AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chronic Back Pain: ನಿರಂತರ ಬೆನ್ನು ನೋವು ಈ ಗಂಭೀರ ಕಾಯಿಲೆಯ ಆರಂಭಿಕ ಲಕ್ಷಣ!

ನಿರಂತರ ಬೆನ್ನು ನೋವು ಕೇವಲ ಆಯಾಸದಿಂದ ಬರುವಂತದ್ದಲ್ಲ ಬದಲಾಗಿ ಗಂಭೀರ ಕಾಯಿಲೆಗಳ ಲಕ್ಷಣವೂ ಆಗಿರಬಹುದು. ಹಾಗಾಗಿ ಪದೇ ಪದೇ ಬೆನ್ನು ನೋವು ಕಂಡುಬಂದಾಗ ನಿರ್ಲಕ್ಷ್ಯ ಮಾಡಬೇಡಿ. ಕೆಲವೊಮ್ಮೆ ಬೆನ್ನು ನೋವಿನ ಜೊತೆಗೆ ಇತರ ಕೆಲವು ಲಕ್ಷಣ ಕಂಡುಬರುತ್ತದೆ. ಇದು ಅನಾರೋಗ್ಯದ ಆರಂಭಿಕ ಸೂಚನೆಯೂ ಆಗಿರಬಹುದು. ಹಾಗಾಗಿ ಈ ರೀತಿಯಾದಾಗ ಮೊದಲು ವೈದ್ಯರನ್ನು ಸಂಪರ್ಕ ಮಾಡಿ ಜೊತೆಗೆ ನಿರಂತರವಾಗಿ ಬೆನ್ನು ನೋವು ಬರುವುದಕ್ಕೆ ಕಾರಣವೇನು, ಯಾಕೆ ಈ ರೀತಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

Chronic Back Pain: ನಿರಂತರ ಬೆನ್ನು ನೋವು ಈ ಗಂಭೀರ ಕಾಯಿಲೆಯ ಆರಂಭಿಕ ಲಕ್ಷಣ!
Chronic Back Pain
ಪ್ರೀತಿ ಭಟ್​, ಗುಣವಂತೆ
|

Updated on: Oct 17, 2025 | 4:41 PM

Share

ಜೀವನಶೈಲಿಯಲ್ಲಿ ನಾವು ಮಾಡಿಕೊಂಡ ಬದಲಾವಣೆಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಆಹಾರ ಪದ್ದತಿ ಸರಿಯಾಗಿ ಇಲ್ಲದಿರುವುದು ಹೀಗೆ ನಾನಾ ರೀತಿಯ ಕಾರಣಗಳು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಕಂಡು ಬರುವ ನಿರಂತರ ಬೆನ್ನು ನೋವು (Back Pain) ಕೂಡ ಇವುಗಳಲ್ಲಿ ಒಂದು. ಆದರೆ ಇದರ ಬಗ್ಗೆ ಕಾಳಜಿ ವಹಿಸಿ ಅದರಿಂದ ಮುಕ್ತಿ ಪಡೆಯುವವರಿಗಿಂತ ನಿರ್ಲಕ್ಷ್ಯ ಮಾಡುವವರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಏಕೆಂದರೆ ಕೆಲವರು ಬೆನ್ನು ನೋವು ಆಯಾಸ ಅಥವಾ ಸ್ನಾಯು ದೌರ್ಬಲ್ಯದ ಸಂಕೇತವೆಂದು ಅಂದುಕೊಳ್ಳುತ್ತಾರೆ. ಆದರೆ ಇದು ಗಂಭೀರ ಅನಾರೋಗ್ಯದ ಆರಂಭಿಕ ಸೂಚನೆಯೂ ಆಗಿರಬಹುದು, ಹಾಗಾಗಿ ಅದನ್ನು ನಿರ್ಲಕ್ಷಿಸುವುದು ದೇಹಕ್ಕೆ ಹಾನಿಯುಂಟುಮಾಡಬಹುದು. ಹಾಗಾದರೆ ನಿರಂತರವಾಗಿ ಬೆನ್ನು ನೋವು ಬರುವುದಕ್ಕೆ ಕಾರಣವೇನು, ಯಾಕೆ ಈ ರೀತಿಯಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

