ಕಾಲ ಬದಲಾದಂತೆ ಜೀವನಶೈಲಿಯೂ ಬದಲಾಗಿದೆ. ಒತ್ತಡ, ಆತಂಕ ದೈನಂದಿನ ಜೀವನದ ಭಾಗವಾಗಿದೆ. ಈ ರೀತಿಯ ಜೀವನವನ್ನು ಸಮತೋಲದಲ್ಲಿಡಲು, ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರಲು ಉತ್ತಮ ವಿಧಾನ ಎಂದರೆ ಅದು ಧ್ಯಾನ . ಋಷಿ ಮುನಿಗಳ ಕಾಲದಿಂದಲೂ ಧ್ಯಾನ ಉತ್ಕೃಷ್ಟ ಸ್ಥಾನವನ್ನು ಪಡೆದುಕೊಂಡು ಬಂದಿದೆ. ಮಾನಸಿಕ (Meditation) ನೆಮ್ಮದಿ, ಆರೋಗ್ಯ ಎರಡನ್ನೂ ಧ್ಯಾನದಿಂದ ಪಡೆಯಲು ಸಾಧ್ಯ. ಆಧ್ಯಾತ್ಮದಲ್ಲಿಯೂ ಧ್ಯಾನಕ್ಕೆ ಮಹತ್ವದ ಸ್ಥಾನವಿದೆ. ಧ್ಯಾನದ ಬಗ್ಗೆ ದಲಾಯಿಲಾಮ (Dalai Lama) “ನೀವು ಅಭ್ಯಾಸ ಮಾಡುವ ಯಾವುದೇ ರೀತಿಯ ಧ್ಯಾನದ ಅತ್ಯಂತ ಪ್ರಮುಖ ಅಂಶವೆಂದರೆ ನಿರಂತರವಾಗಿ ಸಾವಧಾನತೆಯನ್ನು ಅನ್ವಯಿಸುವುದು ಮತ್ತು ನಿರಂತರ ಪ್ರಯತ್ನ ಮಾಡುವುದು. ಕಡಿಮೆ ಅವಧಿಯಲ್ಲಿ ಧ್ಯಾನದಿಂದ ಫಲಿತಾಂಶಗಳನ್ನು ನಿರೀಕ್ಷಿಸುವುದು ಅವಾಸ್ತವಿಕವಾಗಿದೆ. ಬೇಕಾಗಿರುವುದು ನಿರಂತರ, ನಿರಂತರ ಪ್ರಯತ್ನ.” ಎಂದಿದ್ದಾರೆ.
ಧ್ಯಾನದ ಇತಿಹಾಸ:
ಧ್ಯಾನದ ಪರಿಕಲ್ಪನೆಯನ್ನು ಭಾರತದಲ್ಲಿ ಕ್ರಿ.ಪೂ 1,500 ಎಂದು ಕಂಡುಹಿಡಿಯಲಾಗಿದೆ ಎಂದು ವರದಿಯೊಂದು ಹೇಳುತ್ತದೆ. ಆದರೆ ಅದಕ್ಕೆ ಸ್ಪಷ್ಟ ಪುರಾವೆಗಳಿಲ್ಲ. ಜಗತ್ತಿನಾದ್ಯಂತ ಗೌತಮ ಬುದ್ಧ (ಭಾರತ), ಲಾವೊ-ತ್ಝೆ (ಚೀನಾ) ಮತ್ತು ದೋಶೋ (ಜಪಾನ್) ಈ ಮೂರು ವ್ಯಕ್ತಿಗಳು ಧ್ಯಾನದ ಮಹತ್ವವನ್ನು ವಿಸ್ತರಿಸಿದ್ದಾರೆ.
ಧ್ಯಾನದ ವಿಧಗಳು:
ಧ್ಯಾನದಲ್ಲಿ ಹಲವು ವಿಧಗಳಿವೆ. ಅವುಗಳೆಂದರೆ ಮೈಂಡ್‌ಫುಲ್‌ನೆಸ್ ಧ್ಯಾನ (ಮನಸ್ಸಿನ ಧ್ಯಾನ ಎಂದೂ ಕರೆಯಲಾಗುತ್ತದೆ), ಆಧ್ಯಾತ್ಮಿಕ ಧ್ಯಾನ, ಕೇಂದ್ರೀಕೃತ ಧ್ಯಾನ, ಚಲನೆಯ ಧ್ಯಾನ, ಮಂತ್ರ ಧ್ಯಾನ, ಅತೀಂದ್ರಿಯ ಧ್ಯಾನ, ಪ್ರಗತಿ ಶೀಲ ವಿಶ್ರಾಂತಿ, ಪ್ರೀತಿ-ದಯೆ ಧ್ಯಾನ ಮತ್ತು ದೃಶ್ಯೀಕರಣ ಧ್ಯಾನ ಎನ್ನುವ ವಿಧಗಳಿವೆ.
ಧ್ಯಾನದ ಅಗತ್ಯವೇನು?
ಧ್ಯಾನವು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುವುದರಿಂದ, ಅಭ್ಯಾಸದ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಧ್ಯಾನವು ಮನಸ್ಸನ್ನು ಸಮತೋಲನಲ್ಲಿಡುವುದರಿಂದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ. ಅಲ್ಲದೆ ಧ್ಯಾನದ ಅಭ್ಯಾಸದಿಂದ ಎಂತಹದ್ದೇ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಸಕಾರಾತ್ಮಕ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವ ದಾರಿಯನ್ನು ತೋರಿಸುತ್ತದೆ. ಸಿಟ್ಟನ್ನು ಕಡಿಮೆ ಮಾಡಿ ಇತರರ ಮೇಲಿನ ನಿಮ್ಮ ದೃಷ್ಟಿಕೋನವನ್ನು ಧನಾತ್ಮಕವಾಗಿರುವಂತೆ ಮಾಡುತ್ತದೆ.
