Updated on: Mar 20, 2024 | 4:11 PM
ಹೋಳಿ ಹಬ್ಬವನ್ನು ಬಣ್ಣಗಳ ಹಬ್ಬ ಎಂದು ಕರೆಯಲಾಗುತ್ತದೆ. ಹೋಳಿ ಆಡುವ ಉತ್ಸಾಹ ಬಹುತೇಕ ಜನರಲ್ಲಿ ಕಂಡುಬರುತ್ತದೆ. ನೀವು ಹೋಳಿ ಆಚರಿಸಲು ತಯಾರಿ ನಡೆಸುತ್ತಿದ್ದರೆ, ಈ ಸಂದರ್ಭದಲ್ಲಿ ನೀವು ಕೆಲವು ಪ್ರಮುಖ ವಿಷಯಗಳನ್ನು ಪಾಲಿಸುವುದು ಮುಖ್ಯವಾಗುತ್ತದೆ.
ಬಣ್ಣಗಳನ್ನು ಪರಸ್ಪರ ಎರಚುವ ಮೂಲಕ ಹಬ್ಬವನ್ನು ಆಚರಿಸುವ ಮೊದಲು ಚರ್ಮದ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.ಅದರಲ್ಲೂ ಈ ಕೆಳಗೆ ವಿವರಿಸಿರುವ ಚರ್ಮದ ಸಮಸ್ಯೆಯಿಂದ ಬಳಲುತ್ತಿರುವವರ ಜೊತೆ ಹೋಳಿ ಆಡಲೇಬಾರದು.
ಸರ್ಪಸುತ್ತು ಸಮಸ್ಯೆ: ಸರ್ಪಸುತ್ತು ಹರ್ಪಿಸ್ ಜೋಸ್ಟರ್ ಎಂದು ಕರೆಯಲ್ಪಡುತ್ತದೆ, ತ್ವಚೆ ಮೇಲೆ ಕೆಂಪನೆ ಚಿಕ್ಕಚಿಕ್ಕ ನೀರ್ಗುಳ್ಳೆಗಳು ಪಟ್ಟೆಯಾಕಾರದಲ್ಲಿ ದೇಹದ ಒಂದು ಪಾರ್ಶ್ವದಲ್ಲಿ ಕಂಡುಬರುತ್ತವೆ. ಆದ್ದರಿಂದ ಅವರೊಂದಿಗೆ ಹೋಳಿ ಆಡುವುದರಿಂದ ನಿಮಗೂ ಸಮಸ್ಯೆ ಹರಡಬಹುದು.
ಸೋರಿಯಾಸಿಸ್ : ಸೋರಿಯಾಸಿಸ್ ಇರುವವರು ತುರಿಕೆ, ತ್ವಚೆಯ ಚರ್ಮ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬಹುದು ಮತ್ತು ಹೋಳಿಯ ಬಣ್ಣವು ಸಮಸ್ಯೆಯನ್ನು ಹೆಚ್ಚಿಸುತ್ತದೆ.ಅವರ ಜೊತೆ ಹೋಳಿ ಆಡುವುದರಿಂದ ಸೋಂಕು ಕೂಡ ಉಂಟಾಗುತ್ತದೆ.
ಫಂಗಲ್ ಇನ್ ಫೆಕ್ಷನ್: ಒಬ್ಬ ವ್ಯಕ್ತಿಯು ಚರ್ಮದ ಮೇಲೆ ಶಿಲೀಂಧ್ರಗಳ ಸೋಂಕಿನಿಂದ ಬಳಲುತ್ತಿದ್ದರೆ, ಅವರೊಂದಿಗೆ ಹೋಳಿ ಆಡುವುದನ್ನು ತಪ್ಪಿಸಬೇಕು, ಏಕೆಂದರೆ ಬಣ್ಣಗಳು ಶಿಲೀಂಧ್ರಗಳ ಸೋಂಕನ್ನು ಉಲ್ಬಣ ಗೊಳಿಸಬಹುದು ಮತ್ತು ನಿಮಗೂ ಹರಡಬಹುದು.
ಎಸ್ಜಿಮಾ: ಒಬ್ಬ ವ್ಯಕ್ತಿಯು ಎಸ್ಜಿಮಾದಿಂದ ಬಳಲುತ್ತಿದ್ದರೆ ಹೋಳಿ ಬಣ್ಣಗಳಿಂದ ದೂರವಿರಲು ಹೇಳಿ. ಬಣ್ಣದಲ್ಲಿ ಬಳಸುವ ರಾಸಾಯನಿಕ ಅಂಶಗಳು ಚರ್ಮದ ಸಮಸ್ಯೆಯನ್ನು ಉಲ್ಬಣಗೊಳ್ಳಿಸಬಹುದು.