಶಾಸ್ತ್ರವನ್ನು ಅವಲಂಬಿಸುತ್ತಾರೆ. ಇದರ ಹೊರತಾಗಿ ವ್ಯಕ್ತಿತ್ವ ಪರೀಕ್ಷೆಯ (Personality Test) ಮೂಲಕ ಒಬ್ಬ ವ್ಯಕ್ತಿ ಹೇಗಿದ್ದಾನೆ, ಆತನ ನಿಗೂಢ ಸ್ವಭಾವ ಹೇಗಿದೆ ಎಂಬುದನ್ನು ವ್ಯಕ್ತಿತ್ವ ಪರೀಕ್ಷೆಯ ಹಲವು ವಿಧಾನಗಳ ಮೂಲಕ ತಿಳಿಯಬಹುದಾಗಿದೆ. ನೀವು ಸಹ ಇವುಗಳ ಮೂಲಕ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಕುತ್ತಿಗೆಯ ಉದ್ದವನ್ನು ನೋಡಿ ನಿಮ್ಮ ಹಾಗೂ ನಿಮ್ಮ ಸುತ್ತಮುತ್ತಲಿನವರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ.

ಕುತ್ತಿಗೆಯ ಉದ್ದ ನಿಮ್ಮ ಗುಪ್ತ ವ್ಯಕ್ತಿತ್ವ ಲಕ್ಷಣಗಳನ್ನು ಬಹಿರಂಗಪಡಿಸುತ್ತದೆ:

ಉದ್ದನೆಯ ಕುತ್ತಿಗೆ: ನೀವು ಉದ್ದನೆಯ ಕುತ್ತಿಗೆಯನ್ನು ಹೊಂದಿದ್ದರೆ  ನೀವು ಆಕರ್ಷಕ ಮತ್ತು ಬುದ್ಧಿವಂತರು ಎಂದರ್ಥ. ಸಭ್ಯತೆಯನ್ನು ಇಷ್ಟಪಡುವ ನೀವು ಶಾಂತವಾಗಿ ಇರುತ್ತೀರಿ. ಅಲ್ಲದೆ ತೀಕ್ಷ್ಣ ಬುದ್ದಿಶಕ್ತಿ ಹೊಂದಿರುವ ನಿಮಗೆ ಜ್ಞಾನದ ಬಾಯಾರಿಕೆಯೂ ಅಧಿಕ. ನೀವು ಜೀವನದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದೀರಿ. ಸೃಜನಶೀಲರಾದ ನೀವು ಎಲ್ಲದರ ಬಗ್ಗೆಯೂ ತಿಳಿದುಕೊಳ್ಳಲು ಬಹಳ ಉತ್ಸುಕರಾಗಿರುತ್ತೀರಿ ಮತ್ತು ನಿಮ್ಮ ಸುತ್ತಮುತ್ತಲಿನವರ ಅಗತ್ಯಗಳಿಗೆ ನೀವು ಹೆಚ್ಚಾಗಿ ಹೊಂದಿಕೊಳ್ಳುತ್ತೀರಿ. ಸ್ವಾತಂತ್ರ್ಯವನ್ನು ಹೆಚ್ಚು ಪ್ರೀತಿಸುವ ನೀವು ಸ್ವತಂತ್ರರಾಗಿರಲು ಬಯಸುತ್ತೀರಿ. ಜೊತೆಗೆ ಬಲವಾದ ಅಂತಃಪ್ರಜ್ಞೆಯನ್ನು ಹೊಂದಿದ ನೀವು ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಒಟ್ಟಾರೆಯಾಗಿ ನಿಮ್ಮ ಬುದ್ಧಿವಂತಿಕೆ ಮತ್ತು ಅತ್ಯುತ್ತಮ ಸಂವಹನ ಕೌಶಲ್ಯಗಳು ನಿಮ್ಮನ್ನು ಇತರರಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುವ ಪರಿಣಾಮಕಾರಿ ನಾಯಕರನ್ನಾಗಿ ಮಾಡುತ್ತದೆ.

