AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಂ ಕಾಳಿನ ನೀರಿನ ಪ್ರಯೋಜನಗಳೇನು? ಯಾರು ಕುಡಿಯಬಾರದು? ವೈದ್ಯರು ತಿಳಿಸಿರುವ ಮಾಹಿತಿ

ಓಂ ಕಾಳಿನ ನೀರು ಜೀರ್ಣಕ್ರಿಯೆ ಸುಧಾರಿಸಲು ಮತ್ತು ಗ್ಯಾಸ್, ಹೊಟ್ಟೆ ಉಬ್ಬರದಂತಹ ಸಾಮಾನ್ಯ ಸಮಸ್ಯೆಗಳಲ್ಲಿ ಕೆಲವು ಮಂದಿಗೆ ನೆರವಾಗಬಹುದು. ಆದರೆ ಇದನ್ನು ಮಿತವಾಗಿ ಸೇವಿಸುವುದು ಮುಖ್ಯ. ಇದು ಆರೋಗ್ಯಕರ ಆಹಾರ ಪದ್ಧತಿ ಮತ್ತು ಉತ್ತಮ ಜೀವನಶೈಲಿಗೆ ಪರ್ಯಾಯವಲ್ಲ. ಯಾವುದೇ ದೀರ್ಘಕಾಲದ ಜೀರ್ಣ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಅತ್ಯುತ್ತಮ.

ಓಂ ಕಾಳಿನ ನೀರಿನ ಪ್ರಯೋಜನಗಳೇನು? ಯಾರು ಕುಡಿಯಬಾರದು? ವೈದ್ಯರು ತಿಳಿಸಿರುವ ಮಾಹಿತಿ
Ajwain Water: Health BenefitsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Aug 04, 2026 | 7:23 PM

Share

ಮುಖ್ಯಾಂಶಗಳು

  • ಓಂ ಕಾಳಿನ ನೀರು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು
  • ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಓಂ ಕಾಳಿನ ನೀರು ಕುಡಿದರೆ ಏನಾಗುತ್ತದೆ? ಆರೋಗ್ಯಕ್ಕೆ ಸಿಗುವ ಅದ್ಭುತ ಲಾಭಗಳು
  • ಯಾರು ಓಂ ಕಾಳಿನ ನೀರು ಕುಡಿಯುವಾಗ ಎಚ್ಚರಿಕೆ ವಹಿಸಬೇಕು?

ಇತ್ತೀಚಿನ ದಿನಗಳಲ್ಲಿ ಅಜೀರ್ಣ, ಹೊಟ್ಟೆ ಉಬ್ಬರ, ಗ್ಯಾಸ್, ಆಸಿಡಿಟಿ ಸಮಸ್ಯೆಗಳು ಅನೇಕ ಮಂದಿಯನ್ನು ಕಾಡುತ್ತಿವೆ. ಅನಿಯಮಿತ ಆಹಾರ ಪದ್ಧತಿ, ಹೊರಗಿನ ಆಹಾರ, ಕಡಿಮೆ ದೈಹಿಕ ಚಟುವಟಿಕೆ ಮತ್ತು ಒತ್ತಡದ ಜೀವನಶೈಲಿ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತಿವೆ. ಇಂತಹ ಸಂದರ್ಭಗಳಲ್ಲಿ ಅನೇಕರು ಮನೆಮದ್ದಿನತ್ತ ಮುಖ ಮಾಡುತ್ತಾರೆ. ಅವುಗಳಲ್ಲಿ ಓಂ ಕಾಳು (Carom Seeds) ಅಥವಾ ಅಜ್ವೈನ್‌ (Ajwain) ನೀರು ಹೆಚ್ಚು ಜನಪ್ರಿಯವಾಗಿದೆ. ಆಯುರ್ವೇದದಲ್ಲಿ ಓಂ ಜೀರ್ಣಕ್ರಿಯೆಗೆ ಸಹಾಯಕವೆಂದು ಪರಿಗಣಿಸಲಾಗಿದೆ. ವಿಶೇಷವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಓಂ ನೀರು ಸೇವಿಸಿದರೆ ಜೀರ್ಣಕ್ರಿಯೆ ಸುಧಾರಿಸಲು ನೆರವಾಗಬಹುದು ಎಂದು ಹೇಳಲಾಗುತ್ತದೆ. ಆದರೆ ಇದನ್ನು ಎಲ್ಲರೂ ಕುಡಿಯುವುದು ಸೂಕ್ತವಲ್ಲ. ಇದರ ಲಾಭಗಳು, ಸರಿಯಾದ ಬಳಕೆ ಹಾಗೂ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಓಂ ಕಾಳಿನ ನೀರು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು:

ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಗೆ ನೆರವು

ಓಂ ಕಾಳಿನಲ್ಲಿರುವ ಥೈಮಾಲ್ (Thymol) ಎಂಬ ಸಂಯುಕ್ತವು ಜೀರ್ಣರಸ ಮತ್ತು ಜೀರ್ಣಕ ಎನ್ಜೈಮ್‌ಗಳ ಉತ್ಪತ್ತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ಇದರಿಂದ ಆಹಾರ ಜೀರ್ಣವಾಗಲು ನೆರವಾಗಿ ಹೊಟ್ಟೆ ಉಬ್ಬರ, ಗ್ಯಾಸ್ ಹಾಗೂ ಆಸಿಡಿಟಿ ಸಮಸ್ಯೆ ಕಡಿಮೆಯಾಗಬಹುದು.

