ಕಹಿಗುಣವಿರುವ ನುಗ್ಗೆ ಸೊಪ್ಪು ಹಲವು ಆರೋಗ್ಯ ಸಮಸ್ಯೆಗಳಿಗೆ ಔಷಧಿ, ಇಲ್ಲಿದೆ ಸರಳ ಮನೆ ಮದ್ದು

Moringa Leaves Benefits: ದಿನನಿತ್ಯ ಆಹಾರ ಪದಾರ್ಥಗಳಲ್ಲಿ ವಿವಿಧ ರೀತಿಯ ಸೊಪ್ಪು ತರಕಾರಿಗಳನ್ನು ಬಳಕೆ ಮಾಡುತ್ತೇವೆ. ಆದರೆ ನುಗ್ಗೆ ಸೊಪ್ಪನ್ನು ಸೇವಿಸುವುದು ಸ್ವಲ್ಪ ಕಡಿಮೆ. ಕಹಿ ಗುಣವಿರುವ ಕಾರಣ ಈ ಸೊಪ್ಪನ್ನು ಇಷ್ಟ ಪಡುವುದು ಕಡಿಮೆಯೇ. ಡ್ರಮ್ ಸ್ಟಿಕ್ ಎಲೆಗಳು ಎಂಬ ಹೆಸರಿನಿಂದಲೂ ಕರೆಯುವ ಈ ನುಗ್ಗೆ ಸೊಪ್ಪು ಆರೋಗ್ಯದ ವಿಚಾರದಲ್ಲಿ ಸಂಜೀವಿನಿಯಾಗಿದೆ.

ಕಹಿಗುಣವಿರುವ ನುಗ್ಗೆ ಸೊಪ್ಪು ಹಲವು ಆರೋಗ್ಯ ಸಮಸ್ಯೆಗಳಿಗೆ ಔಷಧಿ, ಇಲ್ಲಿದೆ ಸರಳ ಮನೆ ಮದ್ದು
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 02, 2024 | 10:33 AM

ನುಗ್ಗೆ ಮರದ ಪ್ರತಿಯೊಂದು ಭಾಗವು ಔಷಧೀಯ ಗುಣವನ್ನು ಹೊಂದಿದೆ. ಹೀಗಾಗಿ ಆಯುರ್ವೇದದಲ್ಲಿ ಔಷಧಿಗಳ ತಯಾರಿಕೆಯಲ್ಲಿ ನುಗ್ಗೆ ಮರದ ಪ್ರತಿಯೊಂದು ಭಾಗವನ್ನು ಬಳಸಲಾಗುತ್ತದೆ. ಅದರಲ್ಲಿಯೂ ಈ ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಸಿ, ಎ, ಬಿ-ಕಾಂಪ್ಲೆಕ್ಸ್, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಪ್ರೊಟೀನ್, ಕಾರ್ಬೋಹೈಡ್ರೇಟ್, ಕಬ್ಬಿಣ, ಮೆಗ್ನೀಷಿಯಂ, ಸೋಡಿಯಂ ಹೇರಳವಾಗಿದ್ದು, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತವೆ. ಮನೆಯ ಸುತ್ತ ಮುತ್ತ ನುಗ್ಗೆಯ ಮರವಿದ್ದರೆ ನುಗ್ಗೆ ಸೊಪ್ಪಿನಿಂದ ಮನೆ ಮದ್ದನ್ನು ತಯಾರಿಸಿ ಆರೋಗ್ಯ ಸಮಸ್ಯೆಯನ್ನು ದೂರವಾಗಿಸಿಕೊಳ್ಳಬಹುದು.

ಆರೋಗ್ಯ ಸಮಸ್ಯೆಗಳಿಗೆ ನುಗ್ಗೆ ಸೊಪ್ಪಿನ ಮನೆ ಮದ್ದುಗಳು ಇಲ್ಲಿದೆ

* ನುಗ್ಗೆ ಸೊಪ್ಪಿನಿಂದ ಸಾರು ತಯಾರಿಸಿ, ಅದಕ್ಕೆ ಬೆಳ್ಳುಳ್ಳಿ ರಸ ಬೆರೆಸಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.

* ನುಗ್ಗೆ ಸೊಪ್ಪಿನ ರಸವನ್ನು ಕುದಿಸಿ ಕುಡಿಯುತ್ತಿದ್ದರೆ ಮಲಬದ್ಧತೆ ಸಮಸ್ಯೆ ಯೂ ದೂರವಾಗುತ್ತದೆ.

* ನುಗ್ಗೆಸೊಪ್ಪು, ಹೆಚ್ಚಿದ ಶುಂಠಿ, ಹರಳು ಗಿಡದ ಎಲೆ, ತುಳಸಿ ಎಲೆಗಳನ್ನು ಎಳ್ಳೆಣ್ಣೆಯಲ್ಲಿ ಹುರಿದು ಬಟ್ಟೆಯಲ್ಲಿ ಕಟ್ಟಿ ಬೆನ್ನುನೋವು ಇರುವ ಜಾಗಕ್ಕೆ ಬಿಸಿ ಶಾಖವಿಟ್ಟರೆ ಬೆನ್ನುನೋವು ಕಡಿಮೆಯಾಗುತ್ತದೆ.

* ನುಗ್ಗೆಸೊಪ್ಪು, ತುಳಸಿ ಎಲೆಗಳನ್ನು ಹುರಿದು ಕೀಲುನೋವಿರುವ ಜಾಗಕ್ಕೆ ಶಾಖವನ್ನು ಕೊಟ್ಟರೆ ನೋವು ನಿವಾರಣೆಯಾಗುತ್ತದೆ.

* ತಲೆ ನೋವಿನಿಂದ ಬಳಲುತ್ತಿರುವವರು ನುಗ್ಗೆ ಸೊಪ್ಪಿನ ಒಂದು ತೊಟ್ಟು ರಸವನ್ನು ಕಿವಿಗೆ ಹಾಕುತ್ತಿದ್ದರೆ ತಲೆನೋವು ಕಡಿಮೆಯಾಗುತ್ತದೆ.

* ನುಗ್ಗೆ ಸೊಪ್ಪನ್ನು ನೀರಿನಲ್ಲಿ ಬೇಯಿಸಿ ರಸ ತೆಗೆದು ಅದಕ್ಕೆ ಅಡಿಗೆ ಉಪ್ಪು ನಿಂಬೆರಸ, ಕಾಳು ಮೆಣಸಿನ ಪುಡಿಯನ್ನು ಬೆರೆಸಿ ಪ್ರತಿದಿನ ಬೆಳಗ್ಗೆ ಸೇವಿಸಿದರೆ ಸಂಭೋಗದ ಶಕ್ತಿಯು ವೃದ್ಧಿಯಾಗುತ್ತದೆ.

ಇದನ್ನೂ ಓದಿ: ಒಡೆದ ಹಿಮ್ಮಡಿಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ, ಇಲ್ಲಿದೆ ಮನೆ ಮದ್ದು

* ನುಗ್ಗೆ ಸೊಪ್ಪನ್ನು ನುಣ್ಣಗೆ ರುಬ್ಬಿ ಮೂಲವ್ಯಾಧಿ ಮೊಳಕೆಗಳಿಗೆ ಹಚ್ಚುವುದರಿಂದ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

* ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂದ ರಕ್ತವು ಶುದ್ಧಿಯಾಗುತ್ತದೆ.

* ನುಗ್ಗೆ ಸೊಪ್ಪನ್ನು ಬೇಯಿಸಿ ರಸ ತೆಗೆದು ಅದಕ್ಕೆ ನಿಂಬೆರಸ ಹಿಂಡಿ ಒಂದು ವಾರಗಳ ಕಾಲ ಸೇವಿಸಿದರೆ ತಲೆಸುತ್ತುವ ಸಮಸ್ಯೆಯೂ ದೂರವಾಗುತ್ತದೆ.

* ಎಳೆಯ ನುಗ್ಗೆಸೊಪ್ಪು ಹಾಗೂ ನುಗ್ಗೆಯ ಹೂವಿನಿಂದ ತಯಾರಿಸಿದ ಸೂಪನ್ನು ಕುಡಿಯುತ್ತಿದ್ದರೆ ರಕ್ತಹೀನತೆ ಸಮಸ್ಯೆಯೂ ನಿವಾರಣೆಯಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:07 am, Fri, 2 February 24

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್