ಪ್ರಮುಖ ವ್ಯಕ್ತಿತ್ವ ಲಕ್ಷಣಗಳು: ಆಕರ್ಷಕ, ಬುದ್ಧಿವಂತಿಕೆ, ಸಹಾನುಭೂತಿ, ಕರುಣಾಳು, ಉತ್ತಮ ಸಂವಹನಕಾರ,ಕಲ್ಪನಾಶೀಲ,  ಸ್ವತಂತ್ರ, ಸ್ವಾವಲಂಬಿ

ಇದನ್ನೂ ಓದಿ
Image
ಈ ಚಿತ್ರದಲ್ಲಿ ನಿಮ್ಮ ಆಯ್ಕೆಯ ಸಸ್ಯ ನಿಮ್ಮ ವ್ಯಕ್ತಿತ್ವದ ರಹಸ್ಯ ಹೇಳಬಲ್ಲದು
Image
ನೀವು ಎಂತಹ ವ್ಯಕ್ತಿಯೆಂದು ಬಹಿರಂಗಪಡಿಸುತ್ತದೆ ನಿಮ್ಮ ಕಂಗಳ ಬಣ್ಣ
Image
ಬೆಕ್ಕು ಪ್ರಿಯರ ನಿಗೂಢ ಗುಣ ಸ್ವಭಾವ ಹೇಗಿದೆ ಗೊತ್ತಾ?
Image
ಪ್ರೀತಿ-ಪ್ರೇಮದ ವಿಚಾರದಲ್ಲಿ ನಿಮ್ಮ ಸ್ವಭಾವ ಹೇಗಿದೆ ತಿಳಿಯಿರಿ

ಇದನ್ನೂ ಓದಿ: ಚಿತ್ರದಲ್ಲಿ ನೀವು ಆಯ್ಕೆ ಮಾಡುವ ಸಸ್ಯ ನಿಮ್ಮ ವ್ಯಕ್ತಿತ್ವದ ರಹಸ್ಯ ಹೇಳಬಲ್ಲದು

ಸಣ್ಣ ಕುತ್ತಿಗೆ: ನಿಮ್ಮ ಕುತ್ತಿಗೆ ಗಿಡ್ಡದಾಗಿದ್ದರೆ ನೀವು ದೃಢ ಮನಸ್ಸಿನವರು ಮತ್ತು ಸಾಕಷ್ಟು ಪ್ರರಿಶ್ರಮ ಪಡುವ ವ್ಯಕ್ತಿಯೆಂದು ಅರ್ಥ.  ನೀವು ಯಾವುದೇ ಸಮಸ್ಯೆಗಳಿಗೆ ಸಮಂಜಸ ಪರಿಹಾರಗಳನ್ನು ಕಂಡುಕೊಳ್ಳುವ ಕೌಶಲ್ಯವನ್ನು  ಹೊಂದಿದ್ದೀರಿ. ಅಡೆತಡೆಗಳನ್ನು ನಿವಾರಿಸಲು ಮತ್ತು ನಿಮ್ಮ ಗುರಿಗಳನ್ನು ಸಾಧಿಸುವ ದೃಢಸಂಕಲ್ಪವನ್ನು ನೀವು ಹೊಂದಿದ್ದೀರಿ. ಅಲ್ಲದೆ ನೀವು ನಿಮ್ಮ ಕಾರ್ಯಗಳು ಮತ್ತು ನಿರ್ಧಾರಗಳಲ್ಲಿ  ದೃಢ ಮತ್ತು ಸ್ಥಿರವಾಗಿರುತ್ತೀರಿ. ವಿಶ್ವಾಸಾರ್ಹರು ಮತ್ತು ನಿಮ್ಮ ಜವಾಬ್ದಾರಿಗಳನ್ನು ಪೂರೈಸಲು ಬದ್ಧರಾಗಿರುವ ನೀವು ಇತರರ ಬಗ್ಗೆ ಬಲವಾದ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಹೊಂದಿರುವ ವ್ಯಕ್ತಿಗಳು. ಜೊತೆಗೆ ನೀವು ವಾಸ್ತವದಲ್ಲಿ ಪ್ರಾಯೋಗಿಕವಾಗಿ ಬದುಕಲು ಇಷ್ಟಪಡುವ ವ್ಯಕ್ತಿಗಳು. ನೀವು ಅಸಾಧಾರಣ ತಾಳ್ಮೆಯನ್ನು ಹೊಂದಿದ್ದೀರಿ, ಇದು ಸರಿಯಾದ ಅವಕಾಶಗಳಿಗಾಗಿ ಕಾಯಲು ಮತ್ತು ಚೆನ್ನಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ.

ಪ್ರಮುಖ ವ್ಯಕ್ತಿತ್ವ ಲಕ್ಷಣಗಳು: ದೃಢನಿಶ್ಚಯ, ಪ್ರಾಯೋಗಿಕ, ವಾಸ್ತವಿಕ, ದೃಢನಿಶ್ಚಯ, ಜವಾಬ್ದಾರಿಯ ಬಲವಾದ ಪ್ರಜ್ಞೆ, ತಾಳ್ಮೆ, ಹೊಂದಿಕೊಳ್ಳುವ ಗುಣ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!