ತೂಕ ನಿಯಂತ್ರಣಕ್ಕೆ ಸಹಕಾರಿ

ಬೆಳಿಗ್ಗೆ ಉಗುರುಬೆಚ್ಚಗಿನ ಓಂ ನೀರು ಕುಡಿಯುವುದರಿಂದ ದೇಹದ ಮೆಟಾಬಾಲಿಸಂ ಉತ್ತಮವಾಗಲು ಸಹಾಯವಾಗಬಹುದು. ಆದರೆ ಕೇವಲ ಓಂ ನೀರು ಕುಡಿದರೆ ಮಾತ್ರ ತೂಕ ಕಡಿಮೆಯಾಗುವುದಿಲ್ಲ. ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮವೂ ಅಗತ್ಯ.

ಶ್ವಾಸಕೋಶದ ಆರೋಗ್ಯಕ್ಕೆ ನೆರವು

ಓಂ ಕಾಳಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಕಡಿಮೆ ಮಾಡುವ ಗುಣಗಳಿವೆ. ಗಂಟಲು ನೋವು, ಕೆಮ್ಮು ಮುಂತಾದ ಸಂದರ್ಭಗಳಲ್ಲಿ ಇದು ಕೆಲವು ಮಟ್ಟಿಗೆ ಆರಾಮ ನೀಡಬಹುದು.

ಋತುಚಕ್ರದ ನೋವು ಕಡಿಮೆ ಮಾಡಲು ಸಹಕಾರಿ

ಕೆಲವು ಮಹಿಳೆಯರಲ್ಲಿ ಮಾಸಿಕ ಧರ್ಮದ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವು ಮತ್ತು ಸೆಳೆತವನ್ನು ಕಡಿಮೆ ಮಾಡಲು ಉಗುರು ಬೆಚ್ಚಗಿನ ಓಂ ನೀರು ಸಹಾಯಕವಾಗಬಹುದು.

ಹೊಟ್ಟೆ ಭಾರವಾದ ಅನುಭವ ಕಡಿಮೆ ಮಾಡಬಹುದು

ಭಾರವಾದ ಊಟದ ನಂತರ ಹೊಟ್ಟೆ ತುಂಬಿದ ಅನುಭವ ಅಥವಾ ಜೀರ್ಣಕ್ರಿಯೆ ನಿಧಾನವಾಗಿರುವ ಸಂದರ್ಭಗಳಲ್ಲಿ ಓಂ ನೀರು ಕೆಲವರಿಗೆ ಆರಾಮ ನೀಡಬಹುದು.

ಓಂ ಕಾಳಿನ ನೀರನ್ನು ತಯಾರಿಸುವ ಸರಿಯಾದ ವಿಧಾನ:

ಒಂದು ಗ್ಲಾಸ್ ನೀರಿಗೆ ಒಂದು ಚಮಚ ಓಮ ಹಾಕಿ ರಾತ್ರಿ ನೆನೆಸಿಡಿ. ಬೆಳಿಗ್ಗೆ ಅದನ್ನು ಕುದಿಸಿ, ಶೋಧಿಸಿ ಉಗುರುಬೆಚ್ಚಗಿರುವಾಗ ಕುಡಿಯಿರಿ. ಬೇಕಿದ್ದರೆ ಸ್ವಲ್ಪ ಜೇನುತುಪ್ಪ ಅಥವಾ ನಿಂಬೆರಸ ಸೇರಿಸಬಹುದು.

ಯಾರು ಓಂ ಕಾಳಿನ ನೀರು ಕುಡಿಯುವಾಗ ಎಚ್ಚರಿಕೆ ವಹಿಸಬೇಕು?

  • ಹೊಟ್ಟೆಯಲ್ಲಿ ಅಲ್ಸರ್ ಇರುವವರು
  • ತೀವ್ರ ಆಸಿಡ್ ರಿಫ್ಲಕ್ಸ್ (GERD) ಇರುವವರು
  • ಗರ್ಭಿಣಿಯರು (ವೈದ್ಯರ ಸಲಹೆಯ ನಂತರ ಮಾತ್ರ)
  • ದೇಹದಲ್ಲಿ ಹೆಚ್ಚು ಉಷ್ಣತೆ ಇರುವವರು
  • ನಿಯಮಿತವಾಗಿ ಔಷಧ ಸೇವಿಸುವವರು

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆಶಿ ಚರ್ಚೆ
ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆಶಿ ಚರ್ಚೆ
ರಾಜೀನಾಮೆ ಬೆದರಿಕೆ ಹಾಕಿದವರ ಮಾಹಿತಿ ಕೋರಿದ ಕಾಂಗ್ರೆಸ್ ಹೈಕಮಾಂಡ್
ರಾಜೀನಾಮೆ ಬೆದರಿಕೆ ಹಾಕಿದವರ ಮಾಹಿತಿ ಕೋರಿದ ಕಾಂಗ್ರೆಸ್ ಹೈಕಮಾಂಡ್
ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶನೇ ಇಲ್ಲದೇ ಇರೋದು ಸರಿಯಲ್ಲ ಎಂದ KN ರಾಜಣ್ಣ
ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶನೇ ಇಲ್ಲದೇ ಇರೋದು ಸರಿಯಲ್ಲ ಎಂದ KN ರಾಜಣ್ಣ