ಬೆಂಗಳೂರಿಗರೇ 3 ದಿನದ ರಜೆಯಲ್ಲಿ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು: KSTDCನಿಂದ ವಿಶೇಷ ಪ್ಯಾಕೇಜ್

KSTDC ಯ ವಿಶೇಷ 3 ದಿನಗಳ ಮೈಸೂರು-ಊಟಿ ಪ್ರವಾಸ ಪ್ಯಾಕೇಜ್ ಮೂಲಕ ಈ ವಾರಾಂತ್ಯವನ್ನು ಸದುಪಯೋಗಪಡಿಸಿಕೊಳ್ಳಿ. ಶ್ರೀರಂಗಪಟ್ಟಣ, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಹಾಗೂ ಊಟಿಯ ಸುಂದರ ತಾಣಗಳನ್ನು ಅನ್ವೇಷಿಸಿ. ಬಜೆಟ್ ಸ್ನೇಹಿ ಈ ಪ್ಯಾಕೇಜ್ ಡಿಲಕ್ಸ್ ಕೋಚ್ ಮತ್ತು ಉತ್ತಮ ವಸತಿ ಸೌಕರ್ಯಗಳೊಂದಿಗೆ ಅವಿಸ್ಮರಣೀಯ ಅನುಭವ ನೀಡುತ್ತದೆ, ಕುಟುಂಬ ಸಮೇತ ಪ್ರಯಾಣಕ್ಕೆ ಸೂಕ್ತವಾಗಿದೆ.

ಬೆಂಗಳೂರಿಗರೇ 3 ದಿನದ ರಜೆಯಲ್ಲಿ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು: KSTDCನಿಂದ ವಿಶೇಷ ಪ್ಯಾಕೇಜ್
ಸಾಂದರ್ಭಿಕ ಚಿತ್ರ

Updated on: Jan 23, 2026 | 12:31 PM

ಬೆಂಗಳೂರು, ಜ.23: ಈ ತಿಂಗಳ ಕೊನೆಯ ವಾರ ಅಂದರೆ ಶನಿವಾರ, ಭಾನುವಾರ, ಸೋಮವಾರ ಮೂರು ದಿನ ರಜೆ ಇದೆ. ಈ ಮೂರು ದಿನ ರಜೆಯಲ್ಲಿ ಏನ್ ಮಾಡೋದು ಎಂಬ ಯೋಚನೆ ಬರುವುದು ಸಹಜ, ಎಲ್ಲಿಗಾದರೂ ಹೋಗಬೇಕಲ್ಲ. ಅದರೂ ತಿಂಗಳ ಕೊನೆಗೆ ಹೇಳಿಕೊಳ್ಳುವಷ್ಟು ಬಜೆಟ್​​​ ಇಲ್ಲ, ಅದರೂ ಎಲ್ಲಿಗಾದರೂ ಹೋಗಬೇಕು ಎಂಬ ಆಸೆ ಇದ್ರೆ, ಈ ಪ್ಯಾಕೇಜ್​​ ಬೆಸ್ಟ್​​​ ನೋಡಿ. ಈ ಮೂರು ದಿನದ ರಜೆಯಲ್ಲಿ kstdc (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ)ನ ಈ ಪ್ಯಾಕೇಜ್​​ನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಯಾಕೇಜ್​​ನಲ್ಲಿ ಶ್ರೀರಂಗಪಟ್ಟಣ ಟಿಪ್ಪು ದರಿಯಾ ದೌಲತ್, ಶ್ರೀರಂಗನಾಥ ಸ್ವಾಮಿ ದೇವಸ್ಥಾನ, ಸೇಂಟ್ ಫಿಲೋಮಿಯಾ ಚರ್ಚ್, ಅರಮನೆ ಚಾಮುಂಡಿ ಬೆಟ್ಟ, ಮೃಗಾಲಯ, ಬೃಂದಾವನ ಗಾರ್ಡನ್, ನಂಜನಗೂಡು ಮತ್ತು ಊಟಿಗೆ ಭೇಟಿ ನೀಡಬಹುದು.

