ಮನಸ್ಥಿತಿಯ ಬದಲಾವಣೆ ಜೀವನದ ಸಾಮಾನ್ಯ ಅಂಶವಾಗಿದ್ದು, ಒತ್ತಡ, ಹಾರ್ಮೋನುಗಳ ಬದಲಾವಣೆ ಮತ್ತು ಜೀವನಶೈಲಿಯಂತಹ ಅನೇಕ ಅಂಶಗಳಿಂದ ಪ್ರಭಾವಿತವಾಗುತ್ತವೆ. ಒಂದು ನಿರ್ದಿಷ್ಟ ಸಮಯದಲ್ಲಿ ನಾವೆಲ್ಲರೂ ಈ ಸಮಸ್ಯೆಯನ್ನು ಅನುಭವಿಸಬಹುದು. ಆದರೆ ನಿರಂತರ ಮನಸ್ಥಿತಿಯ ಏರಿಳಿತಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ, ವಿಶೇಷವಾಗಿ ನಿಮಗೆ ಇತರೇ ಹಲವಾರು ಸವಾಲುಗಳಿದ್ದಾಗ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲೇ ಬೇಕಾಗುತ್ತದೆ. ಸಮತೋಲಿತ ಆಹಾರವನ್ನು ಸೇವನೆ ಮಾಡುವುದು ಮತ್ತು ದೈನಂದಿನ ವ್ಯಾಯಾಮದಲ್ಲಿ ತೊಡಗುವುದು ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದ್ದರೂ ಸಹ ನಿರ್ದಿಷ್ಟ ಹಣ್ಣುಗಳು ನಿಮ್ಮ ಮನಸ್ಥಿತಿಯನ್ನು ಸ್ಥಿರಗೊಳಿಸಲು ಸಹಾಯ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬಹುದು. ಇದರಲ್ಲಿ ಅಗತ್ಯ ಪೋಷಕಾಂಶಗಳು ಮತ್ತು ಮನಸ್ಥಿತಿಯನ್ನು ಹೆಚ್ಚಿಸುವ ಗುಣಲಕ್ಷಣಗಳಿದ್ದು ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸಲಿದೆ.
ಟೊಮೆಟೊ ತರಕಾರಿಯಲ್ಲ ಒಂದು ಹಣ್ಣು ಎಂಬುದು ಕೆಲವು ಸಂಶೋಧನೆಗಳಿಂದ ಸಾಬೀತಾಗಿದ್ದರೂ ಕೂಡ ಅದನ್ನು ಒಪ್ಪಿಕೊಳ್ಳುವುದು ತುಂಬ ಕಷ್ಟವಾಗಬಹುದು. ಇದೆಲ್ಲದರ ಹೊರತಾಗಿ ಟೊಮೆಟೊ ಲೈಕೋಪೀನ್ ಎಂಬ ಉತ್ಕರ್ಷಣ ನಿರೋಧಕದಿಂದ ಸಮೃದ್ಧವಾಗಿದ್ದು ಇದು ಮಾನವ ದೇಹಕ್ಕೆ ಮತ್ತು ನಿಮ್ಮ ಮನಸ್ಸಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಅಲ್ಲದೆ ಟೊಮೆಟೊ ವಿವಿಧ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
ತಜ್ಞರು ಹೇಳುವ ಪ್ರಕಾರ “ಬಾಳೆಹಣ್ಣುಗಳು ಅನುಕೂಲಕರ ಮತ್ತು ಪೋರ್ಟಬಲ್ ತಿಂಡಿ ಮಾತ್ರವಲ್ಲ, ಮನಸ್ಥಿತಿಯನ್ನು ಸುಧಾರಿಸುವ ಹಣ್ಣು. ವಿಟಮಿನ್ ಬಿ 6 ಅಧಿಕವಾಗಿರುವ ಬಾಳೆಹಣ್ಣುಗಳು ಮನಸ್ಥಿತಿಯನ್ನು ನಿಯಂತ್ರಿಸುವ ನರಪ್ರೇಕ್ಷಕವಾದ ಸೆರೊಟೋನಿನ್ ಅನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ”. ಅಲ್ಲದೆ, ಬಾಳೆಹಣ್ಣುಗಳು ಟ್ರಿಪ್ಟೋಫಾನ್ ಎಂಬ ಅಮೈನೋ ಆಮ್ಲವನ್ನು ಹೊಂದಿರುತ್ತವೆ, ಇದು ಶಾಂತತೆ ಮತ್ತು ವಿಶ್ರಾಂತಿಯ ಪ್ರಜ್ಞೆಯನ್ನು ಉತ್ತೇಜಿಸಲು ನಿಮಗೆ ಸಹಾಯ ಮಾಡುತ್ತದೆ.