  • ಸಾಮಾನ್ಯವಾಗಿ ಬೆನ್ನು ನೋವು ಬೆನ್ನುಮೂಳೆ ಅಥವಾ ಸುತ್ತಮುತ್ತಲಿನ ಸ್ನಾಯುಗಳಲ್ಲಿನ ಸಮಸ್ಯೆಗಳಿಂದ ಉಂಟಾಗುತ್ತದೆ, ಉದಾಹರಣೆಗೆ ಒತ್ತಡ, ಡಿಸ್ಕ್ ಜಾರಿರುವುದು ಅಥವಾ ಬೆನ್ನುಮೂಳೆಯ ಕ್ಷೀಣತೆಯೂ ಆಗಿರಬಹುದು. ಈ ರೀತಿಯಾದಾಗ ನಡೆಯಲು ಅಥವಾ ಕುಳಿತುಕೊಳ್ಳಲು ಕಷ್ಟವಾಗುತ್ತದೆ.
  • ಇನ್ನು ಅಸ್ಥಿಸಂಧಿವಾತ ಅಥವಾ ಸಂಧಿವಾತದಂತಹ ದೀರ್ಘಕಾಲದ ಕೀಲು ಸಂಬಂಧಿ ಕಾಯಿಲೆಗಳು ಕೂಡ ಬೆನ್ನು ನೋವಿಗೆ ಕಾರಣವಾಗಬಹುದು. ಈ ನೋವು ಹೆಚ್ಚಿನ ಬಾರಿ ಬೆಳಿಗ್ಗಿನ ಸಮಯದಲ್ಲಿ ಅಥವಾ ದೀರ್ಘಕಾಲ ಕುಳಿತುಕೊಂಡಿದ್ದಾಗ ಕಂಡುಬರುತ್ತದೆ.
  • ಮೂತ್ರಪಿಂಡದಲ್ಲಿ ಕಲ್ಲುಗಳು ಕಂಡುಬರುವುದು ಅಥವಾ ಮೂತ್ರಪಿಂಡದ ಸಮಸ್ಯೆಗಳು, ಸೋಂಕು ಸಹ ಬೆನ್ನಿನ ಕೆಳಭಾಗದಲ್ಲಿ ನಿರಂತರ ನೋವು ಕಂಡುಬರುವುದಕ್ಕೆ ಕಾರಣವಾಗಬಹುದು. ಇದರೊಂದಿಗೆ ಸುಡುವಿಕೆ ಅಥವಾ ಅಸಹಜ ಮೂತ್ರ ವಿಸರ್ಜನೆ ಮತ್ತು ಜ್ವರದಂತಹ ಲಕ್ಷಣಗಳೂ ಇರಬಹುದು.
  • ಕೆಲವೊಮ್ಮೆ, ಮೂತ್ರಪಿಂಡದ ಸೋಂಕು ಅಥವಾ ಆಸ್ಟಿಯೋಮೈಲಿಟಿಸ್‌ನಿಂದಲೂ ಬೆನ್ನು ನೋವು ಬರಬಹುದು. ಮಾತ್ರವಲ್ಲ ಕೆಲವರಲ್ಲಿ ತೀವ್ರವಾದ ನೋವು, ಜ್ವರ ಮತ್ತು ದೌರ್ಬಲ್ಯ ಕಂಡುಬರಬಹುದು.
  • ಬೆನ್ನು ನೋವು ಮೂತ್ರಪಿಂಡದ ಕ್ಯಾನ್ಸರ್, ಶ್ರೋಣಿಯ ಸೋಂಕು ಅಥವಾ ಆಂತರಿಕ ಅಂಗಗಳ ಸಮಸ್ಯೆಗಳ ಸಂಕೇತವೂ ಆಗಿರಬಹುದು. ತೂಕ ನಷ್ಟ, ಜ್ವರ ಅಥವಾ ಆಯಾಸದ ಜೊತೆಗೆ ನೋವು ನಿರಂತರವಾಗಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