ಧ್ಯಾನದಿಂದ ಏಕಾಗ್ರತೆ, ನೆನಪಿನ ಶಕ್ತಿ ಮುಖ್ಯವಾಗಿ ತಾಳ್ಮೆ ಹೆಚ್ಚುತ್ತದೆ. ಮಾನಸಿಕ ಸಮಸ್ಯೆಗಳನ್ನೂ ಪರಿಹರಿಸಲು ಧ್ಯಾನ ನೆರವಾಗುತ್ತದೆ. ನಿಮ್ಮ ಉಸಿರಾಟದ ಮೇಲಿನ ಗಮನದಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸುತ್ತದೆ.
ಧ್ಯಾನ ಮಾಡುವ ವಿಧಾನ ಹೇಗೆ? ಸಮಯವೇನು?
ಧ್ಯಾನಕ್ಕೆ ಇಂತಹದ್ದೇ ಸ್ಥಳಬೇಕೆಂದಿಲ್ಲ. ಯಾವುದೇ ಗದ್ದಲವಿಲ್ಲದೆ ಪ್ರಶಾಂತವಾಗಿರುವ ಸ್ಥಳವಾದರೆ ಉತ್ತಮ. ನೀವು ಎಲ್ಲಿ ಬೇಕಾದರೂ ಆರಾಮದಾಯಕ ಸ್ಥಾನದಲ್ಲಿ ಕುಳಿತುಕೊಳ್ಳಬಹುದು, ಕುರ್ಚಿ, ಕುಶನ್, ನೆಲದ ಮೇಲೆ ಅಥವಾ ನೀವು ನಿರಾಳವಾಗಿದ್ದೀರಿ ಎಂದು ಭಾವಿಸುವ ಸ್ಥಳದಲ್ಲಿ ನೇರ ಬೆನ್ನಿನ ಆಸನದಲ್ಲಿ ಕುಳಿತುಕೊಳ್ಳಿ. ನಿಮ್ಮ ಕುತ್ತಿಗೆಯನ್ನು ಸಡಿಲಗೊಳಿಸಿ, ತೊಡೆ ಅಥವಾ ಮೊಣಕಾಲುಗಳ ಮೇಲೆ ಕೈಗಳನ್ನು ಇರಿಸಿ.
ಇನ್ನು ಬಟ್ಟೆಯ ವಿಷಯಕ್ಕೆ ಬಂದಾಗ, ನಿಮಗೆ ಆರಾಮದಾಯಕ ಎನಿಸುವ ಬಟ್ಟೆಯನ್ನು ಧರಿಸಿಕೊಳ್ಳಿ. ಆದಷ್ಟು ಸಡಿಲ ಬಟ್ಟೆಗಳನ್ನು ಆಯ್ಕೆಮಾಡಿಕೊಳ್ಳಿ. ಆಗ ಉಸಿರಾಟಕ್ಕೆ ಅನುಕೂಲವಾಗುತ್ತದೆ.
ನೀವು ಸಮಯವನ್ನು ನಿಗದಿಪಡಿಸಲು ಬಯಸಿದರೆ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಹಾಗೆ ಮಾಡಬಹುದು. ಆರಂಭದ ದಿನಗಳಲ್ಲಿ 10 ನಿಮಿಷಗಳಿಂದ ಧ್ಯಾನವನ್ನು ಆರಂಭಿಸಬಹುದು. ಒಮ್ಮೆ ನೀವು ನಿಮ್ಮ ಮನಸ್ಸನ್ನು ಚೆನ್ನಾಗಿ ತರಬೇತಿಗೊಳಿಸಿದ ನಂತರ ಧ್ಯಾನದ ಅವಧಿಯನ್ನು 15 ಅಥವಾ 20 ನಿಮಿಷಗಳವರೆಗೆ ಕ್ರಮೇಣ ಹೆಚ್ಚಿಸಬಹುದು.
ಪರಿಪೂರ್ಣ ಧ್ಯಾನ ಮಾಡಲು ಈ ಟಿಪ್ಸ್ ಫಾಲೋ ಮಾಡಿ:
ಹುಚ್ಚು ಕುದುರೆಯಂತಹ ಮನಸ್ಸನ್ನು ನಿಗ್ರಹಿಸುವುದು ತುಸು ಕಷ್ಟದ ಕೆಲಸವೇ ಸರಿ. ಆಲೋಚನೆಗಳಿಂದ ವಿಚಲಿತರಾಗದೆ, ಹೊರಗಿನ ಶಬ್ದಗಳಿಂದ ಏಕಾಂತದ ಮನಸ್ಥಿಗೆ ತೊಂದರೆಯಾಗದಂತೆ ಮನಸ್ಸನ್ನು ತರಬೇತಿಗೊಳಿಸವುದು ಮುಖ್ಯ. ಈ ಅಭ್ಯಾಸ ಒಂದೇ ಸಲಕ್ಕೆ ಬರುವಂತದ್ದಲ್ಲ. ಸತತ ಅಭ್ಯಾಸದಿಂದ ಮಾತ್ರ ಧ್ಯಾನವನ್ನು ಸಿದ್ಧಿಸಿಕೊಳ್ಳಬಹುದು. ಅದಕ್ಕೆ ಈ ಸೂತ್ರಗಳನ್ನು ಅನುಸರಿಸಿ
ಇದನ್ನೂ ಓದಿ: