ತಲೆಯಲ್ಲಿ ಹೇನಿನ ಕಿರಿಕಿರಿಯೇ? ಈ ಮದ್ದುಗಳನ್ನು ಬಳಸಿದ್ರೆ ಈ ಸಮಸ್ಯೆಯಿಂದ ಪರಿಹಾರ ಗ್ಯಾರಂಟಿ

ತಲೆಯಲ್ಲಿ ಹೇನಿನ ಸಮಸ್ಯೆ ಕಾಣಿಸಿಕೊಂಡರೆ, ಇದರಿಂದ ಕಿರಿಕಿರಿ ಉಂಟಾಗುವುದು ಮಾತ್ರವಲ್ಲದೆ, ತುರಿಕೆ ಕೂಡಾ ಉಂಟು ಮಾಡುತ್ತದೆ. ಒಮ್ಮೆ ಈ ಸಮಸ್ಯೆ ಕಾಣಿಸಿಕೊಂಡರೆ ಈ ಹೇನುಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವುದೇ ಕಷ್ಟಸಾಧ್ಯವಾಗಿದೆ. ಹೀಗಿರುವಾಗ ಈ ಕೆಲವೊಂದು ಮನೆ ಮದ್ದುಗಳನ್ನು ಪ್ರಯತ್ನಿಸುವ ಮೂಲಕ ಈ ಸಮಸ್ಯೆಯಿಂದ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಿ.

ತಲೆಯಲ್ಲಿ ಹೇನಿನ ಕಿರಿಕಿರಿಯೇ? ಈ ಮದ್ದುಗಳನ್ನು ಬಳಸಿದ್ರೆ ಈ ಸಮಸ್ಯೆಯಿಂದ ಪರಿಹಾರ ಗ್ಯಾರಂಟಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Jul 24, 2025 | 6:41 PM

ಹೆಚ್ಚಾಗಿ ಮಹಿಳೆಯರು, ಹೆಣ್ಣು ಮಕ್ಕಳ ತಲೆಯಲ್ಲಿ ಹೇನಿನ ಸಮಸ್ಯೆ ಉಂಟಾಗುತ್ತದೆ. ಕೂದಲಿನ ಬುಡದಲ್ಲಿ ಉಳಿದು ಬಿಡುವ ಕೊಳಕು, ಬೆವರು ಹೇನಿನ (Lice) ಸಮಸ್ಯೆ ಉಂಟಾಗಲು ಮುಖ್ಯ ಕಾರಣ ಅಂತಾನೇ ಹೇಳಬಹುದು. ಕೂದಲಿನ ಸ್ವಚ್ಛತೆಯ ಬಗ್ಗೆ ಗಮನಹರಿಸದೆ ಹೋದರೆ ನಂತರದಲ್ಲಿ ಕೊಳೆ ಮತ್ತು ಬೆವರು ಕೂದಲಿನ ಬುಡದಲ್ಲಿ ಹಾಗೆಯೇ ಉಳಿದು ಬಿಟ್ಟು ಇದರಿಂದ ತಲೆಯಲ್ಲಿ ಹೇನಿನ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದು ಮಾತ್ರವಲ್ಲದೆ ಈ ಹೇನು ಒಬ್ಬರ ತಲೆಯಿಂದ ಮತ್ತೊಬ್ಬರ ತಲೆಗೂ ಹರಡಿ ಅವರಿಗೂ ಕಿರಿಕಿರಿ ಉಂಟು ಮಾಡುತ್ತದೆ. ಒಮ್ಮೆ ಈ ಸಮಸ್ಯೆ ಕಾಣಿಸಿಕೊಂಡರೆ ಇದನ್ನು ಹೋಗಲಾಡಿಸುವುದೇ ಕಷ್ಟ. ಹೀಗಿರುವಾಗ ಈ ಕೆಲವೊಂದು ಸಿಂಪಲ್‌ ಮನೆಮದ್ದುಗಳನ್ನು (Lice Home Remedy) ಟ್ರೈ ಮಾಡುವುದರಿಂದ ಹೇನಿನ ಸಮಸ್ಯೆಯಿಂದ ಶಾಶ್ವತ ಪರಿಹಾರ ಪಡೆಯಬಹುದು.

ಹೇನಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿವೆ ಸಿಂಪಲ್‌ ಮನೆಮದ್ದು:

ಈರುಳ್ಳಿ ರಸ: ಈರುಳ್ಳಿಯಲ್ಲಿರುವ ಸಲ್ಫರ್‌ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೇನಿನ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗಿರುವಾಗ ಹೇನಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ತುರಿದ ಈರುಳ್ಳಿಯಿಂದ ರಸವನ್ನು ತೆಗೆದು,  ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ ನೆತ್ತಿಗೆ ಮಸಾಜ್‌ ಮಾಡಿ. ಅರ್ಧಗಂಟೆಯ ನಂತರ ಸೌಮ್ಯವಾದ ಶಾಂಪೂ ಬಳಸಿ ತಲೆ ತೊಳೆಯಿರಿ. ವಾರಕ್ಕೆ 1-3 ಬಾರಿ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ಬೇವಿನ ನೀರು: ಬೇವಿನ ನಂಜು ನಿರೋಧಕ ಗುಣಗಳನ್ನು ಹೊಂದಿದ್ದು,  ಇದು ನೆತ್ತಿಯನ್ನು ಆಳವಾಗಿ ಸ್ವಚ್ಛಗೊಳಿಸಲು ಸಹಕಾರಿ. ಸ್ವಲ್ಪ ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ನೀರನ್ನು ಸ್ಪ್ರೇ ಬಾಟಲಿಯಲ್ಲಿ ಸಂಗ್ರಹಿಸಿ,  ಸ್ನಾನಕ್ಕೂ ಮೊದಲು ಈ ನೀರನ್ನು ನೆತ್ತಿಯ ಮೇಲೆ ಸಿಂಪಡಿಸಿ. ಈ ಮನೆಮದ್ದು ಹೇನುಗಳನ್ನು ಕಡಿಮೆ ಮಾಡುತ್ತದೆ ಮತ್ತು ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ.

ಇದನ್ನೂ ಓದಿ
ಮಹಿಳೆಯರೇ… ನೀವು ಬಲು ಬೇಗನೆ ವಯಸ್ಸಾದವರಂತೆ ಕಾಣಲು ಇದೇ ಕಾರಣವಂತೆ
ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳುವುದರಿಂದ ಏನಾಗುತ್ತೆ ಗೊತ್ತಾ?
ಸ್ನಾನ ಮಾಡುವಾಗ ದೇಹದ ಈ ಭಾಗಗಳನ್ನು ಸ್ವಚ್ಛಗೊಳಿಸಲು ಮರೆಯದಿರಿ
ಈ ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬಾರದು

ವಿನೆಗರ್‌ ಕೂಡಾ ಸಹಕಾರಿ: ವಿನೆಗರ್ ತಲೆಯ ಮೇಲೆ ಹೇನುಗಳು ಬೆಳೆಯುವುದನ್ನು ತಡೆಯುತ್ತದೆ. ಇದಕ್ಕಾಗಿ ಒಂದು ಕಪ್ ನೀರಿನಲ್ಲಿ ಒಂದು ಕಪ್ ವಿನೆಗರ್ ಬೆರೆಸಿ. ನಂತರ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಕೆಲವು ನಿಮಿಷಗಳ ಕಾಲ ಬಿಡಿ. ನಂತರ ಶಾಂಪೂ ಬಳಸಿ ತೊಳೆಯಿರಿ.

ಇದನ್ನೂ ಓದಿ: ಮಹಿಳೆಯರೇ… ನೀವು ಬಲು ಬೇಗನೆ ವಯಸ್ಸಾದವರಂತೆ ಕಾಣಲು ಇದೇ ಕಾರಣವಂತೆ

ಕರ್ಪೂರದ ಎಣ್ಣೆ: ತೆಂಗಿನ ಎಣ್ಣೆಯನ್ನು ಕರ್ಪೂರದೊಂದಿಗೆ ಬೆರೆಸಿ ಕೂದಲಿಗೆ ಹಚ್ಚುವುದರಿಂದ ಹೇನಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಇದಕ್ಕಾಗಿ 7-8 ಕರ್ಪೂರವನ್ನು ಪುಡಿಮಾಡಿ ಬಿಸಿ ಮಾಡಿದ ತೆಂಗಿನ ಎಣ್ಣೆಗೆ ಬೆರೆಸಿ ನೆತ್ತಿಗೆ ಹಚ್ಚಿ. ಇದು ನೆತ್ತಿಯನ್ನು ತಂಪಾಗಿಸುತ್ತದೆ, ತುರಿಕೆ ಕಡಿಮೆ ಮಾಡುತ್ತದೆ ಮತ್ತು ಹೇನುಗಳನ್ನು ಸಹ ತೊಡೆದುಹಾಕುತ್ತದೆ. ಅಲ್ಲದೆ, ಕೂದಲು ಬಲವಾಗಿ ಮತ್ತು ದಪ್ಪವಾಗಿ ಬೆಳೆಯುತ್ತದೆ.

ಬೆಳ್ಳುಳ್ಳಿ ರಸ ಹಚ್ಚಿ: ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಅದು ಹೇನುಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ಬೆಳ್ಳುಳ್ಳಿಯ ರಸ ತೆಗೆದು ನೆತ್ತಿಗೆ ಹಚ್ಚಿ.  30 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ನಂತರ ಶಾಂಪೂ ಬಳಸಿ ತೊಳೆಯಿರಿ. ಇದು ಕೂಡಾ ಹೇನಿನ ಸಮಸ್ಯೆಯನ್ನು ಹೋಗಲಾಡಿಸಲು ಪರಿಣಾಮಕಾರಿ ಮನೆಮದ್ದಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