ಅಲೋವೆರಾದಿಂದ ಮನೆ ಮದ್ದು ತಯಾರಿಸಿ, ಆರೋಗ್ಯ ಸಮಸ್ಯೆಗಳನ್ನು ದೂರವಾಗಿಸಿ

ಅಲೋವೆರಾ ಅಥವಾ ಲೋಳೆಸರ ಈ ಹೆಸರು ಎಲ್ಲರಿಗೂ ಕೂಡ ಚಿರಪರಿಚಿತ. ಹೆಚ್ಚಿನವರ ಮನೆಯ ಅಂಗಳದಲ್ಲಿ ಇರುವ ಈ ಅಲೋವೆರಾ ಸಸ್ಯವು ಆಯುರ್ವೇದದಲ್ಲಿ ಪ್ರಮುಖವಾಗಿ ಬಳಸಲಾಗುವ ಸಸ್ಯವಾಗಿದೆ. ಅತ್ಯಾಧಿಕ ಔಷಧೀಯ ಗುಣವನ್ನು ಹೊಂದಿರುವ ಈ ಅಲೋವೆರಾವು ಮುಖ ಹಾಗೂ ಕೂದಲಿನ ಆರೈಕೆಗೆ ಮಾತ್ರವಲ್ಲದೇ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಲೋಳೆಸರದಿಂದ ಮನೆಯಲ್ಲೇ ಮನೆಮದ್ದನ್ನು ತಯಾರಿಸಿ ಆರೋಗ್ಯ ಸಮಸ್ಯೆಗಳನ್ನು ದೂರವಾಗಿಸಿಕೊಳ್ಳಬಹುದು.

ಅಲೋವೆರಾದಿಂದ ಮನೆ ಮದ್ದು ತಯಾರಿಸಿ, ಆರೋಗ್ಯ ಸಮಸ್ಯೆಗಳನ್ನು ದೂರವಾಗಿಸಿ
Edited By:

Updated on: Feb 02, 2024 | 2:10 PM

ಎಲ್ಲರ ಮನೆಯಲ್ಲಿರುವ ಸಸ್ಯಗಳಲ್ಲಿ ಅಲೋವೆರಾ ಕೂಡ ಒಂದು. ಮನೆ ಮದ್ದಿಗೆ ಬಳಸುವ ಈ ಅಲೋವೆರಾದಲ್ಲಿ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಅಲೋವೆರಾದಲ್ಲಿ ವಿಟಮಿನ್ ಎ, ಸಿ, ಇ ಮತ್ತು ಬಿ ಕಾಂಪ್ಲೆಕ್ಸ್ ಮತ್ತು ಖನಿಜಗಳಾದ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು ಮತ್ತು ಅಮೈನೋ ಆಮ್ಲಗಳು ಹೇರಳವಾಗಿದೆ. ಮುಖ ಹಾಗೂ ಕೂದಲಿನ ಸೌಂದರ್ಯಕ್ಕೆ ಮಾತ್ರವಲ್ಲದೇ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ.

ಸುಲಭವಾಗಿ ತಯಾರಿಸಬಹುದಾದ ಲೋಳೆಸರದ ಮನೆ ಮದ್ದುಗಳು

* ಲೋಳೆಸರದ ತಿರುಳನ್ನು ನುಣ್ಣಗೆ ರುಬ್ಬಿಕೊಂಡು ಅದನ್ನು ಜೀರಿಗೆ ಮತ್ತು ಬೆಲ್ಲದ ಪುಡಿಯೊಂದಿಗೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆನೋವಿಗೆ ಉತ್ತಮ ಔಷಧಿಯಾಗಿದೆ.

* ಲೋಳೆಸರದ ತಿರುಳನ್ನು ನುಣ್ಣಗೆ ಅರೆದು ಅದನ್ನು ಕಣ್ಣರೆಪ್ಪೆಯ ಮೇಲೆ ಇಟ್ಟುಕೊಂಡು ಮಲಗಿದರೆ ಕಣ್ಣುನೋವು ಗುಣ ಮುಖವಾಗುತ್ತದೆ.

* ಲೋಳೆಸರ ಹಚ್ಚುವುದರಿಂದ ನೋವು ಮತ್ತು ಊತವು ಕಡಿಮೆಯಾಗುತ್ತದೆ.

* ಲೋಳೆಸರದ ತಿರುಳನ್ನು ಅರೆದು, ಸ್ವಲ್ಪ ಪ್ರಮಾಣದಲ್ಲಿ ಕಲ್ಲು ಸಕ್ಕರೆ ಪುಡಿ, ಜೀರಿಗೆ ಪುಡಿ ಬೆರೆಸಿ, ಪ್ರತಿದಿನ ಬೆಳಗ್ಗೆ ಸೇವಿಸಿದರೆ ಉರಿಮೂತ್ರ ಸಮಸ್ಯೆಯೂ ನಿವಾರಣೆಯಾಗುತ್ತದೆ.

* ಅಲೋವೆರಾ ರಸಕ್ಕೆ ಅರಿಶಿನ ಬೆರೆಸಿ ಬಾಯಿ ಹುಣ್ಣಿಗೆ ಹಚ್ಚುವುದರಿಂದ ಈ ಸಮಸ್ಯೆಯೂ ಕಡಿಮೆಯಾಗುತ್ತದೆ.

* ಲೋಳೆಸರದ ತಿರುಳನ್ನು ಅರೆದು ದಿನಕ್ಕೆ ಮೂರು ಬಾರಿ ಒಂದು ಚಮಚೆಯಷ್ಟು ಸೇವಿಸುವುದರಿಂದ ಮೂಲವ್ಯಾಧಿಯೂಯೂ ಶಮನವಾಗುತ್ತದೆ.

* ಲೋಳೆಸರದ ತಿರುಳನ್ನು ರುಬ್ಬಿ ತಲೆ ಕೂದಲಿಗೆ ಹಚ್ಚಿಕೊಂಡು ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ತಲೆಕೂದಲಿನ ಹೊಳಪು ಹೆಚ್ಚಾಗುವುದರೊಂದಿಗೆ ತಲೆ ಹೊಟ್ಟು ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಕಹಿಗುಣವಿರುವ ನುಗ್ಗೆ ಸೊಪ್ಪು ಹಲವು ಆರೋಗ್ಯ ಸಮಸ್ಯೆಗಳಿಗೆ ಔಷಧಿ, ಇಲ್ಲಿದೆ ಸರಳ ಮನೆ ಮದ್ದು

* ಲೋಳೆ ಸರದ ತಿರುಳನ್ನು ಬೆಲ್ಲದೊಂದಿಗೆ ಬೆರೆಸಿ ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಹದಿನೈದು ದಿನಗಳ ಕಾಲ ಸೇವನೆ ಮಾಡಿದರೆ ಋತುಸ್ರಾವಕ್ಕೆಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ.

* ಲೋಳೆಸರ ರಸಕ್ಕೆ ಜೇನು ತುಪ್ಪ ಸೇರಿಸಿ ಸತತ ಮೂರು ತಿಂಗಳಗಳ ಕಾಲ ಸೇವಿಸುವುದರಿಂದ ಮುಟ್ಟಿನ ತೊಂದರೆಗಳು ನಿವಾರಣೆಯಾಗುತ್ತದೆ.

* ಮಲಬದ್ಧತೆಯಿಂದ ಬಳಲುತ್ತಿರುವವರು ಲೋಳೆಸರ ಅಥವಾ ಅಲೋವೆರಾ ರಸಕ್ಕೆ ಬಿಸಿ ನೀರು ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಪರಿಣಾಮಕಾರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us