ನಿಮ್ಮ ಡಯೆಟ್​ ಪಟ್ಟಿಯಲ್ಲಿರಲಿ ಏಲಕ್ಕಿ: ಇಲ್ಲಿದೆ ಉಪಯುಕ್ತ ಮಾಹಿತಿ

| Updated By: Pavitra Bhat Jigalemane

Updated on: Mar 13, 2022 | 4:27 PM

ಏಲಕ್ಕಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಜೊತೆಗೆ ಹುಳುಕು ಹಲ್ಲು ವಸಡಿನ ಕಾಯಿಲೆ ಮತ್ತು ಕೆಟ್ಟ ಬ್ಯಾಕ್ಟೀರಿಯಗಳಿಂದ ಬಾಯಿಯನ್ನು ಮುಕ್ತಗೊಳಿಸಲು ಏಲಕ್ಕಿ ಸಹಾಯಕವಾಗಿದೆ.

ನಿಮ್ಮ ಡಯೆಟ್​ ಪಟ್ಟಿಯಲ್ಲಿರಲಿ ಏಲಕ್ಕಿ: ಇಲ್ಲಿದೆ ಉಪಯುಕ್ತ ಮಾಹಿತಿ
ಏಲಕ್ಕಿ (ಪ್ರಾತಿನಿಧಿಕ ಚಿತ್ರ)
Follow us on

ಭಾರತೀಯ ಆಹಾರ (Food) ಪದ್ಧತಿ ಕೇವಲ ರುಚಿಯನ್ನಷ್ಟೇ ಅಲ್ಲ ಆರೋಗ್ಯವನ್ನೂ ಕಾಪಾಡುತ್ತದೆ. ಅಡುಗೆಯಲ್ಲಿ ಬಳಸುವ ಪ್ರತಿಯೊಂದು ಮಸಾಲೆಯೂ ತನ್ನದೇ ಆದ ಔಷಧೀಯ ಗುಣಗಳನ್ನು ಹೊಂದಿದೆ. ಅಂತಹವುಗಳಲ್ಲಿ ಏಲಕ್ಕಿ (Cardamom)ಕೂಡ ಒಂದು. ತನ್ನದೇ ಆದ ವಿಶಿಷ್ಟ ಸುವಾಸನೆಯ ಮೂಲಕ ಸಿಹಿ ತಿಂಡಿಗಳಲ್ಲಿ ಹಾಗೂ ಮಸಾಲೆಯಲ್ಲಿಯೂ ಸಲ್ಲುವ ಏಲಕ್ಕಿ ಆರೋಗ್ಯವನ್ನೂ ವೃದ್ಧಿಸುತ್ತದೆ. ಸಾಮಾನ್ಯವಾಗಿ ಮಸಾಲೆ ಪದಾರ್ಥಗಳನ್ನು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ ಎನ್ನುವ ಮಾತಿದೆ. ಆದರೆ ಏಲಕ್ಕಿ ಹಾಗಲ್ಲ. ಇದು ಮಸಾಲೆಯಾಗಿದ್ದರೂ, ಇದು ಹಸಿವು ಮತ್ತು ಬಾಯಾರಿಕೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಪುರಾತನ ಕಾಲದಿಂದಲೂ ಆಯುರ್ವೇದದಲ್ಲಿ ಏಲಕ್ಕಿಯನ್ನು ಒಂದು ಔಷಧೀಯ ಪದಾರ್ಥವಾಗಿಯೇ ಬಳಸಲಾಗುತ್ತಿದೆ.

ಈ ಕುರಿತು ಆಯುರ್ವೇದ ತಜ್ಞೆ ದೀಕ್ಷಾ ಬಾವಸರ್​ ಮಾತನಾಡಿದ್ದಾರೆ. ಏಲಕ್ಕಿಯ ಗುಣಗಳ ವೈಶಿಷ್ಟ್ಯವನ್ನು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಯುರ್ವೇದದ ಪ್ರಕಾರ, ಏಲಕ್ಕಿಯು ತ್ರಿದೋಷಿಕ್ (ಎಲ್ಲಾ ಮೂರು ದೋಷಗಳನ್ನು ಸಮತೋಲನಗೊಳಿಸಲು ಒಳ್ಳೆಯದು), ಮತ್ತು ಅತ್ಯುತ್ತಮ ಜೀರ್ಣಕಾರಿ ಎಂದು ಪರಿಗಣಿಸಲಾಗಿದೆ, ವಿಶೇಷವಾಗಿ ಹೊಟ್ಟೆ ಉಬ್ಬುವುದು ಮತ್ತು ಕರುಳಿನ ಅನಿಲವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಶ್ವಾಸಕೋಶದಲ್ಲಿ ಉತ್ಪತ್ತಿಯಾಗುವ ಕಫವನ್ನು ಸಮತೋಲನಗೊಳಿಸಲು ಇದು ಅತ್ಯುತ್ತಮವಾಗಿದೆ. ವಾತವನ್ನು ಶಾಂತಗೊಳಿಸಲು ಸಹ ಇದು ಉಪಯುಕ್ತವಾಗಿದೆ. ಉಸಿರಾಟವನ್ನು ರಿಫ್ರೆಶ್ ಮಾಡಲು ಏಲಕ್ಕಿ ಬೀಜಗಳನ್ನು ಹೆಚ್ಚಾಗಿ ತಿನ್ನುತ್ತಾರೆ.

ಇದಲ್ಲದೆ ಏಲಕ್ಕಿಯಿಂದಾಗುವ ಉಪಯೋಗಗಳೇನು ಎನ್ನುವ ಮಾಹಿತಿ ಇಲ್ಲಿದೆ;

  1. ಏಲಕ್ಕಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಜೊತೆಗೆ ಹುಳುಕು ಹಲ್ಲು ವಸಡಿನ ಕಾಯಿಲೆ ಮತ್ತು ಕೆಟ್ಟ ಬ್ಯಾಕ್ಟೀರಿಯಗಳಿಂದ ಬಾಯಿಯನ್ನು ಮುಕ್ತಗೊಳಿಸಲು ಏಲಕ್ಕಿ ಸಹಾಯಕವಾಗಿದೆ. ಅನಾದಿ ಕಾಲದಿಂದಲೂ ಏಲಕ್ಕಿಯನ್ನು ಬಾಯಿಯ ವಾಸನೆಯನ್ನು ತಡಯಲು ಬಳಸಲಾಗುತ್ತದೆ.
  2.  

    ದೇಹದಲ್ಲಿನ ಕೊಬ್ಬಿನ ಅಂಶವನ್ನು ಲಕಡಿಮೆ ಮಾಡಲು ಏಲಕ್ಕಿಯ ಸೇವನೆ ಉತ್ತಮವಾಗಿದೆ. ಇದರೊಂದಿಗೆ ಏಲಕ್ಕಿಯಲ್ಲಿ ದೇಹದ ಯಕೃತ್ ಭಾಗದ ವಿಷಕಾರಿ ತ್ಯಾಜ್ಯಗಳನ್ನು ಹೊರ ಹಾಕುವ ಶಕ್ತಿ ಇದೆ. ಹೀಗಾಗಿ ಅಡುಗೆಯಲ್ಲಿ ಏಲಕ್ಕಿಯನ್ನು ಬಳಸುವುದು ಒಳ್ಳೆಯದು.

  3.  

    ಏಲಕ್ಕಿಯಲ್ಲಿರುವ ಫೈಟೋಕೆಮಿಕಲ್ ಅಂಶಗಳ ಕ್ಯಾನ್ಸರ್ ರೋಗದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ ವಾರಗಳ ಕಾಲ ಏಲಕ್ಕಿಯ ಸೇವನೆಯಿಂದ ಕ್ಯಾನ್ಸರ್ ಗೆಡ್ಡೆಯ ಗಾತ್ರ ಮತ್ತು ತೂಕ ತಗ್ಗುತ್ತದೆ ಎನ್ನಲಾಗುತ್ತದೆ. ಇದರೊಂದಿಗೆ ಕೆಲವೊಂದು ಚರ್ಮ ಸಂಬಂಧಿತ ಕ್ಯಾನ್ಸರ್ ಸಮಸ್ಯೆಗಳಿಗೂ ಕೂಡ ಏಲಕ್ಕಿಯಲ್ಲಿ ಪರಿಹಾರವಿದೆ.

  4.  

    ಏಲಕ್ಕಿಯ ಸೇವನೆಯಿಂದ ಹೃದಯದ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಇದರಲ್ಲಿನ ಆಂಟಿ – ಆಕ್ಸಿಡೆಂಟ್ ಅಂಶಗಳು ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ದೇಹದ ರಕ್ತದ ಒತ್ತಡವನ್ನು ನಿಯಂತ್ರಣ ಮಾಡುವ  ಏಲಕ್ಕಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:

ಮಹಿಳೆಯರಲ್ಲಿ ಕಾಣಿಸಿಕೊಳ್ಳುವ PCOD ಸಮಸ್ಯೆಯ ಸತ್ಯಾಸತ್ಯತೆಗಳೇನು? ಇಲ್ಲಿದೆ ಮಾಹಿತಿ