ಬೆಂಗಳೂರು: ಲಿವಿಂಗ್ ಟು ಗೆದರ್ – ಆಧುನಿಕ ಲೋಕದಲ್ಲಿ ಎಲ್ಲವೂ ಮುಕ್ತ ಮುಕ್ತವಾಗುತ್ತಿದೆ. ಸ್ವಂತ ಸ್ವತಂತ್ರ ಮುಕ್ತ ಬದುಕು ಅರಸಿ ಹೊರಡುವ ಯುವ ಮನಸುಗಳು ಹಳೆಯ ಕಟ್ಟುಪಾಡುಗಳಿಗೆ ಎಳ್ಳುನೀರು ಬಿಡುತ್ತಿವೆ. ಇದಕ್ಕೆ ನ್ಯಾಯಾಲಯಗಳ ತೀರ್ಪುಗಳು ಸಹ ಸಾಥ್ ನೀಡುತ್ತಿವೆ. ಆದರೆ ಇಂತಹ ಪ್ರಕರಣಗಳು ಟ್ರಾಜಿಡಿಯಲ್ಲಿ ಅಂತ್ಯವಾದಾಗ ಪರಿಣಾಮ ಘೋರವಾಗುತ್ತಿದೆ. ಅದರಲ್ಲೂ ಮಹಿಳೆಯ ಬಾಳು ಸಂಕಷ್ಟಕ್ಕೆ ಸಿಲುಕಿಬಿಡುತ್ತದೆ. ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವ ಇಂತಹ ವಿದ್ಯಮಾನಗಳ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ (Live-in relationship).
ಸೋಷಿಯಲ್ ಮಿಡಿಯಾ ಬಳಸೋ ಹೆಣ್ಣು ಮಕ್ಕಳೇ ಎಚ್ಚರ ಎಚ್ಚರ! ಸೋಷಿಯಲ್ ಮೀಡಿಯಾದಲ್ಲಿ ಹುಡುಗರಿಗೆ ಮೆಸೇಜ್ ಮಾಡೋ ಮುನ್ನ ಹುಷಾರ್ ಹುಷಾರ್! ಲಿವಿಂಗ್ ಟುಗೆದರ್ ಹೆಸರಲ್ಲಿ ಮಹಿಳೆಯರಿಗೆ ಆಗ್ತಿದೆ ಮಹಾ ಮೋಸ. ಮಹಿಳೆಯರನ್ನ ಲಿವಿಂಗ್ ಟೂ ಗೆದರ್ ಹೆಸರಲ್ಲಿ ಬಳಸಿಕೊಂಡು ಮೋಸ (break up) ಮಾಡಲಾಗುತ್ತಿದೆ. ಆದ್ರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದವರೇ ಹೆಚ್ಚು. ಕೊರೊನಾ ನಂತರ ಲಿವಿಂಗ್ ಟುಗೆದರ್ ಪ್ರಕರಣಗಳಲ್ಲಿ ಇನ್ನಷ್ಟು ಹೆಚ್ಚಳವಾಗಿದೆ. ದುರಂತವೆಂದರೆ ಲಿವಿಂಗ್ ರಿಲೇಷನ್ ಶಿಪ್ ಪ್ರಕರಣಗಳು (Living Together relationship) ಬಹುತೇಕವಾಗಿ ವಂಚನೆ, ಮೋಸದಲ್ಲಿ ಕೊನೆಯಾಗ್ತಿವೆ.
ಕಳೆದ ಮೂರು ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಲಿವಿಂಗ್ ರಿಲೇಷನ್ ಶಿಪ್ ಪ್ರಕರಣಗಳು ಹೆಚ್ಚಳಗೊಂಡಿವೆ. ಆರಂಭದಲ್ಲಿ ಲಿವಿಂಗ್ ಟು ಗೆದರ್ ನಲ್ಲಿ ಜೋಡಿಗಳು ತುಂಬಾ ಮಧುರವಾಗಿರುತ್ತವೆ. ಆನಂತರ ಹೆಣ್ಮಕ್ಕಳು ವಂಚನೆ, ಮೋಸಕ್ಕೆ ಒಳಗಾಗ್ತಿದ್ದಾರಂತೆ. ಪ್ರತಿ ವರ್ಷ 10-15 ಕೇಸ್ ಲಿವಿಂಗ್ ಟುಗೆದರ್ ನಲ್ಲಿ ಮೋಸ ಹೋದ ಕೇಸ್ ಗಳು ದಾಖಲಾಗ್ತಿತ್ತು. ಆದರೆ ಈ ವರ್ಷ 20-25 ಕೇಸ್ ಗಳು ದಾಖಲುಗೊಂಡಿವೆ. ಇದರಿಂದ ಬೆಂಗಳೂರು ನಗರದಲ್ಲಿ ಈ ವರ್ಷ ಶೇ. 50ರಷ್ಟು ಕೇಸ್ ಹೆಚ್ಚಳವಾಗಿವೆ.
