AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beauty Tips: ಮುಖದ ಅಂದ ಹೆಚ್ಚಿಸಲು ಅರಶಿನ ಬಳಸ್ತೀರಾ? ಹಾಗಾದ್ರೆ ಈ ತಪ್ಪು ಮಾಡಲೇ ಬೇಡಿ

ತಾವು ಸುಂದರವಾಗಿ ಕಾಣಬೇಕೆನ್ನುವುದು ಎಲ್ಲರ ಆಸೆ ಕೂಡ. ಈ ಮಹಿಳೆಯರಂತೂ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ನಾನಾ ರೀತಿಯ ಪ್ರಾಡಕ್ಟ್ ಗಳನ್ನು ಬಳಸಿ ನಾನಾ ರೀತಿಯ ಪ್ರಯೋಗಗಳಿಗೂ ಮುಂದಾಗುತ್ತಾರೆ. ಕೆಲವರು ಅರಶಿನವನ್ನು ಫೇಸ್ ಪ್ಯಾಕ್ ಆಗಿ ಬಳಸುವವರು ಹೆಚ್ಚು. ಈ ಫೇಸ್ ಪ್ಯಾಕ್ ಬಳಸುವಾಗ ಈ ಕೆಲವು ವಿಚಾರಗಳು ತಲೆಯಲ್ಲಿದ್ದರೆ ಒಳ್ಳೆಯದು.

Beauty Tips: ಮುಖದ ಅಂದ ಹೆಚ್ಚಿಸಲು ಅರಶಿನ ಬಳಸ್ತೀರಾ? ಹಾಗಾದ್ರೆ ಈ ತಪ್ಪು ಮಾಡಲೇ ಬೇಡಿ
Turmeric Face pack
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ|

Updated on: Apr 11, 2024 | 5:48 PM

Share

ಇಂದಿನ ಒತ್ತಡದ ಜೀವನಶೈಲಿ, ಆಹಾರ ಪದ್ಧತಿ ಸೇರಿದಂತೆ ಹೀಗೆ ನಾನಾ ಕಾರಣದಿಂದಾಗಿ ಸಹಜವಾಗಿಯೇ ತ್ವಚೆಯ ಸೌಂದರ್ಯವು ಕಡಿಮೆಯಾಗುತ್ತಿದೆ. ಜಾಹಿರಾತಿನಲ್ಲಿ ತೋರಿಸುವ ಸೌಂದರ್ಯವರ್ಧಕಗಳನ್ನು ಖರೀದಿಸಿ ಸೌಂದರ್ಯವನ್ನು ಕಾಪಾಡುವವರು ಹೆಚ್ಚಾಗಿದ್ದಾರೆ. ಇನ್ನು ಕೆಲವರು ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಕೆಲವರು ಮುಖಕ್ಕೆ ಅರಿಶಿನವನ್ನು ಹಚ್ಚುತ್ತಾರೆ. ಅರಶಿನವು ಸೋಂಕು ನಿವಾರಕ ಗುಣವನ್ನು ಹೊಂದಿದ್ದು, ಚರ್ಮದ ಸಮಸ್ಯೆಗಳು ಬರದಂತೆ ನೋಡಿಕೊಳ್ಳುವುದರ ಜೊತೆಗೆ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

  1. ಮುಖಕ್ಕೆ ಅರಿಶಿನವನ್ನು ಹಚ್ಚಿದ ನಂತರ ಬಿಸಿಲಿಗೆ ಹೋಗಬೇಡಿ. ಇದರಿಂದ ಚರ್ಮ ಕಪ್ಪಾಗುತ್ತದೆ.
  2. ಬೇರೆ ಪದಾರ್ಥಗಳ ಜೊತೆಗೆ ಬೆರೆಸಿ ಮುಖಕ್ಕೆ ಹಚ್ಚುವುದು ಒಳ್ಳೆಯದಲ್ಲ. ಇದು ಚರ್ಮದ ಮೇಲೆ ಅಡ್ಡಪರಿಣಾಮಗಳನ್ನು ಬೀರುವ ಸಾಧ್ಯತೆಯು ಹೆಚ್ಚಿರುತ್ತದೆ.
  3. ಮುಖಕ್ಕೆ ಅರಿಶಿನವನ್ನು ಹಚ್ಚಿದ ಬಳಿಕ ಮುಖವನ್ನು ಸ್ವಚ್ಛವಾಗಿ ತೊಳೆಯುವುದನ್ನು ಮರೆಯದಿರಿ. ಮುಖವನ್ನು ಸ್ವಚ್ಛವಾಗಿ ತೊಳೆಯದಿದ್ದರೆ ತುರಿಕೆ ಹಾಗೂ ಚರ್ಮದಲ್ಲಿ ಕಿರಿಕಿರಿಯು ಉಂಟಾಗುತ್ತದೆ.
  4. ಅರಶಿನ ಫೇಸ್ ಪ್ಯಾಕ್ ಹೆಚ್ಚು ಸಮಯ ಇಡುವುದರಿಂದ, ಮುಖವು ಹಳದಿ ಕಲೆಗಳು ಉಳಿಯುವುದಲ್ಲದೆ, ಮೊಡವೆಗಳ ಸಮಸ್ಯೆಗಳು ಬರುತ್ತದೆ.
  5. ಅರಶಿನವನ್ನು ಮುಖಕ್ಕೆ ಹಾಕಿ ತೊಳೆಯುವಾಗ ಫೇಸ್ ವಾಶ್ ಬಳಸುವುದು ಒಳ್ಳೆಯದಲ್ಲ. ಈ ಫೇಸ್ ವಾಶ್ ಅರಶಿನದ ಗುಣವನ್ನು ಕಡಿಮೆಗೊಳಿಸಿ ತ್ವಚೆಯಲ್ಲಿ ಈ ಅರಶಿನದ ಸತ್ವವನ್ನು ಹೋಗಿಸುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು