
ಭಾರತದಲ್ಲಿ ಸುಗ್ಗಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ನಮ್ಮ ಕರ್ನಾಟಕದಲ್ಲಿ ಈ ಹಬ್ಬವನ್ನು ಸಂಕ್ರಾತಿ, ತಮಿಳುನಾಡಿನಲ್ಲಿ ಪೊಂಗಲ್, ಪಂಜಾಬ್‌ನಲ್ಲಿ ಲೋಹ್ರಿ ಹಬ್ಬ ಎಂದು ಆಚರಿಸಲಾಗುತ್ತದೆ. ವರ್ಷದ ಈ ಮೊದಲ ಹಬ್ಬದ ದಿನ ವಿಶೇಷವಾಗಿ ಹೆಂಗಳೆಯರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಚೆಂದವಾಗಿ ರೆಡಿಯಾಗುತ್ತಾರೆ. ಈ ಬಾರಿಯ ಹಬ್ಬದಂದು ಯಾವ ರೀತಿಯ ಬಟ್ಟೆ ಉಡೋದು, ಯಾವ ಡ್ರೆಸ್ (Outfit ideas) ಸೂಕ್ತ ಎಂಬ ಗೊಂದಲದಲ್ಲಿ ಇದ್ದೀರಾ? ಹಾಗಿದ್ದರೆ ಈ ಟ್ರೆಡೀಷನಲ್ ಡ್ರೆಸ್ ಐಡಿಯಾಗಳನ್ನೊಮ್ಮೆ ಪ್ರಯತ್ನಿಸಿ.
ಹಬ್ಬದ ದಿನ ಸೊಗಸಾದ, ಸಾಂಪ್ರದಾಯಿಕ ಉಡುಗೆಗಳನ್ನು ಧರಿಸುವುದು ಉತ್ತಮ. ಅದಕ್ಕಾಗಿ ನೀವು ಸೀರೆ ಧರಿಸಬಹುದು. ರೇಷ್ಮೆ ಸೀರೆಗಳು, ಕಾಂಜೀವರಂ ಸೀರೆಗಳು ಅಥವಾ ಕಾಟನ್ ಸಿಲ್ಕ್ ಸೀರೆಗಳು ಈ ಸಂದರ್ಭಕ್ಕೆ ಸೂಕ್ತವಾಗಿವೆ.
ಸಾಂಪ್ರದಾಯಿಕ ಉಡುಗೆಗಳಲ್ಲಿ ಒಂದಾಗ ಲಂಗದಾವಣಿ ಹಬ್ಬದ ದಿನ ಉಡಲು ಹೇಳಿ ಮಾಡಿಸಿದಂತಹ ಉಡುಗೆಯಾಗಿದೆ. ಸೀರೆ ಉಡಲು ಇಷ್ಟಪಡದ ಹೆಣ್ಣು ಮಕ್ಕಳು ಲಂಗದಾವಣಿ ತೊಡಬಹುದು. ಲಂಗದಾವಣಿ ಜೊತೆಗೆ ಜಡೆಗೆ ಮಲ್ಲಿಗೆ, ಕೈತುಂಬಾ ಹಸಿರು ಗಾಜಿನ ಬಳೆಗಳನ್ನು ತೊಡುವುದರಿಂದ ನೀವು ಇನ್ನಷ್ಟು ಲಕ್ಷಣವಾಗಿ, ಮುದ್ದಾಗಿ ಕಾಣುವಿರಿ.
ಹಬ್ಬದ ದಿನ ಸಿಂಪಲ್ ಆಗಿ ಡ್ರೆಸ್ ಮಾಡಿಕೊಳ್ಳಲು ಬಯಸಿದರೆ ನಿಮಗೆ ಉದ್ದನೆಯ ಸ್ಕರ್ಟ್ ಉತ್ತಮ ಆಯ್ಕೆಯಾಗಿದೆ. ಸ್ಕರ್ಟ್ ಮತ್ತು ಟಾಪ್ ಸೊಗಸಾದ ಮತ್ತು ಆರಾಮದಾಯಕ ನೋಟವನ್ನುನೀಡುತ್ತದೆ. ನೀವು ವಿವಿಧ ಬಣ್ಣಗಳ ಅಥವಾ ಹೂವಿನ ಮಾದರಿಗಳ ಸ್ಕರ್ಟ್‌ಗಳನ್ನು ಆಯ್ಕೆ ಮಾಡಬಹುದು.
