ಮಣಿಕಟ್ಟಿಗೆ ಪವಿತ್ರ ಕೆಂಪು ದಾರವನ್ನು ಧರಿಸವುದೇಕೆ? ಇಲ್ಲಿದೆ ಮಹತ್ವ

ಮಣಿಕಟ್ಟಿಗೆ ಪವಿತ್ರ ಕೆಂಪು ದಾರವನ್ನು ಧರಿಸವುದೇಕೆ? ಇಲ್ಲಿದೆ ಮಹತ್ವ
ಕೆಂಪು ದಾರ (ಪ್ರಾತಿನಿಧಿಕ ಚಿತ್ರ)

ಕಲವ ಎಂತಲೂ ಕರೆಯುವ ಈ ದಾರವನ್ನು ಕೆಂಪು ಮತ್ತು ಹಳದಿ ಬಣ್ಣದ ಕಾಟನ್​ ನೂಲಿನಲ್ಲಿ ತಯಾರಿಸಲಾಗುತ್ತದೆ. ಪೌರಾಣಿಕ ಕಾಲದಿಂದಲೂ ಈ ಮೌಲಿ ಅಥವಾ ಕಲವವನ್ನು ಹಿಂದೂ ಧರ್ಮದಲ್ಲಿ ಪೂಜೆಯ ವೇಳೆ ಧರಿಸುತ್ತಾರೆ.

TV9kannada Web Team

| Edited By: Pavitra Bhat Jigalemane

Mar 05, 2022 | 12:12 PM

ಭಾರತೀಯ ಸಂಸ್ಖತಿ, ಸಂಪ್ರದಾಯವೇ ಒಂದು ವಿಶಿಷ್ಟ ಆಚರಣೆಗಳ ಆಗರ. ಪ್ರತೀ ಧಾರ್ಮಿಕ ಆಚರಣೆಯ ಹಿಂದೆ ಒಂದು ವೈಜ್ಞಾನಿಕ ನೆಲೆಗಟ್ಟಿರುತ್ತದೆ. ಅದೇ ರೀತಿ ಮಾನವನ ಆರೋಗ್ಯವನ್ನು ಕಾಪಾಡುವಲ್ಲಿಯೂ ಭಾರತೀಯರ ಆಚರಣೆಗಳು ಮಹತ್ವದ ಪಾತ್ರವಹಿಸುತ್ತದೆ. ಅಂತಹ ಆಚರಣೆಗಳಲ್ಲಿ ಮಣಕಟ್ಟಿ (Wrist) ಗೆ ಕೆಂಪು ದಾರವನ್ನು ಧರಿಸುವುದು ಕೂಡ ಒಂದಾಗಿದೆ.  ಸಾಮಾನ್ಯವಾಗಿ ಯಾವುದೇ ಧಾರ್ಮಿಕ ಕೆಲಸ ಅಥವಾ ಪೂಜೆಯನ್ನು ನಡೆಸಿದಾಗ, ಕೆಂಪು ಬಣ್ಣದ ದಾರವನ್ನುಪ್ರತಿಯೊಬ್ಬರ ಕೈಗೂ ಕಟ್ಟಲಾಗುತ್ತದೆ. ಇದನ್ನು ಕಲವ (Kalava) ಎಂದು ಕರೆಯುತ್ತಾರೆ. ಕಲವವನ್ನು ಮಣಿಕಟ್ಟಿನಲ್ಲಿ ಕಟ್ಟಲಾಗಿದೆ ಎಂದು ಹೇಳಲಾಗುತ್ತದೆ. ಇದನ್ನು ಮೌಲಿ (Mauli) ಎಂದೂ ಕರೆಯುತ್ತಾರೆ. 

ಮೌಲಿಎಂದರೆ ಸಂಸ್ಕೃತದಲ್ಲಿ ಕಿರೀಟ ಎಂದರ್ಥ. ಅಂದರೆ ಬದುಕು ಹಸನಾಗಲಿದೆ, ಎಲ್ಲವೂ ಒಳ್ಳೆಯದಾಗಲಿದೆ ಎಂದಾಗಿದೆ. ಕಲವ ಎಂತಲೂ ಕರೆಯುವ ಈ ದಾರವನ್ನು ಕೆಂಪು ಮತ್ತು ಹಳದಿ ಬಣ್ಣದ ಕಾಟನ್​ ನೂಲಿನಲ್ಲಿ ತಯಾರಿಸಲಾಗುತ್ತದೆ. ಪೌರಾಣಿಕ ಕಾಲದಿಂದಲೂ ಈ ಮೌಲಿ ಅಥವಾ ಕಲವವನ್ನು ಹಿಂದೂ ಧರ್ಮದಲ್ಲಿ ಧರಿಸುತ್ತಾರೆ. ಇದಕ್ಕೆ ಪುರಾಣದಲ್ಲಿ ಹೇಳುವುದೇನೆಂದರೆ, ಶಿವನು ತಲೆಯಮೇಲೆ ಚಂದ್ರಮೌಲಿಯನ್ನು ಧರಿಸುತ್ತಾರೆ. ಅದರಿಂದಲೇ ಬಂದ ಮೌಲಿಯನ್ನು ಧರಿಸುವುದರಿಂದ ಶಿವನ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿದೆ ಎನ್ನುವ ನಂಬಿಕೆಯಿದೆ.

ಶುಭ ಕಾರ್ಯಗಳಲ್ಲಿ ಬಳಕೆ: ಶುಭ ಕಾರ್ಯಗಳಲ್ಲಿ ಮೌಲಿ, ಕಲವ ಅಥವಾ ರಕ್ಷಾ ಸೂತ್ರವನ್ನು ಧರಿಸುವುದರಿಂದ, ದೇವರ ಮಂಗಳಕರ ದೃಷ್ಟಿ ಜೀವನದಲ್ಲಿ ಶತ್ರುಗಳಿಂದ ದೂರಮಾಡುತ್ತದೆ . ಕಾಲವವು ಮೂರು ಬಣ್ಣಗಳಲ್ಲಿದ್ದರೆ ಅದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಏಕೆಂದರೆ ಮೂವರು ತ್ರಿದೇವನಿಗೆ ಸಂಬಂಧಿಸಿರುತ್ತಾರೆ, ಅಂದರೆ ಬ್ರಹ್ಮ, ವಿಷ್ಣು ಮತ್ತು ಮಹೇಶರು ಅದನ್ನು ಮೂವರಿಗೂ ಕಟ್ಟುವ ಮೂಲಕ ಅಥವಾ ಮೂರು ದೇವತೆಗಳಾದ  ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿ. ಮೂರು ದೇವತೆಗಳ ಕೃಪೆ ಪಡೆಯುತ್ತಾರೆ ಎಂದು ಹೇಳುತ್ತಾರೆ. ಧಾರ್ಮಿಕ ಆಚರಣೆಗಳಲ್ಲಿ, ಈ ರಕ್ಷಾ ದಾರವನ್ನು ಪುರುಷರು ಮತ್ತು ಕನ್ಯೆಯ ಕೈಯಲ್ಲಿ  ಧರಿಸುತ್ತಾರೆ.  ವಿವಾಹಿತ ಮಹಿಳೆಯರು ಪತಿಯೊಂದಿಗೆ ಪರಸ್ಪರ ದಾರವನ್ನು ಕೈಗೆ ಕಟ್ಟಿಕೊಳ್ಳುತ್ತಾರೆ.

ಆರೋಗ್ಯಕ್ಕೂ ಒಳಿತು ಈ ದಾರ: ಈ ಕೆಂಪು ಬಣ್ಣದ ದಾರವನ್ನು ಕಯಗೆ ಧರಿಸುವುದರಿಂದ ಆರೋಗ್ಯವೂ ಸುಧಾರಿಸುತ್ತದೆ. ಕಲವಾವನ್ನು ಧರಿಸುವುದರಿಂದ ಶುಗರ್, ಹೃದಯ ಸಮಸ್ಯೆ, ರಕ್ತದೊತ್ತಡ ಸಮಸ್ಯೆ ಮತ್ತು ಪಾರ್ಶ್ವವಾಯುಗಳಿಂದ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ ಈ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ದಾರವನ್ನು ಧರಿಸುವುದರಿಂದ ಪ್ರಯೋಜನಕಾರಿ ಫಲಿತಾಂಶಗಳನ್ನು ನೀಡುತ್ತದೆ

ಇನ್ನು ನಾಟಿ ಔಷಧಿಗಳನ್ನು ನೀಡುವ ತಜ್ಞರು ನಾಡಿ ಮಿಡಿತವನ್ನು ನೋಡಿ ರೋಗಿಯ ಪರಿಸ್ಥಿತಿಯನ್ನು ಪತ್ತೆ ಮಾಡುತ್ತಾರೆ. ಈ ದಾರವು ಕೆಲವು ದೇಹದಲ್ಲಿನ ಬದಲಾವಣೆಗಳನ್ನು ನಿಯಂತ್ರಸುತ್ತದೆ ಎನ್ನಲಾಗಿದ್ದು, ರೋಗಿಯ ಅಥವಾ ವ್ಯಕ್ತಿ ಮಾನಸಿಕ ಮತ್ತು ದೈಹಿಕ ಸಮಸ್ಯೆಯನ್ನು ಸುಲಭವಾಗಿ ಪತ್ತೆಮಾಡಬಹುದು ಎನ್ನುತ್ತಾರೆ ಹಿರಿಯರು.

(ಇಲ್ಲಿರುವ ಮಾಹಿತಿಗಳು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಹಳ್ಳಿಗಳಲ್ಲಿ ಅನಾದಿಕಾಲದಿಂದಲೂ ರೂಢಿಯಲ್ಲಿರುವ ಪದ್ಧತಿಯಾಗಿದೆ. ಅನುಸರಿಸುವ ಮೊದಲು ಹಿರಿಯರ ಅಭಿಪ್ರಾಯ ಪಡೆದುಕೊಳ್ಳಿ)

ಇದನ್ನೂ ಓದಿ:

Multiple personality disorder: ಕಾಡುವ ಬಹುವ್ಯಕ್ತಿತ್ವ ಅಸ್ವಸ್ಥತೆಯ ಲಕ್ಷಣಗಳ ಬಗ್ಗೆ ಇಲ್ಲಿದೆ ಮಾಹಿತಿ

Follow us on

Related Stories

Most Read Stories

Click on your DTH Provider to Add TV9 Kannada