Kitchen Tips: ಅಡುಗೆ ಮನೆಯಲ್ಲಿ ಜಿರಳೆ ಕಾಟವೇ, ಈ ಪದಾರ್ಥಗಳನ್ನು ಬಳಸಿದರೆ ಪರಿಹಾರ ಖಂಡಿತ!
ಬಹುತೇಕರ ಮನೆಯಲ್ಲಿ ಈ ಜಿರಳೆಗಳ ಕಾಟ ಇದ್ದೆ ಇರುತ್ತದೆ. ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟುಕೊಂಡರೂ ಮೂಲೆ ಮೂಲೆಗಳ ಈ ಜಿರಳೆಗಳು ತನ್ನ ಸಂತಾನವನ್ನು ಮುಂದುವರೆಸಿರುತ್ತದೆ. ಹೀಗಾದಾಗ ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ಔಷಧಗಳಿಂದ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಮನೆಯಲ್ಲಿ ನೈಸರ್ಗಿಕ ಪದಾರ್ಥಗಳಿಂದ ಈ ಜಿರಳೆಗಳ ವಂಶವನ್ನೇ ಸಂಪೂರ್ಣವಾಗಿ ನಾಶ ಮಾಡಬಹುದು.
ಸಾಂದರ್ಭಿಕ ಚಿತ್ರ
Follow us on
ಮನೆಯನ್ನು ಎಷ್ಟು ಸ್ವಚ್ಛವಾಗಿಟ್ಟುಕೊಳ್ಳುವಿರೋ ಅವಾಗ ಈ ಕ್ರಿಮಿ ಕೀಟಗಳ ಕಾಟಕಡಿಮೆಯೆನ್ನಬಹುದು. ಕೆಲವೊಮ್ಮೆ ಜಿರಳೆಗಳು ಅಡುಗೆ ಮನೆಯಲ್ಲಿ ಪ್ರತ್ಯಕ್ಷವಾಗಿ ಬಿಡುತ್ತವೆ. ಮನೆಗೆ ಯಾರದರೂ ಗೆಸ್ಟ್ ಬಂದ ಸಂದರ್ಭದಲ್ಲಿ ಈ ಜಿರಳೆಗಳು ಕಾಣಿಸಿಕೊಂಡರೆ ಮುಜುಗರಕ್ಕೀಡಾಗುವುದೇ ಹೆಚ್ಚು. ಆದರೆ ಅಡುಗೆ ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಈ ಜಿರಳೆಗಳ ಕಾಟದಿಂದ ಮುಕ್ತಿ ಹೊಂದಬಹುದು.
ಪುಲಾವ್ ಎಲೆಗಳನ್ನು ಪುಡಿ ಮಾಡಿ ನೀರಿಗೆ ಬೆರೆಸಿ ಕುದಿಸಿ, ತಣ್ಣಗಾದ ಬಳಿಕ ಮನೆಯ ಮೂಲೆಗಳಲ್ಲಿ ಸಿಂಪಡಿಸಿದರೆ ಜಿರಳೆಗಳು ಅಲ್ಲಿಂದ ಓಡಿಹೋಗುತ್ತವೆ.
ಸ್ಪ್ರೇ ಬಾಟಲಿಯಲ್ಲಿ ಸಮ ಪ್ರಮಾಣದಲ್ಲಿ ನಿಂಬೆ ರಸ ಮತ್ತು ನೀರನ್ನು ಮಿಶ್ರಣ ಮಾಡಿ ಅಡುಗೆಮನೆ ಹಾಗೂ ಮನೆಯ ಮೂಲೆಗಳಲ್ಲಿ ಸ್ಪ್ರೇ ಮಾಡಿದರೆ ಜಿರಳೆಗಳು ಸಾಯುತ್ತವೆ.
ಅಡುಗೆ ಸೋಡಾ ಮತ್ತು ಸಕ್ಕರೆ ಮಿಶ್ರಣವನ್ನು ಬಾಟಲಿಗೆ ತುಂಬಿಸಿ ಅಡುಗೆಮನೆಯ ವಿವಿಧ ಭಾಗಗಳಲ್ಲಿ ಸಿಂಪಡಿಸಿದರೆ ಜಿರಳೆಗಳು ಇಲ್ಲವಾಗುತ್ತದೆ.
ಜಿರಳೆಗಳು ಇರುವ ಜಾಗಕ್ಕೆ ಬೋರಿಕ್ ಆಸಿಡ್ ಪುಡಿಯನ್ನು ಸಿಂಪಡಿಸಿದರೆ ಅವುಗಳ ವಂಶವೇ ನಾಶವಾಗುತ್ತದೆ.
ಬೇವಿನ ಎಣ್ಣೆಯನ್ನು ನೀರಿಗೆ ಬೆರೆಸಿ, ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಅಡುಗೆಮನೆಯ ಮೂಲೆಯಲ್ಲಿ ಸಿಂಪಡಿಸಿದರೆ ಜಿರಳೆಗಳು ಸಾಯುತ್ತವೆ.
ಲವಂಗದ ಪುಡಿಯನ್ನು ಜಿರಳೆ ಇರುವ ಸ್ಥಳಗಳಿಗೆ ಹಚ್ಚಿದರೆ ಜಿರಳೆಗಳು ಇಲ್ಲವಾಗುತ್ತದೆ.