“ಬ್ಲೂಬೆರ್ರಿ, ಸ್ಟ್ರಾಬೆರಿ ಮತ್ತು ರಾಸ್ಪ್ಬೆರಿಗಳಂತೆ ಬೆರ್ರಿ ಹಣ್ಣುಗಳು ರುಚಿಕರ ಮಾತ್ರವಲ್ಲ, ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಆಂಟಿ ಆಕ್ಸಿಡೆಂಟ್ಗಳು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ, ಇದು ಮನಸ್ಥಿತಿಯ ಅಸ್ವಸ್ಥತೆಗಳೊಂದಿಗೆ ಸಂಬಂಧಿಸಿದೆ. ಬೆರ್ರಿಗಳಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ ಸಿ ಇದ್ದು ಸಂತೋಷಕ್ಕೆ ಸಂಬಂಧಿಸಿದ ಡೋಪಮೈನ್ ರಚನೆಗೆ ಕೊಡುಗೆ ನೀಡುತ್ತದೆ ” ಎಂದು ತಜ್ಞರು ಹೇಳುತ್ತಾರೆ.
ಕಿತ್ತಳೆ ಮತ್ತು ಇತರ ಸಿಟ್ರಸ್ ಹಣ್ಣುಗಳು ಹೆಚ್ಚಿನ ವಿಟಮಿನ್ ಸಿ ಅಂಶಕ್ಕೆ ಹೆಸರುವಾಸಿಯಾಗಿವೆ, ಇದು ಪ್ರತಿರಕ್ಷಣಾ ವ್ಯವಸ್ಥೆಗೆ ಪ್ರಯೋಜನಕಾರಿ ಮಾತ್ರವಲ್ಲದೆ ಸಿರೊಟೋನಿನ್ ನಂತಹ ನರಪ್ರೇಕ್ಷಕಗಳ ಸಂಶ್ಲೇಷಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ನಿಮ್ಮ ಆಹಾರದಲ್ಲಿ ಕಿತ್ತಳೆಯನ್ನು ಸೇರಿಸುವುದರಿಂದ ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಉಲ್ಲಾಸದಾಯಕ ಶಕ್ತಿಯನ್ನು ನಿಮಗೆ ನೀಡುತ್ತದೆ.
“ಅನಾನಸ್ ನಿಮ್ಮ ಮನಸ್ಥಿತಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ಹಣ್ಣು ಬ್ರೊಮೆಲೈನ್ ಎಂಬ ಕಿಣ್ವವನ್ನು ಹೊಂದಿರುತ್ತದೆ, ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅನಾನಸ್ ಹಣ್ಣಿನ ಸಿಹಿ ಮತ್ತು ಗಾಢ ಪರಿಮಳವು ನಿಮ್ಮ ಊಟ ಮತ್ತು ತಿಂಡಿಗಳಿಗೆ ಆಹ್ಲಾದಕರ ರುಚಿಯನ್ನು ನೀಡುತ್ತದೆ” ಎಂದು ತಜ್ಞರು ಹೇಳುತ್ತಾರೆ.
ನಿಂಬೆ ಮತ್ತೊಂದು ಹಣ್ಣು, ಇದರಲ್ಲಿನ ಜೀವಸತ್ವಗಳು ಮತ್ತು ನೀರಿನ ಶಕ್ತಿ ಕೇಂದ್ರವಾಗಿದೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತವೆ ಎಂದು ತಿಳಿದು ಬಂದಿದೆ. ಈ ಸಿಟ್ರಸ್ ಹಣ್ಣು ವ್ಯಕ್ತಿಯನ್ನು ಪುನಶ್ಚೇತನಗೊಳಿಸುತ್ತದೆ ಮತ್ತು ಸ್ವಲ್ಪ ನೀರು ಮತ್ತು ಪುದೀನಾದೊಂದಿಗೆ ತೆಗೆದುಕೊಂಡರೆ ತಕ್ಷಣಕ್ಕೆ ಶಕ್ತಿಯನ್ನು ನೀಡುತ್ತದೆ.
ಇದನ್ನೂ ಓದಿ:ಪಿರಿಯಡ್ಸ್ ಸಮಯದಲ್ಲಿ ಮೂಡ್ ಸ್ವಿಂಗ್ಸ್ ಆಗುತ್ತಿದೆಯೇ? ಈ ಸಮಸ್ಯೆಗೆ ಇಲ್ಲಿದೆ ಮುಕ್ತಿ
ಹಣ್ಣುಗಳನ್ನು ತಿನ್ನುವುದು ಯಾವಾಗಲೂ ಒಳ್ಳೆಯದು. ಆದರೆ, ಕೆಲವು ಹಣ್ಣುಗಳು ನಿರ್ದಿಷ್ಟ ರೋಗಕ್ಕೆ ಸೂಕ್ತವಲ್ಲ. ನಿಮ್ಮ ದೈನಂದಿನ ಆಹಾರದಲ್ಲಿ ಯಾವುದೇ ಹಣ್ಣನ್ನು ಸೇರಿಸಲು ನೀವು ನಿರ್ಧರಿಸುವ ಮೊದಲು ಅರ್ಹ ಆಹಾರ ತಜ್ಞರೊಂದಿಗೆ ಸಮಾಲೋಚಿಸುವುದು ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