ಸೋಷಿಯಲ್ ಮೀಡಿಯಾ ಮೂಲಕ ಪ್ರೀತಿ-ಪ್ರೇಮ ಚಿಗುರುತ್ತವೆ. ಆನಂತರ ಮದುವೆ ಆಗದೆ ಲಿವಿಂಗ್ ಟುಗೆದರ್ ರಿಲೇಷನ್ ಶುರುವಾಗುತ್ತವೆ. ಆದರೆ ಮದುವೆಯಾದ ಎರಡು-ಮೂರು ವರುಷಕ್ಕೆ ಮುರಿದುಬೀಳುತ್ತಿವೆ ಅಂತಹ ರಿಲೇಶನುಗಳು. ಕಳೆದ ಮೂರು ವರ್ಷ 98 ವಿಫಲ ಪ್ರೇಮ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 60ಕ್ಕಿಂತಲೂ ಹೆಚ್ಚು ಲಿವಿಂಗ್ ಟುಗೆದರ್ ಪ್ರಕರಣಗಳೇ.
ತನ್ನಲ್ಲಿ ದಾಖಲಾದ 98 ಪ್ರಕರಣದಲ್ಲಿ ಮಹಿಳಾ ಆಯೋಗವು 23 ಕೇಸ್ ಗಳನ್ನು ಇತ್ಯರ್ಥಗೊಳಿಸಿದೆ. ಉಳಿದ 75 ಕೇಸ್ ವಿಚಾರಣೆ ಚಾಲ್ತಿಯಲ್ಲಿವೆ. ಕಳೆದೆರಡು ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಲಿವಿಂಗ್ ಟು ಗೆದರ್ ಹೆಚ್ಚು ಕೇಸ್ ದಾಖಲಾಗಿದೆ. ವಂಚನೆಗೊಳಗಾದ ನಂತರ ಹೆಣ್ಮಕ್ಕಳಿಂದ ಆಯೋಗಕ್ಕೆ ದೂರು ಸಲ್ಲಿಕೆಯಾಗಿವೆ. ಮೊದಲು ಕಾನೂನಿನ ಅರಿವು ಮೂಡಿಸಿ, ನಂತರ ದೂರು ಪಡೆಯುತ್ತಿದ್ದೇವೆ ಎನ್ನುತ್ತಾರೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು.
ಒಂದೆರಡು ಪ್ರಕರಣ ನೋಡುವುದಾದರೆ… ಪ್ರಕರಣ 1 – ಟೆಕ್ಕಿಗಳಿಬ್ಬರು ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾದರು. ಅಸ್ಸಾಂ ಮೂಲದ ವ್ಯಕ್ತಿಗೆ ಬೆಂಗಳೂರಿನಲ್ಲಿ ಕೆಲಸ ಮಾಡುವ ಯುವತಿ ಜೊತೆ ಲವ್ ಶುರುವಾಯ್ತು. 4 ವರುಷ ಬೆಂಗಳೂರಿನಲ್ಲಿ ಲಿವಿಂಗ್ ರಿಲೇಷನ್ ನಡೆಯಿತು. ತಂದೆಗೆ ಹುಷಾರಿಲ್ಲ ಎಂದು ಯುವತಿಯಿಂದ 15 ಲಕ್ಷ ಹಣ, ಒಡವೆ ಪಡೆದು ಯುವಕ ಎಸ್ಕೇಪ್ ಆಗಿದ್ದಾನೆ.
ಪ್ರಕರಣ 2 – ಕಚೇರಿಯಲ್ಲಿ ಯುವ ಜೋಡಿ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ ಲಿವಿಂಗ್ ರಿಲೇಷನ್ ಶಿಪ್ ಶುರುವಿಟ್ಟುಕೊಂಡಿದೆ. ಇದಾದ ಮೂರು ವರುಷಕ್ಕೆ ಯುವಕನಿಂದ ಕಿರುಕುಳ, ದಬ್ಬಾಳಿಕೆ ಆರಂಭಗೊಂಡಿದೆ. ಇದೀಗ ಯುವತಿಯಿಂದ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.