Updated on: Oct 31, 2022 | 4:17 PM
Do this every day to improve your mood
ಕರಿದ ಆಹಾರ ಸೇವನೆ ಬೇಡ: ಹೌದು ನಿಮ್ಮ ಮೂಡ್ನ್ನು ಉತ್ತಮವಾಗಿರಿಸಲು ಕರಿದ ಅಥವಾ ಹುರಿದ ಆಹಾರಗಳನ್ನು ಸೇವನೆ ಮಾಡಬೇಡಿ. ಇದು ಮಾನಸಿಕ ಖಿನ್ನತೆಗೆ ಕೂಡ ಕಾರಣವಾಗುತ್ತದೆ.
ನಿಮ್ಮ ಮೂಡ್ನ್ನು ಉತ್ತಮವಾಗಿರಲು ಮೆಗ್ನೀಸಿಯಮ್ ಅಂಶವುಳ್ಳ ಆಹಾರ ಪದಾರ್ಥಗಳು ಸೇವನೆ ಮಾಡಿ. ಇದು ನಿಮ್ಮ ಮಾನಸಿಕ ಸ್ಥಿತಿ ಸ್ಥಿರಗೊಳಿಸುವ ರೊಟೋನಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಮೀನು, ಬಾಳೆಹಣ್ಣು, ಡ್ರೈ ಫ್ರೂಟ್ಸ್ ಮತ್ತು ಮೂಲಂಗಿಯಂತಹ ತರಕಾರಿಗಳನ್ನು ಸೇವನೆ ಮಾಡಿ.
ಸರಿಯಾಗಿ ನಿದ್ರೆ ಮಾಡಿ: ಪ್ರತಿದಿನ ನೀವು ಸರಿಯಾಗಿ ನಿದ್ರೆ ಮಾಡಿದರೆ ಮರುದಿನದ ಕೆಲಸದಲ್ಲಿ ನಿಮ್ಮನ್ನು ತೀಡಗಿಸಿಕೊಳ್ಳಬಹುದು. ಕೆಲಸ ಮೂಡ್ನ್ನು ಉತ್ತಮವಾಗಿ ಇಡುತ್ತದೆ.
ನಿಮ್ಮ ದೇಹಕ್ಕೆ ಸೂರ್ಯನ ಶಾಖ ಮುಖ್ಯ: ನಿಮ್ಮ ದೇಹಕ್ಕೆ ಸೂರ್ಯನ ಬೆಳಕು ಅತೀ ಮುಖ್ಯ ಏಕೆಂದರೆ ದೇಹಕ್ಕೆ ಎರಡು ಗಂಟೆಗಳ ಕಾಲ ಸೂರ್ಯನ ಶಾಖವಾದರೆ ಖಂಡಿತ ನಿಮ್ಮ ದೇಹ ಉಲ್ಲಾಸದಿಂದ ಮತ್ತು ನಿಮ್ಮ ಮೂಡ್ನ್ನು ಉತ್ತಮವಾಗಿ ಇಡುತ್ತದೆ. ಇದು ನಿಮ್ಮ ಇದು ಖಿನ್ನತೆಯನ್ನು ತಡೆಯಲು ಸಹಾಯ ಮಾಡುವ ಹಾರ್ಮೋನ್ ಆಗಿದೆ.
ಮದ್ಯಪಾನದಿಂದ ದೂರವಿರಿ: ನಿಮ್ಮ ಮನಸ್ಸಿನ ಮೇಲೆ ಆಲ್ಕೋಹಾಲ್ ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ, ಖಿನ್ನತೆಗೆ ಕಾರಣವಾಗುತ್ತದೆ. ಹೀಗಾಗಿ ನೀವು ಮದ್ಯವನ್ನು ತ್ಯಜಿಸುವುದು ಉತ್ತಮ.
ಪ್ರತಿದಿನ ವ್ಯಾಯಾಮ: ನಿಮ್ಮ ಮೂಡ್ನ್ನು ಉತ್ತಮವಾಗಿರಲು ವ್ಯಾಯಾಮ ಮಾಡಿ. ವ್ಯಾಯಾಮವು ಎಂಡಾರ್ಫಿನ್‌ಗಳನ್ನು ಉತ್ಪಾದಿಸುತ್ತದೆ, ಇದು ನೈಸರ್ಗಿಕವಾಗಿ ಚಿತ್ತ-ಉತ್ತೇಜಿಸುವ ಹಾರ್ಮೋನುಗಳು.