Tooth Brush: ಟೂತ್ ಬ್ರಷ್ ಖರೀದಿಸುವಾಗ ಈ 3 ವಿಷಯಗಳ ಬಗ್ಗೆ ಕಾಳಜಿವಹಿಸಿ

ಹಲವು ದಶಕಗಳ ಹಿಂದೆ ಟೂತ್ ಬ್ರಷ್  ಬದಲು ಕಹಿಬೇವಿನ ಕಡ್ಡಿಯನ್ನು ಬಳಕೆ ಮಾಡಲಾಗುತ್ತಿತ್ತು. ಕೆಲವರು ಇದ್ದಿಲನ್ನು ಕೂಡ ಹಲ್ಲುಜ್ಜಲು ಬಳಸುತ್ತಿದ್ದರು.

Tooth Brush: ಟೂತ್ ಬ್ರಷ್ ಖರೀದಿಸುವಾಗ ಈ 3 ವಿಷಯಗಳ ಬಗ್ಗೆ ಕಾಳಜಿವಹಿಸಿ
Tooth Brush
Follow us
TV9 Web
| Updated By: ನಯನಾ ರಾಜೀವ್

Updated on: Oct 31, 2022 | 2:21 PM

ಹಲವು ದಶಕಗಳ ಹಿಂದೆ ಟೂತ್ ಬ್ರಷ್  ಬದಲು ಕಹಿಬೇವಿನ ಕಡ್ಡಿಯನ್ನು ಬಳಕೆ ಮಾಡಲಾಗುತ್ತಿತ್ತು. ಕೆಲವರು ಇದ್ದಿಲನ್ನು ಕೂಡ ಹಲ್ಲುಜ್ಜಲು ಬಳಸುತ್ತಿದ್ದರು. ಆದರೆ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ, ಈಗ ಅದನ್ನು ಟೂತ್ ಬ್ರಷ್​ಗೆ ಬದಲಾಯಿಸಲಾಗಿದೆ. ಇದು ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದೆ, ಅದರ ಮೂಲಕ ಹಲ್ಲು ಮತ್ತು ಒಸಡುಗಳನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಗುತ್ತಿದೆ.

ಹೆಚ್ಚಿನ ದಂತವೈದ್ಯರು ಬೆಳಗ್ಗೆ ಎದ್ದ ನಂತರ ಮತ್ತು ರಾತ್ರಿ ಮಲಗುವ ಮೊದಲು ಹಲ್ಲುಜ್ಜುವಂತೆ ಹೇಳುತ್ತಾರೆ. ಆದ್ದರಿಂದ, ಹಲ್ಲುಜ್ಜುವ ಬ್ರಷ್​​ ಅನ್ನು ಆಯ್ಕೆಮಾಡುವಾಗ, ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಿ.

ಟೂತ್ ಬ್ರಷ್ ಖರೀದಿಸುವಾಗ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಸಾಮಾನ್ಯವಾಗಿ ಟೂತ್ ಬ್ರಷ್ ಖರೀದಿಸುವಾಗ ನಾವು ಅಜಾಗರೂಕರಾಗಿರುತ್ತೇವೆ. ವಾಸ್ತವವಾಗಿ, ಅವಸರದಲ್ಲಿ ನಮ್ಮ ಬಾಯಿಯ ಆರೋಗ್ಯಕ್ಕೆ ಒಳ್ಳೆಯದಲ್ಲದ ಉತ್ಪನ್ನಗಳನ್ನು ನಾವು ಖರೀದಿಸುತ್ತೇವೆ, ಇದು ಹಲ್ಲು ಮತ್ತು ಒಸಡುಗಳಿಗೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ, ನೀವು ಸಮಸ್ಯೆಗಳನ್ನು ಹೇಗೆ ತಪ್ಪಿಸಬಹುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

1. ಉತ್ತಮ ಬ್ರ್ಯಾಂಡ್ ಟೂತ್ ಬ್ರಷ್ ಹೇಗೋ ಒಟ್ಟಿನಲ್ಲಿ ಹಲ್ಲುಜ್ಜಿದರಾಯಿತು ಅಂದುಕೊಂಡು ಕಡಿಮೆ ಬೆಲೆಯ ಟೂತ್​ ಬ್ರಷ್​ಗಳನ್ನು ಖರೀದಿ ಮಾಡುತ್ತೇವೆ, ಆದರೆ ಅದು ಹಲ್ಲು ಹಾಗೂ ಒಸಡಿಗೆ ಹಾನಿ ಮಾಡುತ್ತವೆ ಎಂಬುದು ಬಹಳಷ್ಟು ಮಂದಿಗೆ ತಿಳಿದಿರುವುದಿಲ್ಲ. ಅವುಗಳ ಗುಣಮಟ್ಟವನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗುವುದಿಲ್ಲ. ಹೆಚ್ಚು ಹಣ ನೀಡಿಯಾದರೂ ಉತ್ತಮ ಟೂತ್​ ಬ್ರಷ್​ಗಳನ್ನು ಖರೀದಿಸುವುದು ಉತ್ತಮ.

2. ಬ್ರಷ್ ಮೃದುವಾಗಿರಲಿ ಟೂತ್ ಬ್ರಷ್​ನ ಕೂದಲುಗಳು ಮೃದುವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಿ. ಒಂದೊಮ್ಮೆ ಅವುಗಳು ಗಟ್ಟಿಯಾಗಿದ್ದರೆ ಅಲ್ಲಲ್ಲಿ ಚರ್ಮ ಸುಲಿದ ಅನುಭವವಾಗುತ್ತದೆ. ಹಾಗೂ ಒಸಡುಗಳಲ್ಲಿ ರಕ್ತಸ್ರಾವ ಹಾಗೂ ನೋವು ಅನುಭವಿಸಬಹುದು.

3. ಟೂತ್​ ಬ್ರಷ್ ಹೇಗಿರಬೇಕು ಒಂದೊಮ್ಮೆ ಹಲ್ಲುಗಳು ಬಿಡಿಬಿಡಿಯಾಗಿದ್ದರೆ, ಗಟ್ಟಿ ಟೂತ್​ಬ್ರಷ್​ ಅನ್ನು ಬಳಸಲೇಬಾರದು. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ರಬ್ಬರ್ ಹಿಡಿತವಿರುವ ಹಲವು ಬಗೆಯ ಟೂತ್ ಬ್ರಶ್ ಗಳು ಲಭ್ಯವಿವೆ. ಇದನ್ನು ಬಳಸುವುದರ ಪ್ರಯೋಜನವೆಂದರೆ ಅದು ಹಿಡಿತವನ್ನು ಉತ್ತಮಗೊಳಿಸುತ್ತದೆ, ಆದರೆ ಹಲ್ಲುಗಳನ್ನು ನಯವಾದ ರೀತಿಯಲ್ಲಿ ಸ್ವಚ್ಛಗೊಳಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