ಮೈಸೂರು ಒಂದು ವಿಶೇಷ ಪ್ರವಾಸಿ ತಾಣಗಳನ್ನು ಹೊಂದಿದೆ. ಇಲ್ಲಿ ಆಕರ್ಷಕ ತಾಣ ಇದೆ. ಕಳೆದ ಕೆಲವು ವರ್ಷಗಳಿಂದ ಮೈಸೂರು ನಗರದ ವೈಭವವನ್ನು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಇತಿಹಾಸಪೂರ್ವ ತಾಣಗಳು, ಸ್ಮಾರಕಗಳು, ವಸ್ತು ಸಂಗ್ರಹಾಲಯಗಳು, ಕೋಟೆಗಳು, ದೇವಾಲಯಗಳು, ಮಸೀದಿಗಳು, ಚರ್ಚುಗಳು ಮತ್ತು ಮೃಗಾಲಯಗಳು ಇಲ್ಲಿನ ಪ್ರಮುಖ ಆರ್ಕಷಕ ಸ್ಥಳಗಳಾಗಿವೆ. ಊಟಿಯು ಕೂಡ ಒಳ್ಳೆಯ ಪ್ರವಾಸಿ ತಾಣಗಳನ್ನು ಹೊಂದಿದೆ. ಅದರಲ್ಲೂ ಈ ಸಮಯದಲ್ಲಿ ಅಂದರೆ ಚಳಿ ವಾತಾವರಣದಲ್ಲಿ ಭೇಟಿ ನೀಡಿದ್ರೆ, ಒಳ್ಳೆಯ ಅನುಭವನ್ನು ನೀಡುತ್ತದೆ.

ಶ್ರೀರಂಗಪಟ್ಟಣ ಟಿಪ್ಪು ದರಿಯಾ ದೌಲತ್ : ಶ್ರೀರಂಗಪಟ್ಟಣವು ಮೈಸೂರಿನಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಕಾವೇರಿ ನದಿಯಲ್ಲಿರುವ ಒಂದು ದ್ವೀಪ . ಶ್ರೀರಂಗಪಟ್ಟಣದಲ್ಲಿ ದರಿಯಾ ದೌಲತ್ ಅರಮನೆ ಇದೆ. ದರಿಯಾ ದೌಲತ್ ಬಾಗ್ ಎಂಬ ಸುಂದರವಾದ ಉದ್ಯಾನಗಳ ನಡುವೆ ಇದೆ. ಇನ್ನು ಹಲವಾರು ಪ್ರದೇಶಗಳು ಇಲ್ಲಿದೆ.

ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನ ಒಂದು ಅದ್ಭುತ ಕ್ಷೇತ್ರವಾಗಿದೆ. ಕಾವೇರಿ ನದಿಯ ಉದ್ದಕ್ಕೂ ಸ್ಮಾರ್ತ -ಬಾಬೂರ್ಕಮ್ಮೆ ಮತ್ತು ಶ್ರೀ ವೈಷ್ಣವರ ಐದು ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಈ ಐದು ಪವಿತ್ರ ಸ್ಥಳಗಳನ್ನು ಒಟ್ಟಾಗಿ ದಕ್ಷಿಣ ಭಾರತದಲ್ಲಿ ಪಂಚರಂಗ ಕ್ಷೇತ್ರಗಳು ಎಂದು ಕರೆಯಲಾಗುತ್ತದೆ.

ಸಂತ ಫಿಲೋಮಿನ ಚರ್ಚ್: ಈ ಚರ್ಚ್​​ಗೆ ಎರಡು ಶತಮಾನಗಳ ಇತಿಹಾಸವಿದೆ. ಮೈಸೂರು ನಗರದ ಹೃದಯ ಭಾಗದಲ್ಲಿರುವ ಈ ಚರ್ಚ್, ನಗರದ ಹೊರಗಿನ ಯಾವ ದಿಕ್ಕಿನಿಂದ ನೋಡಿದರೂ ಎದ್ದು ಕಾಣುತ್ತದೆ. ಇಂಡಿಯಾದಲ್ಲಿಯೇ ಅತ್ಯಂತ ಎತ್ತರದ ಗೋಪುರಗಳನ್ನು ಹೊಂದಿದೆ.

