Lizards Problem : ಹಲ್ಲಿ ಕಾಟಕ್ಕೆ ಈ ಮನೆ ಮದ್ದನ್ನು ಬಳಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 29, 2024 | 3:10 PM

ಕೆಲವರ ಮನೆಯಲ್ಲಿ ಹಲ್ಲಿಗಳ ಕಾಟವೇ ಹೆಚ್ಚಾಗಿರುತ್ತದೆ. ಮನೆಯ ಗೋಡೆಗಳ ಮೇಲೆ ಹಲ್ಲಿಗಳು ಲೋಚಗೊಟ್ಟುತ್ತ ಕ್ರಿಮಿ ಕೀಟಗಳನ್ನು ತಿನ್ನುತ್ತವೇನೋ ಸರಿಂ ಆದರೆ ಅದುವೇ ಹಲ್ಲಿ ಅಡುಗೆಯ ಪಾತ್ರೆಗಳಿಗೆ ಬಿದ್ದರೇನು ಗತಿ ಎನ್ನುವ ಚಿಂತೆಯೊಂದು ಕಾಡುತ್ತವೆ. ಹೀಗಾದಾಗ ಮನೆಯಲ್ಲಿರುವ ಹಲ್ಲಿಗಳನ್ನು ಈ ಸರಳ ಮನೆ ಮದ್ದಿನ ಮೂಲಕ ಓಡಿಸುವುದು ಕಷ್ಟವೇನಲ್ಲ.

Lizards Problem : ಹಲ್ಲಿ ಕಾಟಕ್ಕೆ ಈ ಮನೆ ಮದ್ದನ್ನು ಬಳಸಿ
Follow us on

ಮನೆಯ ಗೋಡೆಗಳ ಮೇಲೆ ಅತ್ತಿಂದ ಇತ್ತ ಓಡಾಡುವ ಹಲ್ಲಿಗಳು ಕಂಡರೆ ಹೆಚ್ಚಿನವರಿಗೆ ಭಯ. ಒಂದು ವೇಳೆ ಸುಮ್ಮನೆ ಕುಳಿತುಕೊಂಡಾಗ ಹಲ್ಲಿಗಳು ಮೈ ಮೇಲೆ ಬಿದ್ದು ಬಿಟ್ಟರೆ ಕಿರುಚಾಡಲು ಶುರು ಮಾಡುತ್ತಾರೆ. ಬೆಚ್ಚಗಿನ ಕೊಠಡಿಗಳಲ್ಲಿ ಕಂಡು ಬರುವ ಈ ಜೀವಿಗಳು ಗೋಡೆಗಳ ಸಂಧಿಯಲ್ಲಿ ಹೆಚ್ಚಾಗಿ ಇರುತ್ತವೆ. ಮನೆಯಲ್ಲಿ ಹಲ್ಲಿಕಾಟ ಹೆಚ್ಚಾಗಿದ್ದರೆ ಸುಲಭವಾಗಿ ಈ ಹಲ್ಲಿಗಳನ್ನು ಓಡಿಸಿ ಟೆನ್ಶನ್ ಫ್ರೀ ಆಗಬಹುದು.

ಹಲ್ಲಿಗಳನ್ನು ಓಡಿಸಲು ಸುಲಭ ಮನೆ ಮದ್ದುಗಳಿವು

* ಹಲ್ಲಿಗಳಿರುವ ಸ್ಥಳಗಳಲ್ಲಿ ಮೊಟ್ಟೆಯ ಚಿಪ್ಪನ್ನು ನೇತು ಹಾಕುವುದು ಒಳ್ಳೆಯದು. ಈ ಚಿಪ್ಪಿನ ವಾಸನೆಗೆ ಹಲ್ಲಿಗಳು ಅಲ್ಲಿಂದ ಓಡಿ ಹೋಗುತ್ತವೆ.

* ಮನೆಯಲ್ಲಿ ಹಲ್ಲಿಗಳ ಹಿಂಡೆಯಿದ್ದರೆ ಐಸ್‌ ನೀರನ್ನು ಬಳಸಬಹುದು. ಹಲ್ಲಿಗಳ ಮೇಲೆ ತಣ್ಣನೆಯ ನೀರನ್ನು ಎರಚಿದರೆ, ಅವುಗಳಿಗೆ ಬೇಗನೆ ಓಡಲು ಆಗುವುದಿಲ್ಲ. ಆ ತಕ್ಷಣವೇ ಅದನ್ನು ಗುಡಿಸಿ ಹೊರಗೆ ಹಾಕಬಹುದು.

* ಹೊಗೆ ಸೊಪ್ಪಿನ ರಸವನ್ನು ಮನೆಯ ಮೂಲೆಗೆ ಸ್ಪ್ರ್ರೇ ಮಾಡಿದರೆ, ಅದರ ವಾಸನೆಗೆ ಹಲ್ಲಿಗಳು ನಿಲ್ಲುವುದೇ ಇಲ್ಲ.

* ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳನ್ನು ಮನೆಯ ಮೂಲೆಯಲ್ಲಿ ಇಟ್ಟರೆ, ಅದರ ವಾಸನೆಗೆ ಹಲ್ಲಿಗಳು ಬರುವುದೇ ಇಲ್ಲ.

* ಕಾಫಿ ಹುಡಿಗೆ ತಂಬಾಕು ಸೇರಿಸಿ, ಅದನ್ನು ಉಂಡೆ ಕಟ್ಟಿ ಮನೆಯ ಮೂಲೆ ಮೂಲೆಯಲ್ಲಿ ಇಡುವುದರಿಂದ ಹಲ್ಲಿಗಳ ಕಾಟದಿಂದ ಮುಕ್ತಿ ಹೊಂದಬಹುದು.

ಇದನ್ನೂ ಓದಿ: 90ರ ದಶಕದಲ್ಲಿ ಫ್ಯಾಷನ್ ಪ್ರಿಯರ ಮನಸ್ಸು ಗೆದ್ದ ಉಡುಪುಗಳಿವು

* ಮನೆಯ ಮೂಲೆ ಮೂಲೆಯಲ್ಲಿ ನ್ಯಾಫ್ತಲೀನ್ ಇಟ್ಟರೆ, ಇದರ ವಾಸನೆಗೆ ಹಲ್ಲಿ ಮತ್ತೆ ಆ ಕಡೆ ಸುಳಿಯುವುದೇ ಇಲ್ಲ.

* ಹಲ್ಲಿಗಳು ಇರುವ ಸ್ಥಳಗಳಲ್ಲಿ ಕರ್ಪೂರವನ್ನು ಇಟ್ಟರೆ, ಕರ್ಪೂರದ ಪರಿಮಳಕ್ಕೆ ಹಲ್ಲಿಗಳು ಅಲ್ಲಿಂದ ದೂರ ಹೋಗುತ್ತವೆ.

* ಕಾಳುಮೆಣಸಿನ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಹಲ್ಲಿಗಳು ಇದ್ದಲ್ಲಿ ಸ್ಪ್ರೇ ಮಾಡುವುದರಿಂದ ಹಲ್ಲಿಗಳು ಅಲ್ಲಿಂದ ಓಡಿಹೋಗುತ್ತವೆ.

* ಸೀಮೆಎಣ್ಣೆಯನ್ನು ಸ್ಪ್ರೇ ಮಾಡುವುದರಿಂದ ಹಲ್ಲಿಗಳ ಕಾಟದಿಂದ ಸುಲಭವಾಗಿ ಮುಕ್ತಿ ಹೊಂದಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