ಸೀರೆಗಳನ್ನು ಧರಿಸಲು ಇಷ್ಟಪಡದವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಕುರ್ತಿ ಮತ್ತು ಪಲಾಝೋ ಪ್ಯಾಂಟ್ ಕಾಂಬಿನೇಷನ್ ನಿಮ್ಮನ್ನು ಸುಂದರವಾಗಿ ಮತ್ತು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ. ಅದನ್ನು ಉದ್ದವಾದ ಕುರ್ತಾ ಮತ್ತು ಡಿಸೈನರ್ ದುಪಟ್ಟಾ ಜೊತೆ ಜೋಡಿಸುವುದರಿಂದ ಇನ್ನಷ್ಟು ಅದ್ಭುತವಾದ ನೋಟ ದೊರೆಯುತ್ತದೆ.
ಟ್ರೆಡೀಷನಲ್ ಹಾಗೆಯೇ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬೇಕು ಎಂದು ಬಯಸುವವರು ಶರಾರಾ ಸೂಟ್ ಧರಿಸಬಹುದು. ಇದು ನಿಮಗೆ ಖಂಡಿತವಾಗಿಯೂ ವಿಶಿಷ್ಟವಾದ ಲುಕ್ ನೀಡುತ್ತದೆ.
ಇದನ್ನೂ ಓದಿ: ಆರೋಗ್ಯಯುತವಾಗಿ ಹೆಚ್ಚು ಕಾಲ ಬದುಕಲು ಬಯಸಿದರೆ ಈ ಅಭ್ಯಾಸಗಳನ್ನು ತಪ್ಪದೇ ಪಾಲಿಸಿ
ಲೋಹ್ರಿ ಹಬ್ಬಕ್ಕೆ ನೀವು ಪಂಜಾಬ್‌ನ ಸಾಂಪ್ರದಾಯಿಕ ಉಡುಗೆಯಾದ ಪಟಿಯಾಲ ಸೂಟ್ ಧರಿಸಬಹುದು. ಪಂಜಾಬಿ ಲುಕ್‌ಗೆ ಪರಿಪೂರ್ಣವಾದ ಕೇಶವಿನ್ಯಾಸದ ಅಗತ್ಯವಿದೆ. ಹಾಗಾಗಿ ಚೆಂದವಾಗಿರಲಿ ನಿಮ್ಮ ಹೇರ್‌ಸ್ಟೈಲ್.
ಅನಾರ್ಕಲಿ ಸೂಟ್‌ಗಳು ಕ್ಲಾಸಿ ಮತ್ತು ಆರಾಮದಾಯಕ ಆಯ್ಕೆಯಾಗಿದೆ. ಇವು ಸಾಂಪ್ರದಾಯಿಕ ನೋಟವನ್ನು ನೀಡುವುದರ ಜೊತೆಗೆ ಆರಾಮದಾಯಕವೂ ಆಗಿರುತ್ತವೆ. ಹಾಗಾಗಿ ಈ ಬಾರಿಯ ಹಬ್ಬಕ್ಕೆ ಅನಾರ್ಕಲಿ ಸೂಟ್ ಸಹ ಧರಿಸಬಹುದು.
ಹಬ್ಬ ಹರಿದಿನಗಳ ಸಂದರ್ಭದಲ್ಲಿ ಸೀರೆಯನ್ನು ತೊಡಲು ಇಷ್ಟಪಡದವರು ಕುರ್ತಾ ಧರಿಸಬಹುದು. ಇದು ನಿಮಗೆ ಸರಳ ಮತ್ತು ಸೊಗಸಾದ ನೋಟವನ್ನು ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Sun, 11 January 26