ಊಟಿ (Ooty): ಇದನ್ನು ಉದಗಮಂಡಲಂ ಎಂದು ಕರೆಯುತ್ತಾರೆ, ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿದೆ, ಇದು ತನ್ನ ಸುಂದರ ಚಹಾ ತೋಟಗಳು, ತಂಪಾದ ಹವಾಮಾನ, ಸರೋವರಗಳು (ಊಟಿ ಸರೋವರ), ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಒಂದು ಪ್ರಸಿದ್ಧ ಗಿರಿಧಾಮವಾಗಿದೆ, ಇದನ್ನು ‘ಭಾರತದ ಸ್ವಿಟ್ಜರ್ಲ್ಯಾಂಡ್’ ಎಂದೂ ಕರೆಯಲಾಗುತ್ತದೆ, ಮತ್ತು ಇದು ಪ್ರವಾಸಿಗರಿಗೆ ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿ ನೀಲಗಿರಿ ಪರ್ವತ ರೈಲು (ಟಾಯ್ ಟ್ರೈನ್), ದೊಡ್ಡಬೆಟ್ಟ ಶಿಖರ, ಪೈಕಾರ ಜಲಪಾತ, ಮತ್ತು ಸರ್ಕಾರಿ ಗುಲಾಬಿ ಉದ್ಯಾನವನ ಮುಂತಾದ ಅನೇಕ ಪ್ರವಾಸಿ ಆಕರ್ಷಣೆಗಳಿವೆ.

ಸಾರಿಗೆ : ಡಿಲಕ್ಸ್ ಕೋಚ್ ಮೂಲಕ

ಹೋಟೆಲ್ : ಹೋಟೆಲ್ ಮಯೂರ ಕಾವೇರಿ ಕೆ.ಆರ್.ಎಸ್

ಊಟಿಯಲ್ಲಿರುವ ಹೋಟೆಲ್ ಮಯೂರ ಸುದರ್ಶನ್ ಅಥವಾ ಇದೇ ರೀತಿಯ ಹೋಟೆಲ್

ವ್ಯಾಪ್ತಿಯ ಸ್ಥಳಗಳು : ಶ್ರೀರಂಗಪಟ್ಟಣ ಟಿಪ್ಪು ದರಿಯಾ ದೌಲತ್, ಶ್ರೀರಂಗನಾಥ ಸ್ವಾಮಿ ದೇವಸ್ಥಾನ, ಸೇಂಟ್ ಫಿಲೋಮಿಯಾ ಚರ್ಚ್, ಅರಮನೆ ಚಾಮುಂಡಿ ಬೆಟ್ಟ, ಮೃಗಾಲಯ, ಬೃಂದಾವನ ಗಾರ್ಡನ್, ನಂಜನಗೂಡು ಮತ್ತು ಊಟಿ

ಇದನ್ನೂ ಓದಿ: ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವವರಿಗೆ ಗುಡ್​​​ ನ್ಯೂಸ್​: KSTDC ವಿಶೇಷ ಪ್ಯಾಕೇಜ್

ಈ ಮೂರು ದಿನಗಳ ಪ್ರವಾಸ ಮಾಡುವವರು

ಮೊದಲ ದಿನ:

ಬೆಳಿಗ್ಗೆ 06.30 ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ನಿರ್ಗಮನ.

ಬೆಳಿಗ್ಗೆ 08.30 – ಬೆಳಿಗ್ಗೆ 09.00 ದಾರಿಯಲ್ಲಿ ಉಪಾಹಾರ

ಬೆಳಿಗ್ಗೆ 10.00 – ಬೆಳಿಗ್ಗೆ 11.30 ಶ್ರೀರಂಗಪಟ್ಟಣ: ಕೋಟೆ, ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮತ್ತು ಬೇಸಿಗೆ ಅರಮನೆಗೆ ಭೇಟಿ.

ಬೆಳಿಗ್ಗೆ 12.00 – ಮಧ್ಯಾಹ್ನ 12.20 ಮೈಸೂರಿನ ಸಂತ ಫಿಲೋಮಿನಾ ಚರ್ಚ್‌ಗೆ ಭೇಟಿ ನೀಡಿ

ಮಧ್ಯಾಹ್ನ 01.00 – 01.30 ಚಾಮುಂಡಿ ಬೆಟ್ಟ ಮತ್ತು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ

ಮಧ್ಯಾಹ್ನ 02.15 – 03.00 ಮೈಸೂರಿನ ಮಯೂರ ಹೊಯ್ಸಳ ಹೋಟೆಲ್‌ನಲ್ಲಿ ಊಟ

ಮಧ್ಯಾಹ್ನ 03.15 – 04.15 ಮೈಸೂರು ಅರಮನೆಗೆ ಭೇಟಿ

ಸಂಜೆ 05.15 – ರಾತ್ರಿ 08.00 ಹೋಟೆಲ್ ಮಯೂರ ಕಾವೇರಿ ಕೆಆರ್‌ಎಸ್‌ನಲ್ಲಿರುವ ಬೃಂದಾವನ ಗಾರ್ಡನ್ ಮತ್ತು ಹಾಲ್ಟ್‌ಗೆ ಭೇಟಿ ನೀಡಿ

ಎರಡನೇ ದಿನ;

ಬೆಳಿಗ್ಗೆ 06.00 ಹೋಟೆಲ್ ಮಯೂರ ಕಾವೇರಿಯಿಂದ ನಿರ್ಗಮನ

ಬೆಳಿಗ್ಗೆ 07.00 – ಬೆಳಿಗ್ಗೆ 07.30 ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ

ಬೆಳಿಗ್ಗೆ 08.30 ಗುಂಡ್ಲುಪೇಟೆಯಲ್ಲಿ ಉಪಾಹಾರ

ಬೆಳಿಗ್ಗೆ 09.00 – ಮಧ್ಯಾಹ್ನ 12.30 ಬಂಡೀಪುರ ಮತ್ತು ಮುದುಮಲೈ ಅರಣ್ಯದ ಮೂಲಕ ಊಟಿ ಸರೋವರಕ್ಕೆ

ಮಧ್ಯಾಹ್ನ 12.30 – 01.50 ಊಟಿ ಸರೋವರಕ್ಕೆ ಭೇಟಿ

ಮಧ್ಯಾಹ್ನ 01.50 – 02.30 ಊಟಿಯ ಹೋಟೆಲ್‌ನಲ್ಲಿ ಊಟ

ಮಧ್ಯಾಹ್ನ 03.15 – 04.00 ದೊಡ್ಡಬೆಟ್ಟ ಶಿಖರ ವೀಕ್ಷಣಾ ಕೇಂದ್ರಕ್ಕೆ ಭೇಟಿ

ಸಂಜೆ 04.30 – 06.30 ಬೊಟಾನಿಕಲ್ ಗಾರ್ಡನ್‌ಗೆ ಭೇಟಿ

ಸಂಜೆ 07.00 ಊಟಿಯಲ್ಲಿರುವ ಹೋಟೆಲ್‌ನಲ್ಲಿ ವಸತಿ

ಮೂರನೇ ದಿನ:

ಬೆಳಿಗ್ಗೆ 08.00 ಹೋಟೆಲ್‌ನಿಂದ ನಿರ್ಗಮನ (ಉಪಾಹಾರದ ನಂತರ)

ಬೆಳಿಗ್ಗೆ 08.40 – ಬೆಳಿಗ್ಗೆ 10.00 ಫಿಲ್ಮ್ ಶೂಟಿಂಗ್ ಪಾಯಿಂಟ್, ಪೈನ್ ಟ್ರೀ ಫಾರೆಸ್ಟ್ ಮತ್ತು 7 ನೇ ಮೈಲಿ ಬೆಟ್ಟದ ನೋಟ

ಮಧ್ಯಾಹ್ನ 01.30 – 02.15 ಗುಂಡ್ಲುಪೇಟೆ, ಮಧ್ಯಾಹ್ನ ಊಟ

ಮಧ್ಯಾಹ್ನ 03.30 – 05.00 ಮೃಗಾಲಯಗಳು, ಮೈಸೂರು

ಸಂಜೆ 06.30 ದಾರಿಯಲ್ಲಿ ಟೀ ವಿರಾಮ

ರಾತ್ರಿ 09.00 ಬೆಂಗಳೂರಿಗೆ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