ಪ್ರತಿಯೊಬ್ಬರೂ ಸ್ಲಿಮ್ ಮತ್ತು ಫಿಟ್ ಆಗಿ ಕಾಣಲು ಇಷ್ಟಪಡುತ್ತಾರೆ. ತೂಕ ನಷ್ಟಕ್ಕೆ ಜನರು ವಿವಿಧ ಪರಿಹಾರಗಳನ್ನು ಹುಡುಕುತ್ತಾರೆ. ಅನೇಕರು ಜಿಮ್ನಲ್ಲಿ ಭಾರಿ ಹಣವನ್ನು ತೆತ್ತು ಸರ್ಕಸ್ ಮಾಡುತ್ತಾರೆ. ಕೆಲವರು ಆಹಾರದ ವಿಧಾನವನ್ನು ಅಳವಡಿಸಿಕೊಳ್ಳುತ್ತಾರೆ. ಆದರೆ ಈ ಎಲ್ಲಾ ವಿಧಾನಗಳು ಅಲ್ಪಾವಧಿಗೆ ಮಾತ್ರ ಪ್ರಯೋಜನಕಾರಿಯಾಗಿದೆ. ಒಂದೊಮ್ಮೆ ಈ ವಿಧಾನಗಳನ್ನು ಪ್ರಾರಂಭಿಸಿ ಅಲ್ಪಾವಧಿಯಲ್ಲಿ ನಿಲ್ಲಿಸಿದರೆ ಮತ್ತೆ ತೂಕ ಹೆಚ್ಚಾಗುತ್ತದೆ. ಅದಾಗ್ಯೂ ಸರಳ ಮನೆಮದ್ದಿನ ಸಹಾಯದಿಂದ ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದು. ಹೇಗೆ ಎಂದು ತಿಳಿಯೋಣ.
ತೂಕ ಇಳಿಸಿಕೊಳ್ಳಲು ಮನೆ ಮದ್ದು
ತೂಕ ಇಳಿಕೆ ಮಾಡಲು ಬಯಸುತ್ತಿದ್ದರೆ ಲವಂಗದ ಆಯ್ಕೆ ಉತ್ತಮ. ಲವಂಗದ ನೀರು ತೂಕವನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ. ಅನೇಕ ಪೋಷಕಾಂಶಗಳು ಲವಂಗದಲ್ಲಿದ್ದು, ಇದು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಪ್ರತಿದಿನ ಲವಂಗದ ನೀರನ್ನು ಕುಡಿಯಬಹುದು.
ಲವಂಗ ನೀರನ್ನು ಹೀಗೆ ತಯಾರಿಸಿ
ಲವಂಗದ ನೀರನ್ನು ತಯಾರಿಸಲು ದಾಲ್ಚಿನ್ನಿ, ಕರಿಮೆಣಸು, ಜೀರಿಗೆ ಮತ್ತು ಜೇನುತುಪ್ಪ ಬೇಕಾಗುತ್ತದೆ. ತೂಕವನ್ನು ಕಡಿಮೆ ಮಾಡಲು 2-4 ಲವಂಗವನ್ನು ನುಣ್ಣಗೆ ರುಬ್ಬಿಕೊಳ್ಳಿ. ಈಗ ಅದಕ್ಕೆ ದಾಲ್ಚಿನ್ನಿ ತುಂಡು ಹಾಕಿ. ಬಾಣಲೆಯಲ್ಲಿ ಅರ್ಧ ಚಮಚ ಕರಿಮೆಣಸಿನ ಪುಡಿ ಮತ್ತು ಒಂದು ಚಮಚ ಜೀರಿಗೆ ಹಾಕಿ ಬಿಸಿ ಮಾಡಿ. ಈಗ ಕಡಿಮೆ ಉರಿಯಲ್ಲಿ 2-3 ಗ್ಲಾಸ್ ನೀರನ್ನು ಬಿಸಿ ಮಾಡಿ ಮತ್ತು ಸ್ವಲ್ಪ ಸಮಯದ ನಂತರ ಕುದಿಯುವ ನೀರಿಗೆ ಮಸಾಲೆ ಸೇರಿಸಿ. ನೀರಿನ ಪ್ರಮಾಣ ಅರ್ಧದಷ್ಟು ಕಡಿಮೆಯಾಗುವವರೆಗೆ ಈ ನೀರನ್ನು ಕುದಿಸಿ. ಬೇಯಿಸಿದ ನೀರಿನಲ್ಲಿ ಜೇನುತುಪ್ಪವನ್ನು ಬೆರೆಸಿ ಕುಡಿಯಿರು. ಹೀಗೆ ಪ್ರತಿದಿನ ಸೇವಿಸಿ.
ಲವಂಗ ನೀರನ್ನು ಕುಡಿಯುವ ವಿಧಾನ
ಮನಸ್ಸಿಗೆ ತೊಚಿದಾಗ ಲವಂಗದ ನೀರನ್ನು ಕುಡಿದರೆ ಫಲಿತಾಂಶ ಕಾಣಲು ಸಾಧ್ಯವಿಲ್ಲ. ಬದಲಾಗಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗದ ನೀರನ್ನು ಕುಡಿಯುವುದು ತೂಕವನ್ನು ಕಳೆದುಕೊಳ್ಳಲು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಲವಂಗದಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಕೊಬ್ಬನ್ನು ಕಡಿಮೆ ಮಾಡುತ್ತದೆ. ಲವಂಗದ ನೀರು ಸೊಂಟದ ತೂಕವನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ.
ಲವಂಗದ ಗುಣಲಕ್ಷಣಗಳು
ಲವಂಗವು ಆಂಟಿಆಕ್ಸಿಡೆಂಟ್‌ಗಳು, ಫೈಬರ್, ಪ್ರೋಟೀನ್, ಫೋಲೇಟ್‌ನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ವಿಟಮಿನ್ ಇ, ವಿಟಮಿನ್ ಸಿ, ವಿಟಮಿನ್ ಎ ಮತ್ತು ವಿಟಮಿನ್ ಕೆ ಇದರಲ್ಲಿ ಕಂಡುಬರುತ್ತವೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
(ಸೂಚನೆ: ಲೇಖನದಲ್ಲಿ ನೀಡಿರುವ ಮಾಹಿತಿ ನಿಮ್ಮ ತಿಳುವಳಿಕೆಗಾಗಿ ಮಾತ್ರ. ಅದನ್ನು ಅಳವಡಿಸಿಕೊಳ್ಳುವ ಮೊದಲು ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ)
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:46 pm, Sat, 1 October